Sunday, 19th May 2024

ನದಿಯಲ್ಲಿ ದೋಣಿ ಮುಳುಗಿ 10 ಜನರು ನಾಪತ್ತೆ

ಪಾಟ್ನಾ: ಗಂಗಾ ನದಿಯಲ್ಲಿ ದೋಣಿ ಮುಳುಗಿದ ಅಘಾತಕಾರಿ ಘಟನೆ ಸೋಮವಾರ ಬಿಹಾರದ ಪಾಟ್ನಾ ಸಮೀಪದ ದಾನಾಪುರದ ಶಾಪುರ್ ಪಿಎಸ್ ಪ್ರದೇಶದ ಬಳಿ ಸಂಭವಿಸಿದೆ.

ದೋಣಿಯಲ್ಲಿ ಸುಮಾರು 50-54 ಜನರು ಇದ್ದರು ಅವರಲ್ಲಿ ಸುಮಾರು 10 ಜನರು ನಾಪತ್ತೆಯಾಗಿದ್ದಾರೆ.

ದೋಣಿಯಲ್ಲಿದ್ದ ವ್ಯಕ್ತಿಗಳು ಪಾಟ್ನಾದ ದೌದ್‌ಪುರ ಪ್ರದೇಶದಿಂದ ಬಂದವರು. ಇಲ್ಲಿನ ಕಾರ್ಮಿಕರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ರಕ್ಷಣೆಗಾಗಿ ಎರಡು ದೋಣಿಗಳನ್ನು ಕಳುಹಿಸಲಾಗಿದೆ. ದೋಣಿ ಮುಳುಗಿದ ಸುದ್ದಿ ಹರಡಿದ ಕೂಡಲೇ ಜನರು ನದಿಯ ಸುತ್ತಲೂ ಜಮಾಯಿಸಿದರು. ಮುಳುಗುಗಾರರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. 

error: Content is protected !!