ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rj Mahvash: ಧನಶ್ರೀಗೆ ಚಹಲ್‌ 4.5 ಕೋಟಿ ಜೀವನಾಂಶ ನೀಡಲು ಒಪ್ಪಿದ ಬೆನ್ನಲ್ಲೇ ಮಹ್ವಾಶ್‌ ರಹಸ್ಯ ಪೋಸ್ಟ್‌

rj mahvash instagram post: ಚಹಲ್‌ ಈಗಾಗಲೇ 2.37 ಕೋಟಿಯನ್ನು ಧನಶ್ರೀಗೆ ಪಾವತಿಸಿದ್ದಾರೆ ಎನ್ನಲಾಗಿದೆ. ಈ ಜೋಡಿ ಕಳೆದ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಜೀವನಾಂಶ ವಿಚಾರದಲ್ಲಿ ಇವರಿಬ್ಬರ ನಿಲುವು ಒಂದೇ ಆಗಿದೆ ಎನ್ನಲಾಗಿದೆ. ಧನಶ್ರೀ ಮತ್ತು ಚಹಲ್‌ 2020ರ ಡಿಸೆಂಬರ್‌ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಲಿಟ್ಟಿದ್ದರು.

ರಹಸ್ಯ ಪೋಸ್ಟ್‌ ಮೂಲಕ ಚಹಲ್‌ ಬೆಂಬಲಕ್ಕೆ ನಿಂತ ಮಹ್ವಾಶ್‌

Profile Abhilash BC Mar 20, 2025 1:20 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಯುಜುವೇಂದ್ರ ಚಹಲ್(Yuzvendra Chahal) ಹಾಗೂ ಪತ್ನಿ ಧನಶ್ರೀ ವರ್ಮಾ(Dhanashree Verma) ವಿಚ್ಚೇಧನ ವರದಿಗಳಿಗೆ ಇಂದು(ಮಾ.20) ಸ್ಪಷ್ಟ ಉತ್ತರ ಸಿಗಲಿದೆ. ಇವರಿಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್‌, ಬುಧವಾರ ಕೌಟುಂಬಿಕ ನ್ಯಾಯಲಯಕ್ಕೆ ನಿರ್ದೇಶನ ನೀಡಿತ್ತು. ವಿಚ್ಛೇದನ ಒಪ್ಪಂದಂತೆ ಚಹಲ್‌ ಅವರು ಧನಶ್ರೀಗೆ 4.75 ಕೋಟಿ ಶಾಶ್ವತ ಜೀವನಾಂಶ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಚಹಲ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿರುವ ಆರ್‌.ಜೆ.ಮಹ್ವಾಶ್‌(Rj Mahvash) ಇನ್‌ಸ್ಟಾಗ್ರಾಂನಲ್ಲಿ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಆರ್‌ಜೆ ಮಹ್ವಾಶ್ ಅವರು ಯುಜುವೇಂದ್ರ ಚಹಲ್ ಜತೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ದುಬೈನಲ್ಲೂ ಈ ಜೋಡಿ ಸುತ್ತಾಟ ನಡೆಸಿತ್ತು. ಹೀಗಾಗಿ ಇವರಿಬ್ಬರು ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಚಹಲ್‌ ಅವರು ಪತ್ನಿಗೆ ವಿಚ್ಛೇದನದ ಭಾಗವಾಗಿ ಸುಮಾರು 4 ಕೋಟಿ ನೀಡಲಿದ್ದಾರೆ ಎನ್ನುವಾಗಲೇ ಮಹ್ವಾಶ್‌ ಪೋಸ್ಟ್‌ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮಹ್ವಾಶ್ ಮಾಡಿರುವ ಪೋಸ್ಟ್‌ನಲ್ಲಿ'ಜೂಟ್, ಲಾಲಾಚ್, ಔರ್ ಫರೇಬ್ ಸೆ ಪರೇ ಹೈಂ.. ಖುದಾ ಕ ಶುಕ್ರ್ ಐನೆ ಆಜ್ ಬಿ ಖಾಡೆ ಹೈಂ.. (ಸುಳ್ಳು, ದುರಾಸೆ ಮತ್ತು ವಂಚನೆಯಿಂದ ದೂರ... ದೇವರಿಗೆ ಧನ್ಯವಾದಗಳು, ನಾವು ಇಂದಿಗೂ ಕನ್ನಡಿಯಲ್ಲಿ ನಮ್ಮ ಮುಖ ನೋಡುತ್ತಾ ನಿಂತಿದ್ದೇವೆ.)' ಎಂದು ಬರೆದಿದ್ದಾರೆ. ಮಹ್ವಾಶ್ ಈ ಪೋಸ್ಟ್‌ ಮಾಡಿದ ಬೆನ್ನಲ್ಲೇ ಚಾಹಲ್ ಇದನ್ನು ಲೈಕ್ ಮಾಡುವ ಜತೆಗೆ ಲವ್ ಎಮೋಜಿಯನ್ನು ಕೂಡ ಹಾಕಿದ್ದಾರೆ. ಇದು ನೆಟ್ಟಿಗರ ಅನುಮಾನವನ್ನು ಖಚಿತಪಡಿಸಿದಂತಿದೆ. ಧನಶ್ರೀಗೆ ಅಧಿಕೃತ ವಿಚ್ಛೇದ ನೀಡಿದ ಬಳಿಕ ಚಹಲ್‌ ಅವರು ಮಹ್ವಾಶ್ ಜತೆ ಹಸೆಮಣೆ ಏರುವ ಸಾಧ್ಯತೆಯೊಂದು ಕಂಡುಬಂದಿದೆ. ಮಹ್ವಾಶ್ ಪೋಸ್ಟ್‌ ನೋಡುವಾಗ ಅವರು ಚಹಲ್‌ಗೆ ಬೆಂಬಲ ಸೂಚಿಸಿಯೇ ಈ ಪೋಸ್ಟ್‌ ಮಾಡಿದಂತಿದೆ.

ಇದನ್ನೂ ಓದಿ ಧನಶ್ರೀ ವರ್ಮಾಗೆ 4.75 ಕೋಟಿ ರೂ. ಜೀವನಾಂಶ ನೀಡಲು ಯುಜ್ವೇಂದ್ರ ಚಹಲ್‌ ಒಪ್ಪಿಗೆ!

ಚಹಲ್‌ ಈಗಾಗಲೇ 2.37 ಕೋಟಿಯನ್ನು ಧನಶ್ರೀಗೆ ಪಾವತಿಸಿದ್ದಾರೆ ಎನ್ನಲಾಗಿದೆ. ಈ ಜೋಡಿ ಕಳೆದ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಜೀವನಾಂಶ ವಿಚಾರದಲ್ಲಿ ಇವರಿಬ್ಬರ ನಿಲುವು ಒಂದೇ ಆಗಿದೆ ಎನ್ನಲಾಗಿದೆ. ಧನಶ್ರೀ ಮತ್ತು ಚಹಲ್‌ 2020ರ ಡಿಸೆಂಬರ್‌ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಲಿಟ್ಟಿದ್ದರು. ಚಹಲ್‌ ಲಾಕ್‌ಡೌನ್‌ ಸಮಯದಲ್ಲಿ ಧನಶ್ರೀ ಅವರಿಂದ ನೃತ್ಯ ಕಲಿಯಲು ಇಚ್ಛಿಸಿದ್ದರು. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಮೂಡಿ ಪ್ರೀತಿ ಶುರುವಾಗಿತ್ತು.



ಸದ್ಯ ಚಹಲ್‌ ಮಾರ್ಚ್‌ 22 ರಿಂದ ಆರಂಭಗೊಳ್ಳಲಿರುವ 18ನೇ ಆವೃತ್ತಿಯ ಐಪಿಎಲ್‌ಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ನಡೆದಿದ್ದ ಐಪಿಎಲ್‌ ಮೆಗಾ ಹರಾಜಿನಲ್ಲಿ ಚಹಲ್‌18 ಕೋಟಿ ರೂ. ಪಡೆದು ಪಂಜಾಬ್‌ ಕಿಂಗ್ಸ್‌ ತಂಡದ ಪಾಲಾಗಿದ್ದರು. ಇದುವರೆಗೆ 160 ಐಪಿಎಲ್‌ ಪಂದ್ಯಗಳನ್ನಾಡಿ 205 ವಿಕೆಟ್‌ ಕಿತ್ತು ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ ಎನಿಸಿಕೊಂಡಿದ್ದಾರೆ.