ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL vs BAN: ಹರ್ಭಜನ್‌ ಸಿಂಗ್‌ರ 13 ವರ್ಷಗಳ ದಾಖಲೆ ಮುರಿದ ಮಹೆಡಿ ಹಸನ್‌!

ಶ್ರೀಲಂಕಾ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಸ್ಪಿನ್ನರ್‌ ಮಹೆಡಿ ಹಸನ್‌ ಅವರು ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಕೊಲಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಬೌಲ್‌ ಮಾಡಿದ ಪ್ರವಾಸಿ ಬೌಲರ್‌ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ.

ಹರ್ಭಜನ್‌ ಸಿಂಗ್‌ರ 13 ವರ್ಷಗಳ ದಾಖಲೆ ಮುರಿದ ಮಹೆಡಿ ಹಸನ್‌!

ಹರ್ಭಜನ್‌ ಸಿಂಗ್‌ ದಾಖಲೆ ಮುರಿದ ಮಹೆಡಿ ಹಸನ್‌.

Profile Ramesh Kote Jul 16, 2025 11:29 PM

ಕೊಲಂಬೊ: ಶ್ರೀಲಂಕಾದ ಕೊಲಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ತಂಡದ ಸ್ಪಿನ್ನರ್‌ ಮಹೆಡಿ ಹಸನ್‌ (Mehadi Hasan) ಅವರು ಟಿ20ಐ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಜುಲೈ 16 ರಂದು ಬುಧವಾರ ಶ್ರೀಲಂಕಾ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿ (SL vs BAN) ಅವರು ಈ ದಾಖಲೆಯನ್ನು ಬರೆದಿದ್ದಾರೆ. ಅವರು ಈ ಪಂದ್ಯದಲ್ಲಿ ಬೌಲ್‌ ಮಾಡಿದ 4 ಓವರ್‌ಗಳಲ್ಲಿ 11 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಬೌಲ್‌ ಮಾಡಿದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತೀಯ ಸ್ಪಿನ್‌ ದಂತಕತೆ ಹರ್ಭಜನ್‌ ಸಿಂಗ್ (Harbhajan Singh) ಅವರ ದಾಖಲೆಯನ್ನು ಮುರಿದಿದ್ದಾರೆ.

ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ 2012ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತದ ಮಾಜಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ 4 ಓವರ್‌ಗಳಿಗೆ ಕೇವಲ 12 ರನ್‌ ನೀಡಿ 4 ವಿಕೆಟ್‌ ಕಿತ್ತಿದ್ದರು. ಈ ಕ್ರೀಡಾಂಗಣದಲ್ಲಿ ಒಟ್ಟಾರೆ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಮಾಡಿದ ಬೌಲರ್‌ ಎಂಬ ದಾಖಲೆ ವಾನಿಂದು ಹಸರಂಗ ಅವರ ಹೆಸರಿನಲ್ಲಿದೆ. ಇವರು 2021ರಲ್ಲಿ 4 ಓವರ್‌ಗಳಿಗೆ ಕೇವಲ 9 ರನ್‌ ನೀಡಿ 4 ವಿಕೆಟ್‌ಗಳನ್ನು ಕಿತ್ತಿದ್ದರು.

IND vs ENG: ಕರುಣ್‌ ನಾಯರ್‌ ಔಟ್‌, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸ್ಪೆಲ್‌ ಮಾಡಿದ ಪ್ರವಾಸಿ ಬೌಲರ್‌ಗಳು

ಮಹೆಡಿ ಹಸನ್ (ಬಾಂಗ್ಲಾದೇಶ): ಶ್ರೀಲಂಕಾ ವಿರುದ್ಧ 4-1-11-4, ಜುಲೈ 2025

ಹರ್ಭಜನ್ ಸಿಂಗ್ (ಭಾರತ): ಇಂಗ್ಲೆಂಡ್ ವಿರುದ್ಧ 4-2-12-4, ಸೆಪ್ಟೆಂಬರ್ 2012

ಜಾಶ್‌ ಹೇಝಲ್‌ವುಡ್ (ಆಸ್ಟ್ರೇಲಿಯಾ): ಶ್ರೀಲಂಕಾ ವಿರುದ್ಧ 4-0-16-4, ಜೂನ್ 2022

ಜೋ ಡೆನ್ಲಿ (ಇಂಗ್ಲೆಂಡ್): ಶ್ರೀಲಂಕಾ ವಿರುದ್ಧ 4-0-19-4, ಅಕ್ಟೋಬರ್ 2018

ಮುಸ್ತಾಫಿಝರ್ ರೆಹಮಾನ್ (ಬಾಂಗ್ಲಾದೇಶ): ಶ್ರೀಲಂಕಾ ವಿರುದ್ಧ 3-0-21-4, ಏಪ್ರಿಲ್ 2017

ಭುವನೇಶ್ವರ್ ಕುಮಾರ್ (ಭಾರತ): ಶ್ರೀಲಂಕಾ ವಿರುದ್ಧ 3.3-0-22-4, ಜುಲೈ 2021

ಶಾರ್ದುಲ್ ಠಾಕೂರ್ (ಭಾರತ): ಶ್ರೀಲಂಕಾ ವಿರುದ್ಧ 4-0-27-4, ಮಾರ್ಚ್ 2018

ENG vs IND: ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಜೋ ರೂಟ್‌!

ಮಹೆಡಿ ಹಸನ್‌ ಮಿರಾಜ್‌ ಅವರ ಸ್ಥಾನದಲ್ಲಿ ಅವಕಾಶ ಪಡೆದು ಆಡಿದ ಮಹೆಡಿ ಹಸನ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು, ತಾವು ಬೌಲ್‌ ಮಾಡಿದ ಮೊದಲನೇ ಓವರ್‌ನಲ್ಲಿಯೇ ಕುಸಾಲ್‌ ಪೆರೆರಾ ವಿಕೆಟ್‌ ಕಿತ್ತರು. ಆ ಮೂಲಕ ಬಾಂಗ್ಲಾ ತಂಡಕ್ಕೆ ನೆರವು ನೀಡಿದ್ದಾರೆ. ನಂತರ ಪಂದ್ಯದ ಐದನೇ ಓವರ್‌ನಲ್ಲಿ ಅವರು ದಿನೇಶ್‌ ಚಾಂಡಿಮಾಲ್‌ ವಿಕೆಟ್‌ ಕಿತ್ತರು, ನಂತರ ಕೊನೆಯ ಓವರ್‌ನಲ್ಲಿ ಚರಿತಾ ಅಸಲಂಕಾ ಅವರನ್ನು ಔಟ್‌ ಮಾಡಿದ್ದರು.

ಮಹೆಡಿ ಹಸನ್‌ ಬೌಲಿಂಗ್‌ ಸಹಾಯದಿಂದ ಶ್ರೀಲಂಕಾ ತಂಡವನ್ನು ಪವರ್‌ಪ್ಲೇನಲ್ಲಿ 3 ವಿಕೆಟ್‌ ಕಿತ್ತು 40 ರನ್‌ಗಳಿಗೆ ನಿಯಂತ್ರಿಸಲಾಗಿತ್ತು. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಐದನೇ ಬಾಂಗ್ಲಾದೇಶಿ ಬೌಲರ್‌ ಎಂಬ ದಾಖಲೆಯನ್ನು ಮಹೆಡಿ ಹಸನ್‌ ಬರೆದಿದ್ದಾರೆ. ಶಕಿಬ್‌ ಅಲ್‌ ಹಸನ್‌, ಮುಸ್ತಾಫಿಝರ್‌ ರಹಮಾನ್‌, ಟಾಸ್ಕಿನ್‌ ಅಹ್ಮದ್‌ ಹಾಗೂ ಶೋರಿಫುಲ್‌ ಇಸ್ಲಾಮ್‌ ಅವರು ಕೂಡ 50ಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಬಾಂಗ್ಲಾದೇಶ ಪರ ಮಹೆಡಿ ಹಸನ್‌ ಅವರು 10 ಏಕದಿನ ಪಂದ್ಯಗಳನ್ನು ಕೂಡ ಆಡಿದ್ದಾರೆ. ಆ ಮೂಲಕ 4.95ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಕಿತ್ತಿದ್ದಾರೆ.