Saturday, 27th April 2024

ಅಮೆಜಾನ್ ಪ್ರೈಮ್ ಡೇ 2023 ಭಾರತದಲ್ಲಿ ಅತಿದೊಡ್ಡ ಪ್ರೈಮ್ ಡೇ ಕಾರ್ಯಕ್ರಮ

ಬೆಂಗಳೂರು: ಪ್ರೈಮ್ ಡೇ 7ನೇ ಆವೃತ್ತಿಯು ಹಿಂದಿನ ಎಲ್ಲ ಪ್ರೈಮ್ ಡೇ ಈವೆಂಟ್‌ಗೆ ಹೋಲಿಸಿದರೆ ಅತ್ಯಂತ ಜನಪ್ರಿಯವಾಗಿದೆ ಎಂದು ಅಮೆಜಾನ್ ಇಂಡಿಯಾ ಘೋಷಿಸಿದೆ. ಪ್ರೈಮ್ ಡೇ 2023 ಜುಲೈ 15-16 ರಂದು ನಡೆದಿದ್ದು, ಅದ್ಭುತ ಡೀಲ್‌ಗಳು, ಹೊಸ ಬಿಡುಗಡೆಗಳು ಮತ್ತು ಬ್ಲಾಕ್‌ ಬಸ್ಟರ್ ಮನರಂಜನೆಯ ಖುಷಿಯನ್ನು ಪ್ರೈಮ್ ಸದಸ್ಯರಿಗೆ ನೀಡಿತ್ತು.

ಈ ಪ್ರೈಮ್ ಡೇಯಲ್ಲಿ ಸಾವಿರಾರು ಸೆಲ್ಲರ್‌ಗಳು, ಬ್ರ್ಯಾಂಡ್‌ಗಳು ಮತ್ತು ಬ್ಯಾಂಕ್‌ ಪಾಲುದಾರರು ಒಟ್ಟಾಗಿ ಸೇರಿದ್ದು, ಪ್ರೈಮ್ ಸದಸ್ಯರು ರೂ. 300 ಕೋಟಿ ಉಳಿತಾಯ ಮಾಡಲು ಸಹಾಯ ಮಾಡಿದ್ದಾರೆ ಅತ್ಯಂತ ಹೆಚ್ಚಿನ ಸಂಖ್ಯೆಯ ಅದೇ ದಿನದ ಡೆಲಿವರಿ ಗಳೊಂದಿಗೆ ಈ ಪ್ರೈಮ್ ಡೇಯಲ್ಲಿ ಅತಿ ವೇಗದ ಡೆಲಿವರಿಗಳನ್ನು ಪ್ರೈಮ್ ಸದಸ್ಯರು ಆನಂದಿಸಿದ್ದಾರೆ. ಮೆಟ್ರೋ ನಗರಗಳಲ್ಲಿ 3 ಆರ್ಡರ್‌ಗಳ ಪೈಕಿ 1 ಆಋfಡರ್‌ ಅನ್ನು ಪ್ರೈಮ್ ಡೇ ಮುಗಿಯುವುದಕ್ಕೂ ಮೊದಲೇ ಡೆಲಿವರಿ ಮಾಡಲಾಗಿದೆ; ಬಹುತೇಕ 1 ಮತ್ತು 2ನೇ ಹಂತದ ನಗರಗಳಲ್ಲಿ ಮಾಡಿದ 2 ಆರ್ಡರ್‌ಗಳಲ್ಲಿ 1 ಅನ್ನು 2 ದಿನಗಳೊಳಗೆ ಡೆಲಿವರಿ ಮಾಡಲಾಗಿದೆ ಪ್ರೈಮ್ ಸದಸ್ಯತ್ವದಲ್ಲಿ ಈ ಪ್ರೈಮ್ ಡೇ ಕಾರ್ಯಕ್ರಮ ಅಪಾರ ಪ್ರಗತಿಯನ್ನು ಸಾಧಿಸಿದೆ ಮತ್ತು ಕಳೆದ ವರ್ಷದ ಪ್ರೈಮ್ ಡೇ ಈವೆಂಟ್‌ಗೆ ಹೋಲಿಸಿದರೆ 14% ಹೆಚ್ಚು ಸದಸ್ಯರು ಶಾಪಿಂಗ್‌ ಮಾಡಿದ್ದಾರೆ.

ಶಾಪಿಂಗ್‌ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದ ಅಮೆಜಾನ್ ಇಂಡಿಯಾದ ಪ್ರೈಮ್ ಮತ್ತು ಡೆಲಿವರಿ ಅನುಭವದ ನಿರ್ದೇಶಕ ಅಕ್ಷಯ್ ಸಾಹಿ “ನಮ್ಮ ಸೆಲ್ಲರ್‌ಗಳು, ಬ್ರ್ಯಾಂಡ್ ಪಾಲುದಾರರು ಮತ್ತು ಪ್ರೈಮ್ ಸದಸ್ಯರಿಗೆ ನಾನು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಅವರು ಭಾರತದಲ್ಲಿ ಪ್ರೈಮ್ ಡೇ ಅನ್ನು ಅತಿದೊಡ್ಡ ಹಿಟ್ ಆಗಿಸಲು ಸಹಾಯ ಮಾಡಿದ್ದಾರೆ. ವಿವಿಧ ವಿಭಾಗಗಳ ಬ್ರ್ಯಾಂಡ್‌ಗಳು ಮತ್ತು ಸೆಲ್ಲರ್‌ಗಳು 2 ಮತ್ತು 3ನೇ ಹಂತದ ನಗರಗಳು ಮತ್ತು ಮೆಟ್ರೋಗಳ ಪ್ರೈಮ್ ಸದಸ್ಯರಿಂದ ಉತ್ತಮ ಪ್ರತಿಕ್ರಿಯೆಯನ್ನು ಸ್ವೀಕರಿಸಿವೆ. ಅತಿದೊಡ್ಡ ಪ್ರಾಡಕ್ಟ್ ಮತ್ತು ಬ್ರ್ಯಾಂಡ್ ಬಿಡುಗಡೆಗಳು, ಈ ವರ್ಷದ ಉತ್ತಮ ಡೀಲ್‌ಗಳ ಜೊತೆಗೆ ಹಿಂದಿನ ಪ್ರೈಮ್ ಡೇ ಈವೆಂಟ್‌ಗಳಿಗೆ ಹೋಲಿಸಿದರೆ ನಾವು ಕೂಡ ಈ ಪ್ರೈಮ್ ಡೇಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಅದೇ ದಿನದ ಡೆಲಿವರಿಗಳನ್ನು ಮಾಡಿದ್ದೇವೆ.”

400 ಕ್ಕೂ ಹೆಚ್ಚು ಭಾರತೀಯ ಮತ್ತು ಜಾಗತಿಕ ಬ್ರ್ಯಾಂಡ್‌ಗಳು ಬಿಡುಗಡೆ ಮಾಡಿದ 45,000 ಕ್ಕೂ ಹೆಚ್ಚು ಹೊಸ ಪ್ರಾಡಕ್ಟ್‌ಗಳಿಂದ ಪ್ರೈಮ್ ಸದಸ್ಯರು ಶಾಪಿಂಗ್ ಮಾಡಿದ್ದಾರೆ, ಒನ್‌ಪ್ಲಸ್, ಐಕ್ಯೂ, ರಿಯಲ್‌ಮಿ ನಾರ್ಝೋ, ಸ್ಯಾಮ್‌ಸಂಗ್‌, ಮೊಟೊರೊಲಾ, ಬೋಟ್, ಸೋನಿ, ಅಲೆನ್ ಸೊಲಿ, ಲೈಫ್‌ಸ್ಟೈಲ್‌, ಟೈಟನ್, ಫಾಸಿಲ್‌, ಪುಮಾ, ಟಾಟಾ, ಡಾಬರ್ ಇತ್ಯಾದಿ ಬ್ರ್ಯಾಂಡ್‌ಗಳು ಬಿಡುಗಡೆ ಮಾಡಿದ್ದವು ಮತ್ತು ಸಣ್ಣ ಮತ್ತು ಮಧ್ಯಮ ಭಾರತೀಯ ಉದ್ಯಮಗಳು 2000 ಕ್ಕೂ ಹೆಚ್ಚು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದವು.

ಭಾರತದ 98% ಪಿನ್‌ ಕೋಡ್‌ಗಳಲ್ಲಿನ ಪ್ರೈಮ್ ಸದಸ್ಯರು ಹೆಚ್ಚಾಗಿ ಫ್ರಂಟ್ ಲೋಡ್ ವಾಶಿಂಗ್ ಮಶಿನ್‌ಗಳು, ಹೆಡ್‌ಫೋನ್‌ಗಳು, ಉಡುಪುಗಳು, ಶೂಗಳು, ಲಕ್ಷುರಿ ಬ್ಯೂಟಿ ಪ್ರಾಡಕ್ಟ್‌ಗಳು, ಸ್ಮಾರ್ಟ್‌ಫೋನ್‌ಗಳು, ಬೇಬಿ ಪ್ರಾಡಕ್ಟ್‌ಗಳು ಮತ್ತು ಇತರೆ ಸಾಮಗ್ರಿ ಗಳನ್ನು ಪ್ರಮುಖ ಬ್ರ್ಯಾಂಡ್‌ಗಳಿಂದ ಖರೀದಿ ಮಾಡಿದರು. ಆಟಿಕೆಗಳು ಅತಿ ಹೆಚ್ಚು ಏಕ ದಿನ ಮಾರಾಟವಾಗಿದೆ ಮತ್ತು ಸೆಕೆಂಡಿಗೆ ಸರಾಸರಿ 1.8 ಆಟಿಕೆಗಳು ಮಾರಾಟವಾಗಿವೆ. ಮನೆ ಸಾಮಗ್ರಿಗಳು ಮತ್ತು ಅಡುಗೆ ಮನೆ ಉತ್ಪನ್ನಗಳಲ್ಲಿ ಅತಿ ಹೆಚ್ಚು ಮಾರಾಟ ವಾಗಿರುವುದು ಮಿಕ್ಸರ್‌ ಗ್ರೈಂಡರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು ಮತ್ತು ವಾಟರ್ ಹೀಟರ್‌ಗಳಾಗಿವೆ ಮತ್ತು ಅಮೆಜಾನ್ ಫ್ರೆಶ್‌ನಲ್ಲಿ ಪ್ರೈಮ್ ಡೇ ಸಮಯದಲ್ಲಿ 600 ಬ್ರ್ಯಾಂಡ್‌ಗಳು 2 ಪಟ್ಟು ಬೆಳೆದಿವೆ.

ಈ ಪ್ರೈಮ್ ಡೇಯಲ್ಲಿ ಪ್ರತಿ ಸೆಕೆಂಡಿನಲ್ಲಿ 5 ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, 2 ಮತ್ತು 3ನೇ ಹಂತದ ನಗರಗಳಿಂದ 70% ಬೇಡಿಕೆ ಬಂದಿದೆ. ಫೋಲ್ಡ್‌ ಮಾಡಬಹುದಾದ ಸ್ಮಾರ್ಟ್‌ಫೋನ್‌ಗಳು 25 ಪಟ್ಟು ಹೆಚ್ಚು ಬೆಳೆದಿವೆ ಮತ್ತು ಹೊಸದಾಗಿ ಬಿಡುಗಡೆ ಯಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ (ಒನ್‌ಪ್ಲಸ್‌ ನಾರ್ಡ್‌ 3 5ಜಿ, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ34 5ಜಿ, ಮೊಟೊರೊಲಾ ರೇಝರ್‌ 40 ಸಿರೀಸ್, ರಿಯಲ್‌ಮಿ ನಾರ್ಝೋ 60 ಸಿರೀಸ್ ಮತ್ತು ಐಕ್ಯೂ ನಿಯೋ 7 ಪ್ರೋ 5ಜಿ) ಪ್ರೈಮ್ ಸದಸ್ಯರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಯಾಷನ್ ಮತ್ತು ಬ್ಯೂಟಿ ವಿಭಾಗದಲ್ಲಿ ಪ್ರೈಮ್‌ ಸದಸ್ಯರು ಪ್ರತಿ 0.4 ಸೆಕೆಂಡಿಗೊಮ್ಮೆ ಹೊಸ ಜೋಡಿ ಶೂಗಳನ್ನು, 1.6 ಸೆಕೆಂಡಿಗೊಮ್ಮೆ ಹ್ಯಾಂಡ್‌ಬ್ಯಾಗ್ ಅನ್ನು ಖರೀದಿಸಿದ್ದಾರೆ ಮತ್ತು ಮಾರ್ಕ್ಸ್‌ & ಸ್ಪೆನ್ಸರ್‌, ಟಾಮಿ ಹಿಲ್‌ಫಿಗರ್, ರೇ ಬ್ಯಾನ್‌, ಬಿಬಾ ಮತ್ತು ಲಿವೈಸ್‌ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಡೀಲ್‌ಗಳನ್ನು ಪಡೆದಿದ್ದಾರೆ.

“ಗ್ಯಾಲಾಕ್ಸಿ ಎಂ34 5ಜಿ ಯಶಸ್ಸು ನಮಗೆ ಖುಷಿ ನೀಡಿದೆ. ಇದು ಅಮೆಜಾನ್ ಪ್ರೈಮ್ ಡೇಯಲ್ಲಿ ಹೊಸ ಬಿಡುಗಡೆಗಳ ಪೈಕಿ ನಂ. 1 ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಅಮೆಜಾನ್ ಸ್ಪೆಷಲ್ ಆಗಿರುವ ಗ್ಯಾಲಾಕ್ಸಿ ಎಂ34 5ಜಿ ಸ್ಮಾರ್ಟ್‌ಫೋನ್ ಗ್ಯಾಲಾಕ್ಸಿ ಎಂ ಸಿರೀಸ್ ಜನಪ್ರಿಯತೆಯನ್ನು ಮುಂದುವರಿಸಿದೆ. ನಮ್ಮ ಬ್ರ್ಯಾಂಡ್‌ ಮೇಲೆ ಗ್ರಾಹಕರು ಹೊಂದಿರುವ ವಿಶ್ವಾಸವನ್ನು ಇದು ಪ್ರದರ್ಶಿಸುತ್ತಿದೆ ಮತ್ತು ನಮ್ಮ ಅನ್ವೇಷಣೆಯು ಗ್ರಾಹಕರಿಗೆ ಹೇಗೆ ಮೆಚ್ಚುಗೆಯಾಗುತ್ತಿದೆ ಎಂಬುದನ್ನೂ ಇದು ತೋರಿಸುತ್ತಿದೆ” ಎಂದು ಸ್ಯಾಮ್‌ಸಂಗ್‌ ಇಂಡಿಯಾದ ಎಮ್‌ಎಕ್ಸ್‌ ಬ್ಯುಸಿನೆಸ್‌ ವಿಭಾಗದ ಹಿರಿಯ ನಿರ್ದೇಶಕ ಆದಿತ್ಯ ಬಬ್ಬರ್ ಹೇಳಿದ್ದಾರೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ವಿಶಿಷ್ಟ ಉತ್ಪನ್ನಗಳ ಖರೀದಿ ಮಾಡುವುದಕ್ಕೆ Prime ಸದಸ್ಯರು ಆಸಕ್ತಿ ತೋರಿಸಿದ್ದಾರೆ. ಏಕೆಂದರೆ, ಈ ವಿಭಾಗದಲ್ಲಿ ಭಾರಿ ಮಾರಾಟವಾಗಿದೆ. Amazon.in ಯಲ್ಲಿ ಎಸ್‌ಎಂಬಿಗಳು ಈ ಪ್ರೈಮ್ ಡೇ ಈವೆಂಟ್‌ನಲ್ಲಿ ಪ್ರತಿ ಸೆಕೆಂಡಿಗೆ 20 ಆರ್ಡರ್‌ಗಳನ್ನು ಸ್ವೀಕರಿಸಿದ್ದಾರೆ. 90,000 ಎಸ್‌ಎಂಬಿ ಸೆಲ್ಲರ್‌ಗಳು ಭಾರತದ 19,000 ಕ್ಕೂ ಹೆಚ್ಚು ಪಿನ್‌ಕೋಡ್‌ಗಳಿಂದ ಪ್ರೈಮ್ ಸದಸ್ಯರು ಆರ್ಡರ್‌ಗಳನ್ನು ಸ್ವೀಕರಿಸಿದ್ದಾರೆ. 15,000 ಕ್ಕೂ ಹೆಚ್ಚು ಎಸ್‌ಎಂಬಿಗಳು ಪ್ರೈಮ್ ಡೇ 2023 ರ ಈವೆಂಟ್‌ನಲ್ಲಿ ತಮ್ ಮಾತಿ ಹೆಚ್ಚು ಸೇಲ್ಸ್‌ ಅನ್ನು ಕಂಡಿದ್ದಾರೆ. 14,000 ಕ್ಕೂ ಹೆಚ್ಚು ಹೊಸ ಎಸ್‌ಎಂಬಿಗಳು (2013 ರಲ್ಲಿ ಆರಂಭವಾದವು) ಆರ್ಡರ್‌ಗಳನ್ನು ಪಡೆದಿದ್ದಾರೆ ಮತ್ತು ಈ ಪೈಕಿ 500 ಎಸ್‌ಎಂಬಿಗಳು ಈ ಪ್ರೈಮ್ ಡೇಯಲ್ಲಿ ಅತ್ಯುತ್ತಮ ಸೇಲ್ಸ್‌ ದಿನವನ್ನು ಕಂಡಿವೆ. ಲಾಂಚ್‌ಪ್ಯಾಡ್‌ನಂತಹ (ಮಾರ್ಕೆಟ್‌ಪ್ಲೇಸ್‌ನಲ್ಲಿ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವುದಕ್ಕೆ ವಿನ್ಯಾಸ ಮಾಡಿದ ಕಾರ್ಯಕ್ರಮ) ಪ್ರೋಗ್ರಾಮ್‌ಗಳ ಮೇಲೆ ಸಣ್ಣ ಉದ್ಯಮಗಳು ಗಮನ ಕೇಂದ್ರೀಕರಿಸಿದ್ದವು ಮತ್ತು 800 ಕ್ಕೂ ಹೆಚ್ಚು ಹೊಸ ಪ್ರಾಡಕ್ಟ್‌ಗಳನ್ನು ಲೋಕಲ್ ಶಾಪ್‌ಗಳು ಬಿಡುಗಡೆ ಮಾಡಿದ್ದವು.

ಸ್ಕಿನ್, ಹೇರ್ ಮತ್ತು ಮೇಕಪ್‌ ವಿಬಾಗದಲ್ಲಿ ಆಕರ್ಷಕ ಮತ್ತು ನೈಸರ್ಗಿಕ ಬ್ಯೂಟಿ ಪೋರ್ಟ್‌ಫೋಲಿಯೋ ಅನ್ನು ಮಾಮಾಅರ್ಥ್‌ ರಚಿಸಿದೆ. ಇದನ್ನು ಎಲ್ಲ ವಲಯದ ಗ್ರಾಹಕರೂ ಮೆಚ್ಚಿದ್ದಾರೆ. ಅಮೆಜಾನ್ ಇಂಡಿಯಾ ಪ್ರೈಮ್ ಡೇ 2023 ಕ್ಕೆ ಇದನ್ನು ನಮ್ಮ ಆಕರ್ಷಕ ಹೊಸ ಹೇರ್‌ಕೇರ್‌ಗೆ ಸೇರಿಸಿದ್ದೇವೆ. ಇದರಲ್ಲಿ ರೋಸ್‌ಮೆರಿ ಮತ್ತು ಮುಲ್ತಾನಿ ಮಿಟ್ಟಿಯಂತಹ ವಿಶಿಷ್ಟ ಪದಾರ್ಥಗಳಿವೆ. ಇದಕ್ಕೆ ಗ್ರಾಹಕರು ತೋರಿದ ಪ್ರತಿಕ್ರಿಯೆಗೆ ಉತ್ಸಾಹಿತರಾಗಿದ್ದೇವೆ ಮತ್ತು ಪ್ರೈಮ್ ಡೇ ಈವೆಂಟ್‌ನಲ್ಲಿ ಭಾರತದಾದ್ಯಂತ ಲಕ್ಷಗಟ್ಟಲೆ ಯುನಿಟ್‌ಗಳನ್ನು ಮಾರಾಟ ಮಾಡಿದ್ದೇವೆ. ಮಾಮಾಅರ್ಥ್‌ ಈಗ ಬ್ಯೂಟಿ ಮಾರ್ಕೆಟ್ ಲೀಡರ್ ಆಗಿದೆ ಮತ್ತು ಅಮೆಜಾನ್‌ನಂತಹ ಪ್ರಮುಖ ಇ-ಕಾಮರ್ಸ್ ಪಾಲುದಾರರ ಜೊತೆಗೆ ನಮ್ಮ ಸಂಬಂಧವನ್ನು ಸುಭದ್ರಗೊಳಿಸಿಕೊಳ್ಳುತ್ತಿದ್ದೇವೆ” ಎಂದು ಮಾಮಾ ಅರ್ಥ್‌ ಹೊನಾಸಾ ಕನ್ಸ್ಯೂಮರ್ ಪ್ರೈ. ಲಿ. ಮುಖ್ಯ ವಹಿವಾಟು ಅಧಿಕಾರಿ ಝೈರಸ್‌ ಮಾಸ್ಟರ್‌ಹೇಳಿದ್ದಾರೆ.

ಈ ಪ್ರೈಮ್ ಡೇಯಲ್ಲಿ ಅಮೆಜಾನ್ ಪೇ ಬಳಸಿ 45% ಪ್ರೈಮ್‌ ಸದಸ್ಯರು ಶಾಪಿಂಗ್ ಮಾಡಿದ್ದು ಈ ಪೈಕಿ 2 ಮತ್ತು 3ನೇ ಹಂತದ ನಗರಗಳ ಸದಸ್ಯರು 82% ಇದ್ದಾರೆ. 4 ಪ್ರೈಮ್ ಸದಸ್ಯರ ಪೈಕಿ 1 ಸದಸ್ಯರು ಪ್ರೈಮ್ ಡೇ ಈವೆಂಟ್‌ನಲ್ಲಿ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಬಳಸಿ ಶಾಪಿಂಗ್‌ ಮಾಡಿದ್ದಾರೆ. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಪ್ರೈಮ್ ಸದಸ್ಯರಿಗೆ 5% ಅನ್‌ಲಿಮಿಟೆಡ್‌ ಕ್ಯಾಶ್‌ಬ್ಯಾಕ್ ಜೊತೆಗೆ ಟ್ರಾವೆಲ್ ಸ್ಟೋರ್ ಅನ್ನು ಇತ್ತೀಚೆಗೆ ಅಮೆಜಾನ್ ಪೇ ಆರಂಭಿಸಿದೆ. ಪ್ರೈಮ್ ಡೇ ಈವೆಂಟ್ ಮೂಲಕ ಗ್ರಾಹಕರು ಅಂದಾಜು 1.6 ಕೋಟಿ ಕಿ.ಮೀ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಈ ಪ್ರೈಮ್ ಡೇಯಲ್ಲಿ ಬುಕ್ ಮಾಡಿದ್ದಾರೆ.

ಅಮೆಜಾನ್ ಬ್ಯುಸಿನೆಸ್‌ನಲ್ಲಿ 56% ಮಾರಾಟ ಪ್ರಗತಿ ಕಂಡಿದೆ (ಪ್ರೈಮ್ ಡೇ 2022 ಕ್ಕೆ ಹೋಲಿಸಿದರೆ). ಎಲೆಕ್ಟ್ರಾನಿಕ್ಸ್‌ನಲ್ಲಿ 2 ಪಟ್ಟು ಬೆಳವಣಿಗೆ, ಕಚೇರಿ ಫರ್ನೀಚರ್‌ನಲ್ಲಿ 1.7 ಪಟ್ಟು, ಅಡುಗೆ ಮನೆ ಉತ್ಪನ್ನಗಳು ಮತ್ತು ಸಲಕರಣೆಗಳಲ್ಲಿ 1.4 ಪಟ್ಟು ಪ್ರಗತಿ ಕಂಡಿದೆ.

ಪ್ರೈಮ್‌ ಡೇ 2023 ಹೈಲೈಟ್‌ಗಳು

ಶಾಪಿಂಗ್
• ದೊಡ್ಡ ಅಪ್ಲೈಯನ್ಸ್‌ಗಳ ವಿಭಾಗದಲ್ಲಿ ಈ ಪ್ರೈಮ್ ಡೇ ಈವೆಂಟ್‌ನಲ್ಲಿ ಪ್ರತಿ 2 ಸೆಕೆಂಡುಗಳಿಗೆ ಒಂದು ಅಪ್ಲೈಯನ್ಸ್‌ ಮಾರಾಟವಾಗಿದೆ.
• ಪ್ರೀಮಿಯಂ ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಗ್ರಾಹಕರ ಸಂಖ್ಯೆ ಅಪಾರ ಹೆಚ್ಚಿದ್ದನ್ನು ನಾವು ಕಂಡಿದ್ದೇವೆ. ಇದರಲ್ಲಿ ಸೋನಿ, ಬೋಸ್, ಜೆಬಿಎಲ್‌ನಂತಹ ಪ್ರೀಮಿಯಂ ಆಡಿಯೋ ಬ್ರ್ಯಾಂಡ್‌ಗಳು ಇದ್ದವು. ಈ ವಿಭಾಗದಲ್ಲಿ ಈವೆಂಟ್‌ ಸಮಯದಲ್ಲಿ ಪ್ರತಿ 20 ಸೆಕೆಂಡುಗಳಿಗೆ 1 ನಾಯ್ಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್ ಮಾರಾಟ ಮಾಡಿದ್ದೇವೆ.
• ಸ್ಮಾರ್ಟ್‌ಫೋನ್‌ಗಳಿಗೆ 70% ಬೇಡಿಕೆಯು 2 ಮತ್ತು 3ನೇ ಹಂತದ ನಗರಗಳಿಂದ ಬಂದಿತ್ತು; ಫೋಲ್ಡ್‌ ಮಾಡಬಹುದಾದ ಸ್ಮಾರ್ಟ್‌ಫೋನ್‌ ಈ ಪ್ರೈಮ್ ಡೇ ಅವಧಿಯಲ್ಲಿ ಗ್ರಾಹಕರ ವಲಯದಲ್ಲಿ 25 ಪಟ್ಟು ಪ್ರಗತಿಯನ್ನು ಸಾಧಿಸಿತು. 5ಜಿ ಹೊಂದಿರುವ ಸ್ಮಾರ್ಟ್‌ಫೋನ್‌ಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. ಮಾರಾಟವಾದ 3 ಸ್ಮಾರ್ಟ್‌ಫೋನ್‌ಗಳ ಪೈಕಿ 2 5ಜಿ ಆಗಿತ್ತು.
• ಈ ಪ್ರೈಮ್ ಡೇ ಈವೆಂಟ್‌ನಲ್ಲಿ ನಾವು ಅತಿ ಹೆಚ್ಚು ಬೇಡಿಕೆಯನ್ನು ಸ್ವೀಕರಿಸಿದ್ದು, ಪ್ರತಿ ನಿಮಿಷಕ್ಕೆ 30 ಟಿವಿಗಳು ಮಾರಾಟವಾಗಿವೆ. ಈ ಪೈಕಿ ಅತಿ ಹೆಚ್ಚು ಬೇಡಿಕೆಯಲ್ಲಿ 4ಕೆ, ಕ್ಯೂಎಲ್‌ಇಡಿ ಮತ್ತು ಒಎಲ್‌ಇಡಿ ಇದ್ದವು. ವಿವಿಧ ಸ್ಕ್ರೀನ್ ಗಾತ್ರಗಳ ಟಿವಿಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಂಡಿದ್ದು, ಆಕರ್ಷಕ ಬ್ಯಾಂಕ್ ಆಫರ್‌ಗಳು, ಎಕ್ಸ್‌ಚೇಂಜ್‌, ನೋ ಕಾಸ್ಟ್ ಇಎಂಐ ಮತ್ತು ಬಜಾಜ್ ಫೈನಾನ್ಸ್‌ನಿಂದ ಕೈಗೆಟಕುವ ದರದ ಸ್ಕೀಮ್‌ಗಳನ್ನು ಗ್ರಾಹಕರು ಪಡೆದರು.
• ಹೋಮ್ ಅಪ್ಲೈಯನ್ಸ್‌ಗಳು ಮತ್ತು ಕಿಚನ್ ಉತ್ಪನ್ನಗಳು ಗ್ರಾಹಕರ ಅತ್ಯಂತ ಮೆಚ್ಚಿನ ವಿಭಾಗವಾಗಿದ್ದು, ಪ್ರಮುಖ ಬ್ರ್ಯಾಂಡ್‌ಗಳಾದ ಹ್ಯಾವೆಲ್ಸ್‌, ಫಿಲಿಪ್ಸ್‌, ಯುರೇಕಾ ಫೋರ್ಬ್ಸ್‌ನಂತಹ ಮಿಕ್ಸರ್ ಗ್ರೈಂಡರ್‌ಗಳು, ವಾಟರ್ ಪ್ಯೂರಿಫೈಯರ್‌ಗಳನ್ನು ಖರೀದಿ ಮಾಡಿದರು. ಮಿಕ್ಸರ್ ಗ್ರೈಂಡರ್‌ಗಳು, ವಾಟರ್ ಪ್ಯೂರಿಫೈಯರ್‌ಗಳು ಮತ್ತು ವಾಟರ್ ಹೀಟರ್‌ಗಳಂತಹ ವಿಭಾಗಗಳಿಂದ ಅತ್ಯಧಿಕ ಮಾರಾಟವಾಗಿದ್ದು, 3ನೇ ಹಂತದ ನಗರಗಳು 60% ಕ್ಕೂ ಹೆಚ್ಚು ಕೊಡುಗೆ ನೀಡಿವೆ.
• ಪ್ರೈಮ್ ಡೇ ಈವೆಂಟ್‌ನಲ್ಲಿ ಆಟಿಕೆಗಳು ಅತ್ಯಂತ ಹೆಚ್ಚಿನ ಏಕ ದಿನದ ಸೇಲ್ಸ್‌ ಆಗಿದ್ದು, (2022 ರ ಪ್ರೈಮ್ ಡೇಗೆ ಹೋಲಿಸಿದರೆ) 48% ಮಾರಾಟ ಪ್ರಗತಿ ಕಂಡುಬಂದಿದೆ ಮತ್ತು ಪ್ರತಿ ಸೆಕೆಂಡಿಗೆ 1.8 ಆಟಿಕೆಗಳು ಮಾರಾಟವಾಗಿವೆ.
• ನಾವು 1 ಲಕ್ಷ ಲೀಟರಿಗೂ ಹೆಚ್ಚು ಅಡುಗೆ ಎಣ್ಣೆ, 7,000 ಕಿಲೋ ಟೊಮಾಟೋ, 23000 ಕಿಲೋ ಸಕ್ಕರೆಯನ್ನು ಮಾರಾಟ ಮಾಡಿದ್ದೇವೆ. ಅಮೆಜಾನ್ ಫ್ರೆಶ್‌ನಲ್ಲಿ ಪ್ರೈಮ್ ಡೇ ಅವಧಿಯಲ್ಲಿ 600 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಕನಿಷ್ಠ 2 ಪಟ್ಟು ಬೆಳೆದಿವೆ
• ಫ್ಯಾಷನ್ ಮತ್ತು ಬ್ಯೂಟಿ ವಿಭಾಗದಲ್ಲಿ ಕೊಡುಗೆಗಳಿಂದ ನಮ್ಮ ಪ್ರೈಮ್ ಸದಸ್ಯರಿಗೆ ನಾವು ಖುಷಿ ನೀಡಿದ್ದೇವೆ ಮತ್ತು ಮೇಕಪ್ ಮತ್ತು ನೇಲ್ಸ್‌, ಮಹಿಳಾ ಕ್ರೀಡಾ ದಿರಿಸು, ಐವೇರ್ ಮತ್ತು ಪುರುಷರ ಕ್ಯಾಶುವಲ್ ಶೂಗಳನ್ನು ಪುಮಾ, ಬ್ಲಿಸ್‌ಕ್ಲಬ್‌, ಕಲ್ಟ್‌ಸ್ಪೋರ್ಟ್, ಕ್ರಾಕ್ಸ್‌, ಸ್ಕೆಚರ್ಸ್‌, ಲೆನ್ಸ್‌ಕಾರ್ಟ್‌, ಲಕ್ಸೋಟಿಕಾ, ಮೇಬಿಲೈನ್, ಶುಗರ್ ಕಾಸ್ಮೆಟಿಕ್ಸ್, ರಿನೀ ಮತ್ತು ಇನ್ನಷ್ಟರಿಂದ ಭಾರಿ ಖರೀದಿ ಮಾಡಲಾಗಿದೆ.
• ಬೇಬಿ ಮತ್ತು ಸಾಕುಪ್ರಾಣಿ ವಿಭಾಗದಲ್ಲೂ ಕೂಡಾ ಈ ಪ್ರೈಮ್ ಡೇಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಪ್ಯಾಂಪರ್ಸ್‌, ಲವ್‌ಲ್ಯಾಪ್‌, ಪೆಡಿಗ್ರೀ ಇತ್ಯಾದಿ ಬ್ರ್ಯಾಂಡ್‌ಗಳಿಂದ ಮಾರಾಟವಾಗಿದೆ.
• ಪ್ರತಿ 2 ಸೆಕೆಂಡುಗಳಿಗೆ ಫೈರ್ ಟಿವಿ, ಎಕೋ (ಅಲೆಕ್ಸಾ ಸಹಿತ) ಅಥವಾ ಕಿಂಡಲ್‌ ಸಾಧನಗಳನ್ನು ಗ್ರಾಹಕರು ಖರೀದಿ ಮಾಡಿದದ್ದು, ಪ್ರೈಮ್ ಸದಸ್ಯರು ಅಮೆಜಾನ್ ಸಾಧನಗಳ ಮೇಲೆ ಭಾರಿ ಉಳಿತಾಯವನ್ನು ಪಡೆದರು. ಫೈರ್‌ ಟಿವಿ ಸ್ಟಿಕ್ ಮತ್ತು ಎಕೋ ಡಾಟ್ 4ನೇ ಜೆನ್‌ Amazon.in ನಲ್ಲಿನ ಪ್ರೈಮ್ ಡೇಯಲ್ಲಿ ಅತ್ಯಂತ ಹೆಚ್ಚು ಮಾರಾಟವಾಯಿತು. ಮನೆಗಳನ್ನು ಅಲೆಕ್ಸಾ ಸ್ಮಾರ್ಟ್ ಆಗಿಸುತ್ತಿದೆ. ಅಲೆಕ್ಸಾ ಸ್ಮಾರ್ಟ್‌ ಹೋಮ್ ಕಾಂಬೋಗಳನ್ನು ಖರೀದಿ ಮಾಡುವ ಮೂಲಕ ಈ ಪ್ರೈಮ್ ಡೇಯಲ್ಲಿ 3 ಎಕೋ ಗ್ರಾಹಕರ ಪೈಕಿ ಕನಿಷ್ಠ 2 ಗ್ರಾಹಕರು ತಮ್ಮ ಸ್ಮಾರ್ಟ್‌ ಹೋಮ್ ಪಯಣವನ್ನು ಆರಂಭಿಸಿದ್ದಾರೆ (ಅಂದರೆ, ಎಕೋ ಸ್ಮಾರ್ಟ್‌ ಸ್ಪೀಕರ್ + ಅಲೆಕ್ಸಾಗೆ ಹೊಂದಾಣಿಕೆಯಾಗುವ ಸಾಧನಗಳು).

#JustAsk Alexa
• ಪ್ರೈಮ್ ಡೇಯಲ್ಲಿ ತಮ್ಮ ಮೆಚ್ಚಿನ ಉತ್ಪನ್ನಗಳಿಗೆ ಅಲೆಕ್ಸಾದಲ್ಲಿ ಸುಮಾರು 10 ಲಕ್ಷ ಗ್ರಾಹಕರು ಕೇಳಿದ್ದಾರೆ.

ಮನರಂಜನೆ ಮತ್ತು ಇತರೆ
• ಪ್ರೈಮ್ ಡೇ 2023 ಕ್ಕೂ ಮುನ್ನ 30 ದಿನಗಳಲ್ಲಿ ಪ್ರೈಮ್ ವೀಡಿಯೋ 12 ಸಿನಿಮಾಗಳು ಮತ್ತು ಶೋಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ 8 ಶೀರ್ಷಿಕೆಗಳು ಈ ಅವಧಿಯಲ್ಲಿ ಪ್ರೈಮ್ ವೀಡಿಯೋದ ಟಾಪ್ ಟೆನ್ ಅತ್ಯಂತ ಹೆಚ್ಚು ವೀಕ್ಷಿಸಿದ ಶೀರ್ಷಿಕೆಗಳಲ್ಲಿ ಒಂದಾಗಿದೆ. ಪ್ರೈಮ್ ಡೇ ಅಂಗವಾಗಿ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾದ ಎಲ್ಲ ಟೈಟಲ್‌ಗಳಿಗೂ ದೇಶದ ಎಲ್ಲ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ 99% ಪಿನ್‌ಕೋಡ್‌ಗಳಿಂದ ವೀಕ್ಷಕರನ್ನು ಇದು ಪಡೆದಿದೆ. ಒಟ್ಟಾರೆಯಾಗಿ, ಭಾರತದ ವಿವಿಧೆಡೆಯ 4490 ನಗರಗಳು ಮತ್ತು ಪಟ್ಟಣಗಳ ವೀಕ್ಷಕರು ಪ್ರೈಮ್ ವೀಡಿಯೋ ಟೈಟಲ್‌ಗಳನ್ನು ವೀಕ್ಷಿಸಿದ್ದಾರೆ.
• ಪ್ರೈಮ್ ವೀಡಿಯೋ ತನ್ನ ಗ್ರಾಹಕರಿಗಾಗಿ ಜಾಗತಿಕ ಮನರಂಜನೆಯನ್ನು ವಿಸ್ತರಿಸುತ್ತಿದೆ. ಭಾರತೀಯ ಟೈಟಲ್‌ಗಳಷ್ಟೇ ಅಲ್ಲ, ಇಂಟರ್‌ನ್ಯಾಷನಲ್ ಶೋಗಳು ಮತ್ತು ಸಿನಿಮಾಗಳನ್ನು 2023 ರ ಪ್ರೈಮ್ ಡೇ ಈವೆಂಟ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಭಾರತದ 97% ಪಿನ್ ಕೋಡ್‌ಗಳಲ್ಲಿ ಗ್ರಾಹಕರು ಸ್ಟ್ರೀಮ್ ಮಾಡಿದ್ದಾರೆ.
• ಭಾರತದ ಕಥೆಗಳಿಗೆ ಜಾಗತಿಕ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರೈಮ್ ವೀಡಿಯೋ ಹೊಸ ಮಾನದಂಡವನ್ನೇ ರೂಪಿಸಿದೆ. ಈ ವರ್ಷದ ಪ್ರೈಮ್ ಡೇ ಅಂಗವಾಗಿ ಬಿಡುಗಡೆ ಮಾಡಿದ ಭಾರತೀಯ ಶೀರ್ಷಿಕೆಗಳನ್ನು 230 ದೇಶಗಳು ಮತ್ತು ಪ್ರದೇಶಗಳ ಜನರು ವೀಕ್ಷಿಸಿದ್ದಾರೆ.
• ಪ್ರೈಮ್ ಡೇ ಅವಧಿಯಲ್ಲಿ ಅಮೆಜಾನ್ ಮ್ಯೂಸಿಕ್‌ನಲ್ಲಿ 50 ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರೈಮ್ ಸದಸ್ಯರು ಸಂಗೀತವನ್ನು ಕೇಳಿದ್ದಾರೆ. ಈ ಪ್ರೈಮ್ ಡೇಯಲ್ಲಿ ಪ್ರೈಮ್ ಸದಸ್ಯರಿಗೆ ಎಕ್ಸ್‌ಕ್ಲೂಸಿವ್ ಆರ್ಟಿಸ್ಟ್ ವೀಡಿಯೋಗಳನ್ನು ಅಮೆಜಾನ್ ಮ್ಯೂಸಿಕ್ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಪ್ರಶಸ್ತಿ ಪುರಸ್ಕೃತ ಸಿರೀಸ್ ದಿ ವಾಕ್ ಇನ್‌ನ ಭಾರೀಯ ಆವೃತ್ತಿಯಲ್ಲಿ ಕಿಂಗ್‌, ಹಾರ್ಡಿ ಸಂಧು ಮತ್ತು ಸುನಂದಾ ಶರ್ಮಾ ಭಾಗವಹಿಸಿದ್ದರು. ಸೃಷ್ಟಿ ತಾವಡೆ ಅವರನ್ನು ಒಳಗೊಂಡ ಲೈನ್ ಬೈ ಲೈನ್‌ ಇನ್ನೊಂದು ಎಕ್ಸ್‌ಕ್ಲೂಸಿವ್ ಆಗಿದ್ದು, ಈ ಪ್ರೈಮ್ ಡೇಯಲ್ಲಿ ಅಮೆಜಾನ್ ಮ್ಯೂಸಿಕ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ವೀಡಿಯೋ ಆಗಿದೆ. ಅಮೆಜಾನ್ ಮ್ಯೂಸಿಕ್‌ನಲ್ಲಿ 5 ಎಕ್ಸ್‌ಕ್ಲೂಸಿವ್ ಪಾಡ್‌ಕಾಸ್ಟ್‌ಗಳನ್ನೂ ಬಿಡುಗಡೆ ಮಾಡಲಾಗಿದೆ ಮತ್ತು ಹಿಂದಿ, ಇಂಗ್ಲಿಷ್‌ ಮತ್ತು ಇನ್ನೂ ಹಲವು ಭಾಷೆಗಳಲ್ಲಿ ಪ್ರೈಮ್ ಸದಸ್ಯರು ಸ್ಟ್ರೀಮ್ ಮಾಡಿದ್ದಾರೆ. ಪ್ರಮುಖ 3 ಸ್ಟ್ರೀಮ್ ಮಾಡಿದ ಪಾಡ್‌ಕಾಸ್ಟ್‌ಗಳೆಂದರೆ ದಿ ಸ್ಟೋರೀಸ್ ಆಫ್‌ ಮಹಾಭಾರತ, ಮಿರ್ಚಿ ಮುರ್ಗಾ ಮತ್ತು ಫಿನ್‌ಶಾಟ್ಸ್‌ ಡೈಲಿ ಆಗಿದೆ.

ಪ್ರೈಮ್‌ನಿಂದ ಪ್ರತಿ ದಿನವೂ ಇನ್ನಷ್ಟು ಉತ್ತಮ:
ಪ್ರತಿ ದಿನವೂ ನಿಮ್ಮ ಜೀವನವನ್ನು ಉತ್ತಮವಾಗಿಸಲು ಅಮೆಜಾನ್ ಪ್ರೈಮ್ ಅನ್ನು ವಿನ್ಯಾಸ ಮಾಡಲಾಗಿದೆ. ಇದು ಶಾಪಿಂಗ್‌, ಉಳಿತಾಯ ಮತ್ತು ಮನರಂಜನೆಯನ್ನು ಒಂದೇ ಸದಸ್ಯತ್ವದಲ್ಲಿ ಒದಗಿಸುತ್ತದೆ. ಭಾರತದಲ್ಲಿ, 40 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳ ಉಚಿತ ಒಂದು ದಿನದ ಡೆಲಿವರಿಯನ್ನು ಸದಸ್ಯರು ಪಡೆಯುತ್ತಾರೆ. ಅಲ್ಲದೆ, ತಮ್ಮ ಕೋ ಬ್ರಾಂಡೆಡ್‌ ಐಸಿಐಸಿಐ ಕ್ರೆಡಿಟ್ ಕಾರ್ಡ್‌ ಬಳಸಿಕೊಂಡು ಎಲ್ಲ ಖರೀದಿಗಳ ಮೇಲೆ ಅನ್‌ಲಿಮಿಟೆಡ್‌ 5% ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಎಕ್ಸ್‌ಕ್ಲೂಸಿವ್ ಡೀಲ್‌ಗಳಿಗೆ ಆಕ್ಸೆಸ್‌ ಪಡೆಯಬಹುದು ಮತ್ತು ಪ್ರೈಮ್ ಡೇ ಸೇರಿದಂತೆ ನಮ್ಮ ಶಾಪಿಂಗ್ ಇವೆಂಟ್‌ಗಳಿಗೆ ಬೇಗ ಮತ್ತು ಎಕ್ಸ್‌ಕ್ಲೂಸಿವ್ ಆಕ್ಸೆಸ್ ಅನ್ನು ಪಡೆಯಬಹುದಾಗಿದೆ. ಪ್ರಶಸ್ತಿ ಪುರಸ್ಕೃತ ಸಿನಿಮಾ ಮತ್ತು ಟಿವಿ ಶೋಗಳಿಗೆ ಅನಿಯಮಿತ ಪ್ರವೇಶವನ್ನು ಪ್ರೈಮ್ ವೀಡಿಯೋದಲ್ಲಿ ಪಡೆಯಬಹುದು, 20 ಕ್ಕೂ ಹೆಚ್ಚು ಭಾಷೆಗಳಲ್ಲಿ 100 ದಶಲಕ್ಷಕ್ಕೂ ಹೆಚ್ಚು ಹಾಡುಗಳಿಗೆ ಅನಿಯಮಿತ ಪ್ರವೇಶ ಪಡೆಯಬಹುದು, ಅಮೆಜಾನ್ ಮ್ಯೂಸಿಕ್‌ನಲ್ಲಿ ಜಾಹೀರಾತು ರಹಿತ ಮತ್ತು 15 ದಶಲಕ್ಷಕ್ಕೂ ಹೆಚ್ಚು ಪಾಡ್‌ಕಾಸ್ಟ್‌ ಎಪಿಸೋಡ್‌ಗಳನ್ನು ಕೇಳಬಹುದು, 3,000 ಕ್ಕೂ ಹೆಚ್ಚು ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಕಾಮಿಕ್‌ಗಳನ್ನು ಪ್ರೈಮ್ ರೀಡಿಂಗ್ ಮೂಲಕ ಉಚಿತವಾಗಿ ಪಡೆಯಬಹುದು, ಪ್ರೈಮ್ ಗೇಮಿಂಗ್‌ನಲ್ಲಿ ಮಾಸಿಕ ಉಚಿತ ಗೇಮ್ ಮತ್ತು ಪ್ರಯೋಜನಗಳನ್ನು ಪಡೆಯಬಹುದು. ಈಗಲೇ ಪ್ರೈಮ್‌ಗೆ ಸೇರಲು amazon.in/prime ಗೆ ಭೇಟಿ ನೀಡಿ.

Leave a Reply

Your email address will not be published. Required fields are marked *

error: Content is protected !!