Sunday, 19th May 2024

ಅರಣ್ಯ ಸಂರಕ್ಷಣೆಯಿಂದ ದತ್ತಾಂಶ ನಿರ್ವಹಣೆ ಸುಲಭ: ಡಾ.ರಾಜಸಿಂಹ

ತುಮಕೂರು: ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್) ಅಳವಡಿಸಿಕೊಳ್ಳುವುದರಿಂದ ಲೋಕೋಪಯೋಗಿ ಇಲಾಖೆ ಯ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು, ನೀರಿನ ಸಂಪನ್ಮೂಲಗಳನ್ನು ಮರುಬಳಕೆ, ಕೃಷಿ ಮತ್ತು ಅರಣ್ಯ ಪ್ರದೇಶಗಳ ಸಂರಕ್ಷಣೆ ಮಾಡಿಕೊಳ್ಳುವುದು ಸೇರಿದಂತೆ ನಮ್ಮ ಸುತ್ತಮುತ್ತಲಿನ ದತ್ತಾಂಶಗಳನ್ನು ಬಹು ಸುಲಭವಾಗಿ ನಿಯಂತ್ರಿಸಿಕೊಳ್ಳಬಹದು ಎಂದು ರಾಜ್ಯ ಸರಕಾರದ ತಾಂತ್ರಿಕ ಸಲಹೆಗಾರ ಡಾ. ರಾಜ ಸಿಂಹ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಹಮ್ಮಿಕೊಳ್ಳಲಾಗಿರುವ ನವ ದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ನ ಪ್ರಾಯೋಜಿತ ಯೋಜನೆಯ ಒಂದು ವಾರದ ‘ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಅಳವಡಿಕೆ ಮತ್ತು ದೂರ ಸಂವೇದಿ ನಿಯಂತ್ರಣ’ ಕುರಿತಾದ ಮೂರನೇ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಐಎಸ್ ವ್ಯವಸ್ಥೆ (ಜೀಯೋಗ್ರಾಫಿ ಇನ್ಫೋರ್ಮೇಷನ್ ಸಿಸ್ಟಮ್ )ಯನ್ನು ಉಪಗ್ರಹದ ಮೂಲಕ ನಿರ್ವಹಿಸಿ, ಭೂಮಿ ಮೇಲೆ ಮತ್ತು ಭೂಮಿಯ ಅಳದವರೆಗಿ ಮಾಹಿತಿಯನ್ನು ಕಲೆಹಾಕಬಹುದು. ಇದರಿಂದ ಪ್ರವಾಹ ಮುನ್ಸೂಚನೆ ಮತ್ತು ಪರಿಸರ ಸಮೀಕ್ಷೆ, ಆಣೆಕಟ್ಟು ನಿರ್ಮಾಣ ಮಾಡಬೇಕಾದರೆ ಭೂಮಿಯ ಒಳಪದರದ ವಿವರವನ್ನು ಪಡೆಯಬಹುದು. ಅಲ್ಲದೆ ವಾಹನ ಸಂಚಾರ, ಸಿವಿಲ್ ಕಾಮಗಾರಿಗಳಲ್ಲಿ ಈ ವ್ಯವಸ್ಥೆ ಅತ್ಯಂತ ಉಪಯುಕ್ತವಾಗಿದೆ ಎಂದು ಅವರು ಹೇಳಿದರು

ಸಾಹೆ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಧುನಿಕ ಕಾಲದ ಜಿಐಎಸ್ ವ್ಯವಸ್ಥೆಯನ್ನು ಈ ಹಿಂದ ದ್ವಾಪರ ಯುಗದಲ್ಲಿಯು ಬಳಸುತ್ತಿದ್ದರು. (ಕೌರವರು ಅಜ್ಞಾತ ವಾಸದಲ್ಲಿದ್ದ ಪಾಂಡವರನ್ನು ಹುಡುಕಲು ವಾತಾ ವರಣದಲ್ಲಿ ಏರು-ಪೇರು ಮೂಲಕ) ಈಗ ತಂತ್ರಜ್ಞಾನ ರೂಪಾಂತರಗೊಂಡು ಅನೇಕ ಅಂಶಗಳನ್ನು ಒಳಗೊಂಡಿದೆ. ಆಧುನಿಕ ತಂತ್ರಜ್ಞಾನದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್) ಅಳವಡಿಸಿಕೊಂಡ ಭೂಪ್ರದೇಶದಲ್ಲಿ ನಡೆಯುವ ಪ್ರತಿ ಯೊಂದು ಚಟುವಟಿಕೆಯನ್ನು ಉತ್ತಮ ಮಟ್ಟದಲ್ಲಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂದರು.

ಬೆಂಗಳೂರಿನ ಇಂಡಿಯನ್ ಇನ್ಸೂಟ್ ಆಫ್ ಸೈನ್ಸ್ ಕೇಂದ್ರ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಬಿ.ಆರ್ ಶ್ರೀನಿವಾಸ ಮೂರ್ತಿ ಮಾತನಾಡಿ, ಪರಿಸರ ವಿಜ್ಞಾನದಲ್ಲಿ ಬದಲಾವಣೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಲು, ಭೂ ಸಂರಕ್ಷಣೆ, ವಾತಾವರಣ ದಲ್ಲಾಗುವ ಏರು-ಪೇರುಗಳನ್ನು ಜಿಐಎಸ್ ವ್ಯವಸ್ಥೆಯಿಂದ ಅವಲೋಕಿಸುವ ಅವಕಾಶವಿರುವುದರಿಂದ, ಅದನ್ನು ಅಳವಡಿಸಿ ಕೊಳ್ಳುವತ್ತ ಸರ್ಕಾರದ ಆಡಳಿತ ಯಂತ್ರಗಳು ಗಂಬೀರವಾಗಿ ಯೋಚಿಸಬೇಕು ಎಂದರು.

ಸಾಹೆ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎಮ್.ಝೆಡ್.ಕುರಿಯನ್, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶು ಪಾಲರಾದ ಡಾ.ರವಿಪ್ರಕಾಶ್ ಅವರು ಮಾತನಾಡಿ, ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಗುರಿ ಸಾಧಿಸಬೇಕಾದರೆ ಅಗತ್ಯವಿರುವ ನೂತನ ಆವಿಪ್ಕಾರ-ತಂತ್ರಜ್ಞಾನಗಳನ್ನು ಬಳಸಿಕೊಳ್ಳವತ್ತ ಮುಂದಾಗಬೇಕಾಗಿದೆ ಎಂದು ಕರೆ ನೀಡಿದರು.

ಸೂರತ್ಕಲ್‌ನ ನಿಟ್ಟೆ ಕಾಲೇಜಿನ ಪ್ರಾಧ್ಯಾಪಕ ಡಾ.ದ್ವಾರಕೀಶ್, ಡಾ. ಎಂ.ಕೆ.ನಾಗರಾಜ್ ಅವರು ಜಿಐಎಸ್ ವ್ಯವಸ್ಥೆ (ಜೀಯೋ ಗ್ರಾಫಿ ಇನ್ಫೋರ್ಮೇಷನ್ ಸಿಸ್ಟಮ್) ಅಳವಡಿಕೆಯಿಂದಾಗುವ ಉಪಯೋಗಗಳನ್ನು ಕುರಿತು ವಿಷಯ ಮಂಡಿಸಿದರು.

ಶೈಕ್ಷಣಿಕ ವಿಭಾಗದ ಡೀನ್ ಡಾ. ಎಂ. ಸಿದ್ದಪ್ಪ, ಸಿವಿಲ್ ವಿಭಾಗದ ಮುಖ್ಯಸ್ಥ ಹಾಗೂ ತರಬೇತಿ ಕಾರ್ಯಕ್ರಮದ ಸಂಯೋಜಕ ರಾದ ಡಾ. ಮಲ್ಲೇಶ್, ಡಾ. ಎಚ್. ವೇಣುಗೋಪಾಲ್, ಸಂಚಾಲಕರಾದ ಡಾ. ಮುರಳೀದರ್, ಪ್ರಾಧ್ಯಾಪಕರಾದ ಪ್ರೊ.ಎಸ್.ಆರ್. ರಮೇಶ್, ಡಾ.ರಾಜಾನಾಯಕ್, ಡಾ.ಬಿ.ಎಚ್. ಮಂಜುನಾಥ್ ಮತ್ತು ಯೋಜನೆಗಳ ಸಂಯೋಜಕರು ಕಾರ್ಯಕ್ರಮದಲ್ಲಿ ಹಾಜ ರಿದ್ದರು.

ವೆಬಿನಾರ್ ಮೂಲಕ ನಡೆಯುವ ಒಂದು ವಾರದ ಅವಧಿಯ ತರಬೇತಿಯಲ್ಲಿ 10ಕ್ಕೂ ಹೆಚ್ಚು ರಾಜ್ಯಗಳಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. 6 ದಿನಗಳಲ್ಲಿ ಸುಮಾರು 15 ಕ್ಕೂ ಹೆಚ್ಚು ಉಪನ್ಯಾಸ- ಸಂವಾದಗಳು ನಡೆಯಲಿದ್ದು, ರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ವೆಬಿನಾರ್‌ನಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಜಿಐಎಸ್) ಸಾಧಕ- ಬಾಧಕಗಳನ್ನು ಕುರಿತು ತಮ್ಮ ವಿಷಯಗಳನ್ನು ಮಂಡಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!