Monday, 20th May 2024

ಎಸ್‌ಐಟಿಯಲ್ಲಿ ಎರಡು ದಿನ ನಡೆದ ಅಂತರಾಷ್ಟ್ರೀಯ ಸಮ್ಮೇಳನ

ತುಮಕೂರು: ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್‌ಮೆಂಟ್, ಎಂ.ಬಿ.ಎ. ವಿಭಾಗ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾ ಲಯ ಹಾಗೂ ಇನ್‌ಫೈನೆಟ್ ಸಮ್ ಮಾಡೆಲಿಂಗ್ ಐಎನ್‌ಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಇವರ ಸಹಯೋಗದೊಂದಿಗೆ ವ್ಯವಹಾರದಲ್ಲಿ ನೈತಿಕತೆ ಮತ್ತು ಆಡಳಿತ ಎಂಬ ವಿಷಯದ ಮೇಲೆ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಡಿಸೆಂಬರ್ 15 ಮತ್ತು 16 ರಂದು ಎಂ.ಬಿ.ಎ. ವಿಭಾಗÀದಲ್ಲಿ ಆನ್‌ಲೈನ್ ಮೂಲಕ ನಡೆಯಿತು.

ಶ್ರೀ ಸಿದ್ಧಲಿಂಗಸ್ವಾಮಿಗಳು ನೆರವೇರಿಸಿ ಆಶೀರ್ವಚನ ನೀಡಿದರು. ಡಾ. ಸುಭಾಶ್ ಶರ್ಮ, ನಿರ್ದೇಶಕರು, ಇಂಡಸ್ ಬಿಸಿನೆಸ್ ಅಕಾಡೆಮಿ, ಬೆಂಗಳೂರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು ದಿಕ್ಸೂಚಿ ಭಾಷಣ ಮಾಡಿದರು. ಡಾ. ಶಿವಕುಮಾರಯ್ಯ, ಸಿ.ಇ.ಒ. ಮತ್ತು ಡಾ. ಕೆ.ಪಿ. ಶಿವಾನಂದ, ಪ್ರಾಚಾರ್ಯರು, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಈ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿದ್ದರು. ಡಾ. ಎಂ. ಎನ್. ಚನ್ನಬಸಪ್ಪ, ನಿರ್ದೇಶಕರು, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ. ಸುಮಿತ್ ಮಿತ್ರಾ, ಐ.ಐ.ಎಂ. ಕೋಳಿಕೋಡ್, ಸಿ. ಎ. ರವೀಂದ್ರಕೋರೆ, ಅಧ್ಯಕ್ಷರು, ಐ.ಸಿ.ಎ.ಐ.ಎಸ್.ಐ.ಆರ್.ಸಿ. ಬೆಂಗಳೂರು, ಶ್ರೀ ಚಂದ್ರಹಾಸ ದೇವೂರ್, ಸ್ಟೇಟ್ ಹೆಡ್, ಕರ್ನಾಟಕ, ಆನಂದರಾಠಿ, ಬೆಂಗಳೂರು. ಡಾ. ಬದರಿನಾರಾಯಣ್ ಗೋಪಾಲ ಕೃಷ್ಣನ್, ಅಫಿಲೀಯೇಟ್ ಪ್ರಾಧ್ಯಾಪಕರು, ವಾಷಿಂಗ್‌ಟನ್ ಸಿಯಟಲ್ ವಿಶ್ವವಿದ್ಯಾಲಯ ಹಾಗೂ ಸಹ ಸಂಸ್ಥಾಪಕರು, ಐ.ಎಸ್.ಎಂ–ಎಸ್.ಐ.ಟಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್‌ಮೆಂಟ್, ಡಾ. ಪರಮಶಿವಯ್ಯ, ಪ್ರಾಧ್ಯಾಪಕರು, ತುಮಕೂರು ವಿಶ್ವವಿದ್ಯಾಲಯ, ತುಮಕೂರು, ಡಾ. ಕಿರಣ್‌ಕುಮಾರ್, ಸೀನಿಯರ್ ಬ್ಯುಸಿನೆಸ್ ಎಕ್ಸಿಕ್ಯೂಟಿವ್ – ಐ.ಟಿ. ಕಾಗ್ನಿಝಂಟ್, ಡಾ. ಫಿರ್ದೋಸ್, ಟಿ ಪಾರ್ಪ್, ಅಡ್ವೋಕೇಟ್, ಮುಂಬಯಿ, ಡಾ. ಅಜರ್‌ಷೇಕ್, ಅಸೋಸಿಯೇಟ್ ಪ್ರೊಫೆಸರ್, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿAಗ್ ಅಂಡ್ ಮ್ಯಾನೇಜ್‌ಮೆಂಟ್, ಮಂಗಳೂರು ಹಾಗೂ ಪ್ರೊ. ಹಮೀದ್ ಸರೇಮಿ, ಕುಲಪತಿಗಳು, ಅಸ್ಸರ್ ಹೈಯರ್ ಎಜುಕೇಶನ್ (ಡೀಮ್ಡ್ ವಿಶ್ವವಿದ್ಯಾಲಯ) ಮಶಹಾದ್–ಇರಾನ್ ಒಳಗೂಂಡ ತಜ್ಞರ ತಂಡ ಚರ್ಚೆ ಹಾಗೂ ತಾಂತ್ರಿಕ ಅಧಿವೇಶನಗಳಲ್ಲಿ ಭಾಗವಹಿಸಿತ್ತು.

ಈ ಸಮ್ಮೇಳನದಲ್ಲಿ 35 ಸಂಶೋಧನಾ ಪ್ರಬಂಧಗಳನ್ನು ಅಮೇರಿಕಾ, ಇಂಗ್ಲೆಂಡ್, ಇರಾನ್, ಅಸ್ಟ್ರೇಲಿಯಾ ಹಾಗೂ ಯುನೈಟೆಡ್ ಅರಬ್ ಎಮಿರೈಟ್ಸ್ ಮುಂತಾದ ದೇಶಗಳಿಂದ ಕೈಗಾರಿಕಾ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಹಾಗೂ ಸಂಶೋಧನಾ ವಿದ್ವಾಂಸರು ಮಂಡಿಸಿದರು.

ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಡಾ. ಪನ್ನೀರ್‌ಸೆಲ್ವಂ, ಸಮ್ಮೇಳನದ ಕನ್‌ವೀನರ್ ಡಾ. ಪ್ರೀತಿ ದೇಸಾಯಿ, ಸಂಘಟನಾ ಕಾರ್ಯದರ್ಶಿಗಳಾದ ಡಾ. ಗಿರೀಶ್ ವೈ.ಎಂ. ಮತ್ತು ಡಾ. ಶ್ರೇಯಾ ಚಕ್ರವರ್ತಿ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಈ ಸಮ್ಮೇಳನಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!