Wednesday, 15th May 2024

ಪತಿ ಅರವಿಂದ್‌ ನಿಗದಿತ ಭೇಟಿಗೆ ಪತ್ನಿಗೆ ಅನುಮತಿ ನಿರಾಕರಣೆ

ವದೆಹಲಿ: ತಿಹಾರ್‌ ಜೈಲಿನಲ್ಲಿ ಅರವಿಂದ್‌ ಕೇಜ್ರಿವಾಲ್‌ ರ ನಿಗದಿತ ಭೇಟಿಗೆ ಪತ್ನಿ ಸುನೀತಾ ಕೇಜ್ರಿವಾಲ್‌ ಅವರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ.

ಜೈಲಿನಲ್ಲಿರುವ ವ್ಯಕ್ತಿಯನ್ನು ಭೇಟಿಯಾಗಲು ಏಕಕಾಲಕ್ಕೆ ಇಬ್ಬರು ಬರಬಹುದು ಎಂದು ಜೈಲು ನಿಯಮಗಳು ಹೇಳುತ್ತವೆ ಎಂದು ಮೂಲಗಳು ತಿಳಿಸಿವೆ. ಏ.15ರಂದು ಮಾನ್‌ ಅವರು ತಿಹಾರ್‌ಜೈಲಿನಲ್ಲಿ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಲು ಹೋದಾಗ, ಎಎಪಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಪಾಠಕ್‌ ಅವರೊಂದಿಗೆ ಇದ್ದರು.

ಜೈಲು ನಿಯಮಗಳ ಪ್ರಕಾರ ಒಂದು ವಾರದಲ್ಲಿ ಎರಡು ಭೇಟಿಗಳನ್ನು ಮಾತ್ರ ಅನುಮತಿಸಬಹುದು ಎಂದು ಹೇಳುತ್ತದೆ.

ಸುನೀತಾ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಲು ಮುಂದಿನ ವಾರವಷ್ಟೇ ಅವಕಾಶ ನೀಡುವ ಸಾಧ್ಯತೆ ಇದೆ. ಕೇಜ್ರಿವಾಲ್‌ ಏ.1 ರಿಂದ ಜೈಲಿನಲ್ಲಿದ್ದಾರೆ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಮಾರ್ಚ್‌ 21 ರಂದು ಅವರನ್ನು ಬಂಧಿಸಲಾಯಿತು.

ಕೇಜ್ರಿವಾಲ್‌ ಅವರ ಅನುಪಸ್ಥಿತಿಯಲ್ಲಿ ಸುನಿತಾ ಅವರು ದೆಹಲಿ, ಪಂಜಾಬ್‌‍, ಹರಿಯಾಣ ಮತ್ತು ಗುಜರಾತ್ನಲ್ಲಿ ಪಕ್ಷದ ಪ್ರಚಾರವನ್ನು ಮುನ್ನಡೆಸುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!