Monday, 13th May 2024

ಹಸುಗೂಸಿನ ಮೇಲು ಇಂಗ್ಲಿಷ್ ಹೇರಿಕೆ ಬೇಕೆ!

 ಈಶ್ವರ್ ಎನ್. ಭಟ್ಕಳ

DON’t go, come baby stop! ಹೀಗೆ ನೀವು ಕೂಡ ಯಾವ ಕನ್ನಡಿಗ ತಂದೆ-ತಾಯಿಯಾದರೂ ಅರ್ಧಂಬರ್ಧ ಇಂಗ್ಲಿಷನ್ನೂ ಉಪಯೋಗಿಸಿಕೊಂಡು ತಮ್ಮ ಪುಟ್ಟ ಕಂದಮ್ಮಗಳೊಂದಿಗೆ ಈ ರೀತಿಯ ಸಂವಹನ ನಡೆಸುತ್ತಿರುವುದನ್ನು ಗಮನಿಸಿಯೇ ಇರುತ್ತೀರಿ, ಇಲ್ಲ ನೀವೇ ಅಂತಹ ತಂದೆ ತಾಯಿಯಾಗಿರಲಿಕ್ಕೂ ಸಾಕು.

ಮಾತೃಭಾಷೆ ಎನ್ನುವುದು ಕೇವಲ ಸಂವಹನದ ಮಾಧ್ಯಮವಲ್ಲ ಅದು ಹೃದಯಕ್ಕೆೆ ಹತ್ತಿರವಾದ ಭಾಷೆ. ಆದರೆ, ಕೆಲವರಿಗೆ ತಮ್ಮ ಮಾತೃಭಾಷೆಯ ಬಗ್ಗೆೆಯೇ ಅದೇನೋ ಒಂದು ರೀತಿಯ ಅಸಡ್ಡೆೆ ಮತ್ತು ತಾತ್ಸಾಾರ. ಅದರಲ್ಲೂ ನಮ್ಮ ಕನ್ನಡಿಗರಿಗೆ ಇದು ತುಸು ಜಾಸ್ತಿ ಎನ್ನಬಹುದು. ಸ್ವಲ್ಪ ಹರಕು ಮುರುಕು ಇಂಗ್ಲಿಿಷ್ ಬಂದರಂತೂ ಮುಗಿದೆ ಹೋಯಿತು ನೋಡಿ. ನೇರವಾಗಿ ಹುಟ್ಟಿದಾಗಿನಿಂದ ಮಾತನಾಡುತ್ತಾಾ ಬಂದ ಭಾಷೆಯನ್ನೆೆ ಸರಿಯಾಗಿ ಮಾತನಾಡಲಿಕ್ಕೆೆ ಬರಲ್ಲ ಎಂದು ತಮಗೆ ತಾವೇ ಷರಾ ಬರೆದುಕೊಂಡು ಬಿಡುತ್ತಾರೆ.

ಇಂತವರು ಆಗಷ್ಟೇ ಹುಟ್ಟಿಿದ ತಮ್ಮ ಹಸುಗೂಸಿನೊಂದಿಗೂ ಕೂಡ ಇದೇ ರೀತಿಯ ಅರ್ಧ ಇಂಗ್ಲಿಿಷ್ ಮತ್ತು ಕನ್ನಡ ಸೇರಿಸಿ ಕಂಗ್ಲಿಿಷ್ ರೀತಿಯ ಸಂವಹನವನ್ನು ನಡೆಸುತ್ತಾಾರೆ. ಮುಂದೆ ಆ ಮಗು ಕನ್ನಡ ನಾಡಿನಲ್ಲೇ ಹುಟ್ಟಿಿ ಬೆಳೆದರು ತನ್ನದೇ ಆದ ಬಹುದೀರ್ಘ ಇತಿಹಾಸವನ್ನು ಹೊಂದಿರುವ ಒಂದು ಉನ್ನತ ಭಾಷೆಯಿಂದ ವಂಚಿತವಾಗುವುದರಲ್ಲಿ ಯಾವ ಸಂದೇಹವು ಬೇಡ. ಅನ್ನಕ್ಕಾಾಗಿ ಇಂಗ್ಲಿಿಷ್ ಭಾಷೆ ಅನಿವಾರ್ಯ ಎನ್ನಲಾಗುತ್ತದೆ ಸರಿ ಅದನ್ನು ಒ್ಪೆಣ ಯಾಕೆಂದರೆ ಎಲ್ಲರೂ ಒಪ್ಪಲೇಬೇಕಾದ ಸತ್ಯ. ಹಾಗಂತ ಕನ್ನಡ ಭಾಷೆ ಕಲಿತರೆ ಇಂಗ್ಲಿಿಷ್ ಏನೂ ತಾ ಒಲ್ಲೇ ಎಂದು ಓಡಿಹೊಗುತ್ತದೆಯೇ. ಇಲ್ಲ ಎಂದರೆ ಇದೀಗ ಅಂಬೆಗಾಲಿಡಲೂ ಕಲಿಯುತ್ತಿಿರುವ ಹಸುಗೂಸಿನ ಮೇಲು ಈ ಇಂಗ್ಲಿಿಷ್ ಹೇರಿಕೆ ಏಕೆ?

ಇಗಂತೂ ಎಲ್ಲರೂ ಕೂಡ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಗಳಲ್ಲಿಯೇ ಓದಿಸುತ್ತಾಾರೆ. ನಮ್ಮನ್ನಾಾಳುವ ನಾಯಕರು ಕೂಡ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿಿನಲ್ಲಿ ಯಾವುದೇ ರೀತಿಯ ಕ್ರಾಾಂತಿಕಾರಕ ನಿಲುವನ್ನು ತಾಳುತ್ತಿಿಲ್ಲ. ಯಾಕೆಂದರೆ ಸ್ವತಃ ಅದೆಷ್ಟೋೋ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆೆಗಳು ಕೂಡ ನಾಡು ನುಡಿಯ ವಿಷಯ ಬಂದಾಗ ಮೈಮೆಲೇ ಬಂದವರ ಹಾಗೇ ಜಿಗಿದು ನಿಲ್ಲುವ ಸೋ ಕಾಲ್ಡ್ ಕನ್ನಡದ ಕಟ್ಟಾಾಳುಗಳಾದ ನಮ್ಮನ್ನಾಾಳುವ ನಾಯಕರದ್ದೆ ಬಿಡಿ. ಈ ಕಾರಣಕ್ಕಾಾಗಿಯೇ ಕನ್ನಡ ಮಾಧ್ಯಮ ಶಾಲೆಗಳನ್ನು ಒಂದೊಂದಾಗಿಯೇ ಮುಚ್ಚಿಿಹಾಕಲಾಗುತ್ತದೆ. ಅಲ್ಲಿಗೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಕಲಿಸುವ ಹೆಬ್ಬಾಾಗಿಲೊಂದು ಮುಚ್ಚಿಿ ಹೊದಂತಾಯಿತ್ತಲ್ಲವೇ.

ಈಗೀಗ ಮಕ್ಕಳಿಗೆ ಎರಡು ಮೂರು ವರ್ಷ ತುಂಬುತ್ತಿಿದ್ದಂತೆ ಪ್ರೀ-ಕೆಜಿಗೆ ತಂದೆ ಎಸೆಯುತ್ತಾಾರೆ. ಅನ್ನೋೋ ಪದ ನನಗಿಲ್ಲಿ ಸೂಕ್ತ ಪದ ಬಳಕೆಯಂತೆ ಕಾಣುತ್ತಿಿದೆ. ತಂದೆ-ತಾಯಿಯ ಜತೆ ಹೆಚ್ಚು ಕಾಲ ಕಳೆಯಬೇಕಾದ ಈ ಎಳೆವಯಸ್ಸಿಿನಲ್ಲಿ ಯಾವ ಮಗು ತಾನೇ ತಾನಾಗಿಯೇ ಶಾಲೆಗೆ ಹೋಗಲು ಮನಸ್ಸು ಮಾಡುತ್ತದೆ. ಆದರಿಂದ ಪಾಲಕರು ಮಕ್ಕಳನ್ನು ಇಲ್ಲಿ ತಂದೆಸೆದು ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಾಾರೆ. ಅಲ್ಲಿಗೆ ಮನೆಯಲ್ಲಾದರೂ ಅಲ್ಪ ಸ್ವಲ್ಪ ಕನ್ನಡವನ್ನು ಕಲಿತು ನಮ್ಮ ಕಸ್ತೂರಿ ಕನ್ನಡವನ್ನು ಇನ್ನು ಸ್ವಲ್ಪ ವರ್ಷಗಳವರೆಗೂ ಕಾಪಾಡಿಕೊಂಡು ಬರುತ್ತಾಾರೆ. ಈ ಮಳೆಗಾಲದಲ್ಲಿ ಹುಟ್ಟಿಿಕೊಳ್ಳುವ ನಾಯಿಕೊಡೆಯಂತೆ ಬಿದಿಗೊಂದೊಂದು ಪ್ರೀ-ಕೆಜಿ ಇರುವ ಕಾರಣಕ್ಕೆೆ ಅಲ್ಲೂ ಕನ್ನಡದ ಕೈ ಕೆಳಗಾಗಿ ಬಿಡುತ್ತೆೆ.

ಹಾಗಾದರೆ ನಮ್ಮ ಮಕ್ಕಳಿಗೆ ನಮ್ಮ ಉದಾತ್ತ ಭಾಷೆಯನ್ನು ಕಲಿಸುವುದಕ್ಕೆೆ ಇರುವುದು ಕೇವಲ ಮೂರೆ ಮೂರು ವರ್ಷಗಳು ಮಾತ್ರ. ಅದರಲ್ಲೂ ಮಗು ಹುಟ್ಟಿಿದಾಗಿನಿಂದ ಒಂದೊಂದೆ ಅಕ್ಷರ ಉಚ್ಚಾಾರಣೆ ಪ್ರಾಾರಂಭಿಸುವುದು ಆರೇಳು ತಿಂಗಳುಗಳು ಕಳೆದ ಮೇಲೆಯೇ. ಈ ಸಮಯದಲ್ಲಾದರೂ ನಾವು ಮಕ್ಕಳಿಗೆ ಕಂಗ್ಲಿಿಷ್ ಕಲಿಸದೆ ಸ್ವಚ್ಛ ಕನ್ನಡವನ್ನು ಕಲಿಸಬಹುದಲ್ಲವೇ. ನಮ್ಮ ಮಾತೃ ಭಾಷೆಯ ಮೇಲೆ ಯಾಕಿಷ್ಟು ತಾತ್ಸಾಾರ ಮನೊಭಾವನೆ ನಮಗೆ. ಮಕ್ಕಳು ಚಿಕ್ಕವರಿದ್ದಾಗಲೇ ಇಂಗ್ಲಿಿಷ್ ಕಲಿಸಿ ಅವರನ್ನು ಬುದ್ಧಿಿವಂತರನ್ನಾಾಗಿ ಮಾಡಿಬಿಡಬೇಕೆಂಬ ಭ್ರಮೆಯೇ.

ಈ ಭ್ರಮೆ ನಿಮ್ಮದಾಗಿದ್ದರೆ ಇದನ್ನು ಮೊದಲು ಬಿಡಿ ಯಾಕೆಂದರೆ ಒಬ್ಬ ಅಕ್ಷರ ಬಾರದ ವ್ಯಕ್ತಿಿ ಕೂಡ ಐದಾರು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಛಾತಿಯನ್ನು ಗಳಿಸಿರುತ್ತಾಾನೆ ಎಂದರೆ, ಇನ್ನು ಉನ್ನತ ಶಿಕ್ಷಣವನ್ನು ಕೊಡುವ ಹಂಬಲದಲ್ಲಿರುವ ನಿಮ್ಮ ಮಕ್ಕಳಿಗೆ ಮಾತೃಭಾಷೆ ಒಂದು ಹೊರೆ ಹೇಗಾದಿತು. ಈಗಲಾದರೂ ಕೇವಲ ಮೂರ್ನಾಲ್ಕು ವರ್ಷಗಳ ಕಾಲ ಪಾಲಕರ ಜತೆ ಇರುವ ನಮ್ಮ ಮಕ್ಕಳಿಗೆ ಸಿಹಿಯಾದ ಕನ್ನಡ ಭಾಷೆಯ ಸವಿ ಉಣಿಸೋಣ. ಆಮೇಲೆ ಈಗೀನ ಕಾಲದಲ್ಲಿ ನೀವು ಕೊಡವ ಡೊನೆಷನ್ ಶಿಕ್ಷಣಕ್ಕೆೆ ಇಂಗ್ಲಿಿಷ್ ಮತ್ತೊೊಂದು ಮಗದೊಂದು ಭಾಷೆಯನ್ನ ಅವರೇ ಕಲಿತುಕೊಳ್ಳುತ್ತಾಾರೆ ಎಂಬ ಮಾತು ಸುಳ್ಳಲ್ಲ.

Leave a Reply

Your email address will not be published. Required fields are marked *

error: Content is protected !!