Saturday, 18th May 2024

ಇಂದು ಕೋಲ್ಕತಾ ನೈಟ್‌ ರೈಡರ್ ಗೆದ್ದರೆ ಪ್ಲೇ ಆಫ್ ಪಕ್ಕಾ

ಕ್ನೊ: ಅಂಕಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್‌ ರೈಡರ್ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಭಾನುವಾರದ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದು ಪ್ಲೇ ಆಫ್ ತೇರ್ಗಡೆಯ ಅವಕಾಶವನ್ನು ದೃಢಪಡಿಸಲು ಹೋರಾಡಲಿದೆ.

ಶನಿವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಅವರದೇ ನೆಲದಲ್ಲಿ 24 ರನ್ನುಗಳಿಂದ ಕೆಡಹಿದ ಕೆಕೆಆರ್‌ ತಂಡವು ಇದೀಗ 14 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಕೆಕೆಆರ್‌ ಗೆದ್ದರೆ ಪ್ಲೇ ಆಫ್ಗೆ ತೇರ್ಗಡೆ ಬಹುತೇಕ ಖಚಿತವಾಗಲಿದೆ.

ಆಡಿದ 10 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 12 ಅಂಕ ಹೊಂದಿರುವ ಲಕ್ನೋ ತಂಡ ಸದ್ಯ ಮೂರನೇ ಸ್ಥಾನದಲ್ಲಿದೆ. ಪ್ಲೆ ಆಫ್ ತೇರ್ಗಡೆಗೆ ಲಕ್ನೋ ತಂಡಕ್ಕೆ ಕೆಕೆಆರ್‌ ವಿರುದ್ಧ ಗೆಲ್ಲಲೇಬೇಕಾದ ಒತ್ತಡವಿದೆ.

ನಾಯಕ ರಾಹುಲ್‌ ಮತ್ತು ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯಿನಿಸ್‌ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಕ್ವಿಂಟನ್‌ ಡಿ ಕಾಕ್‌, ನಿಕೋಲಾಸ್‌ ಪೂರಣ್‌, ದೀಪಕ್‌ ಹೂಡ, ಆಯುಷ್‌ ಬದೋನಿ ಉತ್ತಮವಾಗಿ ಆಡಿದರೆ ಲಕ್ನೋ ಮೇಲುಗೈ ಸಾಧಿಸಬಹುದು.

ಲಕ್ನೋ ತಂಡವನ್ನು ಗಮನಿಸಿದರೆ ಕೆಕೆಆರ್‌ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ.

Leave a Reply

Your email address will not be published. Required fields are marked *

error: Content is protected !!