Sunday, 19th May 2024

ಇಷ್ಟಪಟ್ಟು ಮದುವೆಯಾದರೆ, ಅಂತರ್ಜಾತಿ ವಿವಾಹ ತಡೆಯಲು ಸಾಧ್ಯವಿಲ್ಲ: ಪಿಣರಾಯಿ ವಿಜಯನ್

ತಿರುವನಂತಪುರಂ: ಯುವಕ-ಯುವತಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ನಿರ್ಧರಿಸಿದರೆ, ಅಂತರ್ಜಾತಿ ವಿವಾಹವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಯುವಕ-ಯುವತಿ ಒಪ್ಪಿದರೆ ಯಾವುದೇ ಜಾತಿ ಅಥವಾ ಧರ್ಮ ಅಡ್ಡಿಯಾಗುವುದಿಲ್ಲ. ಇದು ಬದಲಾವಣೆಯ ಭಾಗ ಎಂದು ಕರೆದಿದ್ದಾರೆ. ಇಂತಹ ಮದುವೆಗಳಿಗೆ ಮೊದಲಿನಿಂದಲೂ ವಿರೋಧವಿದೆ, ಕೆಲವೊಮ್ಮೆ ಒಂದು ಕಡೆಯವರು ಮಾತ್ರ ವಿರೋಧಿಸುತ್ತಾರೆ, ಕೆಲವೊಮ್ಮೆ ಎರಡೂ ಕಡೆಯಿಂದಲೂ ವಿರೋಧವಿರುತ್ತದೆ. ಆದರೆ ಅಂತಹ ಮದುವೆಗಳು ನಿಂತಿಲ್ಲ ಎಂದು ಹೇಳಿದ್ದಾರೆ.

ಸುನ್ನಿ ಯುವಜನ ಸಂಘದ ಕಾರ್ಯದರ್ಶಿ ನಾಸರ್ ಫೈಝಿ ಈ ಆರೋಪ ಮಾಡಿದ್ದರು. ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯದ ಎಡ ಸಮ್ಮಿಶ್ರ ಸರ್ಕಾರವು ಅಂತರ್ ಧರ್ಮೀಯ ವಿವಾಹಗಳನ್ನು ಉತ್ತೇಜಿಸುತ್ತಿದೆ. ಇದಕ್ಕೆ ನಾಸರ್ ಫೈಝಿ ಎಡಪಕ್ಷಕ್ಕೆ ಸಂಬಂಧಿಸಿದ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳನ್ನು ದೂರಿದ್ದರು. ಮುಸ್ಲಿಂ ಮುಖಂಡರೊಬ್ಬರು ತಮ್ಮ ಪಕ್ಷದ ಮೇಲೆ ಮಾಡಿರುವ ಆರೋಪದ ಕುರಿತು ಪತ್ರಕರ್ತರ ಪ್ರಶ್ನೆಗೆ ಸಿಎಂ ಪಿಣರಾಯಿ ವಿಜಯನ್ ಉತ್ತರಿಸಿದ್ದಾರೆ.

ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐ ಅಥವಾ ಯುವ ಸಂಘಟನೆ ಡಿವೈಎಫ್‌ಐ ಆಗಲಿ ಇದನ್ನು ಮಾಡುತ್ತಿಲ್ಲ ಎಂದು ವಿಜಯನ್ ಹೇಳಿದ್ದಾರೆ. ಮುಖ್ಯಮಂತ್ರಿಗಳ ಪ್ರಕಾರ, ಈ ವಿದ್ಯಾರ್ಥಿ ಸಂಘಟನೆಗಳು ಅಂತರ್ಜಾತಿ ವಿವಾಹದ ಬ್ಯೂರೋ ಆಗಿ ಕೆಲಸ ಮಾಡುತ್ತಿಲ್ಲ. ಇದು ಸಮಯ ದೊಂದಿಗೆ ನಡೆಯುತ್ತಿರುವ ಬದಲಾವಣೆಯ ಸೂಚಕವಾಗಿದೆ ಮತ್ತು ಸರ್ಕಾರ ಅಥವಾ ಸಂಸ್ಥೆಗಳು ಅಂತಹ ಯಾವುದೇ ಬದಲಾವಣೆಗಾಗಿ ಕೆಲಸ ಮಾಡುತ್ತಿಲ್ಲ. ಅಂತಹ ಬದಲಾವಣೆಗಳನ್ನು ನಿಲ್ಲಿಸುತ್ತಾರೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!