Saturday, 27th April 2024

ಮಹಾ ತಿರುವಿಗೆ ಬೆಚ್ಚಿದ ಅನರ್ಹರು !

ರಾಜ್ಯ ಬಿಜೆಪಿಯಲ್ಲಿ ಶುರುವಾಯಿತು ಭೀತಿ ಅನರ್ಹರ ಗೆಲುವಿನ ಕುರಿತು ಆತಂಕ ಶುರು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಮೂರೇ ದಿನಕ್ಕೆೆ ಪತನವಾದ ಪರಿಣಾಮ ರಾಜ್ಯದ ಉಪಚುನಾವಣೆ ಫಲಿತಾಂಶದ ಮೇಲಾಗುವ ಸಾಧ್ಯತೆಯಿದ್ದು, ಅನರ್ಹರ ಆತಂಕ ಹೆಚ್ಚಿಸಿದೆ.
ರಾಷ್ಟ್ರಪತಿ ಆಡಳಿತವಿದ್ದ ಮಹಾರಾಷ್ಟ್ರದಲ್ಲಿ ಬಿಜೆಪಿ ಇದ್ದಕ್ಕಿಿದ್ದಂತೆ ಸರಕಾರ ಸ್ಥಾಾಪಿಸುವ ಪ್ರಯತ್ನ ನಡೆಸಿತ್ತು. ಕೇಂದ್ರ ಸರಕಾರ ಮತ್ತು ರಾಜ್ಯಪಾಲರ ಭವನ ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆೆ ಬಂದಿದ್ದಾಾರೆ ಎಂದು ಪ್ರತಿಪಕ್ಷಗಳು ಆದರೆ, ಮೂರೇ ದಿನಗಳಲ್ಲಿ ಬಹುಮತ ಸಾಬೀತು ಮಾಡುವ ಯಾವ ಸಾಧ್ಯತೆಯನ್ನು ಕಾಣದ ಬಿಜೆಪಿ ಮುಖ್ಯಮಂತ್ರಿಿ ದೇವೇಂದ್ರ ಪಡ್ನವೀಸ್ ರಾಜೀನಾಮೆ ನೀಡಿದ್ದಾಾರೆ. ಆ ಮೂಲಕ ಬಿಜೆಪಿ ರಾಷ್ಟ್ರೀಯ ನಾಯಕರು ಸೇರಿದಂತೆ ಪಕ್ಷಕ್ಕೆೆ ಭಾರಿ ಮುಜುಗರವಾಗಿದೆ.

ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಧಿಕಾರ ಪಡೆಯುವಲ್ಲಿ ಸಣ್ಣ ಪ್ರಮಾಣದ ಅಂತರದಲ್ಲಿದ್ದ ಬಿಜೆಪಿ ತಂತ್ರಗಾರಿಕೆಯ ಮೂಲಕವೇ ಅಧಿಕಾರ ನಡೆಸುವ ಪ್ರಯತ್ನ ನಡೆಸಿತ್ತು. ಮೊದಲ ಬಾರಿಗೆ ಕರ್ನಾಟಕದಲ್ಲಿ ವಿಫಲವಾದರೂ, ಒಂದು ವರ್ಷ ಮೂರು ತಿಂಗಳ ನಂತರ ಶಾಸಕರ ರಾಜೀನಾಮೆ ಕೊಡಿಸುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲ ನಡೆದಿತ್ತು. ಆ ಮೂಲಕ ಅಧಿಕಾರಕ್ಕೆೆ ಬಂದು ತನ್ನ ಅಧಿಕಾರ ವ್ಯಾಾಪ್ತಿಿಯನ್ನು ಮತ್ತೊೊಂದು ರಾಜ್ಯಕ್ಕೆೆ ವಿಸ್ತರಣೆ ಮಾಡಿಕೊಂಡಿತ್ತು.
ಕರ್ನಾಟಕ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಬಿಜೆಪಿ ನಾಯಕರು ಮತ್ತು ಹೈಕಮಾಂಡ್ ನಡೆಸಿದ ತಂತ್ರಗಾರಿಕೆ ಬಗ್ಗೆೆ ಮೆಚ್ಚುಗೆ ಗಳಿಸಿತ್ತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ತಂತ್ರಗಾರಿಕೆ ಕುರಿತು ಗುಣಗಾನ ನಡೆಯಿತು. ಮಹಾರಾಷ್ಟ್ರದಲ್ಲಿ 105 ಗಳಿಸಿಯೂ ಅಧಿಕಾರಕ್ಕೆೆ ಬರಲು ಸಾಧ್ಯವಾಗದಿದ್ದಾಾಗ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆೆಸ್ ಸೇರಿ ಸರಕಾರ ರಚಿಸುವ ಪ್ರಯತ್ನಕ್ಕೆೆ ಕಲ್ಲು ಹಾಕುವ ಮೂಲಕ ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ಇದ್ದಕ್ಕಿಿದ್ದಂತೆ ರಾಷ್ಟ್ರಪತಿ ಆಡಳಿತ ಹಿಂಪಡೆದು ಪಡ್ನವೀಸ್ ಮತ್ತು ಅಜಿತ್ ಪವಾರ್ ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಸಂದರ್ಭವನ್ನು ಅನೇಕರು ಟೀಕಿಸಿದರೆ, ಸಂವಿಧಾನಿಕ ಸ್ಥಾಾನಗಳು ಮತ್ತು ಸಂಸ್ಥೆೆಗಳನ್ನು ಕೇಂದ್ರ ಸರಕಾರ ದುರುಪಯೋಗ ಪಡೆಸಿಕೊಳ್ಳುವ ಬಗ್ಗೆೆ ಟೀಕೆ ವ್ಯಕ್ತವಾಗಿದ್ದವು. ರಾಜ್ಯದ ಸರಕಾರ ತನ್ನ ಅಸ್ತಿಿತ್ವ ಉಳಿಸಿಕೊಳ್ಳಬೇಕಾದರೆ ಉಪಚುನಾವಣೆಯಲ್ಲಿ ಕನಿಷ್ಠ ಏಳು ಸ್ಥಾಾನಗಳನ್ನು ಗೆಲ್ಲಲೇಬೇಕು. ಆದರೆ, ಮಹಾರಾಷ್ಟ್ರದಲ್ಲಿ ಆಗಿರುವ ಹಿನ್ನೆೆಡೆಯು ರಾಜ್ಯ ಬಿಜೆಪಿಯ ನೈತಿಕ ಬಲವನ್ನು ಕುಗ್ಗಿಿಸಿದೆ ಎಂದರೆ ತಪ್ಪಾಾಗದು. ಜತೆಗೆ, ಕೇಂದ್ರ ಸರಕಾರವನ್ನು ಟೀಕಿಸುತ್ತಿಿದ್ದ ಪ್ರತಿಪಕ್ಷಗಳಿಗೆ ಅನರ್ಹ ಶಾಸಕರು, ಆಪರೇಷನ್ ಕಮಲದ ಜತೆಗೆ ಮಹಾರಾಷ್ಟ್ರ ಪ್ರಕರಣ ಒಂದು ಅಸ್ತ್ರವಾಗಿ ಬಳಕೆಯಾಗಲಿದೆ. ಹೀಗಾಗಿ, ಅನರ್ಹರ ಗೆಲುವಿನ ಮೇಲೆ ಇದರ ಕರಿನೆರಳು ಬೀಳಲಿದೆ.

Leave a Reply

Your email address will not be published. Required fields are marked *

error: Content is protected !!