Sunday, 28th April 2024

ಎಡಬಿಡದೆ ಮಳೆ : ಬೆಳೆ ರಕ್ಷಣೆಗೆ ರೈತ ಹರಸಾಹಸ

ಸುರಿಯುತ್ತಿರುವ ಮಳೆಗೆ ತಾಲೂಕಿನ ಜನಜೀವನ ಅಸ್ತವ್ಯಸ್ತ | ಹಲವಡೆ ಸೇತುವೆಗಳ ಮೇಲೆ ನೀರು

ಮೂಡಲಗಿ : ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಡದೆ ಮಳೆಯಾಗುತ್ತಿದ್ದು, ಬುದುವಾರ ರಾತ್ರಿಯಿಂದ ಭಾರಿ ಪ್ರಮಾಣ ದಲ್ಲಿ ಮಳೆ ಸುರಿದಿದ್ದು ಪರಿಣಾಮವಾಗಿ ಕಟಾವು ಬಂದ ಮೆಕ್ಕೆಜೋಳ, ಸೋಯಾಬಿನ್, ಅರಿಸಿನ ಹಾಗೂ ಕಬ್ಬಿನ ಗದ್ದೆಯಲ್ಲಿ ಮಳೆ ನೀರು ಸಂಗ್ರಹದಿಂದ ರೈತರು ಕಂಗಾಲಾಗಿದ್ದಾರೆ.

ಮಳೆ ನೀರಿನಲ್ಲಿ ನಿಂತಿರುವ ಕಬ್ಬನ್ನು ಹೊರ ತೆಗೆದು ಸಕ್ಕರೆ ಕಾರ್ಖಾನೆಗಳಿಗೆ ರವಾನಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಹಲಗು ರಾತ್ರಿಯೆನ್ನದೆ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವಾರು ಕೆರೆಕಟ್ಟೆಗಳು ಭರ್ತಿಯಾಗಿದ್ದು, ಹಳ್ಳಕೊಳ್ಳ ತುಂಬಿ ಹರಿಯುತ್ತಿದೆ. ವಿಪರೀತ ಮಳೆಯ ಪರಿಣಾಮಕಾರಿಯಾಗಿ ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ.

ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಪರಿಣಾಮ ಕೋಯ್ಲಿಗೆ ಬಂದ ಗೋವಿನಜೋಳ, ಸೋಯಾಬಿನ್, ಕಬ್ಬು, ಅರಿಸಿನ ಕೊಳೆ ಯುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೃಷಿ ಜಮೀನು ಗಳ ಮಳೆ ನೀರಿನಿಂದ ಜಲಾವೃಯವಾಗಿವೆ ಇದರಿಂದಾಗಿ ರೈತರಲ್ಲಿ ಆತಂಕ ಮೂಡಿಸಿದೆ. ಇನ್ನೋಂಡು ಕಡೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಿಂದಾಗಿ ಮೆನಗಳು ಕುಸಿಯುತ್ತಿರುವುದರಿಂದ ಮತ್ತಷ್ಟು ಜನರಲ್ಲಿ ಆತಂಕದ ಮನೆ ಮಾಡಿದೆ. ಈ ಕುಂಭದ್ರೋಣ ಮಳೆಯಿಂದ ಮೂಡಲಗಿ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ, ಹಲವಡೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಅದರಲ್ಲಿ ಮುಖ್ಯವಾಗಿ ಸುಣಧೋಳಿ, ಕಮಲದಿನ್ನಿ, ಹುಣಶಾಳ, ಅವರಾದಿ, ಢವೇಶ್ವರ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ ಇದರಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಇನ್ನೂ ಬೆಳಗಾವಿ ಜಿಲ್ಲೆಯಲಿ ಮುಂಬರುವ ಎರಡು ದಿನಗಳಲ್ಲಿ ಭಾರಿ ಮಳೆ ಮುಂದುವರಿಯಲಿದೆ ಎಂದು ಹವ ಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳೆ ಹಾನಿ ವಿವರ : ಮೇಕ್ಕೆಗೋಳ 325 ಹೆಕ್ಟೆರ್, ಸೂರ್ಯಕ್ರಾಂತಿ 72 ಹೆಕ್ಟರ್. ಶೇಂಗಾ 25 ಹೆಕ್ಟರ್, ಸೋಯಾಬಿನ್ 1 ಹೆಕ್ಟರ್ ಹಾನಿಯಾಗಿದೆ ಹಾಗೂ ಕಬ್ಬಿನ ಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್ಸ್
ಈ ಮಳೆಯಿಂದ ತಾಲೂಕಿನ ಗ್ರಾಮಗಳಲ್ಲಿ ಬೆಳೆ ಹಾನಿಗಳ ಹಾಗೂ ಮನೆಗಳು ಕುಸಿದಿರುವ ಬಗ್ಗೆ ಸರ್ವೆ ಕಾರ್ಯದ ವರದಿ ನೀಡಲು ಈಗಾಲೇ ಗ್ರಾಮಲೇಕ್ಕಾಧಿಕಾರಿಗಳಿಗೆ ತಿಳಿಸಲಾಗಿದೆ. –  ಡಿ.ಜಿ.ಮಹಾತ್, ಮೂಡಲಗಿ ತಹಶೀಲ್ದಾರ.

ಹೋದ ವರ್ಷ ನೆರೆ ಸಂತ್ರಸ್ತರಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಸರಿಯಾಗಿ ನೀಡಿಲ್ಲ, ಕೊರೋನಾ ಸಂದರ್ಭದಲ್ಲಿ ಈ ಮಳೆಯಿಂದ ಸಾಕಷ್ಟು ಬೆಳೆಗಳು ಹಾಗೂ ಮನೆಗಳು ಹಾನಿಯಾಗಿ ರೈತರು ಸಂಕಷ್ಟೆ ಸಿಲುಕಿದ್ದಾರೆ ಆದರಿಂದ ಸರ್ಕಾರ ಸಮೀಕ್ಷೆ ನಡೆಸಿ ಯೋಗ್ಯವಾದ ಪರಿಹಾರ ನೀಡಬೇಕು. ಇಲ್ಲವಾದರೇ ಮುಂದಿನಗಳಲ್ಲಿ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ. -ಶ್ರೀಶೈಲ ಅಂಗಡಿ, ರೈತ ಸಂಘದ ಸಂಚಾಲಕ.

Leave a Reply

Your email address will not be published. Required fields are marked *

error: Content is protected !!