ಕದನ ಕುತೂಹಲ
ಶಶಿಕುಮಾರ್ ಕೆ.
ಶೇ. ೫೦-೬೦ರಷ್ಟು ಹಡಗು ಸಾಗಣೆಗಳು ಹಿಂದೂ ಮಹಾಸಾಗರದ ಮಾರ್ಗವಾಗಿ ಹಾದುಹೋಗುವುದರಿಂದ ರಕ್ಷಣಾ ದೃಷ್ಟಿ ಯಿಂದ ಈ ಪ್ರದೇಶದ ಹತೋಟಿ ನಮಗೆ ಬಹಳ ಮುಖ್ಯ. ಹೀಗಾಗಿ ಈ ವಲಯದಲ್ಲಿ ಭಾರತ ಅನೇಕ ಯೋಜನೆ ಗಳನ್ನು ಕೈಗೊಂಡು ಚೀನಾಕ್ಕೆ ಸಡ್ಡು ಹೊಡೆದಿದೆ.
ಭಾರತದಲ್ಲಿ ೮,೨೦೦ ಕೋಟಿ ರುಪಾಯಿ ಹೂಡಿಕೆ ಮಾಡಲು ಮುಂದಾಗಿದ್ದ ಚೀನಾ ಮೂಲದ ಕಂಪನಿಯೊಂದರ ಪ್ರಸ್ತಾವವನ್ನು ಭಾರತ ತಿರಸ್ಕರಿಸಿದೆ. ಕಳೆದ ವಾರ ಚೀನಾದ ಬಿ.ವೈ.ಡಿ. ಇಲೆಕ್ಟ್ರಿಕಲ್ ವೆಹಿಕಲ್ ಕಂಪನಿಯು ಹೈದರಾಬಾದ್‌ನ ಮೈಕಾ ಎಂಜಿನಿಯರಿಂಗ್ ಆಂಡ್ ಇನ್ರಾಸ್ಟ್ರಕ್ಚರ್ ಕಂಪನಿ ಜತೆ ಸೇರಿ ವಿದ್ಯುತ್ ಚಾಲಿತ ವಾಹನ (ಇವಿ) ಮತ್ತು ಬ್ಯಾಟರಿ ಉತ್ಪಾದನಾ ಘಟಕವನ್ನು ಆರಂಭಿಸಲು ಪ್ರಸ್ತಾವ ಸಲ್ಲಿಸಿರುವುದಾಗಿ ಘೋಷಿಸಿತ್ತು ಮತ್ತು ವರ್ಷಕ್ಕೆ ೧೫,೦೦೦ ಇವಿ ಕಾರುಗಳನ್ನು ತಯಾರಿಸುವುದಾಗಿ ಹೇಳಿಕೊಂಡಿತ್ತು.
ಆದರೆ ‘ಚೀನಾದ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ಭದ್ರತಾ ದೃಷ್ಟಿ ಯಿಂದ ಅನುಮತಿ ನೀಡಲಾಗುವುದಿಲ್ಲ. ಜತೆಗೆ ಈಗಿರುವ ನಿಯಮಗಳ ಪ್ರಕಾರ ಇಂಥ ಹೂಡಿಕೆಗಳಿಗೆ ಅನುಮತಿಯಿಲ್ಲ’ ಎಂದು ಹೇಳಿ ಅಧಿಕಾರಿಗಳು ಈ ಪ್ರಸ್ತಾವವನ್ನು ತಿರಸ್ಕರಿಸಿ ದ್ದಾರೆ. ಗ್ಯಾಲ್ವಾನ್ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಉದ್ವಿಗ್ನತೆ ಮುಂದುವರಿದಿರುವುದು ಈ ನಿರಾಕರಣೆಗೆ ಕಾರಣವಾಗಿದೆ.
ಭಾರತ ಭೂಭಾಗಕ್ಕೆ ತಾಗಿಕೊಂಡಿರುವ ಹಿಂದೂಮಹಾಸಾಗರದ ಮೇಲೆ ಚೀನಾ ಪ್ರಭಾವ ಸಾಧಿಸುತ್ತಾ ಭಾರತಕ್ಕೆ ಉರುಳು ಹಾಕಲು ಯತ್ನಿಸುತ್ತಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ರಕ್ಷಣಾ ಸಚಿವ ರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅಂದೇ ಗ್ರಹಿಸಿ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ.
ಭಾರತವನ್ನು ಸುತ್ತುವರಿದಿರುವ ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಮ್ಯಾನ್ಮಾರ್ ಮುಂತಾದ ದೇಶಗಳಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪಿಸಿ ಕಾಲ ಕೂಡಿಬಂದಾಗ ಭಾರತದ ಮೇಲೆ ದಾಳಿ ಮಾಡುವ ಸಂಚುಹೂಡಿದೆ ಚೀನಾ. ಇದಕ್ಕೆ ‘ಸ್ಟ್ರಿಂಗ್ ಆಫ್ ಪರ್ಲ್ಸ್’ ಅಥವಾ ‘ಮುತ್ತಿನಹಾರ’ ಎಂದು ಕರೆಯಲಾಗುತ್ತದೆ. ಅತ್ಯಂತ ಮಹತ್ವದ ವಲಯವಾಗಿರುವ ಹಿಂದೂ ಮಹಾಸಾಗರ
ಪ್ರದೇಶದ ಮಾರ್ಗದಲ್ಲಿ ಜಗತ್ತಿನ ಅಂದಾಜು ಶೇ. ೫೦ರಷ್ಟು ಹಡಗು ಸಾಗಣೆಯು ನಡೆಯುತ್ತದೆ. ಈ ವಲಯದ ಆಸುಪಾಸಿ ನಲ್ಲಿರುವ ಒಟ್ಟು ೭ ಬಂದರುಗಳನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ತನ್ನ ಸೇನಾನೆಲೆಗಳನ್ನು ಸ್ಥಾಪಿಸಿದೆ ಚೀನಾ.
Read E-Paper click here
ಪಾಕಿಸ್ತಾನದ ಗ್ವಾದರ್ ಬಂದರು, ಶ್ರೀಲಂಕಾದ ಹಂಬನ್‌ಟೋಟ ಬಂದರು, ಬಾಂಗ್ಲಾದೇಶದ ಢಾಕಾ ಬಂದರು, ಮಾಲ್ಟೀವ್ಸ್ ಮತ್ತು ಮ್ಯಾನ್ಮಾರ್ ಬಂದರುಗಳು ಈ ಪೈಕಿ ಪ್ರಮುಖವಾದಂಥವು. ಪಾಕಿಸ್ತಾನದ ಗ್ವಾದರ್ ಬಂದರಿನ ಮೇಲೆ ಕೋಟ್ಯಂತರ
ಹೂಡಿಕೆ ಮಾಡುವ ಮೂಲಕ ಚೀನಾ ಅದನ್ನು ಭಾರತದ ವಿರುದ್ಧದ ದಾಳಿಗೆ ತನ್ನ ನೆಲೆಯಾಗಿ ಕಾಪಿಟ್ಟುಕೊಂಡಿದೆ. ಮತ್ತೊಂದೆಡೆ, ಶ್ರೀಲಂಕಾದ ಹಂಬನ್‌ಟೋಟ ಬಂದರನ್ನು ೧.೫ ಶತಕೋಟಿ ಡಾಲರ್ ಹೂಡಿಕೆಯೊಂದಿಗೆ ಅಭಿವೃದ್ಧಿ ಪಡಿಸುವ ನೆಪದಲ್ಲಿ ಭಾರತಕ್ಕೆ ಸನಿಹದಲ್ಲಿ ಸಬ್‌ಮೆರೀನ್ ಗಳನ್ನು ನಿಲ್ಲಿಸುವ ಕೆಲಸ ಮಾಡಿದೆ.
ಸಾಲದೆಂಬಂತೆ, ೨೦೧೭ರಲ್ಲಿ ಜಿಬೌಟಿಯಲ್ಲಿ ತನಗೆ ಅಗತ್ಯವಿರುವ ರೀತಿಯಲ್ಲಿ ಕೇಂದ್ರವೊಂದನ್ನು ಸ್ಥಾಪಿಸಿ ಭಾರತಕ್ಕೆ ಸವಾ ಲೊಡ್ಡಿ ನಿಂತಿದೆ. ಮ್ಯಾನ್ಮಾರ್‌ಗೆ ಮಿತಿಮೀರಿದ ಪ್ರಮಾಣದಲ್ಲಿ ಸಾಲ ಕೊಟ್ಟು ಭಾರತದ ವಿರುದ್ಧ ಎತ್ತಿಕಟ್ಟಿದೆ. ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ಪ್ರಭಾವ ಸಾಧಿಸಿ ಭಾರತದ ಸುತ್ತ ಸೇನಾವ್ಯೂಹದ ಉರುಳನ್ನೇ ಹೆಣೆಯಲು ಹವಣಿಸುತ್ತಿದೆ ಚೀನಾ. ಹಾಗಂತ ಭಾರತವೇನೂ ಈ ಎಲ್ಲ ಕಸರತ್ತುಗಳನ್ನು ನೋಡಿಕೊಂಡು ಸುಮ್ಮನೆ ಕುಳಿತಿಲ್ಲ, ಅದಕ್ಕೆ ತಕ್ಕನಾದ ಎದುರೇಟನ್ನೇ ನೀಡುತ್ತಿದೆ.
ಆಫ್ರಿಕಾದ ದ್ವೀಪಸಮೂಹವಾಗಿರುವ ಸೆಷಲ್ಸ್‌ನಲ್ಲಿ ೧೧೫ ದ್ವೀಪಗಳಿವೆ. ೨೦೧೫ರಲ್ಲಿ ಇಲ್ಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಯವರು, ೫೫೦ ದಶಲಕ್ಷ ಡಾಲರ್‌ಗಳ ಒಪ್ಪಂದ ಮಾಡಿಕೊಂಡರು. ೨೦೧೭ರಲ್ಲಿ ಶ್ರೀಲಂಕಾದ ಜತೆ ಒಪ್ಪಂದ ಮಾಡಿಕೊಂಡ ಭಾರತವು ಟ್ರಿನ್ಕೋ ಮಲಯ್ ಬಂದರನ್ನು ಅಭಿವೃದ್ಧಿಪಡಿಸಿದೆ. ಬಾಯ್ರ ಬಂದರನ್ನು ಅಭಿವೃದ್ಧಿಗೊಳಿಸಲು ಬಾಂಗ್ಲಾದೇಶ ದೊಂದಿಗೆ ಭಾರತ ಸಹಿಹಾಕಿದೆ. ಇದರಿಂದ ಪ್ರೇರಣೆಗೊಂಡ ಬಾಂಗ್ಲಾ, ಚಿತ್ತಗಾಂಗ್ ಬಂದರನ್ನು ಭಾರತದ ಬಳಕೆಗೆ ಮುಕ್ತವಾಗಿ
ತೆರೆದಿದೆ.
ಇಷ್ಟು ಮಾತ್ರವಲ್ಲದೆ, ಭಾರತ-ನೇಪಾಳ-ಬಾಂಗ್ಲಾದೇಶ ಮತ್ತು ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ನಡುವಿನ ಒಟ್ಟು ೧೩೦೦ ಕಿ.ಮೀ. ಅಂತರದ ಹೆದ್ದಾರಿಗಳ ನಿರ್ಮಾಣಕ್ಕೆ ಭಾರತ ಸಹಿಹಾಕಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಅಭಿವೃದ್ಧಿಗೆ ಭಾರತ ೧೦ ಸಾವಿರ ಕೋಟಿ ರುಪಾಯಿ ಮೊತ್ತವನ್ನು ವಿನಿಯೋಗಿಸಿದೆ. ಶೇ. ೫೦-೬೦ರಷ್ಟು ಹಡಗು ಸಾಗಣೆಗಳು ಹಿಂದೂ ಮಹಾಸಾಗರ ವಲಯದ ಮಾರ್ಗವಾಗಿ ಸಾಗುವುದರಿಂದ ರಕ್ಷಣಾ ದೃಷ್ಟಿಯಿಂದ ಈ ಪ್ರದೇಶದ ಹತೋಟಿ ನಮಗೆ ಬಹಳ ಮುಖ್ಯ. ಹೀಗಾಗಿ ಈ ವಲಯದಲ್ಲಿ ಹಡಗು ದುರಸ್ತಿ ಕೇಂದ್ರ, ಡ್ರೈಡಾಕ್ ಸ್ಟೇಷನ್ ಕೇಂದ್ರಗಳು ಸೇರಿದಂತೆ ಭಾರತ ಅನೇಕ ಯೋಜನೆಗಳನ್ನು ಕೈಗೊಂಡಿದೆ.
೨೦೧೬ರಲ್ಲಿ ಭಾರತವು ಇರಾನ್ ಜತೆ ಚಾಬಹಾರ್ ಬಂದರು ಅಭಿವೃದ್ಧಿಗೆ ಸಹಿಹಾಕಿ ಅ-ನಿಸ್ತಾನ ಹಾಗೂ ಮಧ್ಯ ಏಷ್ಯಾ
ಪ್ರವೇಶ ವನ್ನು ಸುಲಭದ ತುತ್ತಾಗಿಸಿಕೊಂಡಿತು. ಚೀನಾ ಅಭಿವೃದ್ಧಿಪಡಿಸಿದ ಗ್ವಾದರ್ ಬಂದರಿನಿಂದ ಚಾಬಹಾರ್ ಬಂದರು
ಕೇವಲ ೮೦ಕಿ.ಮೀ. ದೂರ ಇದೆಯಷ್ಟೇ. ಇದರಿಂದ ಚೀನಾದ ಪ್ರಭಾವ ಈ ವಲಯದಲ್ಲಿ ಕಡಿಮೆಯಾಗಲಿದೆ. ಚೀನಾಗೆ ಹೊಂದಿಕೊಂಡಂಥ ವಿಯೆಟ್ನಾಮ್‌ನಲ್ಲಿ ಭಾರತದ ಒಎನ್‌ಜಿಸಿ ಒಪ್ಪಂದ ಮಾಡಿಕೊಂಡು ತೈಲ ಸಂಸ್ಕರಣೆಯ ನೆಪದಲ್ಲಿ
ಚೀನಾಗೆ ನೇರವಾಗಿ ಸಡ್ಡು ಹೊಡೆದಿದೆ.
ಒಂದು ಕಡೆ, ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುವುದಕ್ಕೆ ಪಾಕಿಸ್ತಾನಕ್ಕೆ ಕುಮ್ಮಕ್ಕು ಕೊಡುತ್ತಿರುವ ಚೀನಾ, ಇನ್ನೊಂದೆಡೆ ಶ್ರೀಲಂಕಾವನ್ನು ತನ್ನ ಕುಟಿಲ ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಹೀಗಾಗಿ ತನ್ನ ಸಮುದ್ರ ವ್ಯವಹಾರ ಮತ್ತು ಕರಾವಳಿ ಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಭಾರತ ತೀವ್ರ ಪ್ರಯತ್ನ ನಡೆಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ, ಸಿಂಗಪುರ ಮಾತ್ರವಲ್ಲದೆ ಭಾರತದ ಸುತ್ತಮುತ್ತಲ ಸಣ್ಣಪುಟ್ಟ ದೇಶಗಳ ಜತೆಗೂ ಸಂಬಂಧ ಗಟ್ಟಿಗೊಳಿಸುವ ಯತ್ನ ದಲ್ಲಿ ವ್ಯಸ್ತರಾಗಿರುವುದು ಇದೇ ಕಾರಣಕ್ಕೆ.
ಚೀನಾ ತನ್ನ ಹಣಬಲ ಮತ್ತು ಅಧಿಕಾರದ ಬಲದಿಂದ ಜಗತ್ತಿನ ಸಣ್ಣ-ಪುಟ್ಟ ದೇಶಗಳನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಭಾರತವು ಚೀನಾದ ಬಲೆಗೆ ಪ್ರತಿಯಾಗಿ ತನ್ನದೇ ಆದ ಕಾರ್ಯತಂತ್ರ ಜಾಲವನ್ನು ಹೆಣೆಯುತ್ತ ದೇಶ ರಕ್ಷಣೆಯನ್ನು ಖಾತ್ರಿಪಡಿಸಿಕೊಂಡಿದೆ. ಇದು ಭಾರತದ ರಾಜತಾಂತ್ರಿಕತೆ ಸಿಕ್ಕ ಜಯ ಎಂಬುದರಲ್ಲಿ ಎರಡು ಮಾತಿಲ್ಲ.
ಶೇ. ೫೦-೬೦ರಷ್ಟು ಹಡಗು ಸಾಗಣೆಗಳು ಹಿಂದೂ ಮಹಾಸಾಗರದ ಮಾರ್ಗವಾಗಿ ಹಾದುಹೋಗುವುದರಿಂದ ರಕ್ಷಣಾ ದೃಷ್ಟಿ ಯಿಂದ ಈ ಪ್ರದೇಶದ ಹತೋಟಿ ನಮಗೆ ಬಹಳ ಮುಖ್ಯ. ಹೀಗಾಗಿ ಈ ವಲಯದಲ್ಲಿ ಭಾರತ ಅನೇಕ ಯೋಜನೆಗಳನ್ನು ಕೈಗೊಂಡು ಚೀನಾಕ್ಕೆ ಸಡ್ಡು ಹೊಡೆದಿದೆ.
ಭಾರತದಲ್ಲಿ ೮,೨೦೦ ಕೋಟಿ ರುಪಾಯಿ ಹೂಡಿಕೆ ಮಾಡಲು ಮುಂದಾಗಿದ್ದ ಚೀನಾ ಮೂಲದ ಕಂಪನಿಯೊಂದರ ಪ್ರಸ್ತಾವ
ವನ್ನು ಭಾರತ ತಿರಸ್ಕರಿಸಿದೆ. ಕಳೆದ ವಾರ ಚೀನಾದ ಬಿ.ವೈ.ಡಿ. ಇಲೆಕ್ಟ್ರಿಕಲ್ ವೆಹಿಕಲ್ ಕಂಪನಿಯು ಹೈದರಾಬಾದ್‌ನ ಮೈಕಾ ಎಂಜಿನಿಯರಿಂಗ್ ಆಂಡ್ ಇನ್ರಾಸ್ಟ್ರಕ್ಚರ್ ಕಂಪನಿ ಜತೆ ಸೇರಿ ವಿದ್ಯುತ್ ಚಾಲಿತ ವಾಹನ (ಇವಿ) ಮತ್ತು ಬ್ಯಾಟರಿ ಉತ್ಪಾದನಾ ಘಟಕವನ್ನು ಆರಂಭಿಸಲು ಪ್ರಸ್ತಾವ ಸಲ್ಲಿಸಿರುವುದಾಗಿ ಘೋಷಿಸಿತ್ತು ಮತ್ತು ವರ್ಷಕ್ಕೆ ೧೫,೦೦೦ ಇವಿ ಕಾರುಗಳನ್ನು ತಯಾರಿಸು ವುದಾಗಿ ಹೇಳಿಕೊಂಡಿತ್ತು.
ಆದರೆ ‘ಚೀನಾದ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ಭದ್ರತಾ ದೃಷ್ಟಿಯಿಂದ ಅನುಮತಿ ನೀಡಲಾಗುವುದಿಲ್ಲ. ಜತೆಗೆ ಈಗಿರುವ ನಿಯಮಗಳ ಪ್ರಕಾರ ಇಂಥ ಹೂಡಿಕೆಗಳಿಗೆ ಅನುಮತಿಯಿಲ್ಲ’ ಎಂದು ಹೇಳಿ ಅಧಿಕಾರಿಗಳು ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ. ಗ್ಯಾಲ್ವಾನ್ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಉದ್ವಿಗ್ನತೆ ಮುಂದುವರಿದಿರುವುದು ಈ ನಿರಾಕರಣೆಗೆ ಕಾರಣವಾಗಿದೆ.
ಭಾರತ ಭೂಭಾಗಕ್ಕೆ ತಾಗಿಕೊಂಡಿರುವ ಹಿಂದೂ ಮಹಾಸಾಗರದ ಮೇಲೆ ಚೀನಾ ಪ್ರಭಾವ ಸಾಧಿಸುತ್ತಾ ಭಾರತಕ್ಕೆ ಉರುಳು ಹಾಕಲು ಯತ್ನಿಸುತ್ತಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅಂದೇ ಗ್ರಹಿಸಿ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಭಾರತವನ್ನು ಸುತ್ತುವರಿದಿರುವ ಬಾಂಗ್ಲಾ
ದೇಶ, ಶ್ರೀಲಂಕಾ, ಪಾಕಿಸ್ತಾನ, ಮ್ಯಾನ್ಮಾರ್ ಮುಂತಾದ ದೇಶಗಳಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪಿಸಿ ಕಾಲ ಕೂಡಿಬಂದಾಗ ಭಾರತದ ಮೇಲೆ ದಾಳಿ ಮಾಡುವ ಸಂಚುಹೂಡಿದೆ ಚೀನಾ. ಇದಕ್ಕೆ ‘ಸ್ಟ್ರಿಂಗ್ ಆಫ್ ಪರ್ಲ್ಸ್’ ಅಥವಾ ‘ಮುತ್ತಿನಹಾರ’ ಎಂದು ಕರೆಯಲಾಗುತ್ತದೆ. ಅತ್ಯಂತ ಮಹತ್ವದ ವಲಯವಾಗಿರುವ ಹಿಂದೂ ಮಹಾಸಾಗರ ಪ್ರದೇಶದ ಮಾರ್ಗದಲ್ಲಿ ಜಗತ್ತಿನ ಅಂದಾಜು
ಶೇ. ೫೦ರಷ್ಟು ಹಡಗು ಸಾಗಣೆಯು ನಡೆಯುತ್ತದೆ. ಈ ವಲಯದ ಆಸುಪಾಸಿನಲ್ಲಿರುವ ಒಟ್ಟು ೭ಬಂದರುಗಳನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ತನ್ನ ಸೇನಾನೆಲೆಗಳನ್ನು ಸ್ಥಾಪಿಸಿದೆ ಚೀನಾ. ಪಾಕಿಸ್ತಾನದ ಗ್ವಾದರ್ ಬಂದರು, ಶ್ರೀಲಂಕಾದ ಹಂಬನ್‌ಟೋಟ ಬಂದರು, ಬಾಂಗ್ಲಾದೇಶದ ಢಾಕಾ ಬಂದರು, ಮಾಲ್ಟೀವ್ಸ್ ಮತ್ತು ಮ್ಯಾನ್ಮಾರ್ ಬಂದರುಗಳು ಈ ಪೈಕಿ ಪ್ರಮುಖವಾದಂಥವು.
ಪಾಕಿಸ್ತಾನದ ಗ್ವಾದರ್ ಬಂದರಿನ ಮೇಲೆ ಕೋಟ್ಯಂತರ ಹೂಡಿಕೆ ಮಾಡುವ ಮೂಲಕ ಚೀನಾ ಅದನ್ನು ಭಾರತದ ವಿರುದ್ಧದ ದಾಳಿಗೆ ತನ್ನ ನೆಲೆಯಾಗಿ ಕಾಪಿಟ್ಟುಕೊಂಡಿದೆ. ಮತ್ತೊಂದೆಡೆ, ಶ್ರೀಲಂಕಾದ ಹಂಬನ್‌ಟೋಟ ಬಂದರನ್ನು ೧.೫ ಶತಕೋಟಿ ಡಾಲರ್ ಹೂಡಿಕೆಯೊಂದಿಗೆ ಅಭಿವೃದ್ಧಿ ಪಡಿಸುವ ನೆಪದಲ್ಲಿ ಭಾರತಕ್ಕೆ ಸನಿಹದಲ್ಲಿ ಸಬ್‌ಮೆರೀನ್ ಗಳನ್ನು ನಿಲ್ಲಿಸುವ ಕೆಲಸ ಮಾಡಿದೆ. ಸಾಲದೆಂಬಂತೆ, ೨೦೧೭ರಲ್ಲಿ ಜಿಬೌಟಿಯಲ್ಲಿ ತನಗೆ ಅಗತ್ಯವಿರುವ ರೀತಿಯಲ್ಲಿ ಕೇಂದ್ರವೊಂದನ್ನು ಸ್ಥಾಪಿಸಿ ಭಾರತಕ್ಕೆ ಸವಾಲೊಡ್ಡಿ ನಿಂತಿದೆ.
ಮ್ಯಾನ್ಮಾರ್‌ಗೆ ಮಿತಿಮೀರಿದ ಪ್ರಮಾಣದಲ್ಲಿ ಸಾಲ ಕೊಟ್ಟು ಭಾರತದ ವಿರುದ್ಧ ಎತ್ತಿಕಟ್ಟಿದೆ. ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ
ಪ್ರಭಾವ ಸಾಧಿಸಿ ಭಾರತದ ಸುತ್ತ ಸೇನಾವ್ಯೂಹದ ಉರುಳನ್ನೇ ಹೆಣೆಯಲು ಹವಣಿಸುತ್ತಿದೆ ಚೀನಾ. ಹಾಗಂತ ಭಾರತವೇನೂ ಈ ಎಲ್ಲ ಕಸರತ್ತುಗಳನ್ನು ನೋಡಿಕೊಂಡು ಸುಮ್ಮನೆ ಕುಳಿತಿಲ್ಲ, ಅದಕ್ಕೆ ತಕ್ಕನಾದ ಎದುರೇಟನ್ನೇ ನೀಡುತ್ತಿದೆ. ಆಫ್ರಿಕಾದ ದ್ವೀಪ ಸಮೂಹವಾಗಿರುವ ಸೆಷಲ್ಸ್‌ನಲ್ಲಿ ೧೧೫ ದ್ವೀಪಗಳಿವೆ. ೨೦೧೫ರಲ್ಲಿ ಇಲ್ಲಿಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು, ೫೫೦ ದಶಲಕ್ಷ ಡಾಲರ್‌ಗಳ ಒಪ್ಪಂದ ಮಾಡಿಕೊಂಡರು. ೨೦೧೭ರಲ್ಲಿ ಶ್ರೀಲಂಕಾದ ಜತೆ ಒಪ್ಪಂದ ಮಾಡಿಕೊಂಡ ಭಾರತವು ಟ್ರಿನ್ಕೋ
ಮಲಯ್ ಬಂದರನ್ನು ಅಭಿವೃದ್ಧಿಪಡಿಸಿದೆ. ಬಾಯ್ರ ಬಂದ ರನ್ನು ಅಭಿವೃದ್ಧಿಗೊಳಿಸಲು ಬಾಂಗ್ಲಾದೇಶದೊಂದಿಗೆ ಭಾರತ
ಸಹಿಹಾಕಿದೆ. ಇದರಿಂದ ಪ್ರೇರಣೆಗೊಂಡ ಬಾಂಗ್ಲಾ, ಚಿತ್ತಗಾಂಗ್ ಬಂದರನ್ನು ಭಾರತದ ಬಳಕೆಗೆ ಮುಕ್ತವಾಗಿ ತೆರೆದಿದೆ.
ಇಷ್ಟು ಮಾತ್ರವಲ್ಲದೆ, ಭಾರತ-ನೇಪಾಳ-ಬಾಂಗ್ಲಾದೇಶ ಮತ್ತು ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ನಡುವಿನ ಒಟ್ಟು ೧೩೦೦ ಕಿ.ಮೀ. ಅಂತರದ ಹೆದ್ದಾರಿಗಳ ನಿರ್ಮಾಣಕ್ಕೆ ಭಾರತ ಸಹಿಹಾಕಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಅಭಿವೃದ್ಧಿಗೆ ಭಾರತ ೧೦ ಸಾವಿರ ಕೋಟಿ ರುಪಾಯಿ ಮೊತ್ತವನ್ನು ವಿನಿಯೋಗಿಸಿದೆ. ಶೇ. ೫೦-೬೦ರಷ್ಟು ಹಡಗು ಸಾಗಣೆಗಳು ಹಿಂದೂ ಮಹಾಸಾಗರ ವಲಯದ ಮಾರ್ಗವಾಗಿ ಸಾಗುವುದರಿಂದ ರಕ್ಷಣಾ ದೃಷ್ಟಿಯಿಂದ ಈ ಪ್ರದೇಶದ ಹತೋಟಿ ನಮಗೆ ಬಹಳ ಮುಖ್ಯ. ಹೀಗಾಗಿ ಈ ವಲಯದಲ್ಲಿ ಹಡಗು ದುರಸ್ತಿ ಕೇಂದ್ರ, ಡ್ರೈಡಾಕ್ ಸ್ಟೇಷನ್ ಕೇಂದ್ರಗಳು ಸೇರಿದಂತೆ ಭಾರತ ಅನೇಕ ಯೋಜನೆಗಳನ್ನು ಕೈಗೊಂಡಿದೆ.
೨೦೧೬ರಲ್ಲಿ ಭಾರತವು ಇರಾನ್ ಜತೆ ಚಾಬಹಾರ್ ಬಂದರು ಅಭಿವೃದ್ಧಿಗೆ ಸಹಿಹಾಕಿ ಅ-ನಿಸ್ತಾನ ಹಾಗೂ ಮಧ್ಯ ಏಷ್ಯಾ ಪ್ರವೇಶ ವನ್ನು ಸುಲಭದ ತುತ್ತಾಗಿಸಿಕೊಂಡಿತು. ಚೀನಾ ಅಭಿವೃದ್ಧಿಪಡಿಸಿದ ಗ್ವಾದರ್ ಬಂದರಿನಿಂದ ಚಾಬಹಾರ್ ಬಂದರು ಕೇವಲ ೮೦ಕಿ.ಮೀ. ದೂರ ಇದೆಯಷ್ಟೇ. ಇದರಿಂದ ಚೀನಾದ ಪ್ರಭಾವ ಈ ವಲಯದಲ್ಲಿ ಕಡಿಮೆಯಾಗಲಿದೆ. ಚೀನಾಗೆ ಹೊಂದಿ ಕೊಂಡಂಥ ವಿಯೆಟ್ನಾಮ್‌ನಲ್ಲಿ ಭಾರತದ ಒಎನ್‌ಜಿಸಿ ಒಪ್ಪಂದ ಮಾಡಿಕೊಂಡು ತೈಲ ಸಂಸ್ಕರಣೆಯ ನೆಪದಲ್ಲಿ ಚೀನಾಗೆ ನೇರವಾಗಿ ಸಡ್ಡು ಹೊಡೆದಿದೆ.
ಒಂದು ಕಡೆ, ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುವುದಕ್ಕೆ ಪಾಕಿಸ್ತಾನಕ್ಕೆ ಕುಮ್ಮಕ್ಕು ಕೊಡುತ್ತಿರುವ ಚೀನಾ, ಇನ್ನೊಂದೆಡೆ ಶ್ರೀಲಂಕಾವನ್ನು ತನ್ನ ಕುಟಿಲ ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಹೀಗಾಗಿ ತನ್ನ ಸಮುದ್ರ ವ್ಯವಹಾರ ಮತ್ತು ಕರಾವಳಿ ಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಭಾರತ ತೀವ್ರ ಪ್ರಯತ್ನ ನಡೆಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ, ಸಿಂಗಪುರ ಮಾತ್ರವಲ್ಲದೆ ಭಾರತದ ಸುತ್ತಮುತ್ತಲ ಸಣ್ಣಪುಟ್ಟ ದೇಶಗಳ ಜತೆಗೂ ಸಂಬಂಧ ಗಟ್ಟಿಗೊಳಿಸುವ ಯತ್ನ ದಲ್ಲಿ ವ್ಯಸ್ತರಾಗಿರುವುದು ಇದೇ ಕಾರಣಕ್ಕೆ.
ಚೀನಾ ತನ್ನ ಹಣಬಲ ಮತ್ತು ಅಧಿಕಾರದ ಬಲದಿಂದ ಜಗತ್ತಿನ ಸಣ್ಣ-ಪುಟ್ಟ ದೇಶಗಳನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಭಾರತವು ಚೀನಾದ ಬಲೆಗೆ ಪ್ರತಿಯಾಗಿ ತನ್ನದೇ ಆದ ಕಾರ್ಯತಂತ್ರ ಜಾಲವನ್ನು ಹೆಣೆಯುತ್ತ ದೇಶ ರಕ್ಷಣೆಯನ್ನು ಖಾತ್ರಿಪಡಿಸಿಕೊಂಡಿದೆ. ಇದು ಭಾರತದ ರಾಜತಾಂತ್ರಿಕತೆ ಸಿಕ್ಕ ಜಯ ಎಂಬುದರಲ್ಲಿ ಎರಡು ಮಾತಿಲ್ಲ.