Chahal-Dhanashree: ಚಾಹಲ್-ಧನಶ್ರೀ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ ಮುಂಬೈ ಕೌಟುಂಬಿಕ ನ್ಯಾಯಾಲಯ
Yuzvendra Chahal-Dhanashree Verma divorce: ಒಪ್ಪಂದದಂತೆ, ಚಾಹಲ್ ಅವರು ವರ್ಮಾಗೆ ₹ 4.75 ಕೋಟಿ ಶಾಶ್ವತ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ. ಇದರಲ್ಲಿ ₹2.37 ಕೋಟಿಯನ್ನು ಈಗಾಗಲೇ ಪಾವತಿಸಲಾಗಿದೆ. ಉಳಿದ ಮೊತ್ತ ಪಾವತಿಸದಿದ್ದಲ್ಲಿ ಅದನ್ನು, ಕುಟುಂಬ ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದೇ ಪರಿಗಣಿಸಲಾಗುವುದು' ಎಂದು 'ಬಾರ್ ಮತ್ತು ಬೆಂಚ್' ಹೇಳಿದೆ.


ಮುಂಬಯಿ: ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಾಹಲ್ (Yuzvendra Chahal) ಮತ್ತು ಅವರ ಪತ್ನಿ ಧನಶ್ರೀ ವರ್ಮಾ (Dhanashree Verma) ಗುರುವಾರ(ಮಾರ್ಚ್ 20)ದಂದು ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಮುಂಬೈನ ಕೌಟುಂಬಿಕ ನ್ಯಾಯಾಲಯವು(Mumbai family court) ಈ ಜೋಡಿಗೆ ವಿಚ್ಛೇದನ ಮಂಜೂರು ಮಾಡಿತು. ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 20ರೊಳಗೆ ನಿರ್ಧಾರ ಕೈಗೊಳ್ಳುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ ಚಹಲ್ ಮತ್ತು ಧನಶ್ರೀ(Chahal-Dhanashree) ಇಂದು ವಿಚಾರಣೆಗೆ ಹಾಜರಾಗಿದ್ದರು. ಫೆಬ್ರವರಿ 5 ರಂದು ಚಾಹಲ್ ಮತ್ತು ಧನಶ್ರೀ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಜೀವನಾಂಶವಾಗಿ ಚಹಲ್ ಅವರು ಧನಶ್ರೀಗೆ 4.75 ಕೋಟಿ ರೂ. ನೀಡಲಿದ್ದಾರೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ಬಿ ಅಡಿಯಲ್ಲಿ ನೀಡಲಾಗಿದ್ದ ಕಾಯುವಿಕೆ ಅವಧಿಯನ್ನೂ ರದ್ದು ಮಾಡಲಾಗಿತ್ತು. ಶನಿವಾರದಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚಾಹಲ್ ಪಾಳ್ಗೊಳ್ಳು ಸಲುವಾಗಿ ಗುರುವಾರ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಕೌಟುಂಬಿಕ ನ್ಯಾಯಾಲಯವು ಈ ಜೋಡಿಗೆ ವಿಚ್ಛೇದನ ಮಂಜೂರು ಮಾಡಿದೆ.
ಇದನ್ನೂ ಓದಿ Rj Mahvash: ಧನಶ್ರೀಗೆ ಚಹಲ್ 4.5 ಕೋಟಿ ಜೀವನಾಂಶ ನೀಡಲು ಒಪ್ಪಿದ ಬೆನ್ನಲ್ಲೇ ಮಹ್ವಾಶ್ ರಹಸ್ಯ ಪೋಸ್ಟ್
ಒಪ್ಪಂದದಂತೆ, ಚಾಹಲ್ ಅವರು ವರ್ಮಾಗೆ ₹ 4.75 ಕೋಟಿ ಶಾಶ್ವತ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ. ಇದರಲ್ಲಿ ₹2.37 ಕೋಟಿಯನ್ನು ಈಗಾಗಲೇ ಪಾವತಿಸಲಾಗಿದೆ. ಉಳಿದ ಮೊತ್ತ ಪಾವತಿಸದಿದ್ದಲ್ಲಿ ಅದನ್ನು, ಕುಟುಂಬ ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದೇ ಪರಿಗಣಿಸಲಾಗುವುದು' ಎಂದು 'ಬಾರ್ ಮತ್ತು ಬೆಂಚ್' ಹೇಳಿದೆ. ಇಬ್ಬರೂ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಇವರು ಜೀವನಾಂಶದ ವಿಚಾರಲ್ಲಿ ಇಬ್ಬರ ನಿಲುವು ಒಂದೇ ಆಗಿತ್ತು ಎಂದು ವಕೀಲರೊಬ್ಬರು ಹೇಳಿದರು.
ಧನಶ್ರೀ ಮತ್ತು ಚಹಲ್ 2020ರ ಡಿಸೆಂಬರ್ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಲಿಟ್ಟಿದ್ದರು. ಚಹಲ್ ಲಾಕ್‌ಡೌನ್ ಸಮಯದಲ್ಲಿ ಧನಶ್ರೀ ಅವರಿಂದ ನೃತ್ಯ ಕಲಿಯಲು ಇಚ್ಛಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿ ಪ್ರೀತಿ ಶುರುವಾಗಿತ್ತು.