Sunday, 19th May 2024

ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್​: ಲೋಕಸಭೆ ಚುನಾವಣೆಗೆ ದೇಶದ ಮೂರನೇ ಹಂತದಲ್ಲಿ ರಾಜ್ಯದ ಎರಡನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ. ಗುಜರಾತ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಗುಜರಾತ್​ನ ಅಹಮದಾಬಾದ್​ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದರು.

ಪ್ರಧಾನಿ ಮೋದಿಯವರಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಾತ್​ ನೀಡಿದರು. ಮಂಗಳವಾರ ರಾಜಭವನದಿಂದ ಹೊರಟು ಪ್ರಧಾನಿ ಚಲಾಯಿಸಿದರು. ನಂತರ ಮತದಾನ ಮಾಡಿದ ಶಾಹಿ ತೋರಿಸಿ ಮತದಾನ ಮಾಡುವಂತೆ ಪ್ರೇರೇಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಮತದಾನ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ವಿಶೇಷವಾಗಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನಿ, ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ಉತ್ಸಾಹದಲ್ಲಿ ಬಂದು ಮತದಾನ ಮಾಡಬೇಕು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಉತ್ಸಾಹ ಇದೆ. ಎಲ್ಲ ರೀತಿಯ ವ್ಯವಸ್ಥೆಯನ್ನು ಆಯೋಗ ಮಾಡಿದೆ. ಆಯೋಗ ಪ್ರಶಂಸೆಗೆ ಅರ್ಹ. ಗುಜರಾತ್ ಎಲ್ಲಿಲ್ಲಿ ಮತದಾನ ಇದೆ, ಜನರು ಹೆಚ್ಚು ಮತದಾನ ಮಾಡಿ. ಚುನಾವಣೆಯನ್ನು ಉತ್ಸವ ರೀತಿಯಲ್ಲಿ ಆಚರಿಸಿ ಎಂದು ಜನತೆಗೆ ಕರೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳು ಹಗಲು-ರಾತ್ರಿ ಎನ್ನದೆ ಸುದ್ದಿ ಪ್ರಸಾರ ಮಾಡುತ್ತೀರಿ. ಬಿಸಿಲು ಜಾಸ್ತಿ ಇದೆ, ನಿಮ್ಮ ಆರೋಗ್ಯದ ಬಗ್ಗೆ ಲಕ್ಷ ವಹಿಸಿ. ನೀರು ಜಾಸ್ತಿ ಕುಡಿಯಿರಿ ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!