Sunday, 19th May 2024

ಭಾರತೀಯರು ಲಸಿಕೆ ಕೊಡುತ್ತಿದ್ದರು !

ಹಿಂದಿರುಗಿ ನೋಡಿದಾಗ

ಸಿಡುಬು ಆಫ್ರಿಕ ಖಂಡದಲ್ಲಿ ಹುಟ್ಟಿತು. ಈಜಿಪ್ಷಿಯನ್ ವರ್ತಕರ ಮೂಲಕ ಭಾರತವನ್ನು ಪ್ರವೇಶಿಸಿತು. ನಂತರ ಎರಡು ಮಾರ್ಗಗಳ ಮೂಲಕ ಜಗ
ತ್ತಿಗೆ ಹರಡಿತು. ಭಾರತದಿಂದ ಚೀನಾಕ್ಕೆ, ಚೀನಾದಿಂದ ಜಪಾನಿಗೆ ಹರಡಿತು. ಭಾರತೀಯರೊಡನೆ ವಾಣಿಜ್ಯ ವ್ಯವಹಾರಗಳಲ್ಲಿ ತೊಡಗಿದ್ದ ಅರಬ್ಬರು ಹಾಗೂ ಪರ್ಷಿಯನ್ನರು ಸಿಡುಬನ್ನು ಯುರೋಪಿಯನ್ನರಿಗೆ ಹರಡಿದರು.

ಯುರೋಪಿಯನ್ನರು, ಮುಖ್ಯವಾಗಿ ಸ್ಪ್ಯಾನಿಶ್ ನಾವಿಕರು ಸಿಡುಬನ್ನು ಅಮೆರಿಕಕ್ಕೆ ಹರಡಿದರು. ಹೀಗೆ ಸಿಡುಬು ವಿಶ್ವವ್ಯಾಪಿಯಾಗಲು ಮನುಷ್ಯರ ವಾಣಿಜ್ಯ ವ್ಯವಹಾರಗಳೇ ಕಾರಣವಾದವು ಎನ್ನುವುದು ಒಂದು ಐತಿಹಾಸಿಕ ವಿಪರ್ಯಾಸವಾಗಿದೆ. ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿ ‘ಮಸೂರಿಕ’ ಎನ್ನುವ ಚರ್ಮವ್ಯಾಧಿಯ ವಿವರಣೆಯಿದೆ. ಇದೊಂದು ಸಾಮಾನ್ಯ ಚರ್ಮ ಕಾಯಿಲೆಯಂತೆ ಕಾಣುತ್ತದೆ. ಬಹುಶಃ ಇದು ಸಿಡುಬು ಆಗಿರಲಿಕ್ಕಿಲ್ಲ. ಸಿಡುಬು ೧೦ರಲ್ಲಿ ಮೂವರನ್ನು ಕೊಲ್ಲುವಂಥ ಕಾಯಿಲೆ. ಹಾಗಾಗಿ ಚರಕ ಮತ್ತು ಸುಶ್ರುತರ ಕಾಲದಲ್ಲಿ, ಭಾರತದಲ್ಲಿ ಬಹುಶಃ ಸಿಡುಬು ಇದ್ದಿಲ್ಲದಿರಬಹುದು.

ಕ್ರಿ.ಶ. ೭ನೆಯ ಶತಮಾನದಲ್ಲಿ ಇದ್ದಿರಬಹುದಾದ ವಾಗ್ಬಟನ ‘ಅಷ್ಟಾಂಗಸಂಗ್ರಹ’ದಲ್ಲಿ ಸಿಡುಬಿನ ಮಾರಕ ವಿವರಣೆಯಿದೆ. ಸುಮಾರು ಒಂದು ಶತಮಾನದ ನಂತರ  ಮಾಧವನು ಬರೆದ ‘ಮಾಧವ ನಿದಾನ’ದಲ್ಲಿಯೂ ಸಿಡುಬು, ಸೀತಾಳೆ ಸಿಡುಬು ಹಾಗೂ ದಡಾರದ ವಿವರಣೆಯಿದೆ. ಬಹುಶಃ ಕ್ರಿ.ಶ. ೫ನೆಯ ಶತಮಾನದ ನಂತರ ಸಿಡುಬು ಭಾರತದಲ್ಲಿ ವ್ಯಾಪಿಸಿತು ಎನ್ನಬಹುದು.

ಮುನ್‌ರಕ್ಷಣೆ: ಸಿಡುಬು ಬರದಂತೆ ಮುಂಚಿತವಾಗಿ ರಕ್ಷಣಾ ಕ್ರಮವನ್ನು ಕೈಗೊಳ್ಳುವ ಪದ್ಧತಿಯು ಎಲ್ಲಿ, ಎಂದು, ಯಾರಿಂದ ಆರಂಭವಾಯಿತೆಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ಭಾರತದಲ್ಲಿ ಬೆಳೆದ ಸಿಡುಬು ಮುನ್‌ರಕ್ಷಣಾ ಪದ್ಧತಿಗಳು, ಬೌದ್ದರಿಂದ ಚೀನಾ ದೇಶಕ್ಕೆ ಹಾಗೂ ಮಧ್ಯ ಪ್ರಾಚ್ಯಕ್ಕೆ ವ್ಯಾಪಿಸಿತು ಎನ್ನಲಾಗಿದೆ. ಇದಕ್ಕೆ ನಿಖರ ಆಧಾರಗಳು ಇದುವರೆಗೂ ದೊರೆತಿಲ್ಲ. ಚೀನಾ ದೇಶದ ಸ್ಯಾಂಗ್ ವಂಶದ (೯೬೦-೧೨೮೦) ಆಡಳಿತಾವಧಿಯಲ್ಲಿ ಸಿಡುಬಿನ ಹೆಪ್ಪಳಿಕೆಗಳನ್ನು (ಸ್ಯಾಬ್) ಚೆನ್ನಾಗಿ ಅರೆದು ನುಣ್ಣಗೆ ಮಾಡಿ, ಅದನ್ನು ಬೆಳ್ಳಿಯ ಕೊಳವೆಗಳಲ್ಲಿ ತುಂಬಿಸಿ, ವ್ಯಕ್ತಿಯ ಮೂಗಿನ ಹೊರಳೆಗಳ ಒಳಗೆ ಊದುತ್ತಿದ್ದರು. ಹೀಗೆ ಮಾಡಿಸಿಕೊಂಡವರಿಗೆ ಸಿಡುಬು ಅಂಟುತ್ತಿರಲಿಲ್ಲ. ಹಾಗೆ ಅಂಟಿದರೂ ಅದು ಮಾರಕ ಸ್ವರೂಪವನ್ನು ತಳೆಯುತ್ತಿರಲಿಲ್ಲ.

ಇದನ್ನು ‘ನಾಸಿಕ ಉರುಬುವಿಕೆ’ (ನೇಸಲ್ ಇನ್-ಶನ್) ಎಂದು ಕರೆಯುತ್ತಿದ್ದರು. ಈ ವಿಧಾನವು ಭಾರತದಿಂದ ಚೀನಾಕ್ಕೆ ಹೋಯಿತು ಎಂಬ ವಾದವು ಇದೆಯಾದರೂ ಅದಕ್ಕೆ ಸೂಕ್ತ ಆಧಾರವು ದೊರೆತಿಲ್ಲ.

ಭಾರತೀಯರು: ಭಾರತದಲ್ಲಿ, ಭಾರತೀಯರು ಅವರದ್ದೇ ಆದ ವಿಧಾನದಲ್ಲಿ ಸಿಡುಬು ಲಸಿಕೆಯನ್ನು ನೀಡುತ್ತಿದ್ದ ಬಗ್ಗೆ ೧೭೩೦ರಲ್ಲಿ ಅಲಿವರ್ ಕೌಲ್ಡ್ (ಊಟಞ ಟ.
ಇಟ್ಠ್ಝಠಿ ಠಿಟ ಈ uಜಿqಛ್ಟಿ ಇಟ್ಠ್ಝಠಿ ಜ್ಞಿ ’ಅ Zಟ್ಠ್ಞಠಿ ಟ್ಛ ಠಿeಛಿ bಜಿoಛಿZoಛಿo ಟ್ಛ ಆಛ್ಞಿಜZ’ (ಇZಠಿಠಿZ, bZಠಿಛಿb ಊಛಿಚ್ಟ್ಠಿZqs ೧೦. ೧೭೩೧) ೧೭೬೮ರಲ್ಲಿ ಜಾನ್ ಜ-ನಿಯನ್ ಹೋಲ್ವೆಲ್ (ಅ ಅಟ್ಠ್ಞಠಿ ಟ್ಛ ಠಿeಛಿ IZಛ್ಟಿ ಟ್ಛ ಐಟ್ಚ್ಠ್ಝZಠಿಜ್ಞಿಜ ಟ್ಟ ಠಿeಛಿ ಖಞZmಟ್ಡ ಜ್ಞಿ ಠಿeಛಿ ಉZoಠಿ ಐbಜಿಛಿo ಡಿಜಿಠಿe ಖಟಞಛಿ
uಚಿoಛ್ಟಿqZಠಿಜಿಟ್ಞo ಟ್ಞ ಠಿeಛಿ PZಠಿಜ್ಚಿಛಿ Zb Iಟbಛಿ ಟ್ಛ SಛಿZಠಿಜ್ಞಿಜ ಠಿeZಠಿ ಈಜಿoಛಿZoಛಿ ಜ್ಞಿ ಠಿeಟoಛಿ PZಠಿo (ಔಟ್ಞbಟ್ಞ, ೧೭೬೭) ಎಂಬ ವೈದ್ಯರು ದಾಖಲಿಸಿರುವರು. ಬಂಗಾಳ ದೇಶದಲ್ಲಿ ಆಸ್ತಿತ್ವದಲ್ಲಿದ್ದ ಸಿಡುಬು ಮುನ್‌ರಕ್ಷಣಾ ಲಸಿಕೆಯ ತಂತ್ರದ ಸರಿಸುಮಾರು ವಿವರಣೆಯು ಈ ಕೆಳಕಂಡಂತಿದೆ:
sಕೆಲವು ಬ್ರಾಹ್ಮಣ ವೈದ್ಯರು ಮೊದಲು ರೋಗಿಗಳ ಸಿಡುಬು ಗುಳ್ಳೆಗಳಲ್ಲಿದ್ದ ಕೀವನ್ನು ಒಂದು ವಿಶೇಷವಾದ ಚರ್ಮದ ಚೀಲದಲ್ಲಿ ಸಂಗ್ರಹಿಸುತ್ತಿದ್ದರು.

sಈ ವರ್ಷ ಸಂಗಹಿಸಿದ ಕೀವನ್ನು ಒಂದು ವರ್ಷಕಾಲ ಕಾದಿಟ್ಟು, ಅದನ್ನು ಮರುವರ್ಷ ಲಸಿಕೆಯ ರೂಪದಲ್ಲಿ ಬಳಸುತ್ತಿದ್ದರು.
s ಸಿಡುಬು ವೈರಸ್ಸನ್ನು ಒಂದು ವರ್ಷಕಾಲ ಇಡುತ್ತಿದ್ದ ಕಾರಣ. ಆದರ ಸಹಜ ಶಕ್ತಿ ಸಾಮರ್ಥ್ಯಗಳು ಕುಗ್ಗಿರುತ್ತಿದ್ದವು ಇಲ್ಲವೇ ನಷ್ಟವಾಗಿರುತ್ತಿದ್ದವು. ಇದನ್ನು ಇಂದಿನ ವೈದ್ಯಕೀಯ ಪರಿಭಾಷೆಯಲ್ಲಿ ’ಆಟೆನ್ಯೂಯೇಶನ್’ ಎನ್ನುತ್ತೇವೆ.
sಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬ್ರಾಹ್ಮಣ ವೈದ್ಯರು, ೩-೪ ಜನರ ಗುಂಪಿನಲ್ಲಿ ಮನೆಯಿಂದ ಮನೆಗೆ, ಊರಿಂದ ಊರಿಗೆ ಹೋಗಿ ಲಸಿಕೆಯನ್ನು ನೀಡುತ್ತಿದ್ದರು.

ಲಸಿಕೆಯನ್ನು ನೀಡುವ ಪ್ರಕ್ರಿಯೆಯನ್ನು ‘ಟೀಕಾ’ ಎನ್ನುತ್ತಿದ್ದರು. ಇದನ್ನು ನಡೆಸುತ್ತಿದ್ದ ಬಾಹ್ಮಣರನ್ನು ‘ಟೀಕಾದಾರ್’ ಎಂಬ ಹೆಸರಿನಿಂದ ಗುರುತಿಸುತ್ತಿದ್ದರು.

sಬೆಳಗಿನ ಜಾವ ಹಳ್ಳಿಯ ಮನೆ ಮುಂದೆ ಬರುತ್ತಿದ್ದರು. ಮೊದಲ ಬ್ರಾಹ್ಮಣನು ಒರಟಾದ ರೇಷ್ಮೆ ಬಟ್ಟೆಯನ್ನು ತೆಗೆದುಕೊಳ್ಳುತ್ತಿದ್ದ. ಗಂಡು ಮಕ್ಕಳ ಮುಂದೋಳಿನ ಮೇಲೆ ಅಥವಾ ಹೆಣ್ಣುಮಕ್ಕಳ ತೋಳಿನ ಮೇಲೆ ಚೆನ್ನಾಗಿ ಉಜ್ಜುತ್ತಿದ್ದ. ಇದರಿಂದ ಚರ್ಮದ ಮೇಲ್ಮೈ ತರಚಿಹೋಗುತ್ತಿತ್ತು.

sಎರಡನೆಯ ಬ್ರಾಹ್ಮಣನು ಬರುತ್ತಿದ್ದ. ಗಂಗೆಯ ಒಂದೆರಡು ಹನಿಗಳನ್ನು ತರಚಿದ ಭಾಗದ ಮೇಲೆ ಸಿಂಪಡಿಸುತ್ತಿದ್ದ.

sಮೂರನೆಯ ಬ್ರಾಹ್ಮಣನು ಬಂದು, ತನ್ನಲ್ಲಿದ್ದ ಕಬ್ಬಿಣದ ಸೂಜಿಯೊಂದನ್ನು ತೆಗೆದುಕೊಳ್ಳುತ್ತಿದ್ದ. ಅದನ್ನು ರಸಿಕೆಯಲ್ಲಿ, ಅಂದರೆ ಹಿಂದಿನ ವರ್ಷ ಸಂಗ್ರಹಿಸಿಟ್ಟಿದ್ದ ಕೀವಿನಲ್ಲಿ ಅದ್ದುತ್ತಿದ್ದ. ಆದರಿಂದ ಗಂಗೆ ಹನಿಗಳಿದ್ದ ಸ್ಥಳದ ಚರ್ಮದ ಮೇಲೆ ಸೂಜಿಯಿಂದ ಹಲವು ಸಲ ಚುಚ್ಚುತ್ತಿದ್ದ. ಹಾಗೆ ಚುಚ್ಚಿದಾಗ ಸಿಡುಬಿನ ರಸಿಕೆಯು ವ್ಯಕ್ತಿಯ ಚರ್ಮದ ಒಳಗೆ ಹೋಗುತ್ತಿತ್ತು. ಅತ್ಯಲ್ಪ ಪ್ರಮಾಣದ ರಕ್ತ ಕಾಣಿಸಿಕೊಳ್ಳುತ್ತಿತ್ತು. ನಂತರ ಚೆನ್ನಾಗಿ ಅರೆದ ಅನ್ನದ ‘ಪೌಲ್ಟೀಸ್’ ಅನ್ನು ಗಾಯದ ಮೇಲೆ
ಕಟ್ಟುತ್ತಿದ್ದ.

sಸೂಜಿಯಿಂದ ಚುಚ್ಚಿದ ಸ್ಥಳದಲ್ಲಿ ೨-೩ ದಿನಗಳಲ್ಲಿ ಕೀವುಗುಳ್ಳೆಗಳು ಏಳುತ್ತಿದ್ದವು, ಜ್ವರವು ಬರುತ್ತಿತ್ತು. ಇವೆರಡು ಪ್ರಕ್ರಿಯೆಗಳು ಕಂಡುಬಂದರೆ ಮಾತ್ರ ಲಸಿಕೆಯನ್ನು ಸರಿಯಾದ ಕ್ರಮದಲ್ಲಿ ನೀಡಲಾಗಿದೆ ಎಂಬ ತೀರ್ಮಾನಕ್ಕೆ ಬರುತ್ತಿದ್ದರು.

ಈ ವಿಧಾನವು ‘ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ’ ಎನ್ನುತ್ತಾರೆ ದಾಖಲೆಯನ್ನು ಬರೆದ ಇಬ್ಬರು ಇಂಗ್ಲಿಷ್ ವೈದ್ಯರು. ಆದರೆ ಎಷ್ಟು ವರ್ಷಗಳಿಂದ ಎನ್ನುವುದರ ಬಗ್ಗೆ ಅವರು ದಾಖಲಿಸಿಲ್ಲ. ಬಂಗಾಳದಲ್ಲಿ ಯಶಸ್ವಿಯಾಗಿ ಜಾರಿಗೆ ಬಂದ ಸಿಡುಬು ಲಸಿಕೆಯ ಈ ವಿಧಾನವು, ಭಾರತದ ಉಳಿದ ಭಾಗಗಳಲ್ಲಿ ಏಕೆ ವ್ಯಾಪಿಸಲಿಲ್ಲ ಎನ್ನುವುದಕ್ಕೆ ಯಾವುದೇ ತರ್ಕಬದ್ದ ವಿವರಣೆಯು ದೊರೆಯುತ್ತಿಲ್ಲ.

ಅರೇಬಿಯನ್ನರು: ಅರೇಬಿಯ ದೇಶದವರು ಮೇಲೆ ವಿವರಿಸಿದ ಭಾರತೀಯ ಹಾಗೂ ಚೀನಿ ತತ್ವಗಳೆರಡನ್ನೂ ಬಳಸಿಕೊಂಡು ತಮ್ಮದೇ ಆದ ವಿಧಾನವೊಂದನ್ನು ರೂಪಿಸಿಕೊಂಡರು. ಆರೋಗ್ಯವಂತರ ತೋಳಿನ ಮೇಲೆ ಕೊಯ್ದು ಚಿಕ್ಕ ಗಾಯವನ್ನು ಮಾಡುತ್ತಿದ್ದರು. ಆದರ ಮೇಲೆ ಹಿಂದಿನ ವರ್ಷ ಸಿಡುಬು ರೋಗಿಯ ಗುಳ್ಳೆಗಳು ಒಣಗಿದ ಮೇಲೆ ಉದುರುವ ಅಪ್ಪಳಿಕೆಯನ್ನು ಸಂಗ್ರಹಿಸಿ ಅದನ್ನ ಚೆನ್ನಾಗಿ ಅರೆದು, ಆ ಪುಡಿಯನ್ನು ಗಾಯದ ಮೇಲೆ ಸವರುತ್ತಿದ್ದರು.

ಎರಡು ಮೂರು ದಿನಗಳ ನಂತರ ಕೀವುಗುಳ್ಳೆಗಳು ಏಳುತ್ತಿದ್ದವು. ಜ್ವರವು ಬರುತ್ತಿತ್ತು. ನಂತರ ಅದು ತನಗೆ ತಾನೇ ಕಡಿಮೆಯಾಗುತ್ತಿತ್ತು. ಭಾರತೀಯರು, ಚೀನಿಯರು, ಅರೇಬಿಯನ್ನರು ನೀಡುತ್ತಿದ್ದ ಈ ವಿಧಾನಗಳನ್ನು ಆನುಭವ ಜನ್ಯ ವಿಧಾನಗಳು (ಎಂಪೆರಿಕಲ್ ಮೆಥಡ್ ) ಎಂದು ಕರೆಯಬಹುದು.

ಎಡ್ವರ್ಡ್ ಜೆನರ್: ಎಡ್ವರ್ಡ್ ಜೆನರ್ (೧೭೪೯-೧೮೨೩) ಇಂಗ್ಲಂಡಿನ ಗ್ಲೌಸೆಸ್ಟರ್ಷೈರ್, ಬರ್ಕಲೆಯಲ್ಲಿ ಹುಟ್ಟಿದ. ೧೭೫೬. ಜೆನರನಿಗೆ ೮ ವರ್ಷ ವಯಸ್ಸು. ಆಗ ಆತನಿಗೆ ವೇರಿಯೋಲೀಕರಣವನ್ನು (ವೇರಿಯೋಲ ವೈರಸ್ಸನ್ನು ಪ್ರಜ್ಞಾಪೂರ್ವಕವಾಗಿ ದೇಹದಲ್ಲಿ ಸೇರಿಸುವ ಅನುಭವಜನ್ಯ ವಿಧಾನ) ಮಾಡಿಸಿದರು. ವೇರಿಯೋಲೀಕರಣವನ್ನು ಮಾಡುವ ಮೊದಲು ಮೈಯಿಂದ ‘ರಕ್ತವಿಮೋಚನ’ವನ್ನು ಹರಿಸುತ್ತಿದ್ದರು. ಆಹಾರವನ್ನು ಹೆಚ್ಚು ಕೊಡುತ್ತಿರಲಿಲ್ಲ. ರಕ್ತವು ‘ಸಿಹಿ’ಯಾಗಲೆಂದು ವಿಶೇಷ ದ್ರವವನ್ನು ಕುಡಿಸುತ್ತಿದ್ದರು.

ಹಾಲ್‌ಬ್ರೋ ಎಂಬ ಔಷಧ ವ್ಯಾಪಾರಿಯು (ಅಪಾಥಿಕರಿ) ವೇರಿಯೋಲೀಕರಣವನ್ನು ಮಾಡಿದ. ಜೆನರನ ತೋಳಿನ ಮೇಲೆ ತನ್ನ ಚಾಕುವಿನಿಂದ ಹಲವು ಬಾರಿ ಗೀರಿದ. ಸಿಡುಬು ಹೊಪ್ಪಳಿಕೆಗಳನ್ನು (ಸ್ಕ್ಯಾಬ್ಸ್) ಆ ಗಾಯದ ಮೇಲಿರಿಸಿದ. ಅದರ ಮೇಲೆ ಬಿಗಿಯಾಗಿ ಪಟ್ಟಿಯನ್ನು ಕಟ್ಟಿದ. ಒಂದು ವಾರದ ಒಳಗೆ ರೋಗಲಕ್ಷಣ ಗಳು ಕಾಣಿಸಿಕೊಳ್ಳುತ್ತಿದ್ದವು. ನಂತರ ೩-೪ ದಿನಗಳಲ್ಲಿ ಕಡಿಮೆಯಾಗುತ್ತಿದ್ದವು. ಕಟ್ಟುಪವಾಸದಿಂದ ಕೃಶರಾಗಿದ್ದ ಮಕ್ಕಳು ಚೇತರಿಸಿಕೊಳ್ಳಲು ಸುಮಾರು ಒಂದು ತಿಂಗಳನ್ನು ತೆಗೆದುಕೊಳ್ಳುತ್ತಿದ್ದರು.

ಜೆನರನಿಗೆ ೧೩ ವರ್ಷ. ಡೇನಿಯಲ್ ಲಡ್ಲೋ ಎಂಬ ಶಸ್ತ್ರವೈದ್ಯ ಮತ್ತು ಔಷಧ ವ್ಯಾಪಾರಿಯ ಬಳಿ ವೈದ್ಯಕೀಯವನ್ನು ಕಲಿಯಲು ಸೇರಿಕೊಂಡ (೧೭೬೨- ೧೭೭೦). ಲಡ್ಲೋ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿದ್ದ. ಹಾಗಾಗಿ ಜೆನರ್ ತನ್ನ ವೈದ್ಯಕೀಯ ಬದುಕಿನಲ್ಲಿ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ. ಲಡ್ಲೋ ಹತ್ತಿರ ಕಲಿತ ಮೇಲೆ ಲಂಡನ್ನಿಗೆ ಬಂದ. ಜಾನ್ ಹಂಟರ್ (೧೭೨೮-೧೭೯೩) ಎಂಬ ಖ್ಯಾತ ಶಸ್ತ್ರವೈದ್ಯನ ಬಳಿ ಶಿಷ್ಯತ್ವವನ್ನು ಮೂರು ವರ್ಷಗಳ ಕಾಲ (೧೭೭೦-೧೭೭೩) ನಡೆಸಿದ.

ನಂತರ ತನ್ನ ಹುಟ್ಟೂರು ಬರ್ಕಲೆಗೆ ಹಿಂದಿರುಗಿ ಅಲ್ಲಿ ಸ್ವತಂತ್ರವಾಗಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ. ಈ ಅವಧಿಯಲ್ಲಿ ‘ದನದ ಸಿಡುಬು ಬಂದವರಿಗೆ ಮಾನವ ಸಿಡುಬು ಬರುವುದಿಲ್ಲ’ ಎನ್ನುವ ಪಾರಂಪರಿಕ ನಂಬಿಕೆಯನ್ನು ಒರೆಗೆ ಹಚ್ಚಲು ನಿರ್ಧರಿಸಿದ. ಹಾಗಾಗಿ ಗ್ಲೌಸೆಸ್ಟರ್ಷೈರ್ ಪ್ರಾಂತದಲ್ಲಿ ದನದ ಸಿಡುಬಿಗಾಗಿ ಹುಡುಕಾಟವನ್ನು ಆರಂಭಿಸಿದ. ಆಗ ಅವನು ದನದ ಸಿಡುಬಿನಲ್ಲಿ ಹಲವು ನಮೂನೆಗಳಿವೆ (ಅಂದರೆ ದನದ ಸಿಡುಬಿಗೆ ವಿಭಿನ್ನ ವೈರಸ್ಸುಗಳು ಕಾರಣವಾಗುತ್ತವೆ) ಎನ್ನುವುದನ್ನು ಅರಿತುಕೊಂಡ. ಹಾಗಾಗಿ ನಿರ್ದಿಷ್ಟ ದನದ ಸಿಡುಬು ಬಂದವರಿಗೆ ಮಾತ್ರ ಮನುಷ್ಯರ ಸಿಡುಬು ಅಂಟುವುದಿಲ್ಲ; ಉಳಿದ ದನದ ಸಿಡುಬು ಬಂದವರಿಗೆ ಮನುಷ್ಯರ ಸಿಡುಬು ಅಂಟಿಕೊಳ್ಳಬಹುದು ಎನ್ನುವುದನ್ನು ಅನುಭವಜನ್ಯವಾಗಿ ಕಲಿತುಕೊಂಡ.

ಜತೆಗೆ ಆಯ್ದ ದನದ ಸಿಡುಬು ತನ್ನ ತೀವ್ರತೆಯ ಪರಾಕಾಷ್ಠೆಯಲ್ಲಿದ್ದಾಗ, ಅದರ ಸಿಡುಬುಗುಳ್ಳೆಯ ಕೀವನ್ನು ಸಂಗ್ರಹಿಸಿ ಮನುಷ್ಯರ ಮೇಲೆ ಪ್ರಯೋಗಿಸಿದರೆ ಮಾತ್ರ, ರೋಗರಕ್ಷಣೆಯು ಪೂರ್ಣ ಪ್ರಮಾಣದಲ್ಲಿ ದೊರೆಯುತ್ತದೆ ಎಂದ. ಮೇ ೧೪, ೧೭೯೬. ಸಾರಾ ನೆಲ್ಮಿಸ್ ಎಂಬ ಗೌಳಿಗಿತ್ತಿಗೆ ದನದ ಸಿಡುಬು ಬಂದಿತ್ತು. ಆಕೆಯ ಸಿಡುಬುಗುಳ್ಳೆಯಲ್ಲಿದ್ದ ಕೀವನ್ನು ಸಂಗ್ರಹಿಸಿದ. ಜೇಮ್ಸ್ ಫಿಪ್ಸ್ ಎಂಬ ೮ ವರ್ಷದ ಹುಡುಗನಿಗೆ ಯಾವುದೇ ರೀತಿಯ ಸೋಂಕು ಅಂಟಿರಲಿಲ್ಲ. ಜೇಮ್ಸ್‌ನ ತೋಳಿನ ಮೇಲೆ ಗೀರುಗಾಯಗಳನ್ನು ಮಾಡಿದ. ಅದರ ಮೇಲೆ ಸಿಡುಬು ಲಸಿಕೆಯನ್ನು ಸವರಿದ. ಜೇಮ್ಸ್ ನಿರೀಕ್ಷೆಯಂತೆ ಅಲ್ಪ ಪ್ರಮಾಣದ ದನದ ಸಿಡುಬಿನ
ಲಕ್ಷಣಗಳಿಗೆ ತುತ್ತಾದ. ಆದರೆ ತ್ವರಿತವಾಗಿ ಗುಣಮುಖನಾದ.

ಎರಡು ತಿಂಗಳು ಕಳೆದವು. ಜೇಮ್ಸ್‌ನನ್ನು ಕರೆಯಿಸಿದ. ತೋಳಿನ ಮೇಲೆ ಗೀರುಗಾಯಗಳನ್ನು ಮಾಡಿದ. ಅದರ ಮೇಲೆ ಸಿಡುಬು ರೋಗಿಯ ಗುಳ್ಳೆಯಿಂದ ಸಂಗ್ರಹಿಸಿದ್ದ ಕೀವನ್ನು ಸವರಿದ. ಆದರೆ ಜೇಮ್ಸ್ ಸಂಪೂರ್ಣವಾಗಿ ಸ್ವಸ್ಥನಾಗಿದ್ದ. ಯಾವುದೇ ರೀತಿಯ ಸಿಡುಬು ಲಕ್ಷಣಗಳು ಕಂಡುಬರಲಿಲ್ಲ. ಹೀಗೆ ಜೇಮ್ಸ್ ಫಿ-, ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಡುಬಿನಿಂದ ಪಾರಾದವನೆನಿಸಿಕೊಂಡ. ಜೆನರ್ ಈ ಪ್ರಯೋಗವನ್ನು ಮತ್ತೆ ಮತ್ತೆ ಪುನರಾವರ್ತಿಸಿದ. ಸುರಕ್ಷಿತ ವೆಂದು ಮನಗಂಡ. ತನ್ನ ಮಗ ರಾಬರ್ಟನ ಮೇಲೂ ಪ್ರಯೋಗಿಸಿದ.

ಕೊನೆಗೆ ‘ವೇರಿಯೋಲ ಲಸಿಕೆ: ಕಾರಣಗಳು ಮತ್ತು ಪರಿಣಾಮಗಳ ಮೇಲೆ ಶೋಧನೆ’ (ಅ ಐಟ್ಠಿಜ್ಟಿqs ಜ್ಞಿಠಿಟ ಠಿeಛಿ ಇZoಛಿo Zb ಉಛ್ಚಿಠಿo ಟ್ಛ ಠಿeಛಿ
ZಜಿಟZ Zಜ್ಞಿಛಿ) ಎಂಬ ಪುಸ್ತಕವನ್ನು ಬರೆದ. ಮೇ ೮, ೧೯೮೦ರಂದು ‘ವಿಶ್ವವು ಸಿಡುಬು ಮುಕ್ತವಾಯಿತು’ ಎಂದು ವಿಶ್ವ ಸಂಸ್ಥೆಯು ಘೋಷಿಸಿತು. ಹೀಗೆ ಮೊದಲ ಬಾರಿಗೆ ಲಸಿಕೆಯ ನೆರವಿನಿಂದ ಒಂದು ರೋಗವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸಾಧ್ಯವಾಯಿತು.

Leave a Reply

Your email address will not be published. Required fields are marked *

error: Content is protected !!