ಬಸವ ಮಂಟಪ ರವಿ ಹಂಜ್ ಬಿ.ಎಲ್.ರೈಸ್ ಅವರ ಮೈಸೂರು ಗೆಜೆಟಿಯರಿನ ’ದಂಡನಾಯಕ ಆರಾಧ್ಯ ಬಸವ’, ಅರ್ಜುನವಾಡ ಶಾಸನದ ‘ಜಂಗಮ ಪರುಸ ಮಹಾಮಾಹೇಶ್ವರ ಬಸವಣ ದಂಣಾಯಕ’ ಮತ್ತು ಮುನವಳ್ಳಿ ಶಾಸನದ ’ಪರಮಮಾಹೇಶ್ವರ ದಂಣಾಯಕ ಬಸವಿದೇವ’ ಎಲ್ಲವೂ ಬಸವಣ್ಣನನ್ನು ಜಂಗಮ ಎನ್ನುತ್ತವೆ, ಹರಿಹರನ ಪೌರಾಣಿಕ ರಗಳೆ ಯೊಂದನ್ನು ಹೊರತುಪಡಿಸಿ! ಹರಿಹರನ ರಗಳೆಯಲ್ಲಿ ’ಪರಮ ಶಿವಭಕ್ತ ವಿಪ್ರನ ಮಗ ಬಸವ’ ಎಂದಿರುವುದು, ರೋಚಕ ಪೌರಾಣಿಕ ಕಥಾಮಾದರಿಯ ಹಿನ್ನೆಲೆಯಲ್ಲಿ ರೋಚಕತೆಯನ್ನು ಹೇರಲೋ, ಮಹತ್ವವನ್ನು ಮೆರೆಯಲೋ, ವಿಪ್ರದ್ವೇಷವನ್ನು ರಂಜನೀಯಗೊಳಿಸಲೋ ಪರಮ ಶಿವಭಕ್ತನಾದ ಬಸವಣ್ಣನನ್ನು ವಿಪ್ರನಾಗಿಸಲಾಗಿದೆ […]