Tuesday, 14th May 2024

ಒಂದು ಹೆಜ್ಜೆ ಸುಂದರ ಭಾರತ ನಿರ್ಮಾಣದ ಕಡೆಗೆ

ಪ್ರಚಲಿತ

ಡಾ.ಜಗದೀಶ ಮಾನೆ

ಭಾರತ ಇದೀಗ ಆರ್ಥಿಕವಾಗಿ ಬದಲಾಗುತ್ತಿರುವ ರಾಷ್ಟ್ರ. ಕಳೆದ ಎರಡು ಮೂರು ವರ್ಷಗಳಲ್ಲಿ ಭಾರತ ತನ್ನ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಅಭಿವೃದ್ಧಿ ಯನ್ನು ಸಾಧಿಸುತ್ತಿದೆ. ಕೆಲ ಸರಕುಗಳನ್ನು ಭಾರತವು ಬೇರೆ ಬೇರೆ ರಾಷ್ಟ್ರಗಳಿಂದ ಆಮದ ಮಾಡಿಕೊಂಡರೆ ಮತ್ತೊಂದಿಷ್ಟು ಸರಕುಗಳನ್ನು ರಫ್ತು ಮಾಡುತ್ತದೆ. ಅದರಲ್ಲಿ ಪೆಟ್ರೋಲ, ಚಿನ್ನ, ಆಹಾರ ಪದಾರ್ಥಗಳು ಹಾಗೂ ವಾಣಿಜ್ಯ ಸರಕುಗಳನ್ನು ಅನ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡರೆ,
ಸಂಸ್ಕರಿಸಿದ ತೈಲ, ಸಿದ್ಧಪಡಿಸಿದ ಒಡವೆಗಳು, ಔಷದ, ಆಹಾರ ಪದಾರ್ಥ ಹಾಗೂ ಮಿಷನರಿ ವಸ್ತುಗಳನ್ನು ಭಾರತ ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡುತ್ತದೆ. ಸರ್ವಿಸ್ ಇಂಡಸ್ಟ್ರಿಯ ವಿಷಯದಲ್ಲಿ ಭಾರತದ ಮೇಲೆ ಅಮೆರಿಕ, ಜಪಾನ್ ಮತ್ತು ಚೀನಾ ಸೇರಿದಂತೆ ಬೇರೆಬೇರೆ ರಾಷ್ಟ್ರಗಳು
ಅವಲಂಬನೆ ಯಾಗಿದೆ.

೨೦೨೩-೨೪ನೇ ಸಾಲಿನ ಈ ವರ್ಷ ಜಾಗತಿಕ ಯುದ್ಧಗಳ ವರ್ಷವಾಗಿ ಮಾರ್ಪಟ್ಟಿದೆ. ಉಕ್ರೇನ್- ರಷ್ಯಾ ಮಧ್ಯ ಕಳೆದ ಒಂದು ವರ್ಷದಿಂದ ಯುದ್ಧ ನಡೆಯುತ್ತಲೇ ಇದೆ. ಇತ್ತ ಇಸ್ರೇಲ್- ಗಾಜಾ ಸಂಘರ್ಷ, ಹಾಗೂ ಇರಾನ್- ಇಸ್ರೇಲ್ ಸಂಘರ್ಷ ಶುರುವಾಗಿದೆ. ಹೀಗಿರುವಾಗ ಕೆಂಪು ಸಮುದ್ರದ ವ್ಯಾಪಾರ ಮಾರ್ಗದಲ್ಲಿ ಸಂಚರಿಸುವುದು ಕಷ್ಟದ ಪರಿಸ್ಥಿತಿಗಳನ್ನು ವ್ಯಾಪಾರಿ ಹಡಗುಗಳು ಎದುರಿಸುತ್ತಿವೆ. ಇತ್ತ ಭಾರತ ಮತ್ತು ಚೀನಾದ ಸಂಬಂಧಗಳೂ ಬಹಳಷ್ಟು ಕೆಟ್ಟು ಹೋಗಿದೆ. ಅತ್ತ ಯುರೋಪಿಯನ್ ರಾಷ್ಟ್ರಗಳಲ್ಲಿ ಹಣದುಬ್ಬರ ಹೆಚ್ಚಾಗುವ ಮೂಲಕ ಆರ್ಥಿಕ ಸಂಕಷ್ಟಗಳು ತಲೆಯೆತ್ತಿವೆ. ಇದರ
ಪರಿಣಾಮ ಅಲ್ಲಿನ ಅನೇಕ ಕಂಪನಿಗಳು ತಮ್ಮಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಈ ಎಲ್ಲಾ ಸಮಸ್ಯೆಗಳ ಮಧ್ಯವೇ ಭಾರತವು ಶರವೇಗದಲ್ಲಿ ಮುಂದೆ ಸಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡಿದರೆ ಭಾರತ ತನ್ನ ರಫ್ತು ಪ್ರಮಾಣವನ್ನು ಹೆಚ್ಚು ಮಾಡಿ ಕೊಂಡಿದೆ.

ಅದರ ಜತೆಗೆ ತನ್ನ ವ್ಯಾಪಾರ ಕೊರತೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ೨೦೨೨ರಲ್ಲಿ ಭಾರತದ ರಫ್ತು ೭೭೬.೪ ಬಿಲಿಯನ್ ಡಾಲರ್‌ನಷ್ಟಿತ್ತು. ಅದು ೨೦೨೩ರಲ್ಲಿ ೭೭೬.೬ ಬಿಲಿಯನ್ ಡಾಲರ್‌ನಷ್ಟಾಗಿದೆ. ಅಲ್ಲಿಗೆ ಭಾರತದ ರಫ್ತಿನ ಪ್ರಮಾಣದಲ್ಲಿ ಹೋದ ವರ್ಷಕ್ಕಿಂತ ೦.೨೮ ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ. ಕಳೆದ ವರ್ಷ ಭಾರತವು ನಾನಾ ದೇಶಗಳಿಂದ ಆಮದು ಮಾಡಿದ ಪದಾರ್ಥಗಳ ಮೌಲ್ಯ
೮೯೮.೧ ಡಾಲರ್. ಅದು ೨೦೨೩-೨೪ ರಲ್ಲಿ ಹೋಲಿಕೆ ಮಾಡಿದಾಗ ೮೫೪.೮ ಬಿಲಿಯನ್ ಡಾಲರ್ ನಷ್ಟಾಗಿದೆ.

ಇದರಲ್ಲಿ ಸುಮಾರು ೪೪ ಮಿಲಿಯನ್ ಡಾಲರ್‌ನಷ್ಟು ನಮ್ಮ ಆಮದು ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ನಮ್ಮ ವ್ಯಾಪಾರ ಕೊರತೆ ೧೨೨ ಬಿಲಿಯನ್ ಡಾಲರ್ ನಷ್ಟಿತ್ತು. ಅದೀಗ ೭೨.೧೨ ಬಿಲಿಯನ್ ಡಾಲರ್‌ನಷ್ಟಾಗುವ ಮೂಲಕ ಶೇ.೩೫ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವ್ಯಾಪಾರ ಕೊರತೆ ಯಲ್ಲಿ ಇಳಿಕೆಯಾಗಿದೆ. ಈ ವರ್ಷ ಭಾರತದಲ್ಲಿ ಪೆಟ್ರೋಲಿಯಂ ಹಾಗೂ ಜ್ಯುವೆಲರಿ ಎಕ್ಸ್‌ಪೋರ್ಟ್ ಕಳೆದ ವರ್ಷಕ್ಕಿಂತ ಈಗ ಹೆಚ್ಚಿನ ಪ್ರಮಾಣದಗಿದೆ. ೨೦೨೨ರಲ್ಲಿ ೩೧೫.೬೪ ಬಿಲಿಯನ್ ಡಾಲರ್ ಈ ಪ್ರಮಾಣ, ೨೦೨೩ರಲ್ಲಿ ೩೨೦.೨೧ ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗುವ ಮೂಲಕ ಶೇ.೧.೪೫ರಷ್ಟು ಪ್ರಮಾಣದಲ್ಲಿ ಏರಿಕೆಯನ್ನು ದಾಖಲಿಸಿದೆ.

ಈ ವರ್ಷದಲ್ಲಿ ಬಹಳಷ್ಟು ಗಮನಾರ್ಹವಾದ ಅಂಶವೆಂದರೆ, ಭಾರತದಿಂದ ನಾವು ರಫ್ತು ಮಾಡುವ ಪದಾರ್ಥಗಳ ಪೈಕಿ ಅತಿ ಹೆಚ್ಚು ಏರಿಕೆಯನ್ನು
ದಾಖಲಿಸುತ್ತಿರುವುದು ಎಲೆಕ್ಟ್ರಾನಿಕ್ ವಸ್ತುಗಳು. ಈ ಮೊದಲು ನಾವೆಲ್ಲ ನಮಗೆ ಬೇಕಾದ ಮೊಬೈಲ್ ಫೋನಿನ ಆದಿಯಾಗಿ ಇನ್ನೂ ಹಲವಾರು ವಸ್ತು ಗಳನ್ನು ಬಹುತೇಕ ಚೀನಾದಿಂದಲೇ ತರಿಸಿಕೊಳ್ಳುತ್ತಿzವು. ಕೋವಿಡ್ ಸಂದರ್ಭದಲ್ಲಿ ಭಾರತ ಮೇಕ್ ಇನ್ ಇಂಡಿಯಾ ಆರಂಭಿಸಿತ್ತಲ್ಲ, ಆಗ ಮೊಬೈಲ್ ಫೋನ್ ಉತ್ಪಾದನೆಯ ಹೆಸರಲ್ಲಿ ತಯಾರಿಕೆ ಶುರುವಾಯಿತು. ಬಳಿಕ ಆಪಲ್ ನಂತಹ ದೊಡ್ಡ ಕಂಪನಿಗಳು ಭಾರತಕ್ಕೆ ಬಂದು ಹೂಡಿಕೆ ಮಾಡಿದವು. ಇಲ್ಲಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಅವುಗಳ ರಫ್ತು ಕಾರ್ಯ ಆರಂಭವಾಯಿತು.

ಆ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡ ಮಾರುಕಟ್ಟೆ ಲೆಕ್ಕದಲ್ಲಿ ಭಾರತವು ಒಂದಾಯಿತು. ಈ ಮೂಲಕ ನಮಗೆ ಬೇಕಾದ ವಸ್ತುಗಳನ್ನು ನಾವೇ ಇಲ್ಲಿ ತಯಾರಿಸಿಕೊಂಡರು ನಮ್ಮ ಆಮದಿನ ಪ್ರಮಾಣ ಬಹುತೇಕ ಕಡಿಮೆಯಾಗುತ್ತದೆ. ಆದರೆ ಈಗ ಎಲೆಕ್ಟ್ರಾನಿಕ್ ವಸ್ತುಗಳನ್ನು ನಾವು ನಮ್ಮ ಮಾರುಕಟ್ಟೆ ಗಳೊಂದಿಗೆ ಇಲ್ಲಿಂದ ಅವುಗಳ ರಫ್ತು ಮಾಡುವ ಕೆಲಸವೂ ಇದೀಗ ನಡೆಯುತ್ತಿದೆ. ಇದರ ಪರಿಣಾಮವೇ ಈ ವರ್ಷದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ರಫ್ತು ಪ್ರಮಾಣದಲ್ಲಿ ಶೇ.೨೩.೬೪ರಷ್ಟು ಏರಿಕೆಯಾಗಿದೆ. ೨೦೨೨-೨೩ರಲ್ಲಿ ೨೩.೫೫ ಬಿಲಿಯನ್ ಡಾಲರ್‌ನಷ್ಟಿದ್ದ ಎಲೆಕ್ಟ್ರಾನಿಕ್ ವಸ್ತುಗಳ ರಫ್ತು ಪ್ರಮಾಣವು
೨೦೨೩-೨೪ನೇ ಸಾಲಿನಲ್ಲಿ ೨೯.೧೨ ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ಭಾರತ ಜಾಗತಿಕ ಔಷಧ ಮಾರುಕಟ್ಟೆಯಲ್ಲಿ ದೊಡ್ಡ ಸ್ಥಾನದಲ್ಲಿದೆ. ಭಾರತ ತನಗೆ ಬೇಕಾದ ಎ.ಪಿ.ಐ ( ಆಕ್ಟಿವ್ ಫಾರ್ಮಾ ಇಂಗ್ರೆಂq )ನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತೇವೆ. ಔಷದ ಕ್ಷೇತ್ರದಲ್ಲಿ ಭಾರತ ದೊಡ್ಡ ಸಾಧನೆಯನ್ನು ಮಾಡುತ್ತಿರುವ ಈ ಹೊತ್ತಿನಲ್ಲಿಯೂ, ಅದಕ್ಕೆ ಬೇಕಾದ ಕಚ್ಚಾ ವಸ್ತುಗಳ ತಯಾರಿಕಾ ವಿಷಯದಲ್ಲಿ ನಮಗಿನ್ನೂ ಸ್ವಾವಲಂಬನೆಯನ್ನು ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಆದರೂ ಕೂಡಾ ಔಷಧಗಳ ರಫ್ತು ಕಳೆದ ವರ್ಷಕ್ಕಿಂತ ಈ ವರ್ಷ ೯.೬೭ರಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ.

ಇನ್ನು ಎಂಜಿನಿಯರಿಂಗ್ ಗೂqನಲ್ಲಿಯೂ ಭಾರತ ತನ್ನ ರ- ಪ್ರಮಾಣದಲ್ಲಿ ಕಳೆದ ವರ್ಷಕ್ಕಿಂತ ಈಗ ಶೇ.೨. ೧೩ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಭಾರತ ೧೦೭.೦೪ ಬಿಲಿಯನ್ ಡಾಲರ್ ಮೌಲ್ಯದ ಎಂಜಿನಿಯರಿಂಗ್ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿತ್ತು. ಈ ಬಾರಿ ಅದು ೧೦೯.೩೨ ಡಾಲರ್‌ ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಿzರೆ. ಇದು ಮೇಕ್ ಇನ್ ಇಂಡಿಯಾದಿಂದ ಸಾಧ್ಯವಾಗುತ್ತಿರುವ ಪ್ರಗತಿ. ಭಾರತವು ಅಮೆರಿಕದ ಸಾಕಷ್ಟು ವಿಮಾನ ತಯಾರಿಕಾ ಕಂಪನಿಗಳಿಗೆ ಇಲ್ಲಿಯೇ ಅದಕ್ಕೆ ಬೇಕಾದ ಸ್ಪೇರ್‌ಗಳನ್ನು ತಯಾರಿಸಿ ರಫ್ತು ಮಾಡುತ್ತಿದೆ.

ಅಲ್ಲದೆ ರಷ್ಯಾದೊಂದಿಗೆ ಭಾರತ ರುಪಾಯಿಯ ಮೂಲಕವೇ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ. ಆ ಬಳಿಕ ರಷ್ಯಾದ ಬಗ್ಗೆ ಭಾರತದ ಆಟೋ ಮೊಬೈಲ್ ಎಂಜಿನಿಯರಿಂಗ್ ಗೂqಗಳ ಸರಬರಾಜಿನ ಪ್ರಮಾಣ ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ರಷ್ಯಾದಿಂದ ತೈಲವನ್ನು ಆಮದು ಮಾಡಿ ಕೊಳ್ಳುತ್ತಿರುವ ಭಾರತವು ಡಾಲರ್ ಬದಲಿಗೆ ನಮ್ಮ ಕರೆನ್ಸಿ ರುಪಾಯಿ ನಲ್ಲಿಯೇ ವ್ಯಾಪಾರ ವಹಿವಾಟನ್ನು ನಡೆಸುತ್ತಿದೆ. ಮುಂದೆ ನಮ್ಮ ರುಪಾಯಿ ಯನ್ನು ರಷ್ಯಾ ಪುನಃ ಭಾರತದೊಂದಿಗೆ ವ್ಯಾಪಾರಕ್ಕೆ ಬಳಕೆ ಮಾಡಿಕೊಳ್ಳಲಿದೆ.

ಈ ನಿಟ್ಟಿನಲ್ಲಿ ಭಾರತದ ಎಂಜಿನಿಯರಿಂಗ್ ಗೂq ಬಹಳ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಇನ್ನು ಭಾರತದಿಂದ ರಫ್ತಾಗುವ ಹೊಗೆಸೊಪ್ಪಿನ ಪ್ರಮಾಣ ಶೇ.೧೯.೪೬ರಷ್ಟು. ಹಣ್ಣು ತರಕಾರಿಯ ರಫ್ತಿನಲ್ಲಿ ೧೩.೮೬ ಹೆಚ್ಚಳವಾಗಿದೆ. ಮಾಂಸ ಮತ್ತು ಡೈರಿ ಪ್ರಾಡಕ್ಟ್‌ಗಳು ಸಾಂಬಾರು ಪದಾರ್ಥಗಳ ರಫ್ತಿನ ಪ್ರಮಾಣದಲ್ಲಿಯೂ ಮನೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಟ್ಟಾರೆ ಸರಕು ಸಾಮಗ್ರಿಗಳ ರಫ್ತಿನ ಪ್ರಮಾಣ ಕಳೆದಬಾರಿ ೪೫೧.೭ ಬಿಲಿಯನ್ ಡಾಲರ್‌ನಷ್ಟಿದ್ದರೆ, ಅದರ ಆಮದಿನ ಪ್ರಮಾಣವು ೭೧೫.೯೭ ಬಿಲಿಯನ್ ಡಾಲರ್‌ನಷ್ಟಿತ್ತು. ಈ ಎರಡರ ನಡುವಿನ ಅಂತರ ೨೬೪ ಮಿಲಿಯನ್ ಡಾಲರ್.
ಈ ಕೊರತೆಯ ಪ್ರಮಾಣ ಈ ಬಾರಿ ಬಹಳ ಕಡಿಮೆಯಾಗಿದೆ.

೨೦೨೩-೨೪ನೇ ಸಾಲಿನಲ್ಲಿ ೪೩೭ ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ರಫ್ತು ಮಾಡಿದರೆ, ೬೭.೨೪ ಮಿಲಿಯನ್ ಡಾಲರ್‌ನಷ್ಟು ವಸ್ತುಗಳನ್ನು ನಾವು ಆಮದು ಮಾಡಿಕೊಂಡಿದ್ದೇವೆ. ಹೀಗಾಗಿ ಈ ಸಾಲಿನಲ್ಲಿ ವ್ಯಾಪಾರದ ಕೊರತೆ ಎಂಬುದು ೨೪೦ ಬಿಲಿಯನ್ ಡಾಲರ್‌ನಷ್ಟಾಗಿದೆ. ಹಾಗಾಗಿ ಕಳೆದ ಬಾರಿಗಿಂತ ಈಗ ಸುಮಾರು ೨೪ ಮಿಲಿಯನ್ ಡಾಲರ್‌ನಷ್ಟು ವ್ಯಾಪಾರದ ಕೊರತೆ ಕಡಿಮೆಯಾಗಿದೆ. ಇನ್ನು ಸರ್ವಿಸ್ ಸೆಕ್ಟರ್ ’ಟ್ರೇಡ್ ಸರ್‌ಪ್ಲಸ್’ ಐಟಿ
ಇಂಡಸ್ಟ್ರಿ ಈ ಕ್ಷೇತ್ರದ ವ್ಯಾಪಾರದಲ್ಲಿ ಬಹಳ ಲಾಭವಾಗುತ್ತಿದೆ. ಕಳೆದ ವರ್ಷ ಈ ಸರ್ವಿಸ್ ಕ್ಷೇತ್ರದಲ್ಲಿ ರಫ್ತಿನ ಪ್ರಮಾಣ ೩೬೫.೩೫ ಬಿಲಿಯನ್ ಡಾಲರ್. ಇದರಲ್ಲಿ ಭಾರತವು ೧೮೨ ಬಿಲಿಯನ್ ಡಾಲರ್ ಮೌಲ್ಯದ ಸೇವೆಗಳನ್ನು ಆಮದು ಮಾಡಿಕೊಂಡಿತ್ತು . ಈ ವರ್ಷ ನಮ್ಮ ರಫ್ತಿನ ಪ್ರಮಾಣವೂ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದೆ.

ಅದು ೩೩೯.೬೨ ಬಿಲಿಯನ್ ಡಾಲರ್‌ನಷ್ಟು ದಾಖಲಾಗಿದೆ ಹಾಗೆ ಆಮದಿನ ಪ್ರಮಾಣ ಕಳೆದ ಬಾರಿಗಿಂತ ಕಡಿಮೆಯಾಗಿದೆ. ಅದು ೧೭೭.೫೬ ಬಿಲಿಯನ್ ಡಾಲರ್ ಮುಟ್ಟಿದೆ. ಒಟ್ಟಾರೆ ಇಲ್ಲಿ ಕಳೆದ ವರ್ಷಕ್ಕಿಂತ ೧೯ ಬಿಲಿಯನ್ ಡಾಲರ್ ಹೆಚ್ಚುವರಿ ಲಾಭವನ್ನು ಈ ಕ್ಷೇತ್ರದಲ್ಲಿ ಭಾರತ ಗಳಿಸಿದೆ. ಕಳೆದ ವರ್ಷ ಸರ್ವಿಸ್ ಇಂಡಸ್ಟ್ರಿಯಿಂದ ೧೪೩ ಬಿಲಿಯನ್ ಡಾಲರ್‌ನಷ್ಟು ಲಾಭ ಉಂಟಾಗಿತ್ತು. ಈ ವರ್ಷ ೧೬೩ ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಒಟ್ಟಾರೆ ಜಗತ್ತು ಈ ವರ್ಷ ಜಾಗತಿಕ ಯುದ್ಧಗಳನ್ನು ಎದುರಿಸುತ್ತಿರುವುದರಿಂದ ಭಾರತ ತಾನು ಅಂದುಕೊಂಡಷ್ಟು ಗಣನೀಯ ಪ್ರಮಾಣದಲ್ಲಿ ತನ್ನ ಲಾಭದ
ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಆದರೂ ತನ್ನ ಆಮದು ಪ್ರಮಾಣದಲ್ಲಿ ಗಣನೀಯವಾಗಿ ಕಡಿಮೆ ಮಾಡಿಕೊಳ್ಳುವುದರಲ್ಲಂತೂ ಯಶಸ್ವಿಯಾಗಿದೆ.

ನಮಗೆ ಬೇಕಾದ ಬಹುತೇಕ ವಸ್ತುಗಳನ್ನು ತಯಾರಿಸಿಕೊಳ್ಳುವುದರಲ್ಲಿ ಸ್ವಾವಲಂಬನೆಯ ಹೆಜ್ಜೆಯನ್ನಿಟ್ಟಿದೆ ಭಾರತ. ನಮ್ಮ ಮಾರುಕಟ್ಟೆಗೆ ಬೇಕಾದ ವಸ್ತುಗಳಿಗಾಗಿ ವಿದೇಶದಕಡೆಗೆ ನೋಡುವುದು ಕಡಿಮೆಯಾದರೆ ಸಹಜವಾಗಿ ಆಮದು ಪ್ರಮಾಣ ಕಡಿಮೆ ಕಡಿತವಾಗಿ ವ್ಯಾಪಾರದಲ್ಲಿನ ಕೊರತೆಯು ಕಡಿಮೆಯಾಗುತ್ತದೆ. ೨೦೨೩-೨೪ರ ಸಾಲಿನಲ್ಲಿ ಅದನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಧಿಸುವತ್ತ ಭಾರತವು ಇದೀಗ ದೊಡ್ಡ ಹೆಜ್ಜೆಯನ್ನಿಡುತ್ತಿದೆ.

(ಲೇಖಕರು ರಾಜ್ಯಶಾಸ್ತ್ರ ಅಧ್ಯಾಪಕರು)

Leave a Reply

Your email address will not be published. Required fields are marked *

error: Content is protected !!