Viral Video: ಡ್ಯಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವತಿ ಸಾವು; ಆಘಾತಕಾರಿ ವಿಡಿಯೊ ವೈರಲ್
ಮಧ್ಯ ಪ್ರದೇಶದ ವಿದಿಶಾದ ಮಗ್ಧಮ್ ರೆಸಾರ್ಟ್‌ನ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಯುವತಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಹೃದಾಯಘಾತ ಆಕೆ ಅಸುನೀಗಿದ್ದಾಳೆ ಎನ್ನಲಾಗಿದೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
![ನೃತ್ಯ ಮಾಡುವಾಗಲೇ ಕುಸಿದು ಬಿದ್ದು ಯುವತಿ ಸಾವು](https://cdn-vishwavani-prod.hindverse.com/media/original_images/indore_viral.jpg)
indore viral
![Profile](https://vishwavani.news/static/img/user.png)
ಭೋಪಾಲ್: ಮದುವೆ ಸಮಾರಂಭವೊಂದರಲ್ಲಿ ಯುವತಿಯೊಬ್ಬಳು ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಸದ್ಯ ಈ ಆಘಾತಕಾರಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ (Viral Video). ಮೃತ ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ (23) ಎಂದು ಗುರುತಿಸಲಾಗಿದ್ದು, ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಯುವತಿಯು ಸೋದರ ಸಂಬಂಧಿಯ ವಿವಾಹದಲ್ಲಿ ಪಾಲ್ಗೊಳ್ಳಲು ವಿದಿಶಾಗೆ ಆಗಮಿಸಿದ್ದರು. ವಿವಾಹ ಸಮಾರಂಭದ ವೇದಿಕೆಯ ಮೇಲೆ ನೃತ್ಯ ಮಾಡುವಾಗಲೇ ಆಕೆಗೆ ಹೃದಯಾಘಾತವಾಗಿದ್ದು, ವೇದಿಕೆಯಲ್ಲೇ ಹಠಾತ್ ಸಾವನ್ನಪ್ಪಿದ್ದಾಳೆ. ಸದ್ಯ ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ವಿದಿಶಾದ ಮಗ್ಧಮ್ ರೆಸಾರ್ಟ್‌ನ ಮದುವೆ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಪರಿಣಿತಾಗೆ ಹೃದಯಾಘಾತ ವಾಗಿದೆ. ಈ ವೇಳೆ ಯುವತಿ ಕುಸಿದು ಬಿದ್ದಿದ್ದಾಳೆ.
@vidisha @Ms_HeartAttack @vidishanews डांस करते-करते महिला अचानक गिरी, फिर नहीं उठी...हो गई मौत,हार्ट अटैक की आशंका।
— @durgesh IANS (@D_kumar777) February 9, 2025
डेढ़ मिनट के डांस के बाद अचानक स्टेज पर गिरी महिला हुई मौत। pic.twitter.com/NVnqPZt89k
ರಾತ್ರಿ 10 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಕೂಡಲೇ ಆಕೆಯನ್ನು ವಿದಿಶಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಆಕೆಯ ಆರೋಗ್ಯ ಪರಿಶೀಲಿಸಿದ ವೈದ್ಯರು ಮೃತಪಟ್ಟಿದ್ದಾಳೆಂದು ತಿಳಿಸಿದ್ದಾರೆ. ಆಕೆಯ ಮರಣದ ನಂತರ, ಮದುವೆಯ ವಿಧಿವಿಧಾನಗಳು ರಾತ್ರಿ ಸರಳವಾದ ರೀತಿಯಲ್ಲಿ ಪೂರ್ಣಗೊಂಡವು. ಇದು ಸಂಭ್ರಮದಿಂದ ಕೂಡಿದ್ದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ಇದನ್ನು ಓದಿ: Crime News: ಗೋವಿನ ಮೇಲೆ ದೌರ್ಜನ್ಯ; ಕರುವಿನ ಬಾಲ ಕತ್ತರಿಸಿದ ಕಿಡಿಗೇಡಿಗಳು
ಪರಿಣಿತಾ ಇಂದೋರ್‌ನ ಸ್ವಸ್ತಿಕ ಇನ್ವೆಸ್ಟ್‌ಮೆಂಟ್ ಕಂಪನಿಯ ಶಾಖೆಯ ಮುಖ್ಯಸ್ಥ ಸುರೇಂದ್ರ ಕುಮಾರ್ ಜೈನ್ ಮತ್ತು ಬಿಂದು ಜೈನ್ ಅವರ ಪುತ್ರಿ. ಪರಿಣಿತಾ ಎಂಬಿಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನೃತ್ಯದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಈಕೆ ಮದುವೆಯ ನೃತ್ಯಕ್ಕಾಗಿ ಒಂದು ತಿಂಗಳಿನಿಂದ ತಯಾರಿ ನಡೆಸುತ್ತಿದ್ದಳು ಎನ್ನಲಾಗಿದೆ. ವಿಡಿಯೊ ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.