ಸಾವಿರಾರು ಮಂದಿ ತಮ್ಮ ಆಧಾರ್, ಪಾನ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯ ವಿವರ ನೀಡಿ ಆನ್ ಲೈನ್ ಆಪ್ ಗಳ ಮೂಲಕ ಸಾಲ ಪಡೆಯುತ್ತಿದ್ದಾರೆ. ತಮ್ಮ ಮೊಬೈಲ್ ನಲ್ಲೇ ನೋಂದಣಿ ಪ್ರಕ್ರಿಯೆ ಮಾಡುತ್ತಿದ್ದಾರೆ. ಬಳಿಕ ಲೋನ್ ಆಪ್ ಕಂಪನಿಯವರು ಸಾಲ ಗಾರರ ಭಾವ ಚಿತ್ರವನ್ನು ಮಾರ್ಫಿಂಗ್ ಮಾಡಿ ಬ್ಲ್ಯಾಕ್ ಮೇಲ್ ಗೆ ಒಳಪಡಿಸಿ ಸುಲಿಗೆ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ 2023ರಲ್ಲಿ ಲೋನ್ ಆಪ್ ಕಂಪನಿಗಳ ಕಿರುಕುಳದ ಸಂಬಂಧ 900 ಪ್ರಕರಣಗಳು ದಾಖಲಾಗಿವೆ. ಒಂದೇ ಪ್ರಕರಣದಲ್ಲಿ 15 ಲೋನ್ ಆಪ್ ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಪೊಲೀಸರು ದೂರು ದಾಖಲಿಸಿದ್ದಾರೆ.
ಸಿಸಿಬಿಯ ಜಂಟಿ ಆಯುಕ್ತ ಶರಣಪ್ಪ ಮಾತನಾಡಿ, ಸಾವಿರಾರು ಮಂದಿ ಆನ್ ಲೈನ್ ಲೋನ್ ಆಪ್ ಗಳಿಂದ ಸಾಲ ಪಡೆದು ವಂಚನೆಗೆ ಒಳಗಾಗುತ್ತಿದ್ದಾರೆ. ಕರ್ನಾಟಕದವರೇ ಸಿಕ್ಕಿ ಬೀಳುತ್ತಿದ್ದಾರೆ. ಹೊರ ರಾಜ್ಯ, ವಿದೇಶದಲ್ಲಿ ಕುಳಿತು ನಕಲಿ ಜಾಲ ಸೃಷ್ಠಿಸಿ ರುವ ವಂಚಕರು ಪತ್ತೆಯಾಗುತ್ತಿಲ್ಲ. ಲೋನ್ ಆಪ್ ಬ್ಯಾಂಕ್ ಖಾತೆಗಳಿಂದ ಈವರೆಗೆ 87 ಕೋಟಿ ರೂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Read E-Paper click here
ಈಸಿ ಮನಿ ಲೋನ್ ಆಪ್, ಸ್ಯಾಲರಿ ಪ್ಲೀಸ್, ಈಸಿ ಲೋನ್, ಕ್ಯಾಸ್ ಮೀ, ಪ್ಯಾಕೆಟ್ ಮೀ, ಗೆಟ್ ರುಪಿ, ಇಸ್ ಕ್ಯಾಸ್, ಮನಿ, ರೈನ್ ಬೌ ಮನಿ, ಮ್ಯಾಜಿಕ್ ಲೋನ್, ಹೋಮ್ ಕೇಸ್ ಡೆಲ್ಲಿ ಕ್ರೆಡಿಟ್, ಶೈನಿ ಲೋನ್, ಗೋಮನಿ, ಕೂಲ್ ರುಪಿ ಲಟ್ರ, ನಾನ್ ರುಪಿ ಲೋನ್ ಆಪ್ ಗಳ ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.