Sunday, 19th May 2024

ಮೇಘನಾರಾಜ್‌ ಕುಟುಂಬಕ್ಕೆ ಕೊರೋನಾಘಾತ

ಬೆಂಗಳೂರು: ಮೇಘನಾ ಸೇರಿದಂತೆ ಇಡೀ ಕುಟುಂಬಕ್ಕೆ ಕರೊನಾ ಸೋಂಕು ತಗುಲಿದೆ. ಚಿರು ಪುತ್ರನಿಗೂ ಸೋಂಕು ತಗುಲಿರು ವುದು ಆತಂಕಕ್ಕೆ ಕಾರಣವಾಗಿದೆ.

ಸೋಂಕು ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ಪ್ರಮೀಳಾ ಜೋಷಾಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬೆನ್ನಲ್ಲೇ ಸುಂದರ್ ರಾಜ್, ಮೇಘನಾ ಮತ್ತು ಚಿರು ಪುತ್ರನಿಗೂ ಸೋಂಕು ತಗುಲಿದೆ. ಮೇಘನಾ ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ಸುಂದರ್​ ರಾಜ್​ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆಲವು ದಿನಗಳಿಂದ ಮೇಘನಾ ಮತ್ತು ಮಗುವಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸುಂದರ್​ ರಾಜ್​ ಮತ್ತು ಪ್ರೆಮಿಳಾ ಜೋಷಾಯ್​ ಹಿರಿಯವರಾಗಿರುವುದಿಂದ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸುಂದರ್ ರಾಜ್​ ತಿಳಿಸಿದ್ದಾರೆ. ​

 

Leave a Reply

Your email address will not be published. Required fields are marked *

error: Content is protected !!