Monday, 20th May 2024

ಹಾವೇರಿಯಲ್ಲಿ ಕಸ ವಿಲೇವಾರಿಗೆ ನಾರಿ ಶಕ್ತಿ ಬಳಕೆ

ಹಾವೇರಿ : ಹಾವೇರಿ ಜಿಲ್ಲಾ ಪಂಚಾಯಿತಿಯಿಂದ ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಕಸ ವಿಲೇವಾರಿಯಲ್ಲಿ ನಾರಿ ಶಕ್ತಿಯನ್ನು ಬಳಸಿಕೊಳ್ಳಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪುರುಷರೇ ಕಸ ವಿಲೇವಾರಿ ಕೆಲಸ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಸ ವಿಲೇ ವಾರಿಗೆ ಬಳಸುವ ಸ್ವಚ್ಛ ವಾಹಿನಿ ವಾಹನ ಚಾಲನೆಗೆ, 32 ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಂತಹ ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿ ಯಿಂದ ತರಬೇತಿ ಕೂಡ ನೀಡಲಾಗಿದ್ದು, ಜಿಲ್ಲೆಯ ಆಯ್ತ ಪಂಚಾಯ್ತಿಗಳಲ್ಲಿ ಮಹಿಳಾ ಮಣಿಗಳು ಕಸ ವಿಲೇವಾರಿ ನಡೆಸಲಿದ್ದಾರೆ.

ಗ್ರಾಮ ಪಂಚಾಯ್ತಿ ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಯಡಿ ಘನ ತ್ಯಾಜ್ಯ ನಿರ್ವಹಣೆ ಅನುಷ್ಠಾನ ತರಬೇತಿ ನೀಡುತ್ತಿದೆ. ಈ ತರಬೇತಿಯನ್ನು 32 ಮಹಿಳಾ ಸದಸ್ಯರು ಪೂರ್ಣಗೊಳಿಸಿದ್ದು, ಇದೀಗ ಜಿಲ್ಲೆಯ ಆಯ್ತ ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ಕಸ ವಿಲೇವಾರಿಯಲ್ಲಿ ತೊಡಗಿದ್ದಾರೆ.

ನುರಿತ ವಾಹನ ಚಾಲಕರಿಂದ 32 ಮಹಿಳೆಯರಿಗೆ ವಾಹನ ತರಬೇತಿ ನೀಡಲಾಗಿದೆ. ಹಾವೇರಿ ಸಮೀಪದ ದೇವಗಿರಿಯಲ್ಲಿ ರೂಡ್ ಸೆಟ್ ಸಂಸ್ಥೆಯಿಂದ ತರಬೇತಿ ನೀಡಲಾಗಿದೆ. 

Leave a Reply

Your email address will not be published. Required fields are marked *

error: Content is protected !!