Saturday, 21st September 2024

ನಾಳೆ ಶಿವಸೇನೆಗೆ ನಟಿ ಊರ್ಮಿಳಾ ಅಧಿಕೃತ ಸೇರ್ಪಡೆ

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಇದೀಗ ಶಿವಸೇನಾ ಸೇರಲಿದ್ದಾರೆ. ಇದೇ ತಿಂಗಳ 30ರಂದು ಶಿವಸೇನಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದ್ದು, ಈ ಕುರಿತು ಶಿವಸೇನಾ ಪಕ್ಷದ ಮೂಲಗಳು ಖಚಿತಪಡಿಸಿಲ್ಲ. ಲೋಕಸಭಾ ಚುನಾವಣೆ ವೇಳೆಗೆ ಮಾರ್ಚ್ 2019ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಇವರು, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತು ಸೆಪ್ಟೆಂಬರ್ 2019ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಶಿವಸೇನಾ ಪಕ್ಷಕ್ಕೆ ದಾಪುಗಾಲಿರಿಸಿದ್ದಾರೆ. ಊರ್ಮಿಳಾ “ನನ್ನ ರಾಜಕೀಯ ಮತ್ತು […]

ಮುಂದೆ ಓದಿ