ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Gold Price Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ  ರೇಟ್‌ ಎಷ್ಟಿದೆ?

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on July 2nd June 2025: ಇಂದು 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,520 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,650 ರೂ. ಮತ್ತು 100 ಗ್ರಾಂಗೆ 9,06,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 79,112 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 98,890 ರೂ. ಮತ್ತು 100 ಗ್ರಾಂಗೆ 9,88,900 ರೂ. ಪಾವತಿಸಬೇಕಾಗುತ್ತದೆ.

Bengaluru Blast: ಬೆಂಗಳೂರು ಬಿಜೆಪಿ ಕಚೇರಿ ಬಳಿ ಬಾಂಬ್‌ ಸ್ಫೋಟಿಸಿದ ಶಂಕಿತ ಉಗ್ರ ಆಂಧ್ರಪ್ರದೇಶದಲ್ಲಿ ಸೆರೆ

ಬೆಂಗಳೂರು ಬಿಜೆಪಿ ಕಚೇರಿ ಬಳಿ ಬಾಂಬ್‌ ಸ್ಫೋಟಿಸಿದ ಶಂಕಿತ ಉಗ್ರ ಸೆರೆ

Bengaluru Blast: ಏಪ್ರಿಲ್ 17, 2013ರಂದು ಬಿಜೆಪಿ ಕಚೇರಿಯ ಹೊರಗೆ ಬಾಂಬ್ ಸ್ಫೋಟಗೊಂಡು ಕನಿಷ್ಠ 16 ಜನರು ಗಾಯಗೊಂಡಿದ್ದರು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೂರು ವಾರಗಳ ಮೊದಲು ಈ ಸ್ಫೋಟ ನಡೆದಿತ್ತು. ಶಂಕಿತ ಉಗ್ರ ನಾಗೂರ್ ಅಬುಬಕ್ಕರ್ ಸಿದ್ದಿಕ್‌ ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಆತನನ್ನು ಬಂಧಿಸಿದ ಅಧಿಕಾರಿ ಹೇಳಿದರು.

BR Patil: ಸಿಎಂ ಸಿದ್ದರಾಮಯ್ಯ ಮತ್ತು ನನ್ನ ಸಂಬಂಧ ಹಾಳು ಮಾಡಲು ಪ್ರಯತ್ನ: ಬಿಆರ್‌ ಪಾಟೀಲ್

ಸಿದ್ದರಾಮಯ್ಯ ಮತ್ತು ನನ್ನ ಸಂಬಂಧ ಹಾಳು ಮಾಡಲು ಪ್ರಯತ್ನ: ಬಿಆರ್‌ ಪಾಟೀಲ್

ʼನಾನು ಆಡಿದ ಮಾತುಗಳನ್ನು ತಿರುಚಿ ವರದಿ ಮಾಡಲಾಗುತ್ತಿದೆ. ಕೆಆರ್‌ ಪೇಟೆಯಲ್ಲಿ ಮಿತ್ರರ ಜೊತೆ ಮಾತನಾಡುವಾಗ ಅವರ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದೆ. ಅವರು ಲಕ್ಕಿ ಲಾಟರಿಯಲ್ಲಿ ಗೆದ್ದು ಸಿಎಂ ಆದರು ಅಂತ ಹೇಳಿದ್ದೆʼ ಎಂದು ಶಾಸಕ ಬಿಆರ್‌ ಪಾಟೀಲ್‌ (BR Patil) ಹೇಳಿದ್ದಾರೆ.

Heart Attack: ನಿನ್ನೆ ಒಂದೇ ದಿನದಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ 6 ಜನ ಸಾವು

ನಿನ್ನೆ ಒಂದೇ ದಿನದಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ 6 ಜನ ಸಾವು

Heart Attack: ಹೃದಯಸ್ತಂಭನದಿಂದ ಏಕಾಏಕಿ ಕುಸಿದುಬಿದ್ದು ಸಾವನ್ನು ಕಾಣುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಹಾಸನದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು. ಚಿಕ್ಕಮಗಳೂರಿನಲ್ಲೂ ಇವು ಕಂಡುಬಂದಿವೆ. ರಾಜ್ಯ ಸರಕಾರ ಇದರ ಅಧ್ಯಯನಕ್ಕೆ ಸಮಿತಿಯನ್ನು ರಚಿಸಿದೆ.

Randeep Surjewala: ರಾಜ್ಯದಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯಿಲ್ಲ: ಸುರ್ಜೇವಾಲ

ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯಿಲ್ಲ: ಸುರ್ಜೇವಾಲ

Randeep Surjewala: ಶಾಸಕರೊಂದಿಗಿನ ಸಭೆಯಲ್ಲಿ ಪಕ್ಷದ ಸಂಘಟನೆ ಮತ್ತು ಆಡಳಿತ ಕುರಿತ ವೈಯಕ್ತಿಕ ಅಭಿಪ್ರಾಯವನ್ನಷ್ಟೇ ಪಡೆಯಲಾಗುತ್ತಿದೆ. ಶಾಸಕರ ರಿಪೋರ್ಟ್‌ ಕಾರ್ಡ್‌ ಪಡೆಯುತ್ತಿದ್ದೇನೆ. ಶಾಸಕರ ಆಕಾಂಕ್ಷೆಗಳು, ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಅದನ್ನು ರಾಜ್ಯ ಸರ್ಕಾರದ ಗಮನಕ್ಕೂ ತರುತ್ತೇನೆ ಎಂದಿದ್ದಾರೆ ಸುರ್ಜೇವಾಲ.

Heart Attack: ಹೃದಯಾಘಾತದ ಸುದ್ದಿಗಳಿಂದಲೇ ಆತಂಕ, ಆಸ್ಪತ್ರೆಗಳಿಗೆ ಧಾವಿಸಿದ ಜನ

ಹೃದಯಾಘಾತದ ಸುದ್ದಿಗಳಿಂದಲೇ ಆತಂಕ, ಆಸ್ಪತ್ರೆಗಳಿಗೆ ಧಾವಿಸಿದ ಜನ

Heart Attack: ಬೆಂಗಳೂರಿನ ಜಯದೇವ ಅಸ್ಪತ್ರೆಯಲ್ಲಿ ಮಂಗಳವಾರ ಸಾಮಾನ್ಯ ದಿನಗಳಿಗಿಂತ ಶೇ.20ರಷ್ಟು ಹೆಚ್ಚಿನ ಜನತೆ ಹೃದಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಜನತೆಯಲ್ಲಿ ಹೃದಯಾಘಾತ, ಹೃದಯ ಸ್ತಂಭನ ಆತಂಕ ಆವರಿಸಿದ್ದು ಹೆಚ್ಚಾಗಿ ಯುವಕರು, ಮಧ್ಯವಯಸ್ಕರು ತಪಾಸಣೆಗೆ ಬಂದಿದ್ದರು.

Star Fashion 2025: ಇಂಗ್ಲೀಷ್‌ ಕಲರ್‌ನ ಕಾರ್ಸೆಟ್‌ ಸೂಟ್‌ನಲ್ಲಿ ನಟಿ ಕೃತಿ ಕರಬಂಧ ಪಾಶ್‌ ಲುಕ್‌!

ಇಂಗ್ಲೀಷ್‌ ಕಲರ್‌ನ ಕಾರ್ಸೆಟ್‌ ಸೂಟ್‌ನಲ್ಲಿ ನಟಿ ಕೃತಿ ಕರಬಂಧ ಪಾಶ್‌ ಲುಕ್‌!

Star Fashion 2025: ಬಹುಭಾಷಾ ತಾರೆ ಕೃತಿ ಕರಬಂಧ ಇತ್ತೀಚೆಗೆ ಟ್ರೆಂಡಿಯಾಗಿರುವ ಆಕಾಶ ನೀಲಿ ವರ್ಣದ ಪಾಸ್ಟೆಲ್‌ ಶೇಡ್‌ನ ಇಂಗ್ಲೀಷ್‌ ಕಲರ್‌ನ ಆಫ್‌ ಶೋಲ್ಡರ್‌ ಕಾರ್ಸೆಟ್‌ ಸೂಟ್‌ನಲ್ಲಿ ಪಾಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ಸೆಟ್‌ ಪ್ರಿಯರಿಗೆ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಕೂಡ ನೀಡಿದ್ದಾರೆ.

Bike Taxi Service: ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಅಸ್ತು, ರಾಜ್ಯದಲ್ಲಿ ಈಗೇನಾಗುತ್ತೆ?

ಬೈಕ್‌ ಟ್ಯಾಕ್ಸಿ ಸೇವೆಗೆ ಕೇಂದ್ರ ಅಸ್ತು, ರಾಜ್ಯದಲ್ಲಿ ಈಗೇನಾಗುತ್ತೆ?

Bike Taxi Service: ಕೇಂದ್ರ ಸಾರಿಗೆ ಸಚಿವಾಲಯ ಮೋಟಾರು ವಾಹನ ಕಾಯ್ದೆ 1988ರ ಅಡಿಯ ಮೋಟಾರ್ ವಾಹನಗಳ ಅಗ್ರಿಗೇಟರ್ ಮಾರ್ಗಸೂಚಿ 2025 ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಬೈಕುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರುಗಳಿಗೆ ಅನುಮತಿ ಕೊಡಬಹುದು ಎಂದು ಹೇಳಿದೆ.

Karnataka Weather: ಹವಾಮಾನ ವರದಿ; ಇಂದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಆರ್ಭಟಿಸಲಿದೆ ಮಳೆ!

ಹವಾಮಾನ ವರದಿ; ಇಂದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಆರ್ಭಟಿಸಲಿದೆ ಮಳೆ!

Karnataka Rains: ಬೆಂಗಳೂರು ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30°C ಮತ್ತು 20°C ಇರುವ ಸಾಧ್ಯತೆ ಇದೆ.

ವಿಶೇಷ ಸಚಿವ ಸಂಪುಟ ಸಭೆಯ ಸ್ಥಳ ಪರಿಶೀಲನೆ ನಡೆಸಿದ ಸಚಿವ ಡಾ.ಎಂ.ಸಿ.ಸುಧಾಕರ್

ವಿಶೇಷ ಸಚಿವ ಸಂಪುಟ ಸಭೆಯ ಸ್ಥಳ ಪರಿಶೀಲನೆ ನಡೆಸಿದ ಸಚಿವ

ಗುಲಬರ್ಗಾ, ಚಾಮರಾಜನಗರ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ನಂದಿಗಿರಿಧಾಮದಲ್ಲಿಯೂ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಮುಖ್ಯ ಮಂತ್ರಿಗಳಿಗೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ಸಚಿವರೆಲ್ಲರೂ ಮನವಿ ಮಾಡಿದ್ದೆವು.

Guarantee Scheme: ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ 100ರಷ್ಟು ಗುರಿ ಸಾಧಿಸಲು ಎಲ್ಲ ಇಲಾಖೆಗಳ ಸಹಕಾರ ಬೇಕು: ಯಲುವಳ್ಳಿ ಎನ್.ರಮೇಶ್

ಗ್ಯಾರಂಟಿ ಯೋಜನೆಗಳು ಶೇ ೧೦೦ ರಷ್ಟು ಗುರಿ ಸಾಧಿಸಲು ಸಹಕಾರ ಬೇಕು

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆ ಗಳು ಯಶಸ್ವಿಯಾಗಿ ಮುಂದುವರೆದಿವೆ. ಸರ್ಕಾರ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಈ ಐದೂ ಯೋಜನೆಗಳು  ಮಹಿಳೆಯರು, ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ.

Chikkaballapur News: ಜಂಗಮಕೋಟೆ ಹೋಬಳಿ ಕೈಗಾರಿಕಾ ಪ್ರಸ್ತಾಪ ಕೈಬಿಟ್ಟು ಅಧಿಸೂಚನೆ ರದ್ಧುಪಡಿಸಿ: ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ಜಂಗಮಕೋಟೆ ಹೋಬಳಿ ಕೈಗಾರಿಕಾ ಪ್ರಸ್ತಾಪ ಕೈ ಬಿಟ್ಟು ಅಧಿಸೂಚನೆ ರದ್ಧುಪಡಿಸಿ

ಜಂಗಮ ಕೋಟೆ ಹೋಬಳಿಯಲ್ಲಿಯ ಭೂಮಿ ನೂರಕ್ಕೆ ನೂರರಷ್ಟು ಕೃಷಿ ಯೋಗ್ಯ ಭೂಮಿ ಯಾಗಿದ್ದು ಇಲ್ಲಿನ ರೈತರು ಚಿನ್ನದಂತಹ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಂತಹ ಫಲವತ್ತಾದ ಭೂಮಿಯನ್ನು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ವಶಪಡಿಸಿಕೊಳ್ಳಲು ಮುಂದಾಗಿರುವುದು ಸರ್ವಥಾ ಸರಿಯಲ್ಲ

ಇಎಸ್ಐಸಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಇಎಸ್ಐಸಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಡಾ ಬಿ ಸಿ ರಾಯ್ ರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಹಾಗೂ ಮಹಾತ್ಮ ಗಾಂಧೀಜಿ ಯವರಿಗೆ ವೈದ್ಯಕೀಯ ಸಲಹೆಗಾರರಾಗಿದ್ದರು. 16 ವರ್ಷಗಳ ಕಾಲ ಬೆಂಗಾಳದ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರಕಾರವು ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Bengaluru News: ಹುಡುಗಿಯರನ್ನು ಸಪ್ಲೈ ಮಾಡ್ತಾನೆ, ರಾಜಕಾರಣಿ ಜತೆ ಮಲಗು ಅಂತಾನೆ; ಗಂಡನ ವಿರುದ್ಧ ಮುಸ್ಲಿಂ ಮಹಿಳೆ ದೂರು

ರಾಜಕಾರಣಿ ಜತೆ ಮಲಗು ಅಂತಾನೆ; ಗಂಡನ ವಿರುದ್ಧ ಮುಸ್ಲಿಂ ಮಹಿಳೆ ದೂರು

Bengaluru News: ನೊಂದ ಮಹಿಳೆ ನೀಡಿರುವ ದೂರಿನ ಮೇರೆಗೆ ಪತಿ ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಜಕಾರಣಿಯ ಜತೆ ಸಹಕರಿಸಬೇಕು ಎಂದು ಪದೇ ಪದೇ ಬಲವಂತ ಮಾಡುತ್ತಿದ್ದ. ಇದಕ್ಕೆ ಒಪ್ಪಲಿಲ್ಲ ಎಂದು ತಲಾಖ್‌ ಹೇಳಿ, ನನ್ನನ್ನು ಮಾರಾಟ ಮಾಡಲು ಮುಂದಾಗಿದ್ದ ಎಂದು ಪತಿ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

Dinesh Gundu Rao: ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳ ಸ್ಥಾಪನೆ: ದಿನೇಶ್ ಗುಂಡೂರಾವ್

ರಾಜ್ಯದಲ್ಲಿ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳ ಸ್ಥಾಪನೆ

Dinesh Gundu Rao: ರಾಜ್ಯದ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ನೂತನವಾಗಿ 393 ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ತಿಂಗಳ 3ರಂದು ಬುಧವಾರ ನೂತನ ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

CM Change Remarks: ಸಿಎಂ ಬದಲಾವಣೆಗೆ ಬೇಡಿಕೆ; ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ಗೆ ಕೆಪಿಸಿಸಿ ನೋಟಿಸ್‌

ಸಿಎಂ ಬದಲಾವಣೆ ಹೇಳಿಕೆ; ಶಾಸಕ ಇಕ್ಬಾಲ್‌ ಹುಸೇನ್‌ಗೆ ಕೆಪಿಸಿಸಿ ನೋಟಿಸ್‌

CM Change Remarks: ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡುವಂತಹ ಹೇಳಿಕೆ ನೀಡಿದ ಹಿನ್ನೆಲೆ ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್‌ಗೆ ನೋಟಿಸ್‌ ನೀಡಲಾಗಿದೆ. ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.

Jungle Mangal Movie: ರಕ್ಷಿತ್‌ ಕುಮಾರ್‌ ನಿರ್ದೇಶನದ ʼಜಂಗಲ್‌ ಮಂಗಲ್‌ʼ ಚಿತ್ರ ಜು.4ಕ್ಕೆ ರಿಲೀಸ್‌

ರಕ್ಷಿತ್‌ ಕುಮಾರ್‌ ನಿರ್ದೇಶನದ ʼಜಂಗಲ್‌ ಮಂಗಲ್‌ʼ ಚಿತ್ರ ಜು.4ಕ್ಕೆ ರಿಲೀಸ್‌

Jungle Mangal Movie: ರಕ್ಷಿತ್‌ ಕುಮಾರ್‌ ನಿರ್ದೇಶನದ ʼಜಂಗಲ್‌ ಮಂಗಲ್‌ʼ ಚಿತ್ರ ಜುಲೈ 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ʻಜಂಗಲ್‌ ಮಂಗಲ್‌ʼ ಚಿತ್ರವು ಯುವ ಜೋಡಿಯ ಸುತ್ತ ಒಂದು ದಿನದ ಅವಧಿಯಲ್ಲಿ ನಡೆಯುವ ಲೈಟ್‌ ಹಾರ್ಟೆಡ್‌ ಥ್ರಿಲ್ಲರ್‌ ಚಿತ್ರವಿದು. ಯಾವುದೋ ಒಂದು ಕಾರಣಕ್ಕೆ ಕಾಡಿಗೆ ಹೋಗುವ ಜೋಡಿಗೆ, ಎದುರಾಗುವ ಸಮಸ್ಯೆಗಳೇ ಈ ಚಿತ್ರದ ಹೈಲೈಟ್‌. ಇನ್ನೊಂದು ವಿಶೇಷವೆಂದರೆ ಇದು ನೈಜ ಪಾತ್ರಗಳನ್ನು ಆಧರಿಸಿ ಜೋಡಿಸಿದ ಕಾಲ್ಪನಿಕ ಕಥೆಯಂತೆ. ಹೀಗಂತ ಸ್ವತಃ ನಿರ್ದೇಶಕ ರಕ್ಷಿತ್‌ ಕುಮಾರ್‌ ಹೇಳಿದ್ದಾರೆ.

Valmiki Corporation scam: ವಾಲ್ಮೀಕಿ ನಿಗಮ ಹಗರಣದ ತನಿಖೆ ಸಿಬಿಐಗೆ ವಹಿಸಿ ಹೈಕೋರ್ಟ್‌ ಆದೇಶ

ವಾಲ್ಮೀಕಿ ನಿಗಮ ಹಗರಣದ ತನಿಖೆ ಸಿಬಿಐಗೆ ವಹಿಸಿ ಹೈಕೋರ್ಟ್‌ ಆದೇಶ

Valmiki Corporation scam: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿದ ಶಾಸಕರಾದ ಬಸನಗೌಡ ಪಾಟೀಲ್​ ಯತ್ನಾಳ್​, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್​ ಬಂಗಾರಪ್ಪ ಅವರು ರಿಟ್​ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್‌, ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಸೂಚಿಸಿದೆ.

DK Shivakumar: ಶಾಸಕರ ಜತೆ ಸುರ್ಜೇವಾಲ ಮಾತುಕತೆ; ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದ ಡಿಕೆಶಿ

ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದ ಡಿಕೆಶಿ

Karnataka Congress: ರಣದೀಪ್ ಸಿಂಗ್ ಸುರ್ಜೇವಾಲ ಸಭೆ ಬಗ್ಗೆ ಯಾರಿಗೂ ಆತಂಕ ಬೇಡ. ರಾಷ್ಟ್ರಾದ್ಯಂತ ನಾವು ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದು, ಸಂಘಟನೆ ಹಿನ್ನೆಲೆಯಲ್ಲಿ ಈ ಸಭೆ ಮಾಡಲಾಗುತ್ತಿದೆ. ಸಂಘಟನೆ ಕುರಿತು ಮಾರ್ಗದರ್ಶನ ನೀಡಲು ರಣದೀಪ್ ಸಿಂಗ್ ಸುರ್ಜೇವಾಲ ಆಗಮಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

CM Siddaramaiah: ಐಪಿಎಸ್ ಅಧಿಕಾರಿ ಅಮಾನತು ರದ್ದು; ಸಿಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದ ಸಿಎಂ

ಸಿಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದ ಸಿಎಂ

CM Siddaramaiah: ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್‌ ಕುಮಾರ್‌ ಅವರ ಅಮಾನತು ರದ್ದುಗೊಳಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.

ಮಹಿಳಾ ಉದ್ಯಮಿಗಳ ಕನಸಿಗೆ ಸ್ಥಳೀಯ ಸ್ಫೂರ್ತಿ, ಜಾಗತಿಕ ರೆಕ್ಕೆ : 'ಶೀ ಎಕ್ಸ್‌ಪೋರ್ಟ್ಸ್' ಮೂಲಕ ವಿಶ್ವ ಗೆಲ್ಲಲು ಸಿದ್ಧತೆ

ಮಹಿಳಾ ಉದ್ಯಮಿಗಳ ಕನಸಿಗೆ ಸ್ಥಳೀಯ ಸ್ಫೂರ್ತಿ, ಜಾಗತಿಕ ರೆಕ್ಕೆ

ಉನ್ನತ ಮಟ್ಟದ ಚರ್ಚೆಯಿಂದ ಡಿಜಿಟಲ್, ಸಹಯೋಗ ಮತ್ತು ಗಡಿಯಾಚೆ ಉದ್ಯಮದ ವಿಸ್ತರಣೆ ಯ ಮಾರ್ಗಗಳನ್ನು ಮಹಿಳೆಯರು ತಿಳಿದುಕೊಂಡರು. 'ಶೀ ಎಕ್ಸ್‌ಪೋರ್ಟ್ಸ್' ಎನ್ನುವುದು ಆಸ್ಪೈರ್ ಫಾರ್ ಹರ್‌ನ ರಾಷ್ಟ್ರೀಯ ಉಪಕ್ರಮವಾದ್ದು, ಇದು ವಿಶೇಷವಾಗಿ ಟಯರ್‌ 2 ಮತ್ತು 3 ನಗರಗಳ ಮಹಿಳಾ ಉದ್ಯಮಿಗಳನ್ನು ಜಾಗತಿಕ ಕ್ಷೇತ್ರಕ್ಕೆ ತೆರೆದುಕೊಳ್ಳಲು ಬೇಕಾದ ಸಿದ್ಧತೆ ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ

Standard Operating Procedure: ಕಾಲ್ತುಳಿತ ದುರಂತ; ಜನಸಂದಣಿ ನಿರ್ವಹಣೆಗೆ ಎಸ್‌ಒಪಿ ರೂಪಿಸಿದ ರಾಜ್ಯ ಸರ್ಕಾರ

ಕಾಲ್ತುಳಿತ ದುರಂತ; ಜನಸಂದಣಿ ನಿರ್ವಹಣೆಗೆ ಎಸ್‌ಒಪಿ ರೂಪಿಸಿದ ರಾಜ್ಯ ಸರ್ಕಾರ

Standard Operating Procedure: ದೊಡ್ಡ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕ್ರಮ ಮತ್ತು ಕಾರ್ಯಗತಗೊಳಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವುದು, ಅಪಾಯಗಳನ್ನು ಕಡಿಮೆ ಮಾಡುವುದು, ಸಮನ್ವಯವನ್ನು ಹೆಚ್ಚಿಸುವ ಸಲುವಾಗಿ ಪೊಲೀಸ್‌ ಇಲಾಖೆಯು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ) ರೂಪಿಸಿದೆ.

LV Autorikshaw Handbag 2025: ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್‌ ಅನಾವರಣಗೊಳಿಸಿದ ಲೂಯಿಸ್‌ ವ್ಯುಟನ್‌; ಬೆಲೆ ಕೇಳಿದ್ರೆ ದಂಗಾಗುತ್ತೀರಾ!

ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್‌ ಅನಾವರಣಗೊಳಿಸಿದ ಲೂಯಿಸ್‌ ವ್ಯುಟನ್‌

LV Autorikshaw Handbag 2025: ಅಂತಾರಾಷ್ಟ್ರೀಯ ಮಟ್ಟದ ಹೈ ಫ್ಯಾಷನ್‌ಗೆ ಹೆಸರಾದ ಪ್ರತಿಷ್ಠಿತ ಲೂಯಿಸ್‌ ವ್ಯುಟನ್‌ ಬ್ರ್ಯಾಂಡ್‌ ಇದೀಗ ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್‌ ಬಿಡುಗಡೆಗೊಳಿಸಿದೆ. ಮೆನ್ಸ್ ಫ್ಯಾಷನ್‌ ಶೋನಲ್ಲಿ ಮಾಡೆಲ್‌ಗಳು ಇದನ್ನು ಹಿಡಿದು ವಾಕ್‌ ಮಾಡಿದ್ದು, ಸದ್ಯ ಫ್ಯಾಷನ್‌ ಪ್ರಿಯರನ್ನು ನಿಬ್ಬೆರಗಾಗಿಸಿದೆ. ಈ ಕುರಿತಂತೆ ಇಲ್ಲಿದೆ ವರದಿ.

ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ TAFE ಸಂಸ್ಥೆಯು AGCO ಬ್ರ್ಯಾಂಡ್‌ನೊಂದಿಗೆ ಒಪ್ಪಂದಕ್ಕೆ ಸಹಿ

AGCO ಬ್ರ್ಯಾಂಡ್‌ನೊಂದಿಗೆ TAFE ಸಂಸ್ಥೆ ಒಪ್ಪಂದಕ್ಕೆ ಸಹಿ

ಮ್ಯಾಸ್ಸಿ ಫರ್ಗುಸನ್‌” ಮತ್ತು ಸಂಬಂಧಿತ ಟ್ರೇಡ್‌ಮಾರ್ಕ್‌ ಗಳಲ್ಲಿನ ಎಲ್ಲಾ ಹಕ್ಕುಗಳು, ಟೈಟಲ್‌ ಮತ್ತು ಆಸಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸದ್ಭಾವನೆಗಳನ್ನು ಒಳಗೊಂಡಂತೆ ಮ್ಯಾಸಿ ಫರ್ಗುಸನ್‌ ಬ್ರ್ಯಾಂಡ್‌ ನ ಮಾಲೀಕತ್ವವು ಭಾರತ, ನೇಪಾಳ ಮತ್ತು ಭೂತಾನ್‌ ಗೆ ಏಕೈಕ ಮತ್ತು ವಿಶೇಷ ಮಾಲೀಕ ರಾಗಿ TAFE ನೊಂದಿಗೆ ಇರುತ್ತದೆ.