Sunday, 28th April 2024

ಸಿದ್ದರಾಮಯ್ಯನಿಗೆ ನಾಯಕತ್ವ ಕೈ ತಪ್ಪುವ ಆತಂಕ : ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ

ಕುರುಬ ಸಮುದಾಯ ಎಸ್‌ಟಿಗೆ ಸೇರಿಸುವ ಹೋರಾಟದ ನೇತೃತ್ವ ಸಿದ್ದರಾಮಯ್ಯ ವಹಿಸಲಿ

ಕೊಪ್ಪಳ: ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಹೋರಾಟ ಹೊಸತೇನಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ನಮ್ಮ ಸಮಾಜದ ಪ್ರಶ್ನಾತೀತ ನಾಯಕ. ಸಮಾಜದ ಏಳ್ಗೆಗಿನ ಈ ಹೋರಾಟದಲ್ಲಿ ಅವರು ತೊಡಗಿಕೊಳ್ಳದಿರುವು ದಕ್ಕೆ ನಾಯಕತ್ವ ಕೈ ತಪ್ಪುವ ಭೀತಿಯೇ ಕಾರಣ ಇರಬಹುದು ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ. ವಿರೂಪಾಕ್ಷಪ್ಪ ಹೇಳಿ ದರು.

ಕೊಪ್ಪಳ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಹೋರಾಟಕ್ಕೆ ಆರ್‌ಎಸ್‌ಎಸ್ ಸೇರಿದಂತೆ ಯಾರೇ ಬೆಂಬಲ ನೀಡಿದರೂ ಸ್ವಾಗತಿಸುತ್ತೇವೆ. ಇದು ಪಕ್ಷಾತೀತ ಹೋರಾಟ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಕುರುಬರ ಸಂಘದ ನೇತೃತ್ವದಲ್ಲಿ ಹೋರಾಟ ಚುರುಕುಗೊಂಡಿದ್ದು, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಆಗ್ರಹಿಸಿ 2021ರ ಜನವರಿ 4ನೇ ತಾರೀಖು ಸಿಂಧನೂರಿನಲ್ಲಿ ಸಮಾವೇಶ, ಜನವರಿ 5ರಂದು ಕಲಬುರಗಿ, ಯಾದಗಿರಿಯಲ್ಲಿ ಸಮಾ ವೇಶ ನಡೆಸಿ, ಜನೇವರಿ 15ರಿಂದ ಫೆಬ್ರವರಿ 7ರ ವರೆಗೆ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸ ಲಾಗಿದೆ. ಆನಂತರ ಕೇಂದ್ರ ಮತ್ತು ರಾಜ್ಯ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತವೆ ಎಂಬುದನ್ನು ನೋಡುತ್ತೇವೆ ಎಂದು ತಿಳಿಸಿದರು.

ಈ ಬೇಡಿಕೆ ಇಂದು-ನಿನ್ನೆಯದಲ್ಲ. 1868ರಲ್ಲಿಯೇ ಭಾರತದಲ್ಲಿದ್ದ ಬ್ರಿಟಿಷ್ ಸರಕಾರ ಹೊರತಂದಿರುವ the people of India ಎನ್ನುವ ಪುಸ್ತಕದಲ್ಲಿ ಕರುಬರ್, ಅಥವಾ ಕುರುಂಬರ್ ಮೂಲ ನಿವಾಸಿ ಬುಡಕಟ್ಟು ಜನಾಂಗ ಎಂಬ ಉಲ್ಲೇಖ ಇದೆ. 1976ರಲ್ಲಿ ಸಂಸತ್ ಕಡತದಿಂದ ಈ ಪದವನ್ನು ಯಾಕೆ ಕೈ ಬಿಡಲಾಗಿದೆ ಎಂಬುದು ಗೊತ್ತಾಗಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಿಗು ತ್ತಿಲ್ಲ‌.

ಈಗಾಗಲೇ ಸಚಿವ ಈಶ್ವರಪ್ಪ ಹಾಗೂ ಸಮಾಜದ ಶ್ರೀಗಳ ನೇತೃತ್ವದ ನಿಯೋಗ ಕೇಂದ್ರದ ಬುಡಕಟ್ಟು ಸಚಿವೆ ರೇಣುಕಾ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿ ದರು.

ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಲ್ಲ. ಸಿದ್ದರಾಮಯ್ಯ ಕುರುಬ ಸಮಾಜದ ಪ್ರಶ್ನಾತೀತ ನಾಯಕ. ಆತನ ಹೇಳಿಕೆ ಆತನಿಗೆ ಗೌರವ ತರುವಂಥದ್ದಲ್ಲ. ನಮ್ಮಲ್ಲಿ ಒಡಕಿಲ್ಲ. ಜನಸ್ಪಂದನೆ ಇದೆ. ಯಾರೊ ಕೆಲವು ಲೀಡರ್‌ಗಳು ತಮ್ಮ ಸ್ವಾರ್ಥಕ್ಕಾಗಿ ಏನೇನೋ ಮಾಡ್ತಾರೆ. ಇದು ಸಮುದಾಯದ ಜನರಿಗೆ ಬೇಕಾಗಿದೆ. ಕಾಂಗ್ರೆಸ್, ಬಿಜೆಪಿ ಸಂಬಂಧ ಇಲ್ಲ. ಸಿದ್ದರಾಮಯ್ಯ ಅವರೇ ಬಂದು ನೇತೃತ್ವ ವಹಿಸಲಿ, ಆರ್‌ಎಸ್‌ಎಸ್ ಹೋಗುತ್ತೆ ಈಶ್ವರಪ್ಪನೂ ಹೋಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕುರುಬ ಸಮುದಾಯದ ಮುಖಂಡ ವೀರನಗೌಡ ಬಳೂಟಗಿ, ಮಲ್ಲಣ್ಣ ಪಲ್ಲೇದ್, ಯಮನಪ್ಪ, ಫಕೀರಪ್ಪ ವಕೀಲರು,
ಭೀಮಪ್ಪ ಗಂಗಾವತಿ, ಕೆ. ವಿರೂಪಾಕ್ಷಪ್ಪ, ವಿರೂಪಾಕ್ಷಪ್ಪ ಮೋರನಾಳ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!