Sunday, 26th May 2024

ಸೆಕ್ಯುಲರ‍್ ಎಂಬ ವಿದೇಶಿ ಪದ

ವೀಕೆಂಡ್ ವಿತ್ ಮೋಹನ್

camohanbn@gmail.com

‘ಸೆಕ್ಯುಲರ್’ ಪದವು ಭಾರತೀಯ ಮೂಲದ್ದಲ್ಲ. ಈ ಪರಿಕಲ್ಪನೆಗೆ ಮಾರ್ಟಿನ್ ಲೂಥರ್ ಅವರ ‘ಎರಡು ಸಾಮ್ರಾಜ್ಯಗಳ ಸಿದ್ಧಾಂತ’ವೇ ಮೂಲ. ಈ ಪದವನ್ನು ಕ್ರೈಸ್ತ ಧರ್ಮದಲ್ಲಿನ ಸಾಮಾಜಿಕ ಅಸಮಾನತೆಯಲ್ಲಿ ಕೇಳಿಬರುವ ಜಾತಿಯಾದ ಪ್ರೊಟೆಸ್ಟಂಟ್‌ಗಳ ಸುಧಾರಣೆಯ ವೇಳೆ ಬಳಸಲಾಗಿತ್ತು.

ಅಖಂಡ ಭಾರತವು ೧೯೪೭ರಲ್ಲಿ ಧರ್ಮದ ಆಧಾರದ ಮೇಲೆ ವಿಭಜನೆಯಾಗಿತ್ತು. ಮುಸಲ್ಮಾನರಿಗಾಗಿ ಪ್ರತ್ಯೇಕ ದೇಶದ ಬೇಡಿಕೆ ಇಟ್ಟಿದ್ದ ಮೊಹಮ್ಮದ್ ಅಲಿ ಜಿನ್ನಾ ಕನಸು ನನಸಾಗಿ ಕಾಂಗ್ರೆಸ್ಸಿನ ಬೆಂಬಲದಿಂದ ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನ ಹುಟ್ಟಿಕೊಂಡಿತು. ಇಂದಿಗೂ ಪಾಕಿಸ್ತಾನವನ್ನು ‘ಇಸ್ಲಾಮಿಕ್ ರಿಪಬ್ಲಿಕ್ ಆಫ್
ಪಾಕಿಸ್ತಾನ’ ಎಂದೇ ಕರೆಯಲಾಗುತ್ತದೆ. ಪಾಕಿಸ್ತಾನದ ಸಂವಿಧಾನವು ಷರಿಯಾ ಕಾನೂನಿನನ್ವಯವೇ ರಚಿತವಾಗಿದೆ.

ಆದರೆ ದುರಂತವೆಂದರೆ, ‘ಭಾರತ ಹಿಂದೂಗಳ ದೇಶ’ ಎಂಬುದನ್ನು ಆಗಾಗ ಗಟ್ಟಿಯಾಗಿ ಹೇಳುವಂಥ ಪರಿಸ್ಥಿತಿ ಎದುರಾಗಿದೆ. ಇಂದಿರಾ ಗಾಂಧಿಯವರು ೧೯೭೬ರಲ್ಲಿ ಸಂವಿಧಾನದ ೪೨ನೇ ತಿದ್ದುಪಡಿಯಲ್ಲಿ ‘ಸೆಕ್ಯುಲರ್’ ಎಂಬ ಪದವನ್ನು ಸೇರಿಸಿದ ಕಾರಣ ಇಂಥ ಪರಿಸ್ಥಿತಿ ಎದುರಾಗಿದೆ. ಸಂವಿಧಾನ ರಚನೆಯ ವೇಳೆ ಸ್ವತಃ ನೆಹರುರಿಗೆ ಸೆಕ್ಯುಲರ್ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲು ಸಹಮತ ವಿರಲಿಲ್ಲ. ಸಂವಿಧಾನ ರಚನಾ ಸಮಿತಿಯ ಕೆಲ ಸದಸ್ಯರು ಜಾತ್ಯತೀತ ಪದವನ್ನು ಸೇರಿಸಬೇಕೆಂದು ಒತ್ತಾಯಿಸಿದಾಗ, ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಸಾವಿರಾರು ವರ್ಷಗಳ ಭಾರತೀಯ ಪರಂಪರೆಯ ಇತಿಹಾಸವನ್ನು ಮರೆಮಾಚುವ ಉದ್ದೇಶ ಒತ್ತಾಯಿಸಿದವರ ಮಾತಿನಲ್ಲಿ ಸ್ಪಷ್ಟವಾಗಿತ್ತು.

ಲೋಕನಾಥ್ ಮಿಶ್ರ ಅವರು ಡಿಸೆಂಬರ್ ೬, ೧೯೪೮ ರಲ್ಲಿ ‘ಜಾತ್ಯತೀತ ದೇಶ’ ಎಂಬ ಪದದ ಮೂಲಕ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಮರೆಮಾಚುವ ಯತ್ನ ನಡೆದಿದೆ ಎಂದಿದ್ದರು. ನವೆಂಬರ್ ೧೫, ೧೯೪೮ರಂದು ಕೆ.ಟಿ.ಷಾ ಸಂವಿಧಾನದ ೧ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಮುಂದಾದರು. ಅವರ ತಿದ್ದುಪ ಡಿಯು ಯೂನಿಯನ್ ಆಫ್ ಸ್ಟೇಟ್ಸ್‌ಗೆ ಸೆಕ್ಯುಲರ್, ಫೆಡರಲ್, ಸಮಾಜವಾದಿ ಪದಗಳನ್ನು ಸೇರಿಸಲು ಪ್ರಸ್ತಾಪಿಸಿತ್ತು. ಬಾಬಾಸಾಹೇಬರು ಅವರ ತಿದ್ದುಪಡಿಯನ್ನು ವಿರೋಧಿಸಿದರು, ಏಕೆಂದರೆ ದೇಶದ ಜನರಿಗೆ ತಮ್ಮ ಆದ್ಯತೆಯ ಆರ್ಥಿಕ ಅಥವಾ ಸಾಮಾಜಿಕ ಚೌಕಟ್ಟನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಅವರು ನಂಬಿದ್ದರು. ಮತ್ತೊಮ್ಮೆ ನವೆಂಬರ್ ೨೫, ೧೯೪೮ರಂದು, ಷಾ ಅವರು ಸಂವಿಧಾನದ ಕರಡು ವಿಽ ೪೦ರಲ್ಲಿ (ಪ್ರಸ್ತುತ ಆರ್ಟಿಕಲ್ ೫೧) ‘ಸೆಕ್ಯುಲರ್’ ಪದ ಸೇರಿಸಲು ಪ್ರಸ್ತಾಪಿಸಿ ದರು, ಆದರೆ ಅದನ್ನು ಮತ್ತೊಮ್ಮೆ ತಿರಸ್ಕರಿಸಲಾಯಿತು.

ಡಿಸೆಂಬರ್ ೩, ೧೯೪೮ರಂದು, ಸಂವಿಧಾನದ ಕರಡು ಆರ್ಟಿ ಕಲ್ ೧೮ (ಪ್ರಸ್ತುತ, ಆರ್ಟಿಕಲ್ ೨೪) ಮೂಲಕ ‘ಸೆಕ್ಯುಲರ್’ ಪದವನ್ನು ಸೇರಿಸಲು ೩ನೇ ಪ್ರಯತ್ನವನ್ನು ಮಾಡಲಾಯಿತು, ಅದನ್ನೂ ತಿರಸ್ಕರಿಸಲಾಯಿತು. ‘ಕೇಶವಾನಂದ ಭಾರತಿ’ ಪ್ರಕರಣವು ೧೯೭೩ರಲ್ಲೇ ಸಂವಿಧಾನದ ಮೂಲಭೂತ ರಚನೆಯ ಸಿದ್ಧಾಂತವನ್ನು ಪ್ರತಿಪಾದಿಸಿತ್ತು. ಈ ಸಿದ್ಧಾಂತದ ಪ್ರಕಾರ, ಸಂವಿಧಾನದ ತಿದ್ದುಪಡಿಯ ಮೂಲಕ ಸಂವಿಧಾನದ ಮೂಲರಚನೆ ಬದಲಾಗಬಾರದು. ಈ ಮಹತ್ವದ ತೀರ್ಪಿನಲ್ಲಿ ಸೆಕ್ಯುಲರ್ ಪದವನ್ನು ಸಂವಿಧಾನದ ಮೂಲರಚನೆಯಾಗಿ ಗುರುತಿಸಲಾಗಿದೆ.

ಇಂದಿರಾ ಗಾಂಧಿ ೧೯೭೬ರಲ್ಲಿ ತಂದ ಸಂವಿಧಾನದ ತಿದ್ದುಪಡಿಯ ಪೀಠಿಕೆಯಲ್ಲಿ ಸೆಕ್ಯುಲರ್ ಪದವನ್ನು ಸೇರಿಸುವ ೩ ವರ್ಷಗಳ ಮೊದಲೇ, ಭಾರತದ ಸಂವಿಧಾನವು ಜಾತ್ಯತೀತ ಸ್ವರೂಪವನ್ನು ಹೊಂದಿದೆ ಎಂದು ಗೌರವಾನ್ವಿತ ಉಚ್ಚ ನ್ಯಾಯಾಲಯ ಈ ತೀರ್ಪಿನಲ್ಲಿ ವ್ಯಾಖ್ಯಾನಿಸಿತ್ತೆಂಬುದು ಗಮನಿಸಬೇಕಾದ ಸಂಗತಿ. ಇದು ಇಂದಿರಾ ತಂದ ಭಾರತದ ಸಂವಿಧಾನದ ೪೨ನೇ ತಿದ್ದುಪಡಿಯ ಅರ್ಥಹೀನತೆಯನ್ನು ಮತ್ತಷ್ಟು ದೃಢಪಡಿಸುತ್ತದೆ.

ಭಾರತದ ಸಂವಿಧಾನದ ೪೨ನೇ ತಿದ್ದುಪಡಿಯು ಕೆಟ್ಟ ಆಲೋಚನೆಗಳಿಂದ ಕೂಡಿತ್ತು. ಇದನ್ನು ೧೯೭೬ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಜಾರಿ ಗೊಳಿಸಲಾಯಿತು. ಇಡೀ ದೇಶವೇ ತುರ್ತು ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ, ಕೇವಲ ದುರುದ್ದೇಶಪೂರಿತವಾಗಿ ತಿದ್ದುಪಡಿ ಮಾಡಲಾಯಿತು. ಸರ್ವಾಧಿಕಾರದ ಮೂಲಕ ಪರಿಚಯಿಸಲಾದ ಈ ತಿದ್ದುಪಡಿ ಭಾರತೀಯ ಸಂವಿಧಾನದ ಇತಿಹಾಸದಲ್ಲಿ ಮೊದಲ ಮತ್ತು ಕೊನೆಯ ಬಾರಿಗೆ ಪೀಠಿಕೆಯನ್ನು ತಿದ್ದುಪಡಿ ಮಾಡಿತ್ತು. ಈ ತಿದ್ದುಪಡಿಯು ಸಂವಿಧಾನದ ಪೀಠಿಕೆಗೆ ‘ಸೆಕ್ಯುಲರ್’ ಪದವನ್ನು ಸೇರಿಸಿತ್ತು.

ಸರ್ವಾಧಿಕಾರದ ಮೂಲಕ ಸಂವಿಧಾನ ದಲ್ಲಿ ಮಾಡಿದ ಇತರ ಭೀಕರ ಬದಲಾವಣೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂದಿರಾ ಈ ತಿದ್ದುಪಡಿ ಮಾಡಿದ್ದರು. ಇಂದಿರಾರು ಕುಟುಂಬ ಕಲ್ಯಾಣ ಯೋಜನೆ ಮೂಲಕ ಜನಸಂಖ್ಯಾ ನಿಯಂತ್ರಣ ನೀತಿಯ ಜಾರಿಗೆ ಮುಂದಾಗಿದ್ದರ ಪರಿಣಾಮ, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ಸಿನ ಮೇಲೆ ಅಸಮಾಧಾನ ಶುರುವಾಗಿತ್ತು. ತಾನು ಅಲ್ಪ ಸಂಖ್ಯಾತರ ಪರವಾಗಿದ್ದೇನೆಂದು ಹೇಳಿ ಅವರ ಮತ ಗಳಿಸುವ ರಾಜಕೀಯ ಉದ್ದೇಶವೂ ತಿದ್ದುಪಡಿಯ ಹಿಂದಿತ್ತು.

‘ಇಂಡಿಯ’ ಎಂಬ ಪದವು ವಿದೇಶಿ ಮೂಲವಾಗಿರುವಂತೆ, ‘ಸೆಕ್ಯುಲರ್’ ಎಂಬ ಪದವು ಭಾರತೀಯ ಮೂಲದ್ದಲ್ಲ. ನಿಖರವಾಗಿ ಹೇಳುವುದಾದರೆ, ಈ ಪರಿಕಲ್ಪನೆ ಯನ್ನು ಮಾರ್ಟಿನ್ ಲೂಥರ್ ಅವರ ೨ ಸಾಮ್ರಾಜ್ಯಗಳ ಸಿದ್ಧಾಂತ ದಿಂದ ಪಡೆಯಲಾಗಿದೆ. ಈ ಪದವನ್ನು ಕ್ರೈಸ್ತ ಧರ್ಮದಲ್ಲಿರುವ ಸಾಮಾಜಿಕ ಅಸಮಾನತೆಯಲ್ಲಿ ಕೇಳಿ ಬರುವ ಜಾತಿ ಯಾದ ಪ್ರೊಟೆಸ್ಟಂಟ್‌ಗಳ ಸುಧಾರಣೆಯ ಸಮಯದಲ್ಲಿ ಬಳಸಲಾಗಿತ್ತು. ಹಾಗಾಗಿ, ಸೆಕ್ಯುಲರಿಸಂನ ಪರಿಕಲ್ಪನೆ ಭಾರತಕ್ಕೆ  ಪರಕೀಯ ವಾದದ್ದು ಎಂಬುದು ಬಹಳ ಸ್ಪಷ್ಟ. ಸಂವಿಧಾನದ ಆರ್ಟಿಕಲ್ ೧(೧) ರಲ್ಲಿ ಹೇಳಿರುವಂತೆ, ಇಂಡಿಯಾ, ಅದು ಭಾರತ, ರಾಜ್ಯಗಳ ಒಕ್ಕೂಟವಾಗಿರುತ್ತದೆ.

ಸಂವಿಧಾನ ತಯಾರಕರು ಸಂವಿಧಾನದಿಂದ ಭಾರತ್ ಪದ ವನ್ನು ಹೊರಹಾಕಬಹುದಿತ್ತು. ಆದರೆ ಅವರು ಅದನ್ನು ಉಳಿಸಿಕೊಳ್ಳಲು ನಿರ್ಧರಿಸಿದರು. ಈ ಪದವನ್ನು ಮೊದಲ ಆರ್ಟಿಕಲ್‌ನಲ್ಲಿ ಇರಿಸುವ ಉದ್ದೇಶವು ‘ಭಾರತೀಯ ನಾಗರಿಕತೆಯ’ ಅಸ್ತಿತ್ವವನ್ನು ಗುರುತಿಸುವುದಾಗಿದೆ ಎಂಬ ವಿಷಯ ಇಲ್ಲಿ ಗಮನಾರ್ಹ. ಇದರರ್ಥ ಭಾರತ ಪರಿಕಲ್ಪನೆಯು ೧೯೪೭ರ ಆಗಸ್ಟ್ ೧೫ರಂದು ಅಸ್ತಿತ್ವಕ್ಕೆ ಬಂದದ್ದಲ್ಲ, ಸಹಸ್ರಮಾನಗಳಿಂದ ಭಾರತ ಅಸ್ತಿತ್ವದಲ್ಲಿದ್ದರ ಭವ್ಯವಾದ ನಿರೂಪಣೆ ಯಾಗಿದೆ.

ಸಂವಿಧಾನ ಸಮಿತಿಯ ಚರ್ಚೆಗಳ ಸಂದರ್ಭದಲ್ಲಿ ಧರ್ಮದ ಪರಿಕಲ್ಪನೆಯು ಭಾರತೀಯ ನಾಗರಿಕತೆಯೊಂದಿಗೆ ಹೆಚ್ಚು ಹೊಂದಿಕೆಯಾಗುತ್ತದೆ ಎಂದು ವಿವಿಧ ಸಂದರ್ಭಗಳಲ್ಲಿ ವಾದಿಸಲಾಗಿತ್ತು. ಆದ್ದರಿಂದ, ನಾಗರಿಕತೆಯ ಸಂಪೂರ್ಣ ನಿರೂಪಣೆಯನ್ನು ನಿರ್ಲಕ್ಷಿಸುವುದು ಮತ್ತು ಪೀಠಿಕೆಯಲ್ಲಿ ವಿದೇಶಿ ಪದವನ್ನು ಬಲವಂತವಾಗಿ ಸೇರಿಸುವುದು ತರ್ಕ ವಲ್ಲದ ವಾದವೆನ್ನಬಹುದು. ಈ ವಾದವನ್ನು ಬೆಂಬಲಿಸಲು ಇನ್ನೂ ಕೆಲವು ಉದಾಹರಣೆಗಳನ್ನು ನೀಡಬೇಕೆಂದರೆ,
ಭಾರತದ ಸರ್ವೋಚ್ಚ ನ್ಯಾಯಾಲಯದ ಧ್ಯೇಯವಾಕ್ಯ ‘ಯತೋ ಧರ್ಮಸ್ತತೋ ಜಯಃ’. ಇದರರ್ಥ- ಎಲ್ಲಿ ಧರ್ಮವಿದೆಯೋ ಅಲ್ಲಿ ವಿಜಯವಿದೆ. ಸಂವಿಧಾನದ
ಮೂಲ ಹಸ್ತಪ್ರತಿಯು ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಹೊಂದಿತ್ತು.

ಮೂಲಭೂತ ಹಕ್ಕುಗಳ ಅಧ್ಯಾಯವು ರಾಮ, ಸೀತೆ ಮತ್ತು ಲಕ್ಷ್ಮಣನ ಚಿತ್ರವನ್ನು ಹೊಂದಿತ್ತು. ‘ಡೈರೆಕ್ಟಿವ್ ಪ್ರಿನ್ಸಿಪಲ್ಸ್’ ಅಧ್ಯಾಯದಲ್ಲಿ ಮಹಾ ಭಾರತ ಯುದ್ಧದ ವೇಳೆ ಕೃಷ್ಣನು ಅರ್ಜುನನಿಗೆ ಉಪದೇಶಿಸುತ್ತಿರುವ ಚಿತ್ರವಿತ್ತು. ಭಾರತಕ್ಕೆ ಸೆಕ್ಯುಲರ್ ಕಲ್ಪನೆಯನ್ನು ರಫ್ತು ಮಾಡಿದ ದೇಶಗಳು ಅನುಸರಿಸುವ ಸೆಕ್ಯುಲರ್ ಕಲ್ಪನೆ ‘ಚರ್ಚ್ ಮತ್ತು ದೇಶದ ಪ್ರತ್ಯೇಕತೆ’ಯಿಂದ ಕೂಡಿರಬೇಕಿತ್ತು. ಇದರರ್ಥ ದೇಶವು ಎಲ್ಲಾ ಧಾರ್ಮಿಕ ಚಟುವಟಿಕೆಗಳಿಂದ ದೂರವಿರಬೇಕು. ಸಾಮಾನ್ಯವಾಗಿ ಯುರೋಪಿನ ದೇಶಗಳನ್ನು ಸೆಕ್ಯುಲರ್ ದೇಶಗಳ ಪ್ರಮುಖ ಉದಾಹರಣೆಗಳಾಗಿ ಉಲ್ಲೇಖಿಸಲಾಗುತ್ತದೆ.

ಸೆಕ್ಯುಲರಿಸಂ ಪರೀಕ್ಷೆಯಲ್ಲಿ ಈ ದೇಶಗಳು ಹೇಗೆ ನಡೆಯುತ್ತವೆ ಎಂಬುದರ ಕಡೆ ಗಮನ ಹರಿಸಿದರೆ, ಬ್ರಿಟಿಷ್ ದೊರೆ ‘ಇಂಗ್ಲೆಂಡ್ ರಾಣಿ’ ಆಂಗ್ಲಿಕನ್ ಚರ್ಚಿನ
ಮುಖ್ಯಸ್ಥರಾಗಿದ್ದಾರೆ, ಪ್ರಗತಿಪರ ದೇಶವೆಂದು ಹೆಸರು ವಾಸಿಯಾಗಿರುವ ಸ್ವೀಡನ್ ಸ್ಪಷ್ಟವಾಗಿ ಕ್ರೈಸ್ತಧರ್ಮದ ಮೇಲೆ ನಿಂತಿದೆ. ಅಲ್ಲಿನ ಪ್ರಮುಖರು ಎಲ್ಲಾ ಸಮಯದಲ್ಲೂ ಇವಾಂಜೆಲಿಕಲ್ ನಂಬಿಕೆಗೆ ಬದ್ಧರಾಗಿರಬೇಕು. ಜರ್ಮನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಎಂಬ ೨ ಸಂಸ್ಥೆಗಳನ್ನು ಗುರುತಿಸುತ್ತದೆ. ಈ ಚರ್ಚುಗಳಿಗೆ ಕೆಲವು ಸಾಮಾಜಿಕ ಸೇವೆಗಳನ್ನೂ ನಿಯೋಜಿಸ ಲಾಗಿದ್ದು, ಕೆಲವೊಂದು ಮೂಲಭೂತ ವಿಚಾರಗಳಲ್ಲಿ ಸರಕಾರದ ಪಾತ್ರವಿರುವುದಿಲ್ಲ.

ಉದಾಹರಣೆಗೆ ಜನನ-ಮರಣದ ದಾಖಲಾತಿಯ ನಿರ್ವಹಣೆ, ಮದುವೆಗಳು ಧಾರ್ಮಿಕ ಸಂಸ್ಥೆಗಳ ಮೇಲೆ ಅವಲಂಬಿತವಾಗಿವೆ. ‘ಸೆಕ್ಯುಲರಿಸಂ’ನ ತವರುಮನೆ ಎಂದೇ ಬಿಂಬಿತವಾಗಿರುವ ಯುರೋಪಿನ ದೇಶಗಳೇ ಜಾತ್ಯಾತೀತವಾಗಿಲ್ಲ. ಹಾಗಂತ ಜರ್ಮನಿ ಮತ್ತು ಸ್ವೀಡನ್ ಗಳನ್ನು ಅಲ್ಪಸಂಖ್ಯಾತ ವಿರೋಧಿ ಎನ್ನಲಾಗುವುದಿಲ್ಲ. ಸೆಕ್ಯುಲರ್ ಎಂದು ಹೇಳುವ ಸ್ವೀಡನ್ ಮತ್ತು ಜರ್ಮನಿ ಬಹಿರಂಗವಾಗಿ ಕ್ರೈಸ್ತದೇಶಗಳಾಗಿವೆ. ೧೯೭೬ರಲ್ಲಿ ಸೆಕ್ಯುಲರ್ ಪದವನ್ನು ಸಂವಿಧಾನದ ಪೀಠಿಕೆ ಯಲ್ಲಿ ಸೇರಿಸಿದ ನಂತರ, ಜಾತ್ಯತೀತತೆಯ ಹೆಸರಿನಲ್ಲಿ ವಿವಿಧ ರಾಜ್ಯ ಸರಕಾರಗಳು ಪ್ರಾರಂಭಿಸಿದ ಯೋಜನೆಗಳನ್ನು ಗಮನಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ತುಷ್ಟೀಕರಣದ ರಾಜಕೀಯ ಸ್ಪಷ್ಟವಾಗಿ ಗೋಚರಿಸುತ್ತದೆ.

ಇಂದಿರಾ ತಂದ ಸಂವಿಧಾನದ ೪೨ನೇ ತಿದ್ದುಪಡಿಯ ಜಾರಿಗೆ ಬಳಸಿದ ವಿಧಾನವು ಭಯಾನಕ ಮತ್ತು ಸರ್ವಾಧಿಕಾರಿ ಧೋರಣೆಯದಾಗಿತ್ತು. ತುರ್ತು
ಪರಿಸ್ಥಿತಿಯಲ್ಲಿ ಯಾರಾ ದರೂ ಸರಕಾರದ ವಿರುದ್ಧ ದನಿಯೆತ್ತಿದರೆ ಅಂಥವರನ್ನು ಜೈಲಿಗೆ ಹಾಕಲಾಗುತ್ತಿತ್ತು. ಆದ್ದರಿಂದ, ಆರ್ಟಿಕಲ್ ೧೯ (೧) (ಎ) ಅಡಿಯಲ್ಲಿ
ನಮೂದಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಗ್ರಹಿಸಿ ೪೨ನೇ ತಿದ್ದುಪಡಿಯನ್ನು ಅಂಗೀಕ ರಿಸಲಾಯಿತು. ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಮೂಲಕವೇ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಸೆಕ್ಯುಲರ್ ಪದವನ್ನು ಸೇರಿಸಲಾಗಿತ್ತು. ಇಂದಿರಾ ತುರ್ತು ಪರಿಸ್ಥಿತಿ ಹೇರಿದ್ದ ಕಾರಣ ಸಂವಿಧಾನದ ತಿದ್ದುಪಡಿಗಳ ಚರ್ಚೆಗಳು ಆಗಲೇ ಇಲ್ಲ.

ಸಾಮಾನ್ಯ ಜನರ ಬಾಯಿಗೆ ಬೀಗ ಹಾಕಿಸಿ ಚರ್ಚೆಯನ್ನೇ ಮಾಡದೆ ಸಂವಿಧಾನವನ್ನು ತಿದ್ದುಪಡಿ ಮಾಡಿ ಸೆಕ್ಯುಲರ್ ಪದವನ್ನು ಸೇರಿಸಲಾಯಿತು. ಸಂವಿಧಾನದ
೧೪ನೇ ವಿಧಿಯು ಭಾರತದೊಳಗೆ ಪ್ರತಿಯೊಬ್ಬರಿಗೂ ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆ. ಆರ್ಟಿಕಲ್ ೧೫(೧)ಪ್ರಕಾರ ದೇಶವು ಯಾವುದೇ ಪ್ರಜೆಯ ವಿರುದ್ಧ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಸಂವಿಧಾನದ ೨೭ನೇ ವಿಽಯು ನಿರ್ದಿಷ್ಟ ಧರ್ಮ ಅಥವಾ ಧಾರ್ಮಿಕ ಪಂಗಡದ ಪ್ರಚಾರ ಅಥವಾ ನಿರ್ವಹಣೆಗಾಗಿ ಬೇಕಿರುವ ಹಣವನ್ನು ತೆರಿಗೆ ಮೂಲಕ ಸಂಗ್ರಹಿಸಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸಬಾರದು ಎನ್ನುತ್ತದೆ. ಸಂವಿಧಾನದ ಈ ಎರಡೂ ವಿಽಗಳನ್ನು ಗಮನಿಸಿದರೆ ಭಾರತವು ಧಾರ್ಮಿಕ ಪಕ್ಷಪಾತದಿಂದ ಮುಕ್ತವಾಗಿರ ಬೇಕೆಂಬುದು ಸ್ಪಷ್ಟವಾಗುತ್ತದೆ.

ಈ ಹಕ್ಕುಗಳು ಎಲ್ಲಾ ಧರ್ಮ ಗಳ, ವಿಶೇಷವಾಗಿ ಅಲ್ಪಸಂಖ್ಯಾತ ಧರ್ಮಗಳ ಹಕ್ಕುಗಳ ರಕ್ಷಣೆಗೆ ಸಾಕಾಗುತ್ತದೆ. ಬಾಬಾಸಾಹೇಬರ ರಚಿತಾ ಮೂಲ ಸಂವಿಧಾನ ದಲ್ಲೇ ಎಲ್ಲರ ಹಕ್ಕುಗಳ ರಕ್ಷಣೆ ಇರುವಾಗ, ಇಂದಿರಾ ಮತ್ತೊಮ್ಮೆ ಪರಕೀಯರಿಂದ ಆಮದು ಮಾಡಿ ಕೊಂಡಂಥ ‘ಸೆಕ್ಯುಲರ್’ ಪದವನ್ನು ಸಂವಿಧಾನದ ಪೀಠಿಕೆಗೆ ಸೇರಿಸುವ ಹಿಂದಿನ ಉದ್ದೇಶ ಕೇವಲ ಅಲ್ಪಸಂಖ್ಯಾತರ ಓಲೈಕೆ ರಾಜಕೀಯ ವೆಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

Leave a Reply

Your email address will not be published. Required fields are marked *

error: Content is protected !!