IND vs ENG Test Series: ಇಂಗ್ಲೆಂಡ್ ಟೆಸ್ಟ್ ಸರಣಿಗೂ ರೋಹಿತ್ ನಾಯಕ!
Rohit Sharma: 'ರೋಹಿತ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ತಂಡವನ್ನು ಮುನ್ನಡೆಸಲು ಅವರು ಸರಿಯಾದ ಆಯ್ಕೆ. ರೋಹಿತ್ ಕೂಡ ರೆಡ್-ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ' ಎಂದು ಬಿಸಿಸಿಐ ಮೂಲಗು ತಿಳಿಸಿರುುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.


ಮುಂಬಯಿ: ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ನಿವೃತ್ತಿಯ ವದಂತಿಗಳನ್ನು ತಳ್ಳಿಹಾಕಿದ ರೋಹಿತ್ ಶರ್ಮ(Rohit Sharma) ಅವರು 2027 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವರೆಗೆ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ವಿಸ್ತರಿಸುವ ಯೋಜನೆಯಲ್ಲಿದ್ದಾರೆ. ಜತೆಗೆ ಟೆಸ್ಟ್ ಕ್ರಿಕೆಟ್ ಆಡುವುದನ್ನು ಕೂಡ ಮುಂದುವರಿಸಲಿದ್ದು ಜೂನ್‌ನಲ್ಲಿ ನಡೆಯುವ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ(IND vs ENG Test Series) ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ರೋಹಿತ್ ಇನ್ನೂ ಕೆಲ ಕಾಲ ಭಾರತ ಪರ ನಾಯಕನಾಗಿ ಆಡಬೇಕೆಂದು ಬಿಸಿಸಿಐ(BCCI) ಕೂಡ ಬಯಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
'ರೋಹಿತ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ತಂಡವನ್ನು ಮುನ್ನಡೆಸಲು ಅವರು ಸರಿಯಾದ ಆಯ್ಕೆ. ರೋಹಿತ್ ಕೂಡ ರೆಡ್-ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ' ಎಂದು ಬಿಸಿಸಿಐ ಮೂಲಗು ತಿಳಿಸಿರುುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲುಗಳು ಮತ್ತು ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಕಾರಣ ರೋಹಿತ್ ಚಾಂಪಿಯನ್ಸ್ ಟ್ರೋಫಿ ಬಳಿಕ ನಿವೃತ್ತಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ರೋಹಿತ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ತಂಡವನ್ನು ಫೈನಲ್ ತಲುಪಿಸಿ ತಂಡವನ್ನು ಚಾಂಪಿಯನ್ ಮಾಡಿದ್ದರು. ಅಲ್ಲದೆ ಫೈನಲ್‌ನಲ್ಲಿ 76 ರನ್ ಬಾರಿಸಿ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಬಿಸಿಸಿಐಗೂ ಕೂಡ ರೋಹಿತ್ ಅವರನ್ನು ಕೆಲ ಕಾಲ ತಂಡದಲ್ಲಿ ಮುಂದುವರಿಸುವ ಯೋಜನೆಯಲ್ಲಿದೆ. ಒಂದೊಮ್ಮೆ ರೋಹಿತ್ ಟೆಸ್ಟ್ ನಾಯಕತ್ವ ತ್ಯಜಿಸಿದರೂ ಏಕದಿನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಜೂನ್ 20 ರಿಂದ ಆಗಸ್ಟ್ 4ರ ತನಕ ನಡೆಯಲಿದೆ.
ಇದನ್ನೂ ಓದಿ ರೋಹಿತ್ ಶರ್ಮಾ ವಿದಾಯ ಹೇಳುವ ಅಗತ್ಯವಿಲ್ಲ, ಅವರು ಅತ್ಯುತ್ತಮ ನಾಯಕ: ಎಬಿಡಿ!
ಭಾರತದ ಮುಂದಿನ ಏಕದಿನ ಕ್ರಿಕೆಟ್ ಸರಣಿ ವೇಳಾಪಟ್ಟಿ
2025- ಆಗಸ್ಟ್; ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳು
2025-ಅಕ್ಟೋಬರ್; ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳು
2025-ನವೆಂಬರ್; ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳು
2026-ಜನವರಿ; ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳು
2026- ಜೂನ್; ಅಫ್ಘಾನಿಸ್ತಾ ವಿರುದ್ಧ 3 ಪಂದ್ಯಗಳು
2026- ಜುಲೈ; ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳು
2026-ಅಕ್ಟೋಬರ್; ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳು
2026- ನವೆಂಬರ್; ನ್ಯೂಜಿಲ್ಯಾಂಡ್ ವಿರುದ್ಧ 3 ಪಂದ್ಯಗಳು
2026-ಡಿಸೆಂಬರ್; ಶ್ರೀಲಂಕಾ ವಿರುದ್ಧ 3 ಪಂದ್ಯಗಳು
ಒಟ್ಟು 27 ಏಕದಿನ ಪಂದ್ಯಗಳು