Virat Kohli: ಕೆಕೆಆರ್ ಪಂದ್ಯದಲ್ಲಿ ಹಲವು ದಾಖಲೆ ಬರೆದ ಕಿಂಗ್ ಕೊಹ್ಲಿ
ಕೊಹ್ಲಿ 38 ರನ್ ಪೂರ್ತಿಗೊಳಿಸುತ್ತಿದಂತೆ ಕೆಕೆಆರ್ ವಿರುದ್ಧ ಒಂದು ಸಾವಿರ ರನ್ ಪೂರೈಸಿದ ಮೂರನೇ ಹಾಗೂ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು. ದಾಖಲೆ ಆಸ್ಟ್ರೇಲಿಯಾದ ಮಾಜಿ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ವಾರ್ನರ್ 28 ಪಂದ್ಯಗಳಿಂದ 1093 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಸದ್ಯ 36 ಪಂದ್ಯಗಳಿಂದ 1,021* ರನ್ ಗಳಿಸಿದ್ದಾರೆ.


ಕೋಲ್ಕತಾ: ಶನಿವಾರ ರಾತ್ರಿ ನಡೆದಿದ್ದ 18ನೇ ಆವೃತ್ತಿಯ ಐಪಿಎಲ್(IPL 2025)ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ(KKR vs RCB) ತಂಡ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದ ವಿರಾಟ್ ಕೊಹ್ಲಿ(Virat Kohli) ಎರಡು ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಟಿ20 ಕ್ರಿಕೆಟ್‌ನಲ್ಲಿ 400ನೇ ಪಂದ್ಯಗಳ ಮೃಲುಗಲ್ಲು ತಲುಪಿದರು. ಈ ಮೂಲಕ ಈ ಸಾಧನೆಗೈದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್ ಶರ್ಮಾ (448) ಮತ್ತು ದಿನೇಶ್ ಕಾರ್ತಿಕ್ (412) ಮೊದಲಿಬ್ಬರು.
ಒಂದು ಸಾವಿರ ರನ್
ಕೊಹ್ಲಿ 38 ರನ್ ಪೂರ್ತಿಗೊಳಿಸುತ್ತಿದಂತೆ ಕೆಕೆಆರ್ ವಿರುದ್ಧ ಒಂದು ಸಾವಿರ ರನ್ ಪೂರೈಸಿದ ಮೂರನೇ ಹಾಗೂ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು. ದಾಖಲೆ ಆಸ್ಟ್ರೇಲಿಯಾದ ಮಾಜಿ ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ವಾರ್ನರ್ 28 ಪಂದ್ಯಗಳಿಂದ 1093 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಸದ್ಯ 36 ಪಂದ್ಯಗಳಿಂದ 1,021* ರನ್ ಗಳಿಸಿದ್ದಾರೆ.
First T20 match after 9️⃣ months, and he goes like this. 🫡
— Royal Challengers Bengaluru (@RCBTweets) March 22, 2025
That's King Kohli for you! 👑#PlayBold #ನಮ್ಮRCB #IPL2025 #KKRvRCB pic.twitter.com/zIMCEop5qt
ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಹೊರತುಪಡಿಸಿ ಬೇರೆ ಯಾವ ಆಟಗಾರನೂ ಎರಡು ಅಥವಾ ಅದಕ್ಕಿಂತ ಹೆಚ್ಚು ಎದುರಾಳಿಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿಲ್ಲ. ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ನಾಲ್ಕನೇ ತಂಡದ ವಿರುದ್ಧವೂ ಈ ಸಾಧನೆ ಮಾಡಿದ್ದಾರೆ.
ಕೊಹ್ಲಿ ಹೊರತುಪಡಿಸಿದರೆ, ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮ ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ವಿರುದ್ಧ 1000 ಕ್ಕೂ ಹೆಚ್ಚು ಐಪಿಎಲ್ ರನ್ ಗಳಿಸಿದ್ದಾರೆ.
ಇದನ್ನೂ ಓದಿ IPL 2025: ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಬಾಂಗ್ಲಾ ವೇಗಿ ಟಾಸ್ಕಿನ್ ಅಹ್ಮದ್?
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 59 ರನ್ ಬಾರಿಸಿದರು. ಅವರ ಈ ಅಮೋಘ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 3 ಆಕರ್ಷಕ ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು.