Saturday, 23rd November 2024

STEM Lab : ವಿದ್ಯಾನಿಕೇತನ ಶಾಲೆಯಲ್ಲಿ ಸ್ಟೆಮ್‌ ಲ್ಯಾಬ್ ಆರಂಭಿಸಿದ ಗ್ಲೋಬಲ್‌ಲಾಜಿಕ್‌

STEM LAB

ಬೆಂಗಳೂರು: ಡಿಜಿಟಲ್ ಪ್ರಾಡಕ್ಟ್ ಇಂಜಿನಿಯರಿಂಗ್ ಲೀಡರ್ ಮತ್ತು ಹಿಟಾಚಿ ಗ್ರೂಪ್ ಕಂಪನಿಯಾದ ಗ್ಲೋಬಲ್‌ಲಾಜಿಕ್ ತಮ್ಮ ಸ್ಟೆಮ್‌ ಲ್ಯಾಬ್ (STEM Lab) ಅನ್ನು ಇಂದು ಬೆಂಗಳೂರಿನ ಭಾರತೀಯ ವಿದ್ಯಾನಿಕೇತನ ಹೈಸ್ಕೂಲ್‌ನಲ್ಲಿ ಉದ್ಘಾಟಿಸಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಕಂಪನಿಯ ಆಡಳಿತ ಮಂಡಳಿಯ ತಂಡವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಗ್ಲೋಬಲ್‌ಲಾಜಿಕ್‌ನ ಎಜುಕೇಟ್‌ಟುಎಂಪವರ್‌ ಉಪಕ್ರಮದ ಭಾಗವಾಘಿದೆ. ಇದು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದಲ್ಲಿ (STEM) ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿ ಹೊಂದಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಭವಿಷ್ಯದ ಅವಕಾಶಗಳಿಗಾಗಿ ಅವರನ್ನು ಸಿದ್ಧಪಡಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಉಪಾಧ್ಯಕ್ಷ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮಧುಸೂದನ್ ಮೂರ್ತಿ ಮತ್ತು ಗ್ಲೋಬಲ್‌ಲಾಜಿಕ್‌ನ ಸಿಎಸ್‌ಆರ್‌ನ ಎಪಿಎಸಿ ಮುಖ್ಯಸ್ಥೆ ಮೋನಿಕಾ ವಾಲಿಯಾ ಉಪಸ್ಥಿತರಿದ್ದರು. ಉದ್ಘಾಟನೆಗೊಂಡ ಲ್ಯಾಬ್ ಪ್ರಾಯೋಗಿಕ ಕಲಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ರೋಬೋಟಿಕ್ಸ್, ಕೋಡಿಂಗ್ ಮತ್ತು ಎಐನಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಇದು ನೆರವಾಗುತ್ತದೆ ಸೈದ್ಧಾಂತಿಕ ಕಲಿಕೆ ಮತ್ತು ಪ್ರಾಯೋಗಿಕ ಅಪ್ಲಿಕೇಶನ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಲ್ಯಾಬ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಆಕ್ಸೆಸ್‌ ನೀಡುತ್ತದೆ ಮತ್ತು ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತದೆ.

ಗ್ಲೋಬಲ್‌ಲಾಜಿಕ್‌ನ ಹಿರಿಯ ಉಪಾಧ್ಯಕ್ಷ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮಧುಸೂದನ್ ಮೂರ್ತಿ ಭವಿಷ್ಯದ ಉದ್ಯೋಗಿಗಳನ್ನು ರೂಪಿಸುವ ಕಂಪನಿಯ ಧ್ಯೇಯದ ಬಗ್ಗೆ ಮಾತನಾಡಿದರು. “ಸ್ಟೆಮ್‌ ಲ್ಯಾಬ್‌ನ ಉದ್ಘಾಟನೆಯು ಮುಂದಿನ ಪೀಳಿಗೆಯ ಸಂಶೋಧಕರನ್ನು ಸಶಕ್ತಗೊಳಿಸುವ ಗ್ಲೋಬಲ್‌ಲಾಜಿಕ್‌ನ ಬದ್ಧತೆಗೆ ಸಾಕ್ಷಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವಗಳನ್ನು ಒದಗಿಸುವ ಮೂಲಕ, ಡಿಜಿಟಲ್ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ನಾವು ಅವರಿಗೆ ಒದಗಿಸುತ್ತಿದ್ದೇವೆ ಎಂದು ಹೇಳಿದರು.

ಲ್ಯಾಬ್ 5 ರಿಂದ 10 ನೇ ತರಗತಿಯ ಸುಮಾರು 1,000 ವಿದ್ಯಾರ್ಥಿಗಳಿಗೆ ಪ್ರಯೋಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಆತ್ಮವಿಶ್ವಾಸ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಈ ಪ್ರಯೋಗಾಲಯವು ಶಿಕ್ಷಕರಿಗೆ ಸಾಮರ್ಥ್ಯ-ವರ್ಧನೆಯ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಈ ಹೊಸ ತಂತ್ರಜ್ಞಾನಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಶಿಕ್ಷಕರು ಸುಸಜ್ಜಿತರಾಗಿದ್ದಾರೆ ಎಂಬುದನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Conservation Award : ಕ್ರಿಕೆಟರ್ಸ್‌ ಫಾರ್‌ ಕನ್ಸರ್ವೇಶನ್ ಸಂಸ್ಥೆಯಿಂದ ನಾಲ್ವರು ಗಾರ್ಡ್ ವಾಚರ್‌ಗಳಿಗೆ ಪ್ರಶಸ್ತಿ ಪ್ರದಾನ

ಗ್ಲೋಬಲ್‌ಲಾಜಿಕ್‌ನ ಸಿಎಸ್‌ಆರ್‌ನ ಎಪಿಎಸಿ ಮುಖ್ಯಸ್ಥೆ ಮೋನಿಕಾ ವಾಲಿಯಾ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಸಮಾನ ಅವಕಾಶವನ್ನು ಸೃಷ್ಟಿಸುವ ಗ್ಲೋಬಲ್‌ಲಾಜಿಕ್‌ನ ಉದ್ದೇಶಕ್ಕೆ ಈ ಉಪಕ್ರಮವು ಪೂರಕವಾಗಿದೆ. ಈ ಲ್ಯಾಬ್ ಮೂಲಕ, ನಾವು ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸುತ್ತಿಲ್ಲ. ನಾವು ಅವರನ್ನು ವಿಮರ್ಶಾತ್ಮಕವಾಗಿ ಮತ್ತು ಸೃಜನಾತ್ಮಕವಾಗಿ ಯೋಚಿಸಲು ಪ್ರೇರೇಪಿಸುತ್ತಿದ್ದೇವೆ, ನಾಳೆಯ ಸವಾಲುಗಳಿಗೆ ಅವರನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದರು.