Sunday, 19th May 2024

ಸುಪ್ರೀಂ ಕೋರ್ಟ್ ಆದೇಶವನ್ನು ಮಾಜಿ ಸಿಎಂ ಅರ್ಥೈಸಿಕೊಂಡಿಲ್ಲವೇ ? : ಸಂಸದ ಪ್ರತಾಪ್‌ ಸಿಂಹ ತರಾಟೆ

ಮೈಸೂರು: ರಾಜ್ಯದಲ್ಲಿ ದೇವಾಲಯಗಳ ತೆರವು ವಿಚಾರವಾಗಿ ಲೋಪವಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಲೋಪವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಲೋಪವಾ ಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ವಕೀಲರಾಗಿದ್ದವರು. ಆದರೂ ಯಾಕೆ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ, ಜನರ ಮೇಲೆ ಪ್ರೀತಿ, ಕಾಳಜಿ ಇದ್ದರೆ ಸಿದ್ದರಾಮಯ್ಯನವರು ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಿರಲಿಲ್ಲ. ಸುಮ್ಮನೇ ಪ್ರೀತಿ, ವಿಶ್ವಾಸ, ನಂಬಿಕೆ ಎಂದು ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು. ನೀವು ವಕೀಲರಾಗಿದ್ದೀರಿ. ಯಾಕೆ ಗಮನ ಹರಿಸಿಲ್ಲ ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಲೋಪವಾಗಿದೆ, ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಲೋಪವಾಗಿದೆ. ಅಧಿಕಾರಿಗಳ ತಪ್ಪಿನಿಂದ ಈಗ ರಾಜಕಾರಣಿಗಳಿಂದ ಪರಸ್ಪರ ಆರೋಪ – ಪ್ರತ್ಯಾರೋಪ ಮಾಡಲಾಗುತ್ತಿದೆ.

ಸಿದ್ದರಾಮಯ್ಯನವರೇ ನಿಮ್ಮ ಕಾಲದಲ್ಲಿಯೇ ಲೋಪವನ್ನು ಸರಿಪಡಿಸಬಹುದಿತ್ತು. ಈಗ ಅನಗತ್ಯ ಆರೋಪಗಳು ಬೇಡ ತಪ್ಪು ಎಲ್ಲ ಕಡೆ ಯಿಂದ ಆಗಿದೆ. ಎಲ್ಲರ ಭಾವನೆಗಳನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಿ. ನನಗೆ ಸಿಎಂ ಬೊಮ್ಮಾಯಿ ಮೇಲೆ ವಿಶ್ವಾಸವಿದೆ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜ. ಸುಪ್ರೀಂ ಕೋರ್ಟ್ ಆದೇಶ ಸರಿಯಾಗಿ ಪಾಲಿಸಿಲ್ಲ ಎಂದು ಕಿಡಿಕಾರಿದ್ದೇನೆ. ಅಧಿಕಾರಿಗಳು ತರಾತುರಿಯಲ್ಲಿ ಪಟ್ಟಿ ನೀಡಿದ್ದಾರೆ. ಅಧಿಕಾರಿಗಳು ವಿದ್ಯಾವಂತರು, ಸಿಎಸ್ ಅವರಿಗೂ ಸುದೀರ್ಘ ಅನುಭವವಿರುತ್ತದೆ ಕೋರ್ಟ್ ಆದೇಶ ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದು ಗುಡುಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!