Sunday, 19th May 2024

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದವರಿಗೆ ಈಗ ಅರಿವು ಬಂದಿರಬಹುದು: ಸಂಸದ ಪ್ರತಾಪಸಿಂಹ

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಏಕೆ ಪ್ರಧಾನಿ ಮೋದಿ ಜಾರಿ ಮಾಡಿದರು ಎಂಬುದು ಅಫ್ಗಾನಿಸ್ತಾನದ ಪರಿಸ್ಥಿತಿ ಹಿನ್ನೆಲೆಯಲ್ಲಿ ಅರ್ಥವಾಗುತ್ತಿರ ಬಹುದು. ಸಂಕಷ್ಟಕ್ಕೆ ಸಿಲುಕಿದವರನ್ನು ಭಾರತಕ್ಕೆ ಕರೆತರಲು ಆ ಕಾನೂನಿಂದ ಸಾಧ್ಯವಾಗಿದೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ಸಿಎಎ ಏಕೆ ತಂದಿದ್ದು ಗೊತ್ತಾಯಿತೇ? ಆಫ್ಗನ್‌ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಅಫ್ಗಾನಿಸ್ತಾನದ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದರು.

ಮುಸ್ಲಿಮರಿಗೆ ಏಕೆ ಅವಕಾಶ ನೀಡಿಲ್ಲ, ಅವರಿಗೂ ಕೊಡಿ ಎಂದು ಕೆಲವರು ಕೇಳಿದ್ದರು. ಅಫ್ಗಾನಿಸ್ತಾನದಲ್ಲಿರುವ ಮುಸ್ಲಿಮರು ಸಂಕಷ್ಟಕ್ಕೆ ಸಿಲುಕಿದ್ದು, ವಿಮಾನದ ಚಕ್ರ ಹಿಡಿದು ಕುಳಿತಿದ್ದಾರೆ. ಅವರಿಗೆ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಇರಾನ್‌, ಉಜ್ಬೇಕಿಸ್ತಾನ ಆಶ್ರಯ ನೀಡಲಿ’ ಎಂದು ತಿರುಗೇಟು ನೀಡಿದರು.

‘ಷರಿಯಾ, ತಾಲಿಬಾನ್‌ ಮನಸ್ಥಿತಿ ಎಷ್ಟು ಮಾನವ ವಿರೋಧಿ ಎಂಬುದಕ್ಕೆ ಈಗಿನ ಘಟನೆಯೇ ಸಾಕ್ಷಿ. ಈ ಮನಸ್ಥಿತಿ ನಮ್ಮ ದೇಶದೊಳಗೂ ಇದ್ದು, ಹಾಗೆಯೇ ಬೆಳೆಯಲು ಬಿಟ್ಟರೆ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಟರ್ಕಿ ಹೊರತುಪಡಿಸಿ ಉಳಿದ ದೇಶಗಳಲ್ಲಿ ದೊಡ್ಡ ಸಮಸ್ಯೆ ಇದೆ. ತಾವು ನಂಬಿರುವುದೇ ಸರಿ, ಉಳಿದಿದ್ದು ಸುಳ್ಳು ಎನ್ನುವವರು ಉದ್ಧಾರ ಆಗಲ್ಲ. ನಾಗರಿಕತೆ ಉಳಿಯಲ್ಲ’ ಎಂದರು.

Leave a Reply

Your email address will not be published. Required fields are marked *

error: Content is protected !!