Sunday, 19th May 2024

5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್

ಮಾಸ್ಕೋ: ವ್ಲಾಡಿಮಿರ್ ಪುಟಿನ್ 5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವ್ಲಾಡಿಮಿರ್ ಪುಟಿನ್‌ ಅಧಿಕಾರ ಗ್ರಹಣ ಸಮಾರಂಭದಲ್ಲಿ ಭಾರತದ ಪರವಾಗಿ ರಾಯಭಾರಿ ವಿನಯ್ ಕುಮಾರ್ ಪ್ರತಿನಿಧಿಸಿದ್ದರು.ಐದನೇ ಬಾರಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ವ್ಲಾಡಿಮಿರ್ ಪುಟಿನ್ ಮುಂದಿನ 6 ವರ್ಷಗಳ ಅವಧಿಗೆ ರಷ್ಯಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 1999 ರಿಂದ ರಷ್ಯಾದ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿಯಾಗಿ ಪುಟಿನ್ ಅಧಿಕಾರದಲ್ಲಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಹಲವಾರು ಪಾಶ್ಚಿಮಾತ್ಯ ದೇಶಗಳು ಈ ಸಮಾರಂಭವನ್ನು ಬಹಿಷ್ಕರಿಸಿದ್ದವು.

ಪುಟಿನ್ ಈಗಾಗಲೇ ನಾಲ್ಕು ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 47ನೇ ವಯಸ್ಸಿನಲ್ಲಿ 2000 ರಲ್ಲಿ ಅವರು 52.94 ಶೇಕಡಾ ರಷ್ಯನ್ನರ ಬೆಂಬಲವನ್ನು ಪಡೆದು ಅಧ್ಯಕ್ಷ ಪದವಿಗೇರಿದ್ದರು. 2004 ರಲ್ಲಿ 71.31 ಶೇಕಡಾ, 2012 ರಲ್ಲಿ 63.6 ಶೇಕಡಾ ಮತ್ತು 2018 ರಲ್ಲಿ 76.7 ಶೇ ಮತಗಳನ್ನು ಪಡೆದಿದ್ದ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಾರ್ಚ್ 2024 ರ ಚುನಾವಣೆಯ ಸಮಯದಲ್ಲಿ ಈಗ 71 ವರ್ಷ ವಯಸ್ಸಿನ ಪುಟಿನ್, ಆರು ವರ್ಷಗಳ ಅವಧಿಗೆ ದಾಖಲೆಯ ಹೆಚ್ಚಿನ 87.28 ಪ್ರತಿಶತ ಮತಗಳಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ರಷ್ಯಾದಲ್ಲಿ 8ನೇ ಅಧ್ಯಕ್ಷೀಯ ಚುನಾವಣೆಗೆ ಭಾರತದಿಂದಲೂ ಮತದಾನ ಪ್ರಕ್ರಿಯೆ ನಡೆದಿತ್ತು. ಸುಮಾರು 60 ರಷ್ಯನ್ ಮತದಾರರು ತಮ್ಮ ಮತದಾನ ಹಕ್ಕಿನಿಂದ ದೂರವಿದ್ದರು. ಈ ಮತದಾರರು ಭಾರತದ ಕೇರಳದಲ್ಲಿದ್ದ ಕಾರಣ, ರಷ್ಯಾದಲ್ಲಿ ಮತ ಹಾಕಲು ಅವಕಾಶವಿರಲಿಲ್ಲ. ಇದಕ್ಕಾಗಿ ರಷ್ಯಾ, ಭಾರತದ ಕೇರಳದಿಂದಲೇ ಈ 60 ಮಂದಿ ಮತ ಹಾಕುವಂತೆ ವೋಟಿಂಗ್ ಬೂತ್ ನಿರ್ಮಿಸಿತ್ತು.

ಮಾರ್ಚ್ 15-17 ರವರೆಗೆ ರಷ್ಯಾದ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ದೇಶದಲ್ಲಿ 112.3 ಮಿಲಿಯನ್ ಜನರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದರು. ವಿದೇಶದಲ್ಲೂ 1.9 ಮಿಲಿಯನ್ ಮತದಾರರಿದ್ದರು.

Leave a Reply

Your email address will not be published. Required fields are marked *

error: Content is protected !!