Monday, 13th May 2024

ಭಾರತಕ್ಕೆ ಬುದ್ಧಿವಾದ ಹೇಳುವ ನೈತಿಕತೆ ಚೀನಾಕ್ಕೆ ಇದೆಯೇ?

ಗಣೇಶ ಭಟ್, ವಾರಾಣಸಿ

ತನ್ನ ಬಟ್ಟಲಲ್ಲಿ ಹೆಗ್ಗಣ ಸತ್ತು ಬಿದ್ದಿರುವಾಗ ಇನ್ನೊೊಬ್ಬರ ಬಟ್ಟಲಲ್ಲಿ ನೊಣ ಸತ್ತು ಬಿದ್ದಿದ್ದನ್ನು ಬೆರಳು ತೋರಿಸಲು ಹೋಗಬಾರದು ಎಂಬ ಮಾತಿದೆ. ಚೀನಾಕ್ಕೆೆ ಈ ಗಾದೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಮೊನ್ನೆೆ ವಿಶ್ವಸಂಸ್ಥೆೆಯ ಸಭೆಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಮಂತ್ರಿಿ ಚಿನ್ ವಾಂಗ್ ಲೀ ಜಮ್ಮು ಕಾಶ್ಮೀರದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆೆಯನ್ನು ಬದಲಿಸಬಲ್ಲ ಏಕಪಕ್ಷೀಯ ನಿರ್ಧಾರವನ್ನು ಭಾರತ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಚೀನಾ ಭಾರತದ ಆಂತರಿಕ ವಿಷಯವಾದ ಕಾಶ್ಮೀರದ ವಿಚಾರದಲ್ಲಿ ಮಾನವ ಹಕ್ಕುಗಳ ಬಾತ್ಮೀದಾರನಂತೆ ಹೇಳಿಕೆ ಕೊಡಬಹುದು. ಆದರೆ, ತನ್ನ ದೇಶದೊಳಗೆ ತನ್ನ ಪ್ರಜೆಗಳ ಮಾನವ ಹಕ್ಕುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೂಡಾ ಕೊಡದ ಕಮ್ಯುನಿಸ್‌ಟ್‌ ಚೀನಾಕ್ಕೆೆ ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತಕ್ಕೆೆ ಬುದ್ಧಿಿವಾದ ಹೇಳುವ ಯಾವುದೇ ನೈತಿಕತೆಯಿಲ್ಲ. ಚೀನಾದಲ್ಲಿ ಪ್ರಜಾಪ್ರಭುತ್ವವಿಲ್ಲ. ಅಲ್ಲಿ ಅಭಿವ್ಯಕ್ತಿಿ ಸ್ವಾಾತಂತ್ರ್ಯಕ್ಕೆೆ ಬೆಲೆಯೇ ಇಲ್ಲ, ಅಲ್ಲಿ ಮಾಧ್ಯಮಕ್ಕೆೆ ಹಾಗೂ ಸಾಮಾಜಿಕ ಮಾಧ್ಯಮಕ್ಕೆೆ ಬಹಳ ನಿರ್ಬಂಧವಿದೆ. ಇಂತಹ ಚೀನಾದಿಂದ ಭಾರತಕ್ಕೆೆ ಮಾನವ ಹಕ್ಕುಗಳ ನೀತಿ ಪಾಠ! ಕಮ್ಯುನಿಸ್‌ಟ್‌ ಸರ್ವಾಧಿಕಾರಿ ಆಡಳಿತವು ಚೀನಾದಲ್ಲಿ ಯಾವಾಗ ಜಾರಿಗೆ ಬಂತೋ ಆ ನಂತರ ಚೀನಾದ ಕೈಯ ರಕ್ತ ಒಣಗಿಯೇ ಇಲ್ಲ.

ಚೀನಾದ ಕ್ಸಿಿನ್ ಜಿಯಾಂಗ್ ಪ್ರಾಾಂತದಲ್ಲಿರುವ ಉಯಿಗರ್ ಮುಸಲ್ಮಾಾನರ ಮೇಲೆ ಚೀನಾವು ಇನ್ನಿಿಲ್ಲದ ದಬ್ಬಾಾಳಿಕೆ ನಡೆಸುತ್ತಿಿದೆ. ಈ ಪ್ರಾಾಂತ್ಯದಲ್ಲಿ ಸುಮಾರು 13 ಲಕ್ಷ ಮುಸಲ್ಮಾಾನರಿದ್ದಾರೆ. ಆದರೆ, ಅವರಿಗೆ ಯಾವುದೇ ರೀತಿಯ ಇಸ್ಲಾಾಂ ಧರ್ಮದ ಆಚರಣೆಯ ಅವಕಾಶವನ್ನೂ ಚೀನಾ ಕೊಡುತ್ತಿಿಲ್ಲ. ಐದು ಹೊತ್ತು ನಮಾಜನ್ನು ಮಾಡಲು ಬಿಡುತ್ತಿಿಲ್ಲ. ಉಯಿಗರ್ ಮುಸಲ್ಮಾಾನರ ಬಹಳಷ್ಟು ಮಸೀದಿಗಳನ್ನೂ ಚೀನಾ ಸರಕಾರ ಒಡೆದುಹಾಕಿದೆ. ಮುಸಲ್ಮಾಾನರ ಪವಿತ್ರ ರಂಜಾನ್ ಉಪವಾಸವನ್ನು ಆಚರಿಸಲು ಕೂಡಾ ಚೀನಾ ಸರಕಾರ ಬಿಡುತ್ತಿಿಲ್ಲ.

ಯಾವನಾದರೂ ಮುಸಲ್ಮಾಾನನು ರಂಜಾನ್ ಸಂದರ್ಭದಲ್ಲಿ ಉಪವಾಸವನ್ನು ಕೈಗೊಳ್ಳುತ್ತಿಿರುವುದು ಸರಕಾರದ ಗಮನಕ್ಕೆೆ ಬಂದರೆ ಅವರನ್ನು ಪೊಲೀಸರು ಬಂಧಿಸಿ ಬಲವಂತವಾಗಿ ಆಹಾರವನ್ನು ತಿನ್ನಿಿಸಿ ಅಥವಾ ನೀರು ಕುಡಿಸಿ ಅವರ ಉಪವಾಸವನ್ನು ಹಾಳುಗೆಡವಲಾಗುತ್ತಿಿದೆ. ಮುಸಲ್ಮಾಾನರು ಇಸ್ಲಾಾಮಿಕ್ ಹೆಸರುಗಳಾದ ಮೊಹಮ್ಮದ್‌ನಂತಹ ಹೆಸರುಗಳನ್ನು ಇಟ್ಟುಕೊಳ್ಳುವುದನ್ನು ಕೂಡಾ ಚೀನಾ ನಿಷೇಧಿಸಿದೆ. ಕ್ಸಿಿನ್ ಜಿಯಾಂಗ್ ಪ್ರಾಾಂತ್ಯದಲ್ಲಿ ಚೀನಾದ ದಬ್ಬಾಾಳಿಕೆಯನ್ನು ವಿರೋಧಿಸಿ ಉಯಿಗರ್ ಮುಸಲ್ಮಾಾನರು ಬಂಡಾಯವೆದ್ದಿದ್ದಾರೆ.

ಅಲ್ಲಿ ಈಸ್‌ಟ್‌ ಟರ್ಕಿಸ್ತಾಾನ್ ಇಂಡಿಪೆಂಡೆಂಟ್ ಮೂವ್‌ಮೆಂಟ್ ಎಂಬ ಹೆಸರಿನಲ್ಲಿ ಸ್ವಾಾತಂತ್ರ್ಯ ಹೋರಾಟವನ್ನೂಆರಂಭಿಸಿದ್ದಾರೆ. ಆದರೆ, ಚೀನಾ ಸರಕಾರ ಈ ಎಲ್ಲಾ ಸ್ವಾಾತಂತ್ರ್ಯ ಹೋರಾಟಗಳನ್ನು ಹತ್ತಿಿಕ್ಕಿಿದೆ. ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ ಒಂದು ಲಕ್ಷಕ್ಕಿಿಂತಲೂ ಹೆಚ್ಚಿಿನ ಸಂಖ್ಯೆೆಯ ಉಯಿಗರ್ ಮುಸಲ್ಮಾಾನರನ್ನು ಚೀನಾ ಸರಕಾರವು ಜೈಲು ಅಥವಾ ಜೈಲಿನಂತೆಯೇ ಇರುವ ಪುನರ್ ಶಿಕ್ಷಣ ಕ್ಯಾಾಂಪ್‌ಗಳಲ್ಲಿ (ಕಾನ್ಸಂಟ್ರೇಷನ್ ಕ್ಯಾಾಂಪ್) ಇರಿಸಿದೆ. ಉಯಿಗರ್ ಮುಸಲ್ಮಾಾನರ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆೆಯ ಮಕ್ಕಳನ್ನು ಹೆತ್ತವರಿಂದ ಪ್ರತ್ಯೇಕವಾಗಿರಿಸಲಾಗಿದೆ.

ಇತೀಚೆಗೆ ಪತ್ರಿಿಕೆಗಳಲ್ಲಿ ಚೀನಾವು ಬಂಧಿತ ಉಯಿಗರ್ ಮುಸಲ್ಮಾಾನರ ಕಣ್ಣು, ಕಿಡ್ನಿಿ ಮೊದಲಾದ ಅಂಗಾಂಗಗಳನ್ನು ತೆಗೆದು ಮಾರಾಟ ಮಾಡುತ್ತಿಿದೆ ಎಂಬ ಸುದ್ದಿಯು ಪ್ರಕಟವಾಗಿದೆ. ಆದರೆ, ಮಾನವ ಹಕ್ಕುಗಳ ಬಗ್ಗೆೆ ಪುಟಗಟ್ಟಲೆ ಮಾತನಾಡುವ, ಕಾಶ್ಮೀರಿಗಳ ಸ್ವಾಾತಂತ್ಯವನ್ನು ಕಿತ್ತುಕೊಳ್ಳಲಾಗಿದೆ ಎಂದು ಬೊಬ್ಬೆೆ ಹಾಕುವ ಪಾಕಿಸ್ತಾಾನವಾಗಲಿ, ನೊಬೆಲ್ ಪ್ರಶಸ್ತಿಿ ವಿಜೇತೆ ಮಲಾಲಾ ಆಗಲಿ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆೆಗಳಾಗಲಿ, ಇಸ್ಲಾಾಮಿಕ್ ದೇಶಗಳಾಗಲಿ ಚೀನಾವು ಉಯಿಗರ್ ಮುಸಲ್ಮಾಾನರ ಮೇಲೆ ನಡೆಸುತ್ತಿಿರುವ ದೌರ್ಜನ್ಯದ ವಿರುದ್ಧ ಬಾಯಿ ಬಿಡದೆ ಇರುವುದು ದುರಂತ. ಮೊನ್ನೆೆ ಕಾಶ್ಮೀರದ ವಿಚಾರವಾಗಿ ವಿಶ್ವ ಸಂಸ್ಥೆೆಯಲ್ಲಿ ಪಾಕಿಸ್ತಾಾನದ ನಿಲುವನ್ನು ಸಮರ್ಥಿಸಿದ್ದ ಟರ್ಕಿ ದೇಶವೂ ಕೂಡಾ ಉಯಿಗರ್ ಮುಸಲ್ಮಾಾನರ ಹತ್ಯೆೆಯ ವಿರುದ್ಧ ಮಾತಾಡಿಲ್ಲ. ರೋಹಿಂಗ್ಯಾಾ ಮುಸಲ್ಮಾಾನರ ಪರವಾಗಿ ಮಾತನಾಡುವ ಭಾರತದ ಬುದ್ಧಿಿಜೀವಿಗಳು ಕೂಡಾ ಉಯಿಗರ್ ಮುಸಲ್ಮಾಾನರ ಮೇಲೆ ಚೀನಾ ನಡೆಸುತ್ತಿಿರುವ ದೌರ್ಜನ್ಯದ ವಿರುದ್ಧ ಬಾಯಿ ಬಿಡುತ್ತಿಿಲ್ಲ. ಆದರೆ ಈ ಬಾರಿಯ ವಿಶ್ವ ಸಂಸ್ಥೆೆಯ ಸಭೆಯಲ್ಲಿ ಇಸ್ಲಾಾಮೇತರ ರಾಷ್ಟ್ರಗಳಾದ ಅಮೆರಿಕ, ಕೆನಡಾ, ಇಂಗ್ಲೆೆಂಡ್, ಜರ್ಮನಿ, ನೆದರ್‌ಲ್ಯಾಾಂಡ್ ಸೇರಿದಂತೆ 30 ದೇಶಗಳು ಚೀನಾ ಉಯಿಗರ್ ಮುಸಲ್ಮಾಾನರ ಮೇಲೆ ನೆಡೆಸುತ್ತಿಿರುವ ದಬ್ಬಾಾಳಿಕೆಯನ್ನು ವಿರೋಧಿಸಿ ಮಾತನಾಡಿದ್ದು ವಿಶೇಷ.

ಚೀನಾದಲ್ಲಿ ಕ್ರೈಸ್ತ ಧರ್ಮದ ಆಚರಣೆಯ ಮೇಲೂ ಬಹಳ ನಿರ್ಬಂಧವಿದೆ. ಚರ್ಚ್‌ಗಳ ಶಿಲುಬೆಯನ್ನು ನಾಶ ಮಾಡುವುದು, ಬೈಬಲ್‌ನ್ನು ಸುಡುವುದು, ಚರ್ಚ್‌ಗಳನ್ನು ಮುಚ್ಚಿಿಸುವುದು ಮುಂತಾದ ಕೃತ್ಯಗಳು ಚೀನಾದಲ್ಲಿ ನಡೆಯುತ್ತಲೇ ಇರುತ್ತವೆ. ಜನವರಿ 2018ರಲ್ಲಿ ಶಾನ್ ಕ್ಸಿಿ ಪ್ರಾಾಂತ್ಯದಲ್ಲಿದ್ದ ಚರ್ಚುಗಳನ್ನು ನಾಶಪಡಿಸಲಾಗಿದೆ ಎಂದು ಪತ್ರಿಿಕಾ ವರದಿಗಳು ಹೇಳುತ್ತವೆ. ಅಲ್ಲಿನ ಚರ್ಚುಗಳು ವ್ಯಾಾಟಿಕನ್ ಜತೆಗೆ ಯಾವುದೇ ಬಾಂಧವ್ಯವನ್ನು ಮತ್ತು ಪೋಪರಿಗೆ ಯಾವುದೇ ನಿಷ್ಠೆೆಯನ್ನು ಇಟ್ಟುಕೊಳ್ಳದಂತೆ ಮಾಡಲಾಗಿದೆ. ಎಲ್ಲಾ ಚರ್ಚುಗಳೂ ಸರಕಾರದ ಅಧೀನದಲ್ಲಿಯೇ ಇರಬೇಕು. ಚೈನೀಸ್ ಕ್ಯಾಾಥೋಲಿಕ್ ಪ್ಯಾಾಟ್ರಿಿಯೋಟಿಕ್ ಎಸೋಸಿಯೇಶನ್ ಎನ್ನುವ ಸರಕಾರಿ ನಿಯಂತ್ರಿಿತ ಪ್ರಾಾಧಿಕಾರದ ಅಡಿಯಲ್ಲೇ ಎಲ್ಲಾ ಚರ್ಚ್‌ಗಳು ಕಾರ್ಯನಿರ್ವಹಿಸಬೇಕು. ಇದರ ವ್ಯಾಾಪ್ತಿಿಗೆ ಒಳಪಡದ ಚರ್ಚುಗಳ ಮೇಲೆ ಸರಕಾರವು ಕಾರ್ಯಾಚರಿಸುತ್ತದೆ. ಟಿಬೆಟ್ ಬೌದ್ಧರನ್ನು ಕೂಡಾ ಅನೇಕ ನಿಯಂತ್ರಣಗಳಿಗೆ ಚೀನಾ ಸರಕಾರ ಒಳಪಡಿಸಿದೆ.

ಲಾಮಾಗಳು ಮರಣಾನಂತರ ಪುನರ್ಜನ್ಮ ಪಡೆದು ಲಾಮಾಗಳಾಗಿ ಪುನಃ ಜನ್ಮ ಪಡೆಯುತ್ತಾಾರೆ ಎನ್ನುವುದು ಟಿಬೆಟ್ ಬೌದ್ಧರ ನಂಬಿಕೆಯಾಗಿದೆ. ಆದರೆ, ಪುನರ್ಜನ್ಮ ಪಡೆದ ಲಾಮಾಗಳು ಸರಕಾರದ ಅಧಿಕೃತ ಅನುಮೋದನೆ ಪಡದುಕೊಂಡರೆ ಮಾತ್ರ ಅವರನ್ನು ಸರಕಾರವು ಲಾಮಾ ಎಂದು ಒಪ್ಪಿಿಕೊಳ್ಳುತ್ತದೆ. ಈ ಮೂಲಕ ಪರೋಕ್ಷವಾಗಿ ಸರಕಾರವೇ ಲಾಮಾಗಳಾಗಿ ನೇಮಕಾತಿ ಮಾಡಿಕೊಂಡಂತಾಯಿತು. ಭಾರತ ದೇಶದಲ್ಲಿರುವ ಟಿಬೆಟ್ ಧರ್ಮಗುರುಗಳಾದ ದಲೈ ಲಾಮಾ ಅವರು ಗೆಧುನ್ ಚೋಯಿ ಕಿ ನೈಮಾರನ್ನು 11 ನೇ ಪಾಂಚೆನ್ ಲಾಮಾ ಆಗಿ 1995 ಮೇ 14 ರಂದು ಘೋಷಿಸಿದ್ದರು. ಆದರೆ, ಈ ನೇಮಕಾತಿಯನ್ನು ವಿರೋಧಿಸಿದ ಚೀನಾ ಸರಕಾರವು 6 ವರ್ಷ ಪ್ರಾಾಯದ ಬಾಲಕ ಗೆಧುನ್ ಚೋಯಿ ಕಿ ನೈಮಾನನ್ನು 1995 ರ ಮೇ 17 ರಂದು ತನ್ನ ವಶಕ್ಕೆೆ ತೆಗೆದುಕೊಂಡಿತು. ದುರಂತವೇನೆಂದರೆ ಅಂದಿನಿಂದ ಇಂದಿನವರೆಗೆ ಯಾರೂ ಗೆಧುನ್ ಚೋಯಿ ಕಿ ನೈಮಾರನ್ನು ನೋಡಿಲ್ಲ!

ಚೀನಾ ಅಧಿಪತ್ಯದಲ್ಲಿರುವ ಸ್ವಾಾಯತ್ತ ಹಾಂಗ್ ಕಾಂಗ್‌ನಲ್ಲಿ ನಡೆಯುತ್ತಿಿರುವ ಪ್ರತಿಭಟನೆಗಳು ಹಾಗೂ ಅದನ್ನು ಚೀನಾ ಸರಕಾರವು ಬಲವಂತವಾಗಿ ಹತ್ತಿಿಕ್ಕುತ್ತಿಿರುವುದು ಇಂದಿನ ಜಾಗತಿಕ ಮಟ್ಟದಲ್ಲಿ ಬಿಸಿ ಬಿಸಿಯಾಗಿ ಚರ್ಚಿಸಲ್ಪಡುತ್ತಿಿರುವ ವಿಷಯವಾಗಿದೆ. ಮೊದಲು ಬ್ರಿಿಟಿಷರ ವಸಾಹತುವಾಗಿದ್ದ ಹಾಂಗ್‌ಕಾಂಗ್ ನಂತರ 99 ವರ್ಷಗಳ ಲೀಸ್ ಆಧಾರದಲ್ಲಿ ಬ್ರಿಿಟಿಷರ ಕೈಯಲ್ಲೇ ಉಳಿಯಿತು. 1997 ರಲ್ಲಿ 99 ವರ್ಷಗಳ ಲೀಸ್ ಅವಧಿಯು ಮುಗಿದು ಚೀನಾ ದೇಶಕ್ಕೆೆ ಹಾಂಗ್‌ಕಾಂಗ್ ಹಸ್ತಾಾಂತರಿಸಲ್ಪಟ್ಟಿಿತಾದರೂ, ಹಾಂಕಾಂಗ್‌ನ ಕಾನೂನು ವ್ಯವಸ್ಥೆೆಗಳಲ್ಲಿ ಚೀನಾವು ಯಾವುದೇ ಹಸ್ತಕ್ಷೇಪ ಮಾಡಬಾರದೆಂಬ ಒಪ್ಪಂದವಿತ್ತು.

ಹಾಂಗ್‌ಕಾಂಗ್‌ನ ಯಾವುದೇ ರೀತಿಯ ಅಪರಾಧಗಳ ವಿಚಾರಣೆ ಹಾಂಗ್‌ಕಾಂಗ್ ಒಳಗೆಯೇ ಆಗಬೇಕೆಂಬುದು ಒಪ್ಪಂದದ ಒಂದು ಭಾಗ. ಆದರೆ ಇತ್ತೀಚೆಗೆ ಚೀನಾದ ರಕ್ಷಣಾ ಅಧಿಕಾರಿಗಳು ಹಾಂಗ್‌ಕಾಂಗ್‌ನಲ್ಲಿ ಇರುವ ಕೆಲವು ವ್ಯಕ್ತಿಿಗಳನ್ನು ಚೀನಾ ವಿರೋಧಿಗಳೆಂದು ಆಪಾದಿಸಿ ಅವರನ್ನು ಬಂಧಿಸಲು ಹಾಂಗ್‌ಕಾಂಗ್‌ಗೆ ಆಗಾಗ ನುಗ್ಗುತ್ತಿಿರುವುದು, ಹಾಂಗ್‌ಕಾಂಗ್‌ನ ಜನರು ಬೀದಿಗಿಳಿದು ಚೀನಾದ ವಿರುದ್ಧ ಪ್ರತಿಭಟನೆ ನಡೆಸಲು ಕಾರಣವಾಗಿದೆ. ಇದರ ಜತೆಗೆ ಅಪರಾಧಿಗಳೆಂದು ಗುರುತಿಸಲಾದ ವ್ಯಕ್ತಿಿಗಳನ್ನು ಚೀನಾಕ್ಕೆೆ ಹಸ್ತಾಾಂತರಿಸಲು ಅನುವಾಗುವಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡುವುದರ ವಿರುದ್ಧ ಕೂಡಾ ಹಾಂಗ್‌ಕಾಂಗ್‌ನ ಜನರು ಭಾರೀ ಪ್ರತಿಭಟನೆಯನ್ನು ಮಾಡುತ್ತಿಿದ್ದಾರೆ. ಹಾಂಗ್‌ಕಾಂಗ್ ಪೊಲೀಸರ ಮೂಲಕ ಚೀನಾವು ಪ್ರತಿಭಟನೆ ಮಾಡುತ್ತಿಿರುವವರ ಮೇಲೆ ಕ್ರಮವನ್ನು ಕೈಗೊಳ್ಳುತ್ತಿಿದೆ. ಸಾವಿರಾರು ಪ್ರತಿಭಟನಾಕಾರರನ್ನು ಬಂಧಿಸಿ ಅವರಲ್ಲಿ ಬಹಳಷ್ಟು ಜನರನ್ನು ಚೀನಾಗೆ ಸಾಗಿಸಲಾಗಿದೆ. ಇದು ಹಾಂಗ್‌ಕಾಂಗ್‌ನ ಜನರನ್ನು ಇನ್ನಷ್ಟು ಕೆರಳುವಂತೆ ಮಾಡಿದೆ. ಚೀನಾ ಹಾಗೂ ಹಾಂಗ್‌ಕಾಂಗ್ ನಡುವಿನ ಬಿಕ್ಕಟ್ಟು ಮುಂದುವರಿದಿದೆ.

ಇಂದು ಕಾಶ್ಮೀರದ ಜನರ ಅಭಿವ್ಯಕ್ತಿಿ ಸ್ವಾಾತಂತ್ರ್ಯವನ್ನು ಭಾರತ ಸರಕಾರ ಹತ್ತಿಿಕ್ಕಿಿದೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿಿರುವ ಚೀನಾ ತನ್ನ ದೇಶದಲ್ಲಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಾಪ್, ಟ್ವಿಿಟ್ಟರ್, ಫೇಸ್‌ಬುಕ್, ಇನ್ಸ್ಟಾಾಗ್ರಾಾಂ ಹಾಗೂ ಸ್ಕೈಪ್‌ಗಳನ್ನು ಬ್ಯಾಾನ್ ಮಾಡಿ ಹಲವು ವರ್ಷಗಳೇ ಕಳೆದಿದೆ. ಗೂಗಲ್ ಸರ್ಚ್, ಗೂಗಲ್ ಮ್ಯಾಾಪ್, ಜಿಮೈಲ್, ವಿಕಿಪೀಡಿಯಾ, ನೆಟ್ ಫ್ಲಿಿಕ್‌ಸ್‌, ಮೈಕ್ರೋೋಸಾಫ್‌ಟ್‌, ಯಾಹೂ ಹಾಗೂ ಯೂಟ್ಯೂಬ್‌ಗಳನ್ನೂ ಚೀನಾ ಬ್ಯಾಾನ್ ಮಾಡಿದೆ. ಭಾರತೀಯರಾದ ನಾವೆಲ್ಲಾ ಈ ಸಾಮಾಜಿಕ ಮಾಧ್ಯಮ ಹಾಗೂ ಇಂಟರ್‌ನೆಟ್ ಮಾಧ್ಯಮಗಳ ಹೊರತಾಗಿ ಜೀವಿಸುವುದು ಅಸಾಧ್ಯ ಎನ್ನುವ ಪರಿಸ್ಥಿಿತಿಗೆ ತಲುಪಿರುವ ಕಾಲದಲ್ಲಿ

ಈ ಎಲ್ಲಾ ಸೌಕರ್ಯಗಳಿಂದ ವಂಚಿತವಾಗಿರುವ ಚೀನಿಯರ ಪರಿಸ್ಥಿಿತಿ ಹೇಗಿರಬಹುದು? ಇಂಟರ್‌ನೆಟ್‌ನ ಮೇಲೆ ಅತೀ ಹೆಚ್ಚು ನಿಗಾ ವಹಿಸುತ್ತಿಿರುವ ದೇಶಗಳಲ್ಲಿ ಚೀನಾವೇ ಅಗ್ರಗಣ್ಯ. ಇಂಟರ್‌ನೆಟ್ ಹಾಗೂ ಸಾಮಾಜಿಕ ಮಾಧ್ಯಮದ ಮೂಲಕ ಜನರಲ್ಲಿ ಸರಕಾರಿ ವಿರೋಧಿ ಭಾವನೆಗಳು ಮೂಡಿ ಸರ್ವಾಧಿಕಾರಿ ಕಮ್ಯುನಿಸ್‌ಟ್‌ ಸರಕಾರಕ್ಕೆೆ ಎದುರು ನಿಂತರೆ ಎನ್ನುವ ಭಯ ಚೀನಾ ಸರಕಾರದ್ದು. ಚೀನಾ, ತನ್ನ ದೇಶದ ಜನರ ಚಲನವಲನಗಳ ಮೇಲೆ ಹದ್ದುಗಣ್ಣಿಿಡಲು ದೇಶಾದ್ಯಂತ 20 ಕೋಟಿಗಳಷ್ಟು ಸಿಸಿ ಕ್ಯಾಾಮರಾಗಳನ್ನು ಅಳವಡಿಸಿದೆ. ಇದು ಪ್ರತೀ 7 ಜನರಿಗೆ ಒಂದು ಕ್ಯಾಾಮರಾವನ್ನು ಅಳವಡಿಸಿದಂತಾಯಿತು. ಬಹಳಷ್ಟು ಮುಖ್ಯವಾಹಿನಿ ಮಾಧ್ಯಮಗಳಿಗೂ ಚೀನಾ ನಿರ್ಬಂಧ ಹೇರಿದೆ. ವಾಷಿಂಗ್ಟನ್ ಪೋಸ್‌ಟ್‌, ನ್ಯೂಯಾರ್ಕ್ ಟೈಮ್‌ಸ್‌, ರಾಯಿಟರ್‌ಸ್‌, ವಾಲ್‌ಸ್ಟ್ರೀಟ್ ಜರ್ನಲ್, ಅಲ್ ಮೊದಲಾದ ಅಂತಾರಾಷ್ಟ್ರೀಯ ಮಾಧ್ಯಮಗಳ ಮೇಲೆ ಚೀನಾದಲ್ಲಿ ನಿಷೇಧವಿದೆ.

ಜಾಗತಿಕವಾಗಿ ಅತೀ ಹೆಚ್ಚು ಮರಣ ದಂಡನೆ ವಿಧಿಸುವ ದೇಶಗಳ ಪಟ್ಟಿಿಯಲ್ಲಿ ಚೀನಾ ಪ್ರಥಮ ಸ್ಥಾಾನದಲ್ಲಿ ನಿಲ್ಲುತ್ತದೆ. ಜಾಗತಿಕ ಮರಣ ದಂಡನೆಯ ಶೇ.78ರಷ್ಟು ಮರಣ ದಂಡನೆಗಳು ಚೀನಾ, ಇರಾನ್, ಸೌದಿ ಅರೇಬಿಯಾ, ಇರಾಕ್ ಹಾಗೂ ಪಾಕಿಸ್ತಾಾನಗಳಲ್ಲಿ ನಡೆಯುತ್ತದೆ. ವಿಕಿಪೀಡಿಯಾ ಮಾಹಿತಿಯಂತೆ 2002 ನೇ ಇಸವಿಯಲ್ಲಿ ಚೀನಾದಲ್ಲಿ 12,000 ಜನರಿಗೆ ಮರಣ ದಂಡನೆಯನ್ನು ವಿಧಿಸಲಾಗಿತ್ತು, 2007ರಲ್ಲಿ ಈ ಸಂಖ್ಯೆೆ 6500. 2014 ರ ಹೊತ್ತಿಿಗೆ ಚೀನಾದಲ್ಲಿ ನಡೆಸಲಾದ ಮರಣದಂಡನೆಗಳ ಸಂಖ್ಯೆೆಯು 2,400ಕ್ಕೆೆ ಇಳಿಯಿತಾದರೂ, ಈ ಪ್ರಮಾಣ ಕೂಡಾ ಜಾಗತಿಕವಾಗಿ ಅತೀ ಹೆಚ್ಚೇ ಎಂದು ಹೇಳಬಹುದಾದಷ್ಟಿಿದೆ. ಇನ್ನೊೊಂದು ವಿಚಾರವೇನೆಂದರೆ ಚೀನಾದಲ್ಲಿ ಮರಣದಂಡನೆ ವಿಧಿಸಿದ ವಿಚಾರ ಎಷ್ಟೋೋ ಬಾರಿ ಹೊರಗಿನ ಪ್ರಪಂಚಕ್ಕೆೆ ಗೊತ್ತೇ ಆಗುವುದಿಲ್ಲ. ಈಗಲೂ ಏನಿಲ್ಲವೆಂದರೂ ಅಲ್ಲಿ ಪ್ರತಿ ವರ್ಷ 2000 ಕ್ಕಿಿಂತಲೂ ಹೆಚ್ಚು ಮರಣ ದಂಡನೆಗಳು ವಿಧಿಸಲ್ಪಡುತ್ತಿಿರುವ ಸಾಧ್ಯತೆಗಳು ಇವೆ. ಮರಣ ದಂಡನೆಗೆ ಒಳಗಾದ ವ್ಯಕ್ತಿಿಗಳ ಅಂಗಾಂಗವನ್ನು ಮಾರಾಟ ಮಾಡುವ ಚೀನಾದ ಕ್ರಮ ಆ ದೇಶದ ಕ್ರೌೌರ್ಯಕ್ಕೆೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

error: Content is protected !!