ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WI vs AUS: ಸ್ಟಾರ್ಕ್‌ ಘಾತಕ ದಾಳಿ; 27 ರನ್‌ಗೆ ಸರ್ವಪತನ ಕಂಡ ವಿಂಡೀಸ್‌

ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಎಡಗೈ ವೇಗಿ ಸ್ಟಾರ್ಕ್‌ ಆರಂಭಿಕ ಎಸೆತದಲ್ಲೇ ಜಾನ್ ಕ್ಯಾಂಪ್ಬೆಲ್ ವಿಕೆಟ್‌ ಕಿಳುವ ಜತೆಗೆ ಈ ಓವರ್‌ನಲ್ಲಿ ಮೂರು ವಿಕೆಟ್‌ ಬೇಟೆಯಾಡಿ ಆಘಾತವಿಕ್ಕಿದರು. ಇಲ್ಲಿಂದ ಚೇತರಿಕೆ ಕಾಣದ ವಿಂಡೀಸ್‌ ಸತತವಾಗಿ ವಿಕೆಟ್‌ ಕಳೆದುಕೊಂಡು 27 ರನ್‌ಗೆ ಸರ್ವಪತನ ಕಂಡಿತು. ವಿಂಡೀಸ್‌ನ 7 ಬ್ಯಾಟರ್‌ಗಳು ಶೂನ್ಯ ಸುತ್ತಿದರು. ಜಸ್ಟಿನ್ ಗ್ರೀವ್ಸ್(11) ಅವರದ್ದೇ ಅತ್ಯಧಿಕ ಗಳಿಕೆ.

ಸ್ಟಾರ್ಕ್‌ ಘಾತಕ ದಾಳಿ; 27 ರನ್‌ಗೆ ಸರ್ವಪತನ ಕಂಡ ವಿಂಡೀಸ್‌

Profile Abhilash BC Jul 15, 2025 11:21 AM

ಕಿಂಗ್ಸ್‌ಟನ್‌: ಆಸ್ಟ್ರೇಲಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್‌ ಇಂಡೀಸ್‌(WI vs AUS) ತಂಡ ತವರಿನ ಅಂತಿಮ ಹಾಗೂ ಮೂರನೇ ಟೆಸ್ಟ್‌ ಪಂದ್ಯದಲ್ಲಿ 27 ರನ್‌ಗೆ(West Indies All Out For 27) ಆಲೌಟ್‌ ಆಗುವ ಮೂಲಕ ಹೀನಾಯ ಸೋಲು ಕಂಡಿದೆ. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲಾದ ಎರಡನೇ ಕನಿಷ್ಠ ಮೊತ್ತದ ಆಲೌಟ್‌. ಈ ಹಿಂದೆ 1955ರಲ್ಲಿ ನ್ಯೂಜಿಲೆಂಡ್‌ನ 26 ರನ್‌ ಗಳಿಸಿತ್ತು. 176 ರನ್‌ ಅಂತರದ ಗೆಲುವು ಕಂಡ ಆಸ್ಟ್ರೇಲಿಯಾ ಸರಣಿ ವೈಟ್‌ವಾಶ್‌ ಮಾಡಿಕೊಂಡಿತು. 100ನೇ ಟೆಸ್ಟ್‌ ಪಂದ್ಯ ಆಡಿದ ಮಿಚೆಲ್ ಸ್ಟಾರ್ಕ್(Mitchell Starc) ಕೇವಲ 9 ರನ್‌ ಬಟ್ಟುಕೊಟ್ಟು 6 ವಿಕೆಟ್‌ಗಳನ್ನು ಪಡೆದು ತಮ್ಮ ಶತಕದ ಟೆಸ್ಟ್‌ ಪಂದದ್ಯವನ್ನು ಸ್ಮರಣೀಯವಾಗಿಸಿದರು.

2020ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಿಂಕ್‌ ಬಾಲ್‌ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 36 ರನ್​ಗಳಿಗೆ ಆಲೌಟ್​ ಆಗಿತ್ತು. ಇದು ಈ ವರೆಗಿನ ಪಿಂಕ್‌ ಬಾಲ್‌ ಟೆಸ್ಟ್‌ ಇತಿಹಾಸದಲ್ಲಿ ತಂಡವೊಂದು ಕಡಿಮೆ ಮೊತ್ತಕ್ಕೆ ಆಲೌಟ್‌ ಆಗಿದ್ದ ಅನಗತ್ಯ ದಾಖಲೆಯಾಗಿತ್ತು. ಇದೀಗ ಭಾರತದ ಹೆಸರಿನಲ್ಲಿದ್ದ ಈ ಅನಗತ್ಯ ದಾಖಲೆ ವಿಂಡೀಸ್‌ ಪಾಲಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 225 ರನ್‌ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ 143ಕ್ಕೆ ಕುಸಿಯಿತು. 82 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಆಸೀಸ್‌ 121ರನ್‌ಗೆ ಆಲೌಟ್‌ ಆಯಿತು. ಒಟ್ಟು 204 ಗೆಲುವಿನ ಗುರಿ ಪಡೆದ ವಿಂಡೀಸ್‌ ಈ ಮೊತ್ತವನ್ನು ಪೇರಿಸಿ ತವರಿನಲ್ಲಿ ವೈಟ್ ವಾಶ್ ಮುಖಭಂಗದಿಂದ ಪಾರಾದೀತು ಎಂದು ನಿರೀಕ್ಷೆ ಮಾಡಲಾಗಿತ್ತು.

ಇದನ್ನೂ ಓದಿ IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್‌ ವಿರುದ್ಧ ಆರ್‌ ಅಶ್ವಿನ್‌ ಕಿಡಿ!

ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಎಡಗೈ ವೇಗಿ ಸ್ಟಾರ್ಕ್‌ ಆರಂಭಿಕ ಎಸೆತದಲ್ಲೇ ಜಾನ್ ಕ್ಯಾಂಪ್ಬೆಲ್ ವಿಕೆಟ್‌ ಕಿಳುವ ಜತೆಗೆ ಈ ಓವರ್‌ನಲ್ಲಿ ಮೂರು ವಿಕೆಟ್‌ ಬೇಟೆಯಾಡಿ ಆಘಾತವಿಕ್ಕಿದರು. ಇಲ್ಲಿಂದ ಚೇತರಿಕೆ ಕಾಣದ ವಿಂಡೀಸ್‌ ಸತತವಾಗಿ ವಿಕೆಟ್‌ ಕಳೆದುಕೊಂಡು 27 ರನ್‌ಗೆ ಸರ್ವಪತನ ಕಂಡಿತು. ವಿಂಡೀಸ್‌ನ 7 ಬ್ಯಾಟರ್‌ಗಳು ಶೂನ್ಯ ಸುತ್ತಿದರು. ಜಸ್ಟಿನ್ ಗ್ರೀವ್ಸ್(11) ಅವರದ್ದೇ ಅತ್ಯಧಿಕ ಗಳಿಕೆ. ಆಸೀಸ್‌ ಪರ ಸ್ಕಾಟ್ ಬೋಲ್ಯಾಂಡ್ ಹ್ಯಾಟ್ರಿಕ್‌ ವಿಕೆಟ್‌ ಪಡೆದುಕೊಂಡರು.