Sunday, 19th May 2024

ಮೋದಿ ಭದ್ರತಾ ವೈಫಲ್ಯ: ಎಸ್ಪಿ ಸೇರಿ ಏಳು ಅಧಿಕಾರಿಗಳ ಅಮಾನತು

ಚಂಡೀಗಢ: ಕಳೆದ ವರ್ಷ ಜನವರಿಯಲ್ಲಿ ಪಂಜಾಬ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದ ಕ್ಕಾಗಿ ಎಸ್ಪಿ ಸೇರಿದಂತೆ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಈ ಪೈಕಿ ಬಟಿಂಡಾ ಎಸ್ಪಿ ಗುರ್ಬಿಂದರ್ ಸಿಂಗ್, ಡಿಎಸ್ಪಿ ಪರ್ಸನ್ ಸಿಂಗ್, ಡಿಎಸ್ಪಿ ಜಗದೀಶ್ ಕುಮಾರ್, ಇನ್ಸ್ಪೆಕ್ಟರ್ ತೇಜಿಂದರ್ ಸಿಂಗ್, ಇನ್ಸ್ಪೆಕ್ಟರ್ ಬಲ್ವಿಂದರ್ ಸಿಂಗ್, ಇನ್ಸ್ಪೆಕ್ಟರ್ ಜತೀಂದರ್ ಸಿಂಗ್ ಮತ್ತು ಎಎಸ್‌ಐ ರಾಕೇಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಘಟನೆಯ ಸಮಯದಲ್ಲಿ, ಗುರ್ಬಿಂದರ್ ಸಿಂಗ್ ಅವರನ್ನು ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಿಸಲಾಯಿತು ಮತ್ತು ಫಿರೋಜ್‌ಪುರದಲ್ಲಿ ಕರ್ತವ್ಯ ದಲ್ಲಿದ್ದರು.

ಜನವರಿ 5, 2022 ರಂದು, ಫಿರೋಜ್‌ಪುರದಲ್ಲಿ ನಡೆಯುತ್ತಿದ್ದ ರಾಲಿಯಲ್ಲಿ ಭಾಗವಹಿಸಲು ಪ್ರಧಾನಿ ಹೋಗುತ್ತಿದ್ದಾಗ ರೈತರು ಟ್ರ್ಯಾಕ್ಟರ್‌ನೊಂದಿಗೆ ದಾರಿ ಯನ್ನು ತಡೆದರು. ಇದರಿಂದಾಗಿ ಪ್ರಧಾನಿ ದಾರಿ ಮಧ್ಯದಲ್ಲೇ ನಿಲ್ಲಬೇಕಾಯಿತು. ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಫ್ಲೈಓವರ್ ಮೇಲೆ ಸಿಲುಕಿಕೊಂಡಿತ್ತು. ನಂತರ ಅವರು ರಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ಪಂಜಾಬ್‌ ನಿಂದ ಹಿಂತಿರುಗಿದ್ದರು.

ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಭದ್ರತಾ ಲೋಪದಿಂದ ದೊಡ್ಡ ರಾಜಕೀಯ ವಿವಾದ ಉಂಟಾಗಿತ್ತು.

Leave a Reply

Your email address will not be published. Required fields are marked *

error: Content is protected !!