Saturday, 21st September 2024

ಕೆ ಆರ್ ಪೇಟೆಯಲ್ಲಿ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿದರು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಂದು ಕೆ.ಆರ್. ಪೇಟೆಯಲ್ಲಿ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿದರು.ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ, ಕಂದಾಯ ಸಚಿವ ರಾದ ಆರ್. ಆಶೋಕ್ ಮಂಡ್ಯದ ಲೋಕಸಭೆಯ ಸಂಸತ್ ಸದಸ್ಯ ಸುಮಲತಾ,ಮಾಜಿ ಶಾಸಕ ನಾರಾಯಣ ಗೌಡ ಹಾಗು ಮಂಡ್ಯ ಮನ್ಮುಲ್ ನಿರ್ದೇಶಕರಾದ ತಮ್ಮಣ್ಣ ಕೆ.ಜಿ ಮತ್ತು ಮಂಡ್ಯ ಮೂಡ ಅಭಿರುದ್ದಿ ಜಿಲ್ಲಾಧ್ಯಕ್ಷರು ಕೆ. ವಾಸಣ್ಣಾ ಉಪಸ್ಥಿತರಿದ್ದರು

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಕೆ.ಆರ್.ಪೇಟೆ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ನಾನು ಬದ್ದ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾರಾಯಣಗೌಡ ಬೇಡಿಕೆ ಈಡೇರಿಸಲು ನಾನು ಸಿದ್ದನಿದ್ದೇನೆ ಕೆ.ಆರ್.ಪೇಟೆ ಸಂಪೂರ್ಣ ಅಭಿವೃದ್ಧಿಗೆ ನಾನು ಕಟಿಬದ್ದನಾಗಿದ್ದೇನೆ ನಾರಾಯಣಗೌಡ ಕೆ.ಆರ್.ಪೇಟೆ ಸಂಪೂರ್ಣ ಅಭಿವೃದ್ಧಿ ಗಾಗಿ ಪಣತೊಟ್ಟಿದ್ದಾರೆ.ಅನರ್ಹ ಶಾಸಕ ನಾರಾಯಣಗೌಡರನ್ನು ಹಾಡಿ ಹೊಗಳಿದ ಯಡಿಯೂರಪ್ಪ

ಕೆ.ಆರ್.ಪೇಟೆಯಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ ಪಾಂಡವಪುರ ಸಕ್ಕರೆ ಕಾರ್ಖಾನೆ ಶೀಘ್ರ ಪ್ರಾರಂಭಿಸಲು ಡಿಸಿಗೆ ಸೂಚನೆ ನೀಡಲಾಗಿದೆ ಮೈಷುಗರ್ ಆರಂಭಿಸುವ ಕುರಿತು ಚರ್ಚೆ ನಡೆಯುತ್ತಿದೆ ಕಬ್ಬು ಬೆಳೆಗಾರರ ಸಮಸ್ಯೆಗೆ ಎರಡೂ ಕಾರ್ಖಾನೆಗಳು ಆರಂಭವಾಗಬೇಕು ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಹೊರ ರಾಜ್ಯದ ಕಾರ್ಖಾನೆಗಳಿಗೆ ಜಿಲ್ಲೆಯ ಕಬ್ಬು ಸಾಗಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ನಾರಾಯಣಗೌಡರ ಮೇಲೆ ಯಡಿಯೂರಪ್ಪ ಅವ್ರು ಸಂಪೂರ್ಣ ಆಶೀರ್ವಾದ ಇದೆ

ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಆಯ್ತು ಈಗ ಕೆ.ಆರ್‌.ಪೇಟೆಗೆ..? ಮೆಡಿಕಲ್ ಕಾಲೇಜುಗೆ ಬೇಟಿಕೆ ಇಟ್ಟ ಅನರ್ಹ ಶಾಸಕ ನಾರಾಯಣಗೌಡ ಮೆಡಿಕಲ್ ಕಾಲೇಜು ಮಂಜೂರಾತಿಗೆ ಸಿಎಂಗೆ ಮನವಿ ಕೆ.ಆರ್‌.ಪೇಟೆ ಆರೋಗ್ಯ ಮೇಳದಲ್ಲಿ ಅನರ್ಹ ಶಾಸಕ ನಾರಾಯಣಗೌಡ ಮನವಿ ಬಿಎಸ್ ವೈ ತಂದೆ ಹೆಸರಿನಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಮನವಿ ಪ್ರಾಸ್ತಾವಿಕ ಭಾಷಣದಲ್ಲಿ ಸಿಎಂಗೆ ಮೆಡಿಕಲ್ ಕಾಲೇಜಿಗೆ ಬೇಡಿಕೆ ಇಟ್ಟ ನಾರಾಯಣಗೌಡ.ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆ ಮಂಡ್ಯದ ಮಣ್ಣಲ್ಲಿ ಹುಟ್ಟಿದ ಯಡಿಯೂರಪ್ಪ ಶಿವಮೊಗ್ಗದಲ್ಲಿ ಬೆಳೆದು ರಾಜ್ಯದ ಸಿಎಂ ಆಗಿದ್ದಾರೆ. ಅಂಬರೀಶ್ ಅಣ್ಣನ ರೀತಿಯ ಮಾತಿನ ಶೈಲಿಯನ್ನ ನೀವು ರೂಢಿಸಿಕೊಳ್ಳಿ ಸಂಸದೆ ಸುಮಲತಾರಿಗೆ ನಾರಾಯಣಗೌಡ ಸಲಹೆ ರಾಜೀನಾಮೆ ಬಳಿಕ ಯಡಿಯೂರಪ್ಪ ಮನೆಗೆ ಹೋಗಿದ್ದೆ 700 ಕೋಟಿ ರೂ. ಅನುದಾನವನ್ನು ಎಚ್ಡಿಕೆ ಸರ್ಕಾರದಲ್ಲಿ ಕೇಳಿದ್ದೆ. ಆದ್ರೆ ಕೊಡಲಿಲ್ಲ ಎಂದೆ ಆಗ ಅವ್ರು ಕೆ.ಆರ್.ಪೇಟೆ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನ ಕೊಡ್ತಿನಿ ಎಂದ್ರು ಈಗಾಗಲೇ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ನೀಡಿ ಆಶೀರ್ವಾದ ಮಾಡಿದ್ದಾರೆ ನಿಮ್ಮ ತಂದೆ ಹೆಸರಲ್ಲಿ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಕೊಡಿ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿದ ಅನರ್ಹ ಶಾಸಕ ನಾರಾಯಣಗೌಡ ಯಡಿಯೂರಪ್ಪ ಮೂರುವರೆ ವರ್ಷ ಮುಖ್ಯಮಂತ್ರಿ
ಆಗಿರುತ್ತಾರೆ ಯಡಿಯೂರಪ್ಪ ನಮ್ಮ ತಾಲೂಕಿನ ಮುಖ್ಯಮಂತ್ರಿ ನಮಗೆ ಯಾವದೇ ಭಯ ಇಲ್ಲ, ನಾವೆಲ್ಲರೂ ಅವರಿಂದ ತಾಲೂಕಿನ ಅಭಿವೃದ್ಧಿ ಪಡೆಯೋಣ ಸಿಎಂ ಯಡಿಯೂರಪ್ಪ ಅವ್ರನ್ನ ಹಾಡಿಹೊಗಳಿದ ನಾರಾಯಣಗೌಡ

ಕೆ.ಆರ್.ಪೇಟೆಯಲ್ಲಿ ಎಲ್ಲೂ ಸಿಗದ ಆರೋಗ್ಯ ವ್ಯವಸ್ಥೆ ಕೊಡ್ತಾರಂತೆ ಡಿಸಿಎಂ ಆರೋಗ್ಯ ಮೇಳದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿಕೆ ರಾಜ್ಯದಲ್ಲಿ ಎಲ್ಲೂ ಇಲ್ಲದ ಆರೋಗ್ಯ ವ್ಯವಸ್ಥೆಯನ್ನು ಕೆ.ಆರ್‌.ಪೇಟೆಗೆ ಕೊಡುತ್ತೇವೆ 100 ಹಾಸಿಗೆ ಮಾತ್ರ ಅಲ್ಲ ಅದಕ್ಕಿಂತ ಹೈಟೆಕ್ ಆಸ್ಪತ್ರೆಯನ್ನು ಇಲ್ಲಿ‌ಮಾಡುತ್ತೇವೆ ರಾಜ್ಯದ ಯಾವ ಭಾಗದಲ್ಲೂ ಇಲ್ಲದ ಆಸ್ಪತ್ರೆಯನ್ನು ಇಲ್ಲಿ ನಿರ್ಮಾಣ ಮಾಡುತ್ತೇವೆ ನಾರಾಯಣಗೌಡ ಅವರು ಹೇಳಿದ್ದೇಲ್ಲವನ್ನೂ ಈಡೇರುಸುತ್ತೇವೆ ಇದು ಮಾತು ಮಾತ್ರವಲ್ಲ.ಇದನ್ನಾ ನಾವು ಮಾಡೇ ಮಾಡುತ್ತೇವೆ