Friday, 25th October 2024

ನೀತಿ ಸಂಹಿತೆ ಜಾರಿ: 174 ಕೋಟಿ ರೂ. ಮೌಲ್ಯದ ಸಾಮಗ್ರಿ ವಶ

ಬೆಂಗಳೂರು: ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯಾದ್ಯಂತ ಈವರೆಗೆ 72 ಕೋಟಿ ರೂ. ನಗದು ಸೇರಿ ಮದ್ಯ, ಮಾದಕ ದ್ರವ್ಯ, ಚಿನ್ನಾಭರಣ ಸೇರಿದಂತೆ ಒಟ್ಟು 174 ಕೋಟಿ ರೂ. ಮೌಲ್ಯದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ.

ನೀತಿ ಸಂಹಿತೆ ಜಾರಿಯಾದ ನಂತರ ರಾಜ್ಯದಲ್ಲಿ ಸ್ಥಿರ ಕಣ್ಗಾವಲು ತಂಡ, ಜಾಗೃತ ದಳ, ಪೊಲೀಸ್ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಸೂಕ್ತ ದಾಖಲೆ ಇಲ್ಲದ 71.93 ಕೋಟಿ ರೂ. ನಗದು ಹಾಗೂ 18.87 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಜಪ್ತಿ ಮಾಡಿ ದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 38.74 ಕೋಟಿ ರೂ. ಮೌಲ್ಯದ 9.23 ಲಕ್ಷ ಲೀಟರ್ ಮದ್ಯ, 15 ಕೋಟಿ ರೂ. ಮೌಲ್ಯದ 820 ಕಿ.ಲೋಓ ಗಾಂಜಾ, ಅಫೀಮು, ಮತ್ತಿತ್ತರ ಮಾದಕ ದ್ರವ್ಯ ಗಳನ್ನು ವಶಪಡಿಸಿಕೊಳ್ಳಲಾಗಿದೆ.

26.63 ಕೋಟಿ ರೂ. ಮೌಲ್ಯದ 62 ಕಿ.ಲೋ ಚಿನ್ನ, 2.79 ಕೋಟಿ ರೂ. ಮೌಲ್ಯದ 401 ಕಿ. ಲೋ ಬೆಳ್ಳಿ ಸೇರಿ 29.43 ಕೋಟಿ ರೂ. ಬೆಲೆ ಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.