Thursday, 16th May 2024

ಪ್ಯಾಲೆಸ್ತೀನ್‌ ಲೇಖಕ ಬಾಸಿಮ್ ಖಂದಕ್ಜೀ ಕಾದಂಬರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಗರಿ

ಟೆಲ್ ಅವೀವ್: ಇಸ್ರೇಲ್ ನಲ್ಲಿ 20 ವರ್ಷ ಹಿಂದೆ ಸೆರೆಮನೆ ವಾಸ ಶಿಕ್ಷೆಗೆ ಗುರಿಯಾಗಿದ್ದ ಪ್ಯಾಲೆಸ್ತೀನ್‌ ಲೇಖಕ ಬಾಸಿಮ್ ಖಂದಕ್ಜೀ ಅವರ “ಎ ಮಾಸ್ಕ್ ದ ಕಲರ್ ಆಫ್ ಸ್ಕೈ” ಎಂಬ ಅರೆಬಿಕ್ ಕಾದಂಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.

2024 ಇಂಟರ್ ನ್ಯಾಷನಲ್ ಪ್ರೈಸ್ ಫಾರ್ ಅರೇಬಿಕ್ ಫಿಕ್ಷನ್ ಪ್ರಶಸ್ತಿಯನ್ನು ಅಬುಧಾಬಿಯಲ್ಲಿ ಪ್ರಕಟಿಸಲಾಗಿದೆ. ಈ ಬಹುಮಾನವನ್ನು ಬಾಸಿಮ್ ಖಂದಕ್ಜೀ ಪರವಾಗಿ ಲೆಬನಾನ್‌ ಮೂಲದ ಪ್ರಕಾಶನ ಸಂಸ್ಥೆ ದಾರುಲ್ ಆದಾಬ್ ನ ಮಾಲಿಕ ರಾಣಾ ಇದ್ರೀಸ್ ಸ್ವೀಕರಿಸಿದರು.

ನಬ್ಲಸ್ ನಲ್ಲಿ 1983ರಲ್ಲಿ ಜನಿಸಿದ ಬಾಸಿಮ್ ಖಂದಕ್ಜೀ, ತನ್ನ 21ನೇ ವಯಸ್ಸಿನಲ್ಲಿ 2004ರಲ್ಲಿ ಬಂಧನವಾಗುವವರೆಗೂ ಹಲವು ಸಣ್ಣ ಕಥೆಗಳನ್ನು ಬರೆದಿದ್ದರು. ಟೆಲ್ ಅವೀವ್ ನ ಮೇಲೆ ನಡೆದ ಮಾರಕ ಬಾಂಬ್ ದಾಳಿಗೆ ಸಂಬಂಧಿಸಿದ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿದ್ದುಕೊಂಡೇ ಇಂಟರ್ ನೆಟ್ ಮೂಲಕ ಅಧ್ಯಯನ ಮಾಡಿ ವಿವಿ ಶಿಕ್ಷಣ ಪೂರ್ಣಗೊಳಿಸಿದ್ದರು.

ಈ ಕಾದಂಬರಿಯ ಶೀರ್ಷಿಕೆಯಲ್ಲಿರುವ ಮಾಸ್ಕ್ ಎನ್ನುವುದು ರಮಲ್ಲಾದ ನಿರಾಶ್ರಿತರ ಶಿಬಿರದಲ್ಲಿ ವಾಸವಿದ್ದ ವಾಸ್ತುಶಿಲ್ಪಿ ನೂರ್ ಎಂಬುವವರ ಗುರುತಿನ ಪತ್ರವಾಗಿದ್ದು, ಇಸ್ರೇಲಿಯೊಬ್ಬರ ಹಳೆಯ ಕೋಟ್ ನಲ್ಲಿ ಇದು ಪತ್ತೆಯಾಗಿತ್ತು.

ಈ ಪ್ರಶಸ್ತಿಗೆ ಸಲ್ಲಿಕೆಯಾಗಿದ್ದ 133 ಕೃತಿಗಳ ಪೈಕಿ ಖಂದಕ್ಜಿ ಕೃತಿಯನ್ನು ಆಯ್ಕೆ ಮಾಡಲಾಗಿದೆ.

“ರಿಚುವಲ್ಸ್ ಆಫ್ ದ ಫಸ್ಟ್ ಟೈಮ್” ಮತ್ತು “ಬ್ರೆತ್ ಆಫ್ ಎ ನಾಕ್ಟರ್ನಲ್ ಪೋಯಮ್” ಎಂಬ ಕವನ ಸಂಕಲನಗಳನ್ನು ಅವರು ಜೈಲಿನಲ್ಲಿ ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!