Sunday, 12th May 2024

ಸಮಾಜ ‘ಸುಧಾ’ರಕರಿಗೊಂದು ಆತ್ಮೀಯ ಕಥಾನಕ!

ಸಂಗಮೇಶ ಆರ್. ನಿರಾಣಿ, 

 ಸುಧಾ ಮೂರ್ತಿ ಅವರ ಈ ಅಪರೂಪದ ಪುಸ್ತಕ ಸಾಮಾಜಿಕ ಸೇವೆಯಲ್ಲಿ ತೊಡಗಿರುವವರಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಅನೇಕ ಒಳನೋಟಗಳನ್ನು ತಿಳಿಸುತ್ತದೆ. ಕೆಲವು ಸೂಕ್ಷ್ಮ ವಾಸ್ತವ ಸಂಗತಿಗಳು ಗೊತ್ತಿಿರಬೇಕು.

ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆೆ ನಮ್ಮ ಮನೆಯಲ್ಲಿ ಚರ್ಚೆ ಜೋರಾಗಿ ನಡೆಯುತ್ತಿಿತ್ತು. ಒಮ್ಮೆೆಲೇ ಏನೋ ನೆನಪಾದ ಹಾಗೆ ನನ್ನ ಪತ್ನಿಿ ಡಾ.ದಾಕ್ಷಾಯಣಿ, ಇನ್ಫೋೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ ಅವರು ಬರೆದ *‘್ಟಛಿಛಿ ಟ್ಠ್ಞ ಖಠಿಜಿಠ್ಚಿಿಛಿ’ ಪುಸ್ತಕ ತಂದು ನನ್ನ ಕೈಗೆ ಕೊಟ್ಟರು. ಸುಧಾ ಮೂರ್ತಿ ಅವರು ತಮ್ಮ ಫೌಂಡೇಶನ್ ಮೂಲಕ ಮಾಡಿದ ಸಮಾಜ ಸೇವಾ ಕೆಲಸಗಳ ಅಪಾರ ಅನುಭವಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾಾರೆ.

ಉದ್ಯಮಿಗಳ ಸಾಮಾಜಿಕ ಹೊಣೆಗಾರಿಕೆ, ಸಮಾಜ ಸೇವೆ, ಸಾಮಾಜಿಕ ಕೆಲಸಗಳ ಬಗ್ಗೆೆ ಈ ಪುಸ್ತಕ ಬಹುಸುಂದರ ಸಂಗತಿಗಳನ್ನು ಹೇಳುತ್ತದೆ. ಎಲ್ಲ ಒತ್ತಡಗಳನ್ನು, ಆತಂಕಗಳನ್ನು ದೂರ ಸರಿಸಿ ಒಂದು ದಿನ ತಣ್ಣಗೆ ಕುಳಿತು ಈ ಪುಸ್ತಕ ಪೂರ್ಣ ಓದಿರಿ. ಅದು ನಿಮಗೆ ಹೊಸ ಚಿಂತನೆ ಹೊಸ ದೃಷ್ಟಿಿ ಕೊಡುತ್ತದೆ ಎಂದು ದಾಕ್ಷಾಯಣಿ ಹೇಳಿದಳು. ಆಕೆಯ ಮಾತು ಕೇಳಿದ ಮೇಲೆ ಪುಸ್ತಕ ಓದಬೇಕು ಎಂಬ ಕುತೂಹಲ ಮೂಡಿತು. ಮರುದಿನ ಎಲ್ಲಿಯೂ ಹೊರಗೆ ಹೋಗದೆ ಗಟ್ಟಿಿಯಾಗಿ ಕುಳಿತು ತುಂಬ ಸಂಭ್ರಮದಿಂದ ಈ ಪುಸ್ತಕ ಓದಿದೆ. ನಿಜಕ್ಕೂ ಒಂದು ದಿನ ಅರ್ಥಪೂರ್ಣವಾಗಿ ಕಳೆದ ಅನುಭವವಾಯಿತು.

ಇನ್ಫೋೋಸಿಸ್ ಫೌಂಡೇಶನ್ ಅಧ್ಯಕ್ಷರಾಗಿರುವ ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಿಷ್ ಲೇಖಕರಾಗಿ ದೊಡ್ಡ ಹೆಸರು ಮಾಡಿದ್ದಾಾರೆ. ‘ನಾನು ಉದ್ಯಮಿ ಎಂದು ಗುರುತಿಸಿಕೊಳ್ಳುವುದಕ್ಕಿಿಂತ ಲೇಖಕಿ ಎಂದು ಗುರುತಿಸಿಕೊಳ್ಳಲು ಇಷ್ಟ ಪಡುತ್ತೇನೆ’ ಈ ಮಾತು ಅವರಿಗೆ ಸಾಹಿತ್ಯದ ಬಗ್ಗೆೆ ಇರುವ ಪ್ರೀತಿಯನ್ನು ತೋರಿಸುತ್ತದೆ. ತಮ್ಮ ಪುಸ್ತಕಕ್ಕೆೆ ತುಂಬ ಅರ್ಥ ಪೂರ್ಣವಾದ ಹೆಸರು ನೀಡಿರುವ ‘ಥ್ರೀ ಥೌಸಂಡ್ ಸ್ಟಿಿಚ್ಚಸ್’ ಎಂದರೆ (ಮೂರು ಸಾವಿರ ಹೊಲಿಗೆಗಳು.) ಇದು 179 ಪುಟಗಳ ಒಟ್ಟು 11 ಸ್ವ-ಅನುಭವಗಳ ಸ್ವಾಾರಸ್ಯಕರ ಕಥನಗಳಿವೆ.

ದೇವದಾಸಿ ಪದ್ಧತಿ ಒಂದು ದೊಡ್ಡ ಸಾಮಾಜಿಕ ಪಿಡುಗು. ಮೂಢನಂಬಿಕೆ, ಬಡತನ, ಪಾಲಕರ ಅಜ್ಞಾಾನದಿಂದ ಈ ಅನಿಷ್ಟ ಪದ್ಧತಿ ಜೀವಂತವಾಗಿ ಉಳಿದಿದೆ. ಬೆಳಗಾವಿ ಜಿಲ್ಲೆೆಯ ಸವದತ್ತಿಿ ತಾಲೂಕಿನಲ್ಲಿ ದೇವದಾಸಿ ಪದ್ಧತಿ ಹೆಚ್ಚು ಪ್ರಮಾಣದಲ್ಲಿ ಆಚರಣೆಯಲ್ಲಿ ಇದೆ. ಈ ಭಾಗದ ದೇವದಾಸಿಯರನ್ನು ಗುರುತಿಸಿ ಅವರಿಗೆ ಉದ್ಯೋೋಗ ಕೊಟ್ಟು, ಅವರ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆೆ ಮಾಡಿ ಅವರಿಗೆ ಗೌರವದಿಂದ ಬಾಳುವಂತೆ ಪರಿವರ್ತನೆ ಮಾಡಬೇಕು ಎಂಬ ಅದಮ್ಯ ಉತ್ಸಾಾಹದಿಂದ ಅವರು ಸವದತ್ತಿಿಗೆ ಹೋಗುತ್ತಾಾರೆ. ಅಲ್ಲಿ ಸುಮಾರು 7-8 ದೇವದಾಸಿಯರನ್ನು ಭೇಟಿಮಾಡಿ, ಯಾವ ದೇವದಾಸಿಯೂ ಇವರ ಮಾತಿಗೆ ಕಿವಿಗೊಡುವುದಿಲ್ಲ. ಅವರೆಲ್ಲ ಸುಧಾ ಅವರನ್ನು ಅನುಮಾನದಿಂದ ನೋಡತೊಡಗುತ್ತಾಾರೆ. ಕೆಲವರು ಕೆಟ್ಟ ಮಾತುಗಳನ್ನು ಆಡುತ್ತಾಾರೆ. ಅವರು ಮತ್ತೆೆ ಎರಡು ದಿನ ಬಿಟ್ಟು ಅವರ ಭೇಟಿಗೆ ಹೋಗುತ್ತಾಾರೆ. ಈ ಬಾರಿ ಪರಿಸ್ಥಿಿತಿ ತೀರ ವಿಕೋಪಕ್ಕೆೆ ಹೋಗುತ್ತದೆ. ಒಬ್ಬ ದೇವದಾಸಿ ಆಕ್ರೋೋಶಗೊಂಡು ತಮ್ಮ ಚಪ್ಪಲಿಯನ್ನೇ ಸುಧಾ ಅವರತ್ತ ಎಸೆಯುತ್ತಾಾರೆ. ಅದೃಷ್ಟವಶಾತ್ ಅವರಿಗೆ ತಾಕುವುದಿಲ್ಲ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೇ ಜನ ಸೇವೆ ಮಾಡಬೇಕು ಎಂದು ಸ್ವಂತ ಖರ್ಚಿನಲ್ಲಿ ಬಂದ ತಮಗೆ ಈ ಪರಿಯ ಅವಮಾನವಾಗಿದ್ದರಿಂದ ಈ ಸೇವೆ ಏನೂ ಬೇಡ ಎಂದು ಮನೆಗೆ ಮರಳುತ್ತಾಾರೆ.

ಕೆಲವು ದಿನಗಳ ನಂತರ ಮತ್ತೊೊಮ್ಮೆೆ ಪ್ರಯತ್ನಿಿಸಲು ಸವದತ್ತಿಿಗೆ ಹೋಗುತ್ತಾಾರೆ. ಗುಂಪು-ಗುಂಪಾಗಿ ನಿಂತುಕೊಂಡು ತಮ್ಮ ತಮ್ಮಲ್ಲಿಯೇ ಟೊಮ್ಯಾಾಟೋ ಹಂಚಿಕೊಳ್ಳುತ್ತಿಿದ್ದ ದೇವದಾಸಿಯರನ್ನು ಸಮಾಧಾನದಿಂದ ಮಾತಿಗೆ ಎಳೆಯುತ್ತಾಾರೆ. ಭಯಾನಕ ಏಡ್‌ಸ್‌ ರೋಗದ ಬಗ್ಗೆೆ ಜಾಗೃತಿಯ ಮಾತುಗಳನ್ನು ಹೇಳುತ್ತಾಾರೆ. ಇವರ ಯಾವ ಮಾತನ್ನೂ ದೇವದಾಸಿಯರು ಕೇಳುವುದಿಲ್ಲ. ‘ನೀನು ಸರಕಾರದ ಏಜೆಂಟ್ ಆಗಿದ್ದೀಯಾ. ನಮ್ಮನ್ನು ಸುಧಾರಿಸುವ ನಾಟಕ ಮಾಡಿ ಹಣ ಗಳಿಸುವ ಚಾಲಕಿ ಹೆಂಗಸು ನೀನು ಎಂದು ಅಣಕದ ನುಡಿಗಳನ್ನು ಆಡಿ ಎಲ್ಲರೂ ಜೋರಾಗಿ ನಗತೊಡಗುತ್ತಾಾರೆ. ಒಬ್ಬಾಾಕೆ ಸಮೀಪ ಬಂದು ನಿನ್ನ ಹತ್ತಿಿರ ಪೆನ್ನು-ಕಾಗದ ಇದೆ. ನೀನು ಪತ್ರಿಿಕೆಯ ವರದಿಗಾರ್ತಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸುತ್ತಾಾರೆ. ಕೆಲವರು ಟೊಮೇಟೊ ಎಸೆಯತೊಡಗಿದ್ದರಿಂದ ಸುಧಾ ಮೂರ್ತಿ ಕಾರು ಹತ್ತಿಿ ಮನೆಗೆ ಮರಳುತ್ತಾಾರೆ.

3ನೇ ಬಾರಿ ಸುಧಾ ಮೂರ್ತಿ ತಮ್ಮ ತಂದೆಯೊಂದಿಗೆ ದೇವದಾಸಿಯರನ್ನು ಭೇಟಿಯಾಗಲು ಹೋಗುತ್ತಾಾರೆ. ಈ ಬಾರಿ ಅವರು ಭಾರತದ ನಾರಿಯ ಮಾದರಿಯಲ್ಲಿ ಸಾದಾಸೀರೆ, ಗಾಜಿನಬಳೆ, ದೊಡ್ಡಕುಂಕುಮ ಧರಿಸಿಕೊಂಡು ಹೋಗುತ್ತಾಾರೆ. ಈ ಭೇಟಿ ಸ್ವಲ್ಪ ಫಲ ಕೊಡುತ್ತದೆ. ಕ್ರಮೇಣ ಸುಧಾ ಅವರ ಬಗ್ಗೆೆ ದೇವದಾಸಿಯರಲ್ಲಿ ವಿಶ್ವಾಾಸ ಮೂಡುತ್ತದೆ. ಈಕೆ ನಿಜಕ್ಕೂ ನಮಗೆ ಸಹಾಯ ಮಾಡಬೇಕೆಂದು ಬಂದಿದ್ದಾಾರೆ ಎಂಬ ನಂಬಿಕೆ ಮೂಡತೊಡಗುತ್ತದೆ.

ದೇವದಾಸಿಯರ ಬದಲಾವಣೆ ಕೂಡ ಸುಗಮ ದಾರಿಯಲ್ಲ. ಮುಖ್ಯವಾಗಿ ಅವರಲ್ಲಿ ಆರ್ಥಿಕ ಶಕ್ತಿಿ ತುಂಬಬೇಕು. ಆತ್ಮಗೌರವದಿಂದ ಬದುಕುವ ಮಹತ್ವ ಕಲಿಸಿಕೊಡಬೇಕು. ಸುಧಾ ಅವರು ದೃಢತೆ, ತಾಳ್ಮೆೆಯಿಂದ ಮೂರು ಸಾವಿರ ದೇವದಾಸಿಯರನ್ನು ಗೌರವದಿಂದ ಬದುಕುವ ಸಮಾಜದ ಮುಖ್ಯವಾಹಿನಿಗೆ ಕರೆತರುತ್ತಾಾರೆ. ಅವರ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆೆ ಮಾಡಿಸುತ್ತಾಾರೆ. ಇದು ಮೌನವಾಗಿ ನಡೆದ ಮಹಾಕ್ರಾಾಂತಿ. ದೇವದಾಸಿಯರೆಲ್ಲ ಸುಧಾ ಅವರನ್ನು ಪ್ರೀತಿಯಿಂದ ‘ಅಕ್ಕ’ ಎಂದು ಕರೆಯತೊಡಗಿದರು.

ಈ ರೀತಿ ಸಮಾಜದ ಮುಖ್ಯವಾಹಿನಿಗೆ ಬಂದ ಮೂರು ಸಾವಿರ ದೇವದಾಸಿಯರು ತಾವೇ ಒಂದು ಕೌದಿ ಹೊಲೆದು ಅದನ್ನು ಸುಧಾ ಅವರಿಗೆ ಅರ್ಪಿಸಿ ಸನ್ಮಾಾನಿಸುತ್ತಾಾರೆ. ಇದು ತಮ್ಮ ಬದುಕಿನಲ್ಲಿ ಬಂದ ಬಹುದೊಡ್ಡ ಸನ್ಮಾಾನವೆಂದು ಸುಧಾ ಅವರು ಈ ಕೃತಿಯಲ್ಲಿ ಹೆಮ್ಮೆೆಯಿಂದ ದಾಖಲಿಸಿದ್ದಾಾರೆ. ‘ಕ್ಯಾಾಟಲ್ ಕ್ಲಾಾಸ್’ ಎಂಬುದು ಈ ಕೃತಿಯ ಮತ್ತೊೊಂದು ಕಥೆ. ಸುಧಾ ತುಂಬ ಸರಳ ಉಡುಪು ಧರಿಸುತ್ತಾಾರೆ. ಅವರ ಮೈ ಮೇಲೆ ಚಿನ್ನಾಾಭರಣಗಳು ಇರುವುದಿಲ್ಲ. ವಿದೇಶದಿಂದ ಭಾರತಕ್ಕೆೆ ಬರುವ ವಿಮಾನ ಹತ್ತಲು ವಿಮಾನ ನಿಲ್ದಾಾಣದ ಎ ಕ್ಲಾಾಸ್ ಗಣ್ಯರ ಸಾಲಿನಲ್ಲಿ ನಿಂತಿರುತ್ತಾಾರೆ. ಸುಧಾ ಅವರ ಸಿಂಪಲ್ ಉಡುಪು ನೋಡಿ ಇವರು ಸಾಮಾನ್ಯ ಮಹಿಳೆ ಎಂದು ಭಾವಿಸಿ ‘ಮೇಡಂ, ನೀವು ಗಣ್ಯರ ಸಾಲಿನಲ್ಲಿ ನಿಂತುಕೊಳ್ಳಬೇಡಿ. ಸಾಮಾನ್ಯ ಪ್ರಯಾಣಿಕರ ಸಾಲು ಅಲ್ಲಿದೆ-ಹೋಗಿ ನಿಂತುಕೊಳ್ಳಿಿ’ ಎಂದು ಕೂಗಿ ಹೇಳುತ್ತಾಾರೆ. ಸುಧಾ ಅವರು ಈ ಮಾತನ್ನು ನಿರ್ಲಕ್ಷಿಸುತ್ತಾಾರೆ. ಅವರ ಬಳಿ ಗಣ್ಯರ ಟಿಕೇಟ್ ಇರುತ್ತದೆ. ವಿಮಾನ ಹತ್ತಿಿ ಬೆಂಗಳೂರಿಗೆ ಬರುತ್ತಾಾರೆ. ಸುಧಾ ಅವರು ಮರುದಿನ ತಮ್ಮ ಕಚೇರಿಗೆ ಬರುತ್ತಾಾರೆ. ವಿಚಿತ್ರ ಸಂಗತಿ ಎಂದರೆ ಹಿಂದಿನ ದಿನ ವಿಮಾನ ನಿಲ್ದಾಾಣದಲ್ಲಿ ಮೇಡಂ ಅಲ್ಲಿ ಹೋಗಿ ನಿಂತುಕೊಳ್ಳಿಿ ಎಂದು ಹೇಳಿದವರೆ ಇನ್ಫೋೋಸಿಸ್ ಫೌಂಡೇಶನ್‌ನಿಂದ ಸಹಾಯ ಕೇಳಲು ಬಂದಿರುತ್ತಾಾರೆ. ಆಗ ಸುಧಾ ಅಧ್ಯಕ್ಷ ಸ್ಥಾಾನದಲ್ಲಿ ಕುಳಿತಿರುವುದನ್ನು ನೋಡಿ ಅವರಿಗೆ ನಾಚಿಕೆ ಆಗುತ್ತದೆ. ತಲೆ ತಗ್ಗಿಿಸಿ ನಿಂತುಕೊಳ್ಳುತ್ತಾಾರೆ.

‘ಮೂರು ಬೊಗಸೆ ನೀರು’ ಈ ಕೃತಿಯ ಇನ್ನೊೊಂದು ಕಥನವಾಗಿದೆ. ಸುಧಾ ಅವರು ತಾವು ಕಾಶಿಯಾತ್ರೆೆ ಮಾಡಿ ವಿಶ್ವನಾಥ ದೇವರ ದರ್ಶನ ಮಾಡಿದ ಸೊಗಸಾದ ಸಂಗತಿಯನ್ನು ದಾಖಲಿಸಿದ್ದಾಾರೆ. ಅಲ್ಲಿ ಹರಿಯುವ ಗಂಗಾ ನದಿ ಕಲುಷಿತಗೊಂಡಿರುವ ಸಂಗತಿಯನ್ನು ತುಂಬ ನೋವಿನಿಂದ ಹೇಳಿದ್ದಾಾರೆ. ಕಾಶಿ ವಿಶ್ವನಾಥ ದರ್ಶನಕ್ಕೆೆ ಹೋದವರು ನದಿಯಲ್ಲಿ ಸ್ಥಾಾನ ಮಾಡುವಾಗ ಮೂರು ಬೊಗಸೆ ನೀರು ಗಂಗಾ ನದಿಗೆ ಬಿಡುವ ಸಂಪ್ರದಾಯವಿದೆ. ಹೀಗೆ ಗಂಗಾ ನದಿಯಲ್ಲಿ ನೀರು ಬಿಡುವಾಗ ಬೆಲೆ ಬಾಳುವ ಬಟ್ಟೆೆ, ಚಿನ್ನ ಧರಿಸುವುದಿಲ್ಲ ಎಂದು ವಿಶ್ವನಾಥ ದೇವರ ಹೆಸರಿನಲ್ಲಿ ಶಪಥ ಮಾಡುತ್ತಾಾರೆ. ಅಂದಿನಿಂದ ಅವರು ತುಂಬ ಸರಳ ಬದುಕು ನಡೆಸುತ್ತಿಿದ್ದಾಾರೆ. ‘ಹುಡುಗರನ್ನು ಎದುರಿಸುವುದು ಹೇಗೆ’ ಎಂಬುದು ವಿನೋದದ ಕಾಲೇಜು ದಿನಗಳ ಸ್ವ-ಅನುಭವದ ಬರಹವಾಗಿದೆ. ಸುಮಾರು 6 ದಶಕಗಳ ಹಿಂದೆ ಸುಧಾ ಮೂರ್ತಿ ಅವರು ಹುಬ್ಬಳ್ಳಿಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾಾರ್ಥಿಯಾಗಿದ್ದಾಾಗಿನ ಹಾಸ್ಯ ಸಂಗತಿಗಳನ್ನು ಈ ಕಥನದಲ್ಲಿ ಕಟ್ಟಿಿಕೊಟ್ಟಿಿದ್ದಾಾರೆ. ಹೆಣ್ಣು ಮಕ್ಕಳಿಗೆ ಎಂಜನಿಯರಿಂಗ್ ಓದುವುದಕ್ಕೆೆ ಆಗ ಅವಕಾಶ ಇರಲಿಲ್ಲ. ಹಠಕ್ಕೆೆ ಬಿದ್ದು ಸುಧಾ ಅವರು ಎಂಜನಿಯರಿಂಗ್ ಕಾಲೇಜಿನ ಪ್ರವೇಶ ಪಡೆಯುತ್ತಾಾರೆ. ಹುಬ್ಬಳ್ಳಿಿಯ ಬಿವಿಬಿ ಎಂಜನಿಯರಿಂಗ್ ಕಾಲೇಜಿನಲ್ಲಿ ಓದಿದ ಪ್ರಪ್ರಥಮ ಮಹಿಳೆಯಾಗಿದ್ದಾಾರೆ. ಬಸಪ್ಪ ವೀರಪ್ಪ ಭೂಮರೆಡ್ಡಿಿ (ಬಿವಿಬಿ) ಕಾಲೇಜ್ ನನ್ನ ಬದುಕು ರೂಪಿಸಿದ ಸಂಸ್ಥೆೆ ಎಂದು ಕೃತಜ್ಞತೆಯಿಂದ ಹೇಳುತ್ತಾಾರೆ. ಕಾಲೇಜಿನ ಕ್ಲಾಾಸ್ ರೂಮ್‌ನಲ್ಲಿ ಸುಧಾ ಅವರತ್ತ ಕೆಲವು ವಿದ್ಯಾಾರ್ಥಿಗಳು ಛೇಡಿಸುತ್ತಿಿದ್ದರು. ಹಾಸ್ಯದ ಮಾತುಗಳನ್ನಾಾಡುತ್ತಿಿದ್ದರು.

ನಾಲ್ಕು ವರ್ಷಗಳ ಅವಧಿಯ ಎಲ್ಲ ಪರೀಕ್ಷೆಗಳಲ್ಲಿ ಕರ್ನಾಟಕ ವಿಶ್ವವಿದ್ಯಾಾಲಯಕ್ಕೆೆ ಪ್ರಥಮ ರ್ಯಾಾಂಕ್ ಪಡೆದು ಪಾಸಾದರು. ಪರೀಕ್ಷೆಗಳಲ್ಲಿ ಇವರು ಮಾಡುವ ಸಾಧನೆಯನ್ನು ನೋಡಿ ವಿದ್ಯಾಾರ್ಥಿಗಳು ಕ್ರಮೇಣ ಚೇಷ್ಟೆೆಗಳನ್ನು ನಿಲ್ಲಿಸಿದರು. ಕೆಲವು ವಿದ್ಯಾಾರ್ಥಿಗಳು ಸ್ನೇಹ ಬೆಳೆಸಿ ಇವರಿಂದ ಪುಸ್ತಕ, ನೋಟ್‌ಸ್‌‌ಗಳನ್ನು ಪಡೆದುಕೊಳ್ಳತೊಡಗಿದರು. ಎಂಜನಿಯರಿಂಗ್ ಓದು ಕೇವಲ ವಿದ್ಯಾಾರ್ಥಿಗಳ ಸ್ವತ್ತಲ್ಲ, ವಿದ್ಯಾಾರ್ಥಿನಿಯರೂ ಸಹ ಈ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸುಧಾ ಅವರು ತೋರಿಸಿಕೊಟ್ಟಿಿದ್ದು ಒಂದು ಮಹತ್ವದ ಸಂಗತಿ. ‘ಮನೆಯೇ ಬೃಂದಾವನ ಇನ್ಫೋೋಸಿಸ್‌ನಲ್ಲಿ ಒಂದು ದಿನ’ ‘ಅಂಬಾಸಿಡರ್ ಬರಹಕ್ಕೆೆ ಸಿಗದ ಬದುಕು’ ಇವು ಈ ಕೃತಿಯ ಇತರ ಕಥೆಗಳಾಗಿವೆ. ಸುಧಾ ಮೂರ್ತಿಯವರು ಈ ಕೃತಿಯನ್ನು ಪ್ರಸಿದ್ಧ ಇಂಗ್ಲಿಿಷ್ ಪತ್ರಕರ್ತ ಟಿಜೆಎಸ್ ಜಾರ್ಜ್ ಅವರಿಗೆ ಅರ್ಪಿಸಿದ್ದಾಾರೆ. ಜಾರ್ಜ್ ಒಮ್ಮೆೆ ಸುಧಾ ಅವರನ್ನು ಭೇಟಿಯಾದಾಗ ಇಂಗ್ಲಿಿಷ್‌ನಲ್ಲಿ ಬರೆಯಲು ಸಲಹೆ ನೀಡಿದರು. ಸುಧಾ ಅವರು ಇಂಗ್ಲಿಿಷಿನಲ್ಲಿ ಬರೆದ ಲೇಖನಗಳನ್ನು ಜಾರ್ಜ್ ತಿದ್ದಿ ಪ್ರಕಟಿಸಿ ಪ್ರೋೋತ್ಸಾಾಹಿಸಿದರು. ಕನ್ನಡದಲ್ಲಿ ಮಾತ್ರ ಬರೆಯುತ್ತಿಿದ್ದ ಸುಧಾ ಅವರು ಜಾರ್ಜ್ ಪ್ರೋೋತ್ಸಾಾಹದಿಂದ ವಿಶ್ವ ಮಟ್ಟದ ಲೇಖಕಿಯಾಗಿ ಇಂದು ಗುರುತಿಸಲ್ಪಟ್ಟಿಿದ್ದಾಾರೆ. ಈ ಕಾರಣಕ್ಕೆೆ ತಮ್ಮ *‘್ಟಛಿಛಿ ಟ್ಠ್ಞ ಖಠಿಜಿಠ್ಚಿಿಛಿ’ ಕೃತಿಯನ್ನು ಜಾರ್ಜ್ ಅವರಿಗೆ ಕೃತಜ್ಞತೆಯಿಂದ ಅರ್ಪಿಸಿರುವುದಾಗಿ ಸುಧಾ ಅವರು ಮುನ್ನುಡಿಯಲ್ಲಿ ತಿಳಿಸಿದ್ದಾಾರೆ.

ಕೃಷ್ಣಾಾ, ಘಟಪ್ರಭಾ, ಮಲಪ್ರಭಾ ಪ್ರವಾಹದಿಂದ ನಲುಗಿದ ಕುಟುಂಬಗಳಿಗೆ ಅವರು ಮಾಡಿದ ಸೇವೆ ಮರೆಯಲು ಆಗದು. ತಾವೇ ಮುಂದೆ ನಿಂತು ಐದು ಸಾವಿರ ಸಹಾಯಕ ಕಿಟ್‌ಗಳನ್ನು ತಯಾರಿಸಿ ಜಮಖಂಡಿಯ ತಮ್ಮ ಆಪ್ತರಾದ ನಾರಾಯಣ ಕುಲಕರ್ಣಿ, ಶ್ರೀನಿವಾಸ್ ಕುಲಕರ್ಣಿ ಮೂಲಕ ವಿತರಿಸುವ ವ್ಯವಸ್ಥೆೆ ಮಾಡಿದರು. ನಿಜವಾದ ಸಂತ್ರಸ್ತರನ್ನು ಗುರುತಿಸಿ ಈ ಕಿಟ್‌ಗಳನ್ನು ವಿತರಿಸಲಾಯಿತು. ಸುಧಾ ಮೂರ್ತಿ ಅವರ ಈ ಅಪರೂಪದ ಪುಸ್ತಕ ಸಾಮಾಜಿಕ ಸೇವೆಯಲ್ಲಿ ತೊಡಗಿರುವವರಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಅನೇಕ ಒಳನೋಟಗಳನ್ನು ತಿಳಿಸುತ್ತದೆ. ಕೆಲವು ಸೂಕ್ಷ್ಮ ವಾಸ್ತವ ಸಂಗತಿಗಳು ಗೊತ್ತಿಿರಬೇಕು ಎಂಬುದನ್ನು ಸಹ ಹೇಳುತ್ತದೆ. ಸುಧಾ ಮೇಡಂಗೆ ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!