Sunday, 19th May 2024

ಕೋಲಾರ ಸೇತುವೆಯಿಂದ ಉತ್ತರ ದಕ್ಷಿಣದ ಕೊಂಡಿ ಜೋಡಣೆ: ಎಸ್.ಕೆ ಬೆಳ್ಳುಬ್ಬಿ

ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.

ಪಟ್ಟಣದಲ್ಲಿ ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವ ಹಾಗೂ ಕೊರ್ತಿ ಕೊಲ್ಹಾರ ಸೇತುವೆಯ ೨೫ ನೇಯ ವರ್ಷದ ರಜತಮಹೋತ್ಸವ ಸಮಾ ರಂಭದಲ್ಲಿ ಮಾತಾಡಿದ ಅವರು ಅನೇಕ ಮಹಾನ್ ನಾಯಕರುಗಳ ತ್ಯಾಗ ಬಲಿದಾನಗಳ ಮೂಲಕ ಈ ದೇಶಕ್ಕೆ ಸ್ವಾತಂತ್ರ‍್ಯ ದೊರಕಿದೆ, ಅವರ ತ್ಯಾಗ ಬಲಿದಾನ ಅವಿಸ್ಮರಣೀಯ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವದ ಮುಂಚೂಣ ಸ್ಥಾನ ಪಡೆದುಕೊಳ್ಳುತ್ತಿದೆ ಭಾರತದ ಬೆಳವಣ ಗೆಯನ್ನು ಇತರ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡುತ್ತಿವೆ ಎಂದು ಹೇಳಿದರು.

ಕೊರ್ತಿ ಕೊಲ್ಹಾರ ಸೇತುವೆ ರಜತಮಹೋತ್ಸವದ ಈ ಸುಧಿನ ನಮಗೆಲ್ಲ ಅತ್ಯಂತ ಸಂತಸವನ್ನುಂಟು ಮಾಡಿದೆ ಸೇತುವೆ ನಿರ್ಮಾಣದ ಹಿಂದಿರುವ ಶ್ರಮ ಹಾಗೂ ಹೋರಾಟ ಅಷ್ಟಿಷ್ಟಲ್ಲ ಅನೇಕ ಅಡೆತಡೆ ಗಳನ್ನು ಮೆಟ್ಟಿ ನಿರಂತರ ಸತ್ಯಾಗ್ರಹ, ಹೋರಾಟ ಹಮ್ಮಿಕೊಳ್ಳಲಾಯಿತು ಆ ಹೋರಾಟ ದ ಫಲವೆ ಸೇತುವೆ ನಿರ್ಮಾಣವಾಗಿ ಉತ್ತರ ಮತ್ತು ದಕ್ಷಿಣದ ಕೊಂಡಿ ಜೋಡಣೆ ಗೊಂಡಿವೆ ಎಂದು ಹೇಳಿದರು.

ವಿಶ್ವೇಶ್ವರ ಭಟ್ಟರನ್ನು ನೆನೆದ ಬೆಳ್ಳುಬ್ಬಿ: ಕೊರ್ತಿ ಕೋಲಾರ ಸೇತುವೆ ಅನುಮೋದ ನೆಯ ಸಂದರ್ಭದಲ್ಲಿ ದಿವಂಗತ ಮಾಜಿ ಕೇಂದ್ರ ಸಚಿವ ಅನಂತಕುಮಾರ ಅವರ ವಿಶೇಷ ಅಧಿಕಾರಿಗಳಾಗಿದ್ದ ಪ್ರಸ್ತುತ ವಿಶ್ವವಾಣ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ಟರು ಕಾಳಜಿ ವಹಿಸಿದ್ದು ಈ ಸಂದರ್ಭದಲ್ಲಿ ನೆನಪಿಸಬೇಕಾದದ್ದು ಎಂದು ವಿಶ್ವವಾಣ ಪತ್ರಿಕೆಯ ವಿಶ್ವೇಶ್ವರ ಭಟ್ಟರ ಕಾರ್ಯವನ್ನು ವೇದಿಕೆಯ ಮೇಲೆ ನೆನಪಿಸಿಕೊಂಡರು.

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡುತ್ತಾ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹುಟ್ಟು ಹೋರಾಟಗಾರರು ನಿರಂತರವಾದ ಹೋರಾಟಗಳ ಮೂಲಕ ಅವರು ಈ ಹಂತಕ್ಕೆ ತಲುಪಿದ್ದಾರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಸವನಬಾಗೇವಾಡಿ ಮತಕ್ಷೇತ್ರದಿಂದ ಎಸ್.ಕೆ ಬೆಳ್ಳುಬ್ಬಿಯವರಿಗೆ ಟಿಕೆಟ್ ನೀಡಬೇಕು ಎಂದು ವೇದಿಕೆಯ ಮೇಲಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್ ಪಾಟೀಲ್ ಕೂಚಬಾಳ ಹಾಗೂ ಇತರೆ ಬಿಜೆಪಿ ನಾಯಕರನ್ನು ಒತ್ತಾಯಿಸಿದರು.

ಮುಂದುವರೆದು ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಬಸವರಾಜ ಬೊಮ್ಮಾಯಿ, ಬಸವನಬಾಗೇವಾಡಿ ಕ್ಷೇತ್ರಕ್ಕೆ ಎಸ್.ಕೆ ಬೆಳ್ಳುಬ್ಬಿ ಎಂಬ ಘೋಷವಾಕ್ಯ ಹೇಳುವ ಮೂಲಕ ನರೆದೆ ಸಾರ್ವಜನಿಕರ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಸ್ವಾತಂತ್ರ‍್ಯ ಭಾರತದ ಈ ಅಮೃತ ಮಹೋತ್ಸವ ಹೊತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ಕಾರ್ಯಕ್ರಮದ ಪ್ರಯುಕ್ತ ಮಾಜಿ ಸಚಿವ ಕೊರ್ತಿ ಕೊಲ್ಹಾರ ಸೇತುವೆಯ ರೂವಾರಿಗಳಾದ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಕೊರ್ತಿ ಕೋಲಾರ ಸೇತುವೆಯನ್ನು ಮದುವಣಗಿತ್ತಿಯಂತೆ ತಿರಂಗಾದಿಂದ ಶೃಂಗರಿಸಲಾಗಿತ್ತು, ೭೫ ಎತ್ತಿನ ಗಾಡಿಗಳು, ಅನೇಕ ಟ್ರ‍್ಯಾಕ್ಟರಗಳು ನೂರಾರು ರೈತರು ಕೊಲ್ಹಾರ ಸೇತುವೆಯಿಂದ ಪಟ್ಟಣದವರೆಗೆ ಮೆರವಣ ಗೆಯ ಮೂಲಕ ತರಲಾಯಿತು.

ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬೃಹತ್ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶೀಲವಂತ ಹಿರೇ ಮಠದ ಕೈಲಾಸನಾಥ ದೇವರು, ಬಿಜೆಪಿ ಜಿಲ್ಲಾಧ್ಯಕ್ಷ ಆರ.ಎಸ್ ಪಾಟೀಲ (ಕೂಚಬಾಳ), ನಿಂಬೆ ಅಭಿಮಾನಿ ನಿಗಮದ ಅಧ್ಯಕ್ಷರಾದ ಚಂದ್ರಶೇಖರ ಕವಟಗಿ, ಬಿಜೆಪಿ ಮುಖಂಡ ಉಮೇಶ ಕಾರಜೋಳ, ಬಸವನಬಾಗೇವಾಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ರಾಮಣ್ಣ ಬಾಟಿ, ಅಲ್ಲಾಭಕ್ಷ ಬಿಜಾಪೂರ, ವಿರೂಪಾಕ್ಷಿ ಕೋಲಕಾರ, ಬಾಬು ಬಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು

error: Content is protected !!