Monday, 20th May 2024

ನಮ್ಮ ಮೆಟ್ರೋದಿಂದ ಮೂರು ಹಂತಗಳಲ್ಲಿ ಸಸಿ ನೆಟ್ಟು ಬೆಳೆಸಲು ಪ್ಲಾನ್

ಬೆಂಗಳೂರು: ಸಾರಿಗೆ ವಿಷಯದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸಾವಿರಾರು ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಸಾಧ್ಯವಾದಷ್ಟುತನ್ನ ಯೋಜನೆಗಾಗಿ ಮರಕ್ಕೆ ಕೊಡಲಿ ಹಾಕಿದ್ದ ನಮ್ಮ ಮೆಟ್ರೋ ಬರೋಬ್ಬರಿ 15000 ಸಸಿಗಳನ್ನು ನೆಡುವುದಾಗಿ ತಿಳಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಮೆಟ್ರೋ 2ನೇ ಹಂತ ಯೋಜನೆಗಾಗಿ ಅನೇಕ ಮರಗಳನ್ನು ಧರೆಗುರುಳಿಸಿತ್ತು. ಇದಕ್ಕೆ ಪರ್ಯಾಯ ಪರಿಹಾರ ಮಾರ್ಗವಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮೂರು ಹಂತಗಳಲ್ಲಿ ಸಸಿ ನೆಟ್ಟು ಬೆಳೆಸಲು ಪ್ಲಾನ್ ಮಾಡಿದೆ.

ಒಂದೊಂದು ಹತ್ತದಲ್ಲಿ ಒಟ್ಟು 5000 ಸಸಿಗಳನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ನೆಡಲಿದೆ. ಈ ಸಸಿ ನೆಡುವ ಪೂರ್ತಿ ಯೋಜನೆಗೆ 76ಕೋಟಿ ರೂಪಾಯಿ ವ್ಯಯಿಸಲಿದೆ ಎಂದು ‘ಕನ್ನಡಪ್ರಭ’ ವರದಿ ಮಾಡಿದೆ. ಆದಷ್ಟು ಶೀಘ್ರವೇ ಸಸಿ ನೆಡುವ ಕಾರ್ಯಕ್ಕೆ BMRCL ಚಾಲನೆ ನೀಡಲಿದೆ.

ಮೊದಲ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಾಬಾಸ್‌ಪೇಟೆ ಕೈಗಾರಿಕೆ ಪ್ರದೇಶ ಅಕ್ಕಪಕ್ಕ ಹಾಗೂ ಬೆಂಗಳೂರು ಸುತ್ತಮುತ್ತ ಐದು ಸಾವಿರ ಸಸಿ ನೆಡಲು ಯೋಜಿಸಿದೆ. ನಂತರ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಮತ್ತು ಮೂರನೇ ಹಂತದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಉದ್ಯಾನ, ಬಫರ್ ವಲಯ, ಸುತ್ತಮುತ್ತಲಿನ ಸರ್ಕಾರ ಜಾಗಗಳನ್ನು ಗುರುತಿಸಿ ಅಲ್ಲಿ ಸಸಿ ನೆಟ್ಟು ಪೋಷಿಸಲಾಗುವುದು.

1190 ಮರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈ ಪೈಕಿ ಮರಗಳನ್ನು ಕಡಿದಿದ್ದೇ ಹೆಚ್ಚು. ಒಂದೆರಡು ವಾರಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಈ ವೇಳೆ ಸಸಿ ನೆಟ್ಟರೆ ಅನುಕೂಲವಾಗಲಿದೆ.

ನಮ್ಮ ಮೆಟ್ರೋ ಕಡಿದ ವರ್ಷ-ಮರಗಳ ಸಂಖ್ಯೆ

* 2021-2023 ರ ಅವಧಿ- 3,628 ಮರಗಳಿಗೆ ಕೊಡಲಿ ಬಿದ್ದಿದೆ.

* 2021-2022 ರಲ್ಲಿ 856 ಮರಗಳು

* ಮೆಟ್ರೋ ಯೋಜನೆ ಹಂತ -2 ಮತ್ತು ಹಂತ 2 ‘ಎ’ ಯೋಜನೆಗೆ 2,461 ಮರಗಳಿಗೆ ಕತ್ತರಿ

* ಹಾಲಿ ಮೆಟ್ರೋ ಮಾರ್ಗಗಳಿಗೆಗಾಗಿ 750 ಮರ ಕೊಂಬೆಗಳಿಗೆ ಕೊಡಲಿ

Leave a Reply

Your email address will not be published. Required fields are marked *

error: Content is protected !!