ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 40 ವರ್ಷದ ವರನನ್ನು ಮದುವೆಯಾದ 24 ವರ್ಷದ ವಧು; ಕಾರಣ ಕೇಳಿದ್ರೆ ನೀವು ಕೂಡ ಶಾಕ್‌ ಆಗ್ತೀರಿ

Viral Video: 24 ವರ್ಷ ವಯಸ್ಸಿನ ವಧು ತನಗಿಂತ ದುಪ್ಪಟ್ಟು ವಯಸ್ಸಾದ ವರನನ್ನು ಮದುವೆಯಾಗಿ ಖುಷಿಯಿಂದ ನೃತ್ಯ ಮಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೇ ವಿಡಿಯೊದಲ್ಲಿ ಆಕೆಯ ಖುಷಿಗೆ ಕಾರಣವನ್ನು ಕೂಡ ಬಹಿರಂಗಪಡಿಸಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

40 ವರ್ಷದ ವರನನ್ನು ಈಕೆ ಮದುವೆಯಾದ ಹಿಂದಿನ ರಹಸ್ಯವೇನು?

Profile pavithra Mar 18, 2025 6:59 PM

ಹೊಸದಿಲ್ಲಿ: ಸೋಶಿಯಲ್ ಮೀಡಿಯಾಗಳಲ್ಲಿ ಮದುವೆಗೆ ಸಂಬಂಧಪಟ್ಟ ಹಲವು ವಿಡಿಯೊಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದೇರೀತಿಯಲ್ಲಿ ಮದುವೆಗೆ ಸಂಬಂಧಪಟ್ಟ ವಿಡಿಯೊವೊಂದು ಈಗ ಸಖತ್‌ ಸದ್ದು ಮಾಡುತ್ತಿದೆ. ಇದರಲ್ಲಿ 24 ವರ್ಷ ವಯಸ್ಸಿನ ವಧು ತನಗಿಂತ 16 ವರ್ಷ ಹಿರಿಯ ವರನನ್ನು ಮದುವೆಯಾಗಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ. ವರನು ವಧುವಿಗಿಂತ ಒಂದೆರೆಡು ದಿನಕ್ಕೆ ದೊಡ್ಡವನಾದರೂ ಮದುವೆ ಬೇಡ ಅನ್ನುವವರೇ ಜಾಸ್ತಿ. ಈ ನಡುವೆ ತನಗಿಂತ ಸುಮಾರು ದುಪ್ಪಟ್ಟು ವಯಸ್ಸಿನವನನ್ನು ಮದುವೆಯಾಗಿ ಖುಷಿಯಿಂದ ಈಕೆ ಡ್ಯಾನ್ಸ್‌ ಮಾಡುವುದನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ (Viral Video). ಅದು ಅಲ್ಲದೇ ದಂಪತಿ ಖುಷಿಯಿಂದ ಡ್ಯಾನ್ಸ್‌ ಮಾಡಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ಆಗಿದೆ.

ಈ ವೈರಲ್ ವಿಡಿಯೊದಲ್ಲಿ ವಧು ತನಗಿಂತ ದುಪ್ಪಟ್ಟು ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇಲ್ಲಿ ವಧುವಿಗೆ 24 ವರ್ಷವಾದರೆ, ವರನಿಗೆ 40 ವರ್ಷ ವಯಸ್ಸಾಗಿದೆ. ಇಷ್ಟು ವಯಸ್ಸಿನ ಅಂತರವಿದ್ದರೂ ವಧು ಸ್ವಲ್ಪ ಕೂಡ ಬೇಸರ ಮಾಡಿಕೊಳ್ಳದೇ ಖುಷಿಯಿಂದ ಡ್ಯಾನ್ಸ್‌ ಮಾಡಿರುವುದಕ್ಕೆ ಕಾರಣ ಬೇರೆಯೇ ಇದೆಯಂತೆ. ವಧುವಿನ ಈ ಖುಷಿಗೆ ಕಾರಣ ವರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವುದು.

ವಧು ಖುಷಿಯಿಂದ ಕುಣಿದ ವಿಡಿಯೊ ಇಲ್ಲಿದೆ ನೋಡಿ...

ನೀಲಕಮಲ್ ಸಿಂಗ್ ಅವರ ಜನಪ್ರಿಯ ಭೋಜ್ಪುರಿ ಹಾಡಾದ ʼಧಾರ್ ಕಮರ್ ರಾಜಾಜಿʼಗೆ ದಂಪತಿ ಖುಷಿಯಿಂದ ನೃತ್ಯ ಮಾಡಿದ್ದಾರೆ. ಈ ವಿಡಿಯೊ 1.8 ಮಿಲಿಯನ್ ವ್ಯೂವ್ಸ್ ಮತ್ತು ಸಾವಿರಾರು ಲೈಕ್‍ಗಳು, ಶೇರ್‌ಗಳು ಮತ್ತು ಕಾಮೆಂಟ್‍ಗಳನ್ನು ಪಡೆದಿದೆ. ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರಲ್ಲಿ ಕೆಲವರು ವರನ ವಯಸ್ಸನ್ನು ಗೇಲಿ ಮಾಡಿದರೆ, ಇತರರು ಮದುವೆ ನಿರ್ಧಾರಗಳಲ್ಲಿ ಸುರಕ್ಷಿತ ಉದ್ಯೋಗದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.

“ಇಂದಿನ ಹುಡುಗರು ಈ ವರನಿಂದ ಕಲಿಯಬೇಕು ಮತ್ತು ಗಲಾಟೆಯನ್ನು ಬಿಟ್ಟು ಒಳ್ಳೆಯ ಕೆಲಸಕ್ಕೆ ಹೋಗಬೇಕು” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನೊಬ್ಬರು, “ಅದಕ್ಕಾಗಿಯೇ ನಾನು ಉದ್ಯೋಗದ ಮೇಲೆ ಗಮನ ಹರಿಸಿ ಎಂದು ಹೇಳುತ್ತೇನೆ, ರೋಸ್ ಡೇ ಬಗ್ಗೆ ಅಲ್ಲ” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಮುಂದಿನ ಜನ್ಮದಲ್ಲಿ ಸಿಗೋಣ; ವರನಿಗೆ ಮೆಸೇಜ್‌ ಮಾಡಿ ಮದುವೆ ತೊರೆದು ನಾಪತ್ತೆಯಾದ ವಧು

ತಂದೆಯನ್ನೇ ಮದುವೆಯಾದ ಮಗಳು!

ಯುವತಿಯರು ತಮಗಿಂತ ಹೆಚ್ಚು ವಯಸ್ಸಾದ ವ್ಯಕ್ತಿಯನ್ನು ಮದುವೆಯಾದ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ 24 ವರ್ಷದ ಯುವತಿಯೊಬ್ಬಳು ತನ್ನ 50 ವರ್ಷದ ತಂದೆಯನ್ನು ಮದುವೆಯಾದ ಬಗ್ಗೆ ಹೇಳಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ ಆಗಿತ್ತು. ವಿಡಿಯೊದಲ್ಲಿ ಯುವತಿ, “ನಾನು ನನ್ನ ತಂದೆಯನ್ನು ಮದುವೆಯಾಗಿದ್ದೇನೆ ಮತ್ತು ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ” ಎಂದು ಹೇಳಿದ್ದಳು. ಈ ವಿಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಜೈ ಸಿಂಗ್ ಯಾದವ್ ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.