Drishti Bottu: ಹನಿಮೂನ್ ಮೂಡ್‌ನಲ್ಲಿ ದತ್ತಾ- ದೃಷ್ಟಿ; ಶರಾವತಿ ಪ್ಲಾನ್ ಸಕ್ಸಸ್ ಆಗುತ್ತಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ʼದೃಷ್ಟಿಬೊಟ್ಟುʼ ಧಾರವಾಹಿಯು ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ದೃಷ್ಟಿ ದತ್ತಾ ಬಾಯ್ ಹನಿಮೂನ್ ಸ್ಟೋರಿ ಆರಂಭ ಆಗಲಿದೆ. ಕಲರ್ಸ್ ಕನ್ನಡದಲ್ಲಿ ವಾರ ಪೂರ್ತಿ ಒಂದೊಂದು ಧಾರವಾಹಿಯ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಮಂಗಳವಾರ 6.30ರಿಂದ 7.30ರ ತನಕ ದೃಷ್ಟಿಬೊಟ್ಟು ಸರದಿ.

Drishti Bottu

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ʼದೃಷ್ಟಿಬೊಟ್ಟುʼ (DrishtiBottu) ಧಾರವಾಹಿಯು ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಧಾರವಾಹಿಯ ದತ್ತಾಭಾಯ್ ಪಾತ್ರದ ಮೂಲಕ ಅಗ್ನಿ ಸಾಕ್ಷಿ ಧಾರವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಖಡಕ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ಪ್ರತಿಭೆ ಅರ್ಪಿತಾ ಧಾರವಾಹಿಯ ಮುಖ್ಯ ಪಾತ್ರ ದೃಷ್ಟಿಯಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ರೂಪದಲ್ಲಿ ದೇವತೆಯಂತಿದ್ದರೂ ಸಮಾಜಕ್ಕೆ ಅಂಜಿ ಕಪ್ಪು ಮಸಿ ಬಳಿಯುವ ದೃಷ್ಟಿ ಮದುವೆ ಆದ ಬಳಿಕವೂ ಇದೇ ಸ್ಟೋರಿ ಯಥಾವತ್ತಾಗಿ ಮುಂದುವರಿದಿದೆ. ಇದೀಗ ದೃಷ್ಟಿ ದತ್ತಾ ಬಾಯ್ ಹನಿಮೂನ್ ಸ್ಟೋರಿ ಆರಂಭವಾಗಿದೆ. ಕಲರ್ಸ್ ಕನ್ನಡದಲ್ಲಿ ವಾರ ಪೂರ್ತಿ ಒಂದೊಂದು ಧಾರವಾಹಿಯ ಮಹಾ ಸಂಚಿಕೆ ಪ್ರಸಾರವಾಗಲಿದೆ. ಅದರಂತೆ ಮಂಗಳವಾರ 6.30 ರಿಂದ 7.30ರ ತನಕ ದೃಷ್ಟಿಬೊಟ್ಟು ಮಹಾ ಸಂಚಿಕೆ ಪ್ರಸಾರವಾಗಿದೆ.
ಈ ಸಂಚಿಕೆಯ ಹೈಲೈಟ್ ದೃಷ್ಟಿ ಮತ್ತು ದತ್ತಾ ಹನಿಮೂನ್‌ಗೆ ತೆರಳುವ ದೃಶ್ಯ. ದೃಷ್ಟಿ ಮತ್ತು ದತ್ತಾ ಹನಿಮೂನಿಗೆಂದು ಸಕಲೇಶಪುರಕ್ಕೆ ಹೋಗಿದ್ದಾರೆ. ಅವರ ಜೀವಕ್ಕೆ ಅಪಾಯವಿದೆ ಎಂದು 'ಸೈಲೆಂಟ್' ಎಚ್ಚರಿಸುತ್ತಾನೆ. ಶರಾವತಿ ವ್ಯಂಗ್ಯವಾಗಿ ದೃಷ್ಟಿಯ ಬಳಿ ಮಾತಾಡುತ್ತಾಳೆ. ಕುಟುಂಬದ ಎಲ್ಲರನ್ನೂ ಸೇರಿಸುವ ದತ್ತಾ ತನ್ನ ಕುಟುಂಬ ತನಗೆ ಅತಿ ಮುಖ್ಯ ಎನ್ನುತ್ತಾನೆ. ಅವರೆಲ್ಲರೂ ಹನಿಮೂನ್‌ನಲ್ಲಿ ಜತೆಗಿರಬೇಕು ಎಂದು ಹೇಳುತ್ತಾನೆ. ಅವನು ಎಲ್ಲರನ್ನೂ ಕರೆದೊಯ್ಯು ತ್ತಿರೋದು ಶರಾವತಿಗೆ ಅಸಹನೆ ಉಂಟು ಮಾಡುತ್ತದೆ. ದೃಷ್ಟಿಗೆ ನೇತ್ರಾ ಮತ್ತು ಶರಾವತಿಯ ಬಗ್ಗೆ ಅನುಮಾನ ಕೂಡ ಕಾಡುತ್ತದೆ.
ಇದನ್ನು ಓದಿ: Bhagya Lakshmi Serial: ಭಾಗ್ಯ ತೋಡಿದ ಹಳ್ಳಕ್ಕೆ ಸುಲಭವಾಗಿ ಬಿದ್ದ ತಾಂಡವ್ ಗೆಳತಿ: ಮುಂದಿದೆ ಮಾರಿಹಬ್ಬ
ಸಕಲೇಶಪುರದಲ್ಲಿ ದೃಷ್ಟಿ ಮತ್ತು ದತ್ತಾ ಇಬ್ಬರನ್ನು ಲಚ್ಚಿ ಸ್ವಾಗತಿಸುತ್ತಾಳೆ. ತನ್ನನ್ನು ಕ್ಷಮಿಸಿ ಹೆಂಡತಿಯಾಗಿ ಸ್ವೀಕರಿಸು ಎಂದು ದೃಷ್ಟಿ ದತ್ತಾನನ್ನು ಬೇಡುತ್ತಾಳೆ. ದತ್ತಾ ಅವಳಿಗೆ ಉತ್ತರಿಸದೆ ಕೊಠಡಿಯಿಂದ ಹೊರ ಹೋಗುತ್ತಾನೆ. ಸಾಮಾನ್ಯ ಹಳ್ಳಿ ಹುಡುಗ ದತ್ತ ಹೇಗೆ ದತ್ತಾ ಭಾಯ್ ಆಗ್ತಾನೆ ಅನ್ನೊ ಸಖತ್ ಟ್ವಿಸ್ಟ್ ಇತ್ತೀಚೆಗಷ್ಟೇ ರಿವಿಲ್ ಆಗಿತ್ತು. ದತ್ತನ ಮಾಜಿ ಪ್ರೇಯಸಿ ದೃಷ್ಟಿ ಅಕ್ಕ ಅನ್ನೊ ಸತ್ಯ ದತ್ತಾಬಾಯ್‌ಗೆ ತಿಳಿಯುವ ಟ್ವಿಸ್ಟ್ ಇನ್ನಷ್ಟೆ ರಿವಿಲ್ ಆಗ್ಬೇಕಿದೆ.