Sunday, 19th May 2024

ನಿಮಗೆ ಇಲ್ಲಿ ಜೀವನ ನಿಭಾಯಿಸುವುದಕ್ಕೆ ಸಾಧ್ಯವಾಗದು: ಆರ್‌ಜೆಡಿ ನಾಯಕ

ಪಾಟ್ನಾ: ದೇಶದಲ್ಲಿ ಮುಸ್ಲಿಮರ ಕುರಿತು ಪಕ್ಷಪಾತ ಧೋರಣೆ ಪ್ರದರ್ಶಿಸಲಾಗುತ್ತಿದೆ. ಹೀಗಾಗಿ ತಮ್ಮ ಮಕ್ಕಳಿಗೆ ವಿದೇಶದಲ್ಲಿ ಕೆಲಸ ಮಾಡಿ ಅಲ್ಲಿಯೇ ನೆಲೆಸುವಂತೆ ಆರ್‌ಜೆಡಿಯ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಜನತಾ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಾರಿ ಸಿದ್ದಿಕಿ ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ಪಕ್ಷಪಾತವನ್ನು ತೋರಲಾಗುತ್ತಿದೆ ಎಂದು ಆರೋ ಪಿಸಿದ್ದಾರೆ.

ನನಗೆ ಹಾರ್ವರ್ಡ್‌ನಲ್ಲಿ ಓದುತ್ತಿರುವ ಒಬ್ಬ ಮಗ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದ ಮಗಳು ಇದ್ದಾರೆ. ಅವರಿಗೆ ನಾನು ವಿದೇಶದಲ್ಲಿ ಉದ್ಯೋಗವನ್ನು ಹುಡುಕುವುದಕ್ಕೆ ಹೇಳಿದ್ದೇನೆ, ಸಾಧ್ಯವಾದರೆ ಅಲ್ಲಿನ ಪೌರತ್ವವನ್ನು ತೆಗೆದು ಕೊಳ್ಳಲು ಸಲಹೆ ನೀಡಿದ್ದೇನೆ,” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.

ನೀವು ವಿದೇಶದಲ್ಲಿಯೇ ಬದುಕು ಕಟ್ಟಿಕೊಳ್ಳಿರಿ ಎಂದು ಹೇಳಿದ ಸಂದರ್ಭದಲ್ಲಿ ಮಕ್ಕಳು ಅಪನಂಬಿಕೆಯಿಂದ ಪ್ರತಿಕ್ರಿಯೆ ನೀಡಿದರು. ನಾನು ಭಾರತದಲ್ಲಿ ವಾಸವಿರುವ ಬಗ್ಗೆ ಪ್ರಶ್ನಿಸಿದರು. ಆಗ ನಿಮಗೆ ಇಲ್ಲಿ ಜೀವನ ನಿಭಾಯಿಸುವುದಕ್ಕೆ ಸಾಧ್ಯವಾಗದು ಎಂದು ನಾನು ಹೇಳಿದೆ,” ಎಂದು ಮಾಜಿ ರಾಜ್ಯ ಸಚಿವ ಹೇಳಿದರು.

ಆರ್‌ಜೆಡಿ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ನೀಡಿರುವ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಮುಸ್ಲಿಮರು ಮತ್ತು ಸರ್ಕಾರದ ವಿರುದ್ಧ ನೇರವಾಗಿ ಉಲ್ಲೇಖಿಸದೇ ಮಾಜಿ ಸಚಿವರ ಹೇಳಿಕೆ ಖಂಡಿಸಿದ ಬಿಜೆಪಿಯ ಬಿಹಾರ ಘಟಕವು ಅವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸೂಚಿಸಿದೆ.

ಸಿದ್ದಿಕಿ ಅವರು ತುಂಬಾ ಉಸಿರುಗಟ್ಟುತ್ತಿದ್ದರೆ, ಅವರು ರಾಜಕೀಯ ನಾಯಕರಾಗಿ ಇಲ್ಲಿ ಅನುಭವಿಸುತ್ತಿರುವ ಸವಲತ್ತುಗಳನ್ನು ತ್ಯಜಿಸಿ ಪಾಕಿಸ್ತಾನಕ್ಕೆ ಹೋಗಬೇಕು. ಯಾರೂ ಅವರನ್ನು ತಡೆಯುವುದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಕಿಡಿ ಕಾರಿದರು.

Read E-Paper click here

error: Content is protected !!