Sunday, 28th April 2024

ಸಂಸದರ ಲೆಟರ್ ಪ್ಯಾಡ್ ದುರುಪಯೋಗ: ಡಿಸಿ, ಎಸ್ಪಿಗೆ ದೂರು

– ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಸದ ಸಂಗಣ್ಣ ಕರಡಿ ಪತ್ರ

ಕೊಪ್ಪಳ: ಸಂಸದ ಸಂಗಣ್ಣ ಕರಡಿ ಲೆಟರ್ ಪ್ಯಾಡ್ ಗಳನ್ನು ಸಂಸದ ಗಮನಕ್ಕೆ ಇರದೇ ಅವುಗಳನ್ನು ದುರುಪಯೋಗ ಪಡಿಸಿ ಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಬರೆದಿರುವ ಪತ್ರದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸದ ತಿಳಿಸಿದ್ದಾರೆ.

ಡಿ.11ರಂದು ಪ್ರತ್ಯೇಕವಾಗಿ ಡಿ.ಸಿ. ಹಾಗೂ ಎಸ್ಪಿಗೆ ಈ ಕುರಿತು ದೂರು ಸಲ್ಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಇವರ ಕೊಪ್ಪಳ ಕಚೇರಿಯ ಆಪ್ತ ಸಹಾಯಕ ರನ್ನು ತೆಗೆದು ಹಾಕುವ ಬಗ್ಗೆ ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ 20 ಲಕ್ಷ ಅನುದಾನದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇದರಲ್ಲಿ ತಮ್ಮ ಪತ್ರ (ಲೆಟರ್ ಪ್ಯಾಡ್) ದುರಪ ಯೋಗ ಪಡೆದಿಕೊಂಡಿರುವ ಬಗ್ಗೆ ದೂರು ಮತ್ತು ಸೂಕ್ತ ತನಿಖೆ ಕೈಗೊಳ್ಳಲು ಸಂಸದ ಸಂಗಣ್ಣ ಕರಡಿ ಕೋರಿದ್ದಾರೆ.

ಜಿಲ್ಲಾ ಉಸ್ತುವಾರಿ ಕಛೇರಿಯ ಆಪ್ತ ಸಹಾಯಕರನ್ನು ತೆಗೆದು ಹಾಕುವ ಬಗ್ಗೆ ಸಚಿವರಿಗೆ ಯಾವುದೇ ಪತ್ರವನ್ನು ನೀಡಲಾಗಿಲ್ಲ, ಆ ಪತ್ರವು ತೀರಾ ಹಳೆಯಾಗಿದೆ. ಮತ್ತು ಪತ್ರದಲ್ಲಿ ನನ್ನ ಸಹಿಯು ಪೂರ್ಜರಿಯಾಗಿದ್ದು, ಇದನ್ನು ಗಣಕಯಂತ್ರದಲ್ಲಿ ಸಹಿಯನ್ನು ಸ್ಕ್ಯಾನ ಮಾಡಿದ್ದು ಇರುತ್ತದೆ, ಇದು ದುರುದ್ದೇಶದಿಂದ ಕೂಡಿದ್ದು, ಈ ಕುರಿತು ತನಿಖೆ ಕೈಗೊಳ್ಳುವಂತೆ ಎಸ್ಪಿ ಅವರಿಗೆ ಪತ್ರವನ್ನು ಬರೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಂಸದ ಕರಡಿ ಸಂಗಣ್ಣ ಪತ್ರದಲ್ಲಿ ವಿವರಿಸಿದ್ದಾರೆ.

ಡಿಸಿಗೆ ದೂರು: 2019-20ನೇ ಸಾಲಿನ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮಕ್ಕೆ ಸಂಸದರ ಅನುದಾನದಿಂದ ಸುಮಾರು 20 ಲಕ್ಷಗಳ 4 ಕಾಮಗಾರಿಗಳನ್ನು ದಿನಾಂಕ:-22-6-2020 ಮತ್ತು 2-7-2020ರಂದು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಸಂಸದರು ಪತ್ರವನ್ನು ನೀಡಿದ್ದರು.

ಆದರೆ ಜಿಲ್ಲಾಧಿಕಾರಿ ಕಛೇರಿಯಿಂದ ದಿನಾಂಕ:-3-7-2020, 4-7-2020 ಮತ್ತು 11-7-2020ರ 2 ಕಾಮಗಾರಿಗಳು ಒಟ್ಟು 4 ಕಾಮ ಗಾರಿಗಳನ್ನು ಅಂದಾಜು ಪತ್ರಿಕೆ ತಯಾರಿಸಲು ಆದೇಶ ಮಾಡಲಾಗಿದ್ದು, ಸದರಿ ಕಾಮಗಾರಿಗಳ ಪತ್ರವು ಸಂಸದ ಗಮನಕ್ಕೆ ಬಾರದಿರುವ ದರಿಂದ ಪುನಃ ದಿನಾಂಕಃ-14-07-2020 ರಂದು 4 ಕಾಮಗಾರಿಗಳನ್ನು ರದ್ದು ಮಾಡುವಂತೆ ಪತ್ರವನ್ನು ಕಛೇರಿಗೆ ಕೊಟ್ಟರು ಸಹಿತ, ಸದರಿ ಪತ್ರವನ್ನು ಲೆಕ್ಕಿಸದೇ (ಮುಚ್ಚಿಟ್ಟು), ತರಾತುರಿಯಲ್ಲಿ ಸದರಿ 4 ಕಾಮಗಾರಿಗಳಿಗೆ ಶೇ.75% ರಷ್ಟು ಅನುದಾನ ಚೌಕ್ನ್ನು ಕೊಟ್ಟಿ ರುವ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ.

ಮುಂದುರೆದು ಸದರಿ 4 ಕಾಮಗಾರಿಗಳ ಬದಲಾವಣೆ ಮಾಡಿ ಕುಷ್ಟಗಿ ತಾಲೂಕಿಗೆ ಮಂಜೂರು ಮಾಡಲು ದಿನಾಂಕ:-05-08-2020 ಪತ್ರವನ್ನು ರಂದು ಕೊಡಲಾಗಿದ್ದು, ಸದರಿ ಕಾಮಗಾರಿಗಳ ಬದಲಾವಣೆ ಮಾಡಿ ಮಂಜೂರು ಮಾಡಲು ವಿಳಂಬ ಮಾಡಲಾ ಗಿದ್ದು, ಅದರಂತೆ ಬದಲಾವಣೆ ಕಾಮಗಾರಿಗಳ ಮಂಜೂರಾತಿ ದಿನಾಂಕ 10-09-2020 ರಂದು ಮಂಜೂರು ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಂಸದರ ಅನುದಾನದ ವಿಷಯ ನಿರ್ವಾಹಕ ಶಿವಪುತ್ರಪ್ಪ ಇವರು ತಮ್ಮ ಪತ್ರಗಳನ್ನು ದುರಪಯೋಗ ಪಡಿಸಿಕೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರೊಂದಿಗೆ ಕೈ ಜೋಡಿಸಿರುತ್ತಾರೆ ಮತ್ತು ಸದರಿ ವಿಷಯದಲ್ಲಿ ಗುತ್ತಿಗೆದಾರನಿಂದ ಆಮಿಷಕೊಳ್ಳಗಾಗಿರುವ ಅನುಮಾನದ ಕುರಿತಾಗಿಯೂ ಸೂಕ್ತ ತನಿಖೆ ಕೈಗೊಳ್ಳಬೇಕೆಂದು, ಹಾಗೂ ತನಿಖೆಯಾಗುವವರೆಗೂ ಕಛೇರಿ ಸಿಬ್ಬಂದಿಯನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಪತ್ರಗಳನ್ನು ಬರೆದಿರುವರು.

ಕೋಟ್..
ಜನರ ಹಾಗೂ ಅಧಿಕಾರಿ, ಸಿಬ್ಬಂದಿಗಳ ಮೇಲೆ ವಿಶ್ವಾಸವಿಟ್ಟು ಅಭಿವೃದ್ಧಿ ಕೆಲಸಗಳು ಸೇರಿದಂತೆ ಸಾರ್ವಜನಿಕ ಕೆಲಸ-ಕಾರ್ಯಗಳಿಗಾಗಿ ಪತ್ರಗಳನ್ನು ನೀಡಲಾಗುತ್ತದೆ, ಆದರೆ ಪತ್ರಗಳನ್ನು ದುರುಪಯೋಗ ಪಡಿಸಿಕೊಂಡಿರುವದು ಕಂಡುಬಂದಿದ್ದು, ಸಹಿಗಳನ್ನು ಗಣಕಯಂತ್ರದಲ್ಲಿ ಸ್ಕ್ಯಾನ್ ಮಾಡಿ ಪೊರ್ಜಿರಿ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಡಿ.ಸಿ.ಹಾಗೂ ಎಸ್ಪಿ ಯವರಿಗೆ ದೂರು ನೀಡಿದೆ.

-ಸಂಗಣ್ಣ ಕರಡಿ, ಸಂಸದ, ಕೊಪ್ಪಳ

Leave a Reply

Your email address will not be published. Required fields are marked *

error: Content is protected !!