Friday, 22nd November 2024

ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಬಿಜೆಪಿಯಿಂದ ಹೊರಬಂದೆ: ಜಗದೀಶ್ ಶೆಟ್ಟರ್

ಬೆಂಗಳೂರು: ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿ0ದ ಬಿಜೆಪಿಯಿಂದ ಹೊರಬಂದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ರಾಜ್ಯದಲ್ಲಿ ಇಂದು ಭಾರತೀಯ ಜನತಾ ಪಕ್ಷದ ಸ್ಥಿತಿ ಏನಾಗಿದೆ ಬಿಜೆಪಿಗೆ ಓರ್ವ ವಿಪಕ್ಷ ನಾಯಕರನ್ನು ನೇಮಿ ಸಲು ಆಗುತ್ತಿಲ್ಲ. ಕಳೆದ ಮೂವತ್ತು ವರ್ಷ ಗಳಿಂದ ಬಿಜೆಪಿಯಲ್ಲಿ ದುಡಿದಿದ್ದೇನೆ ಆದರೆ ಬಿಜೆಪಿಯವರಿಗೆ ಸೀನಿಯರ್ ಲೀಡರ್ ಗಳ ಅವಶ್ಯಕತೆ ಇಲ್ಲ ಇಂದು ಹೇಳಿದರು.

ಬೆಳಗಾವಿಯ ನೆನಪು ಮೆಲಕು ಹಾಕಿದ ಶೆಟ್ಟರ್ ಸುರೇಶ ಅಂಗಡಿ ನಾನು ಕಾರ್ಯಕರ್ತ ರನ್ನು ಒಗ್ಗೂಡಿಸಿ ಬೆಳಸುವ ಕಾರ್ಯ ಮಾಡಿದ್ದೆ ಆದ್ರೆ ಬಿಜೆಪಿ ಯಾವುದನ್ನು ನೆನಪಿಡದೆ ನನ್ನ ಹಿಂದೆ ಹಾಕಿದ್ದಾರೆ. ಗೊಂಡಾಗಿರಿ ಭ್ರಷ್ಟಾಚಾರ ಮಾಡದೆ ಯಾವುದೇ ಕಳಂಕ ಇಲ್ಲದ ನನಗೆ ಟೀಕಿಟ್ ಕೊಡದೆ ಬಿಜೆಪಿ ಕ್ರಿಮಿನಲ್ ಗಳಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿಯ ತತ್ವ ಸಿದ್ದಾಂತಗಳು ಕೆಲವ ಒಂದು ಸಮುದಾಯಕ್ಕೆ ಸೀಮಿತವಾಗಿವೆ. ಕಾಂಗ್ರೆಸ್ ನೊಂದವರ ದ್ವನಿಯಾಗಲಿದೆ ಎಂದು ಹೇಳಿದರು. ಇನ್ನು ಸ್ವಾಭಿಮಾನಕ್ಕೆ ಇಂದ ಬಿಜೆಪಿಯಿಂದ ಹೊರ ಬಂದೆ ಕಾಂಗ್ರೆಸ್ ಉತ್ತಮ ಸ್ಥಾನ ಕೊಟ್ಟಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ೧೩೦ ಅಧಿಕ ಕ್ಷೇತ್ರಗಳಲ್ಲಿ ಜಯಶಾಲಿಯಾಗಲಿದೆ ಎಂದರು.