Saturday, 27th April 2024

ಹುಳಿಮಾವು ಕೆರೆ ದುರಂತ: 50 ಸಾವಿರ ಪರಿಹಾರ ಘೋಷಣೆ

ಬೆಂಗಳೂರು:
ಹುಳಿಮಾವು ಕೆರೆ ಕೋಡಿ ಒಡೆದು ನೂರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದು, ದುರಂತದಿಂದ ಸಂತ್ರಸ್ತರಾಗಿರುವವರಿಗೆ ರಾಜ್ಯ ಸರಕಾರ ನೆರವು ಘೊಷಿಸಿದೆ.
ಕೆರೆ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿಿದ್ದರಿಂದ 319 ಕುಟುಂಬಗಳು ಬೀದಿಪಾಲಾಗಿದ್ದು, ಮನೆ ಕಳೆದುಕೊಂಡವರ ಎಲ್ಲರ ಖಾತೆಗಳಿಗೆ ಮಂಗಳವಾರ ಸಂಜೆಯೊಳಗೆ 50,000 ಹಣ ಜಮೆ ಮಾಡಲಾಗುವುದು ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.
ಈ ಟ್ವೀಟ್ ಮಾಡಿರುವ ಅವರು, ‘ಹುಳಿಮಾವು ದುರಂತದಿಂದ ಮನೆ ಕಳೆದುಕೊಂಡ 319 ಬಡ ಕುಟುಂಬಗಳ ಬ್ಯಾಾಂಕ್ ಖಾತೆಗಳಿಗೆ ಈ ಕೂಡಲೇ 50,000 ಪರಿಹಾರ ಧನ ಜಮೆ ಮಾಡುವಂತೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರು ಹುಳಿಮಾವು ಕೆರೆ ದುರಂತ ಸಂಭವಿಸಿರುವ ಪ್ರದೇಶಕ್ಕೆೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಕ್ಷಣಾ ಕಾರ್ಯಕ್ಕೆೆ ಸಲಹೆ ಸೂಚನೆಗಳನ್ನು ನೀಡಿದರು. ಸಂತ್ರಸ್ತರನ್ನು ಭೇಟಿಯಾದ ಸಿಎಂ, ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರವನ್ನೂ ವಿತರಿಸಿದರು. ಈ ಯಡಿಯೂರಪ್ಪ ಜೊತೆಗೆ ಕೆಲವು ಶಾಸಕರು, ಸಚಿವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!