Saturday, 27th April 2024

ಜರ್ಮನಿಯಲ್ಲಿ 50,196 ಕೋವಿಡ್ ಪ್ರಕರಣ ದೃಢ

ಬರ್ಲಿನ್‌ : ಜರ್ಮನಿಯಲ್ಲಿ ಗುರುವಾರ ದಾಖಲೆ ಸಂಖ್ಯೆಯಲ್ಲಿ 50,196 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಕೋವಿಡ್‌ ಪಿಡುಗು ಆರಂಭವಾದ ಬಳಿಕ ಮೊದಲ ಬಾರಿಗೆ ಜರ್ಮನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ಯನ್ನು ದಾಟಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣ ಮತ್ತು ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ.

‘ಇದೊಂದು ನಾಟಕೀಯ ಬೆಳವಣಿಗೆ ಎಂದು ನಿರ್ಗಮಿತ ಚಾನ್ಸಲರ್‌ ಅಂಗೆಲಾ ಮಾರ್ಕೆಲ್‌ ಅವರ ಹೇಳಿಕೆ ಆಧರಿಸಿ ಅವರ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಸೋಂಕು ಪ್ರಕರಣಗಳು ಹೆಚ್ಚಿ ಆಸ್ಪತ್ರೆಗಳ ಮೇಲಿನ ಒತ್ತಡವು ಹೆಚ್ಚಿದೆ. ಲಸಿಕೆ ಅಭಿಯಾನ ಪರಿಣಾಮಕಾರಿ ಆಗಿಲ್ಲದೇ ಇರುವುದೇ ಈ ಸ್ಥಿತಿಗೆ ಕಾರಣ ಎಂದು ದೂಷಿಸಲಾಗುತ್ತಿದೆ.

ಜರ್ಮನಿಯಲ್ಲಿ ಒಟ್ಟಾರೆ ಲಸಿಕೆ ಪಡೆದವರ ಪ್ರಮಾಣ ಶೇ 67ರಷ್ಟಿದೆ. ಕೋವಿಡ್‌ ಪಿಡುಗು ಆರಂಭವಾದಾಗಿನಿಂದ ಸುಮಾರು 49 ಲಕ್ಷ ಜನರು ಸೋಂಕು ಪೀಡಿತರಾಗಿದ್ದಾರೆ.

ಸಾಕ್ಸೊನಿ, ಬರ್ಲಿನ್‌ ರಾಜ್ಯಗಳಲ್ಲಿ ಲಸಿಕೆ ಪಡೆಯದ ನಾಗರಿಕರನ್ನು ಗುರಿಯಾಗಿಸಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ರೆಸ್ಟೋರಂಟ್‌ಗಳು, ಬಾರ್‌ಗಳು, ಕ್ರೀಡಾನಿಲಯಗಳಿಗೆ ಇವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!