Viral Video: ರೋಹಿತ್ ಶರ್ಮಾನಂತೆ ಫುಲ್ ಶಾಟ್ ಹೊಡೆದ ಪಾಕಿಸ್ತಾನದ 6 ವರ್ಷದ ಬಾಲಕಿ
ಪಾಕಿಸ್ತಾನದ 6 ವರ್ಷದ ಬಾಲಕಿಯೊಬ್ಬಳು ಫುಲ್ ಶಾಟ್ ಹೊಡೆದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ರೋಹಿತ್ ಶರ್ಮಾನಂತೆ ಫುಲ್ ಶಾಟ್ ಹೊಡೆದ ಪಾಕಿಸ್ತಾನದ 6 ವರ್ಷದ ಬಾಲಕ ರೋಹಿತ್ ಶರ್ಮಾನಂತೆ ಫುಲ್ ಶಾಟ್ ಹೊಡೆದ ಪಾಕಿಸ್ತಾನದ 6 ವರ್ಷದ ಬಾಲಕಿ ಆಗಿದೆ. ಇದು ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಈ ವಿಡಿಯೊ ಫುಲ್ ವೈರಲ್ ಆಗಿದೆ.


ಇಸ್ಲಾಮಾಬಾದ್: ಕ್ರಿಕೆಟ್ ಎಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಇಷ್ಟದ ಗೇಮ್! ಇನ್ನು ಈ ಕ್ರಿಕೆಟ್ ದಂತಕಥೆಯಲ್ಲಿ ಬಹಳ ಫೇಮಸ್ ಆದ ಕ್ರಿಕೆಟಿಗರಲ್ಲಿ ರೋಹಿತ್ ಶರ್ಮಾ ಹೆಸರು ಅಗ್ರಸ್ಥಾನದಲ್ಲಿದೆ .ಇವರ ಬ್ಯಾಟಿಂಗ್ ಸ್ಟೈಲ್‍ಗೆ ಇಡೀ ವಿಶ್ವವೇ ಬೆಕ್ಕಸಬೆರಗಾಗುತ್ತದೆ. ಅಂತಹದರಲ್ಲಿ ಪಾಕಿಸ್ತಾನದ 6 ವರ್ಷದ ಬಾಲಕಿಯೊಬ್ಬಳು ರೋಹಿತ್ ಶರ್ಮಾನಂತೆ ಫುಲ್ ಶಾಟ್ ಅನ್ನು ಹೊಡೆದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಆಕೆಯ ಅದ್ಭುತವಾದ ಪ್ರದರ್ಶನವನ್ನು ಕಂಡ ಅನೇಕ ಸೋಶಿಯಲ್ ಮಿಡಿಯಾ ನೆಟ್ಟಿಗರು ಅವಳನ್ನು ಭಾರತೀಯ ಕ್ರಿಕೆಟ್ ತಾರೆ ರೋಹಿತ್ ಶರ್ಮಾಗೆ ಹೋಲಿಸಿದ್ದಾರೆ.
ಇಂಗ್ಲಿಷ್ ಕ್ರಿಕೆಟ್ ಅಂಪೈರ್ ರಿಚರ್ಡ್ ಕೆಟಲ್ಬರೋ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಸೋನಿಯಾ ಎಂದು ಗುರುತಿಸಲ್ಪಟ್ಟ ಪುಟ್ಟ ಬಾಲಕಿ ರೋಹಿತ್ ಶರ್ಮಾ ಅವರಂತೆಯೇ ಅದ್ಭುತವಾಗಿ ಫುಲ್ ಶಾಟ್ ಹೊಡೆದಿದ್ದಾಳೆ. ಹಾಗೇ ಬಾಲಕಿಗೆ ವ್ಯಕ್ತಿಯೊಬ್ಬ ಬೌಲಿಂಗ್ ಮಾಡುವುದು ವಿಡಿಯೊದಲ್ಲಿ ಸೆರೆಯಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
6 yrs old ~ Talented Sonia Khan from Pakistan 🇵🇰 (Plays Pull Shot like Rohit Sharma) 👏🏻 pic.twitter.com/Eu7WSOZh19
— Richard Kettleborough (@RichKettle07) March 19, 2025
ಈ ವಿಡಿಯೊ ಹಂಚಿಕೊಂಡಾಗಿನಿಂದ, ಸುಮಾರು 1 ಮಿಲಿಯನ್ ವ್ಯೂವ್ಸ್ ಮತ್ತು 12,000 ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ, ಅನೇಕ ನೆಟ್ಟಿಗರು ಅವಳ ಬ್ಯಾಟಿಂಗ್ ಸ್ಟೈಲ್ ಅನ್ನು ರೋಹಿತ್ ಶರ್ಮಾಗೆ ಹೋಲಿಸಿದ್ದಾರೆ. "ಯುವ ಸೋನಿಯಾ ಖಾನ್ ಯಾವುದೇ ಕಟ್ಸ್ ಅಥವಾ ಸ್ವೀಪ್‍ಗಳು ಇಲ್ಲದೇ ತನ್ನ ಜಾಗದಲ್ಲಿ ಚೆನ್ನಾಗಿ ಆಡಿದ್ದಾಳೆ. ನಿಜವಾದ ಗಲ್ಲಿ ಕ್ರಿಕೆಟ್ ಚಾಣಾಕ್ಷತೆ ಅವಳಲ್ಲಿ ಕಾಣಿಸುತ್ತಿದೆ. ರೋಹಿತ್ ತರಹದ ಪುಲ್ ಶಾಟ್ ಕಂಡು ಖುಷಿಯಾಗಿದೆ!" ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ.
"ಪ್ರಸ್ತುತ ಪಾಕಿಸ್ತಾನ ತಂಡವು ನ್ಯೂಜಿಲೆಂಡ್‍ನಲ್ಲಿ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ಮಗು ತಮ್ಮ ಪುರುಷರ ತಂಡದಲ್ಲಿಯೇ ಸ್ಥಾನವನ್ನು ಪಡೆಯಬಹುದು. ಇದಲ್ಲದೆ, ಈ ಸುಂದರ ಪ್ರತಿಭೆಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಪಾಕಿಸ್ತಾನದಲ್ಲಿಯೂ ಕೆಲವು ನಿಜವಾದ ಪ್ರತಿಭೆಗಳಿವೆ" ಎಂದು ಮೂರನೇಯವರು ಕಾಮೆಂಟ್ ಮಾಡಿದ್ದಾರೆ. "ಅವರು ತಮ್ಮ ಪ್ರಸ್ತುತ ಪುರುಷರ ತಂಡ ಪ್ರವಾಸ ಪಂದ್ಯಗಳಲ್ಲಿ ಆಡಲು ಹೋಗುವಾಗ ಅವಳನ್ನು ನ್ಯೂಜಿಲೆಂಡ್‍ಗೆ ಕಳುಹಿಸಬೇಕು. ಬಹುಶಃ ಅವಳು ಅವರಿಗಾಗಿ ಒಂದು ಅಥವಾ ಎರಡು ಪಂದ್ಯಗಳನ್ನು ಗೆಲ್ಲಬಹುದು!" ಎಂದು ಇನ್ನೊಬ್ಬರು ತಮಾಷೆಯಾಗಿ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನದ ಸೀಟುಗಳು ಹೇಗಿವೆ ನೋಡಿ... ಪ್ರಯಾಣಿಕನ ಪಾಡು ಹೇಳ ತೀರದು! ವಿಡಿಯೊ ವೈರಲ್
"ರಿಜ್ವಾನ್ ಮತ್ತು ಬಾಬರ್ ಇಬ್ಬರಿಗಿಂತ ಆಕೆ ಉತ್ತಮವಾಗಿ ಆಡಿದ್ದಾಳೆ. ಹಾಗಾಗಿ ಅವಳು ಪಾಕ್ ಪುರುಷರ ತಂಡದಲ್ಲಿರಬೇಕು" ಎಂದು ಮತ್ತೊಬ್ಬರು ತಮಾಷೆಯಾಗಿ ಹೇಳಿದ್ದಾರೆ. "ಅವಳು ರೋಹಿತ್ ಶರ್ಮಾರಂತೆ ಆಗುವುದು ತುಂಬಾ ಕಷ್ಟ, ಆದರೆ ಅವಳು ಖಂಡಿತವಾಗಿಯೂ ಪಾಕಿಸ್ತಾನ ಮಹಿಳಾ ಅಥವಾ ಪುರುಷರ ತಂಡಕ್ಕೆ ತರಬೇತುದಾರಳಾಗುತ್ತಾಳೆ. ಏಕೆಂದರೆ ಅವಳು ರೋಹಿತ್ ಶರ್ಮಾ ಅವರಿಂದ ಕಲಿಯಲು ಏನೂ ಇಲ್ಲ, ಭವಿಷ್ಯದಲ್ಲಿ ಅವಳು ಏನನ್ನಾದರೂ ಹೊಸದನ್ನು ಕಲಿಯುತ್ತಾಳೆ ಎಂದು ನಾನು ಭಾವಿಸುತ್ತೇನೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.