ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕೈ ಹಿಡಿಯಲು ಬಂದ ವರನಿಗೆ ವಧು ಹೀಗಾ ಮಾಡೋದು? ವರ ಫುಲ್‌ ಶಾಕ್‌! ವಿಡಿಯೊ ನೋಡಿ

ವರಮಾಲೆ ಆಚರಣೆಗಾಗಿ ವಧುವಿನ ಕೈ ಹಿಡಿಯಲು ಹೋದ ವರನ ಕೈಗೆ ವಧು ಎಂಜಲು ಉಗಿದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅನುಚಿತ ವರ್ತನೆ ತೋರಿದ ವಧುವಿನ ನಡವಳಿಕೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೈ ಹಿಡಿಯಲು ಬಂದ ವರನ ಕೈಗೆ ಎಂಜಲು ಉಗಿದ ವಧು

Profile pavithra May 16, 2025 8:50 PM

ಮದುವೆ ಸಮಾರಂಭದಲ್ಲಿ ಅನುಚಿತ ವರ್ತನೆ, ಜಗಳ, ಹೊಡೆದಾಟ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಅವುಗಳ ವಿಡಿಯೊ ಸಹ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಮದುವೆಯ ಸಮಾರಂಭದಲ್ಲಿ ವಧುವಿನ ಅನುಚಿತ ವರ್ತನೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ವರ ಹಾರ ಹಾಕುವ ಸಮಯದಲ್ಲಿ ವಧುವಿನ ಕೈಯನ್ನು ಹಿಡಿದುಕೊಳ್ಳಲು ಕೈ ಚಾಚಿದಾಗ, ಆಕೆ ಕೋಪದಿಂದ ಅವನ ಕೈಗೆ ಉಗಿದಿದ್ದಾಳೆ. ಇದು ನೆಟ್ಟಿಗರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ವೈರಲ್ ಆದ ವಿಡಿಯೊದಲ್ಲಿ ವರಮಾಲೆ ಆಚರಣೆಗಾಗಿ ವೇದಿಕೆಯ ಮೇಲೆ ಬರುತ್ತಿದ್ದ ವಧುವಿನ ಬಳಿ ಹೋಗಿ ವರ ಆಕೆಯ ಕೈಗಳನ್ನು ಹಿಡಿದುಕೊಳ್ಳಲು ಮುಂದಾಗಿದ್ದಾನೆ. ಆಗ ವಧು ಕೋಪದಿಂದ ಅವನ ಕೈಗೆ ಉಗಿದಿರುವುದು ಕಂಡು ಬಂದಿದೆ. ವಧುವಿನ ಈ ನಡವಳಿಕೆ ನೋಡಿ ವರ ಕೂಡ ಶಾಕ್‌ ಆಗಿದ್ದಾನೆ.

ವಧು ವರನ ಕೈಗೆ ಎಂಜಲು ಉಗಿದ ವಿಡಿಯೊ ಇಲ್ಲಿದೆ ನೋಡಿ...



ವೈರಲ್ ಆದ ವಿಡಿಯೊಗೆ ಪ್ರತಿಕ್ರಿಯಿಸಿದ ಒಬ್ಬರು, "ಇದು ಅಸಭ್ಯತೆಯ ಪರಮಾವಧಿ... ವರ ವೇದಿಕೆಯಿಂದ ಹೊರನಡೆಯಬೇಕಿತ್ತು" ಎಂದು ಹೇಳಿದ್ದಾರೆ. “ಇಂತಹ ಅಸಭ್ಯವಾಗಿ ವರ್ತಿಸುವ ಹುಡುಗಿಯನ್ನು ಮದುವೆಯಾಗಬೇಡಿ” ಎಂದು ಇನ್ನೊಬ್ಬರು ಹುಡುಗನಿಗೆ ಸಲಹೆ ನೀಡಿದ್ದಾರೆ. "ಹುಡುಗಿಯ ಮನೆಯವರು ಕ್ಷಮೆಯಾಚಿಸಿದರೂ ಅಥವಾ ಹುಡುಗಿ ಕ್ಷಮೆ ಕೇಳಿದರೂ ಈ ಮದುವೆ ನಡೆಯಬಾರದು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ಹುಡುಗಿಗೆ ಬಲವಂತವಾಗಿ ಮದುವೆ ಮಾಡಿರಬಹುದು” ಎಂದು ಇನ್ನೊಬ್ಬರು ಹೇಳಿದ್ದಾರೆ.

ಮದುವೆಯ ದಿನ ವಧು ಅನುಚಿತವಾಗಿ ವರ್ತಿಸಿದಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ವರಮಾಲೆ ಹಾಕುವ ಸಂದರ್ಭದಲ್ಲಿ ಮದುವೆಯ ಆಚರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ವರನ ಸ್ನೇಹಿತನ ಮೇಲೆ ಕೋಪಗೊಂಡ ವಧು ಅವನಿಗೆ ಹೊಡೆದು ಗದರಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: 'ವಿಶ್ವ ಸುಂದರಿ' ಸ್ಪರ್ಧಿಗಳ ಪಾದ ತೊಳೆದ ಮಹಿಳೆಯರು; ಏನಿದು ವೈರಲ್‌ ಸುದ್ದಿ?

ವಧು ವರನ ಕುತ್ತಿಗೆಗೆ ಹಾರವನ್ನು ಹಾಕಲು ಪ್ರಯತ್ನಿಸಿದಾಗ, ಅವನನ್ನು ಅವನ ಸ್ನೇಹಿತ ಹಿಂದಕ್ಕೆ ಎಳೆದಿದ್ದನು. ಇದು ಮದುವೆಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ತಮಾಷೆ. ಆದರೆ ಇದರಿಂದ ಕೋಪಗೊಂಡ ವಧು ವರನ ಸ್ನೇಹಿತನ ಕೂದಲನ್ನು ಹಿಡಿದು ತನ್ನ ಮೊಣಕೈಯಿಂದ ಬೆನ್ನಿಗೆ ಹೊಡೆದಿದ್ದಳು. ಮದುವೆ ಆಚರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಅವಳು ವರನ ಸ್ನೇಹಿತನನ್ನು ಗದರಿಸಿದ್ದಳು. ಇದನ್ನು ನೋಡಿ ಅತಿಥಿಗಳು ಶಾಕ್‌ ಆಗಿದ್ದರು.